ಕ್ರಿಸ್ಮಸ್ ಗಿಫ್ಟ್ ನೀಡಲು ಬಂದ ಸಾಂತಾಕ್ಲಾಸ್ ಕೊರೊನಾ ಪಾಸಿಟಿವ್! 157 ಜನರಿಗೆ ತಾಗಿತು ಕೊರೊನಾ ಸೋಂಕು, 18 ಸಾವು
ವ್ಯಕ್ತಿಗೆ ಸಾವು ಯಾವಾಗ ಮತ್ತು ಹೇಗೆ ಬರುತ್ತದೆ ಎಂಬುದು ಗೊತ್ತಿಲ್ಲ. ಅದರಂತೆ ಈಗ ವ್ಯಕ್ತಿಗೆ ಕೋರೋನಾ ಸೋಂಕು ಯಾವಾಗ, ಹೇಗೆ ಮತ್ತು ಯಾವ ರೀತಿಯಲ್ಲಿ ಬಂದು ತಗಲುತ್ತದೆ ಎಂಬುದು ಗೊತ್ತಿಲ್ಲ.
ಒಂದು ವೃದ್ಧಾಶ್ರಮದಲ್ಲಿ ಕೊರೊನಾ ಸೋಂಕು ತಗಲಿದ ಸಂಟಾಕ್ಲಾಸ ನೇ ಗಿಫ್ಟ್ ಗಳನ್ನು ನೀಡಲು ಹೋಗಿ ಅಲ್ಲಿಯ 121 ಜನರಿಗೆ ಮತ್ತು 36 ಕೆಲಸಗಾರರಿಗೆ ಕೊರೊನಾ ಸೋಂಕು ತಗುಲಿಸಿದ್ದಾನೆ. ವಿಷಾದದ ಸಂಗತಿಯೆಂದರೆ ಅದರಲ್ಲಿ 18 ಜನರ ಮೃತ್ಯು ಆಗಿದೆ. ಪ್ರಸ್ತುತ ಘಟನೆಯ ಬೆಲ್ಜಿಯಂ ದೇಶದಿಂದ ವರದಿಯಾಗಿದೆ.
ಡೆಲ್ಲಿ ಮೇಲ್ ನೀಡಿದ ವೃತ್ತದ ಪ್ರಕಾರ 2 ವಾರಗಳ ಹಿಂದೆ ಸಂಟಾಕ್ಲಾಸನು ತನ್ನ ಸಹವರ್ತಿಗಳೊಂದಿಗೆ ಬೆಲ್ಜಿಯಂನ ಎಂಟ್ ವರ್ಪ್ ನಲ್ಲಿರುವ ವೃದ್ಧಾಶ್ರಮಕ್ಕೆ ಭೇಟಿ ಕೊಟ್ಟಿದ್ದಾರೆ. ಆನಂತರ ಅಲ್ಲಿದ್ದ ಒಬ್ಬೊಬ್ಬರಿಗೆ ಆರೋಗ್ಯದಲ್ಲಿ ಸಮಸ್ಯೆಗಳು ಕಂಡುಬಂದಾಗ ಕೋರೋನಾ ಸೋಂಕಿನ ಕಾರಣವನ್ನು ಹುಡುಕಿದಾಗ ತನಿಖೆಯಲ್ಲಿ ಸಂತಾಕ್ಲಾಸ್ ನಿಂದಲೇ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

24 ಮತ್ತು 25 ಡಿಸೆಂಬರ್ ರಂದು ವೃದ್ಧಾಶ್ರಮದಲ್ಲಿ ಐದು ಜನರು ಕೊರೋನಾ ಕಾರಣದಿಂದ ಅಸುನೀಗಿದ್ದಾರೆ. ಬೇರೊಬ್ಬನು ಸದ್ಯ ವೆಂಟಿಲೇಟರ್ ಮೇಲಿದ್ದಾನೆ.
ಅಲ್ಲಿಯ ಸ್ಥಾನಿಕ ಮೇಯರ್ ಆದ ವಿಮ್ ಕೆಯರ್ಸ್ ಅವರು ಈ ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮುಂಬರುವ ಇನ್ನೂ 10 ದಿನಗಳು ನಮಗೆ ತುಂಬಾ ಕಷ್ಟದ ದಿನಗಳಾಗಿವೆ ಎಂದು ವಿವರಿಸಿದ್ದಾರೆ. ವೃದ್ಧಾಶ್ರಮದಲ್ಲಿ ಕೋರನಾ ಸಂಬಂಧಪಟ್ಟಂತೆ ಎಲ್ಲ ನಿಯಮಗಳ ಪಾಲನೆ ಯೋಗ್ಯರೀತಿಯಲ್ಲಿ ಆಗಿದೆ ಎಂದು ಹೇಳಿದ್ದರು. ಆದರೆ ಈ ಕಾರ್ಯಕ್ರಮದ ಫೋಟೋಗಳು ಎದುರು ಬಂದಾಗ ಮೇಯರ್ ಅವರು ಚಿಂತೆ ವ್ಯಕ್ತ ಮಾಡಿದ್ದಾರೆ.

ಏತನ್ಮಧ್ಯೆ ಕೋರೋನಾ ಸೋಂಕಿತ ಸಾಂತಾಕ್ಲಾಸ್ ನಿಂದ ಈ ಅವಘಡ ಸಂಭವಿಸಿದರು ವೃದ್ಧಾಶ್ರಮದಲ್ಲಿ ಮಾತ್ರ ಅವಶ್ಯಕ ಸಂಖ್ಯೆಯಲ್ಲಿ ವೆಂಟಿಲೇಟರ್ ಗಳು ಇಲ್ಲದಿರುವುದು ತುಂಬಾ ಚಿಂತೆಗೆ ಕಾರಣವಾಗಿದೆಯೆಂದು ಡಾಕ್ಟರ್ ರಾದ ವೈರಾಲಾಜೆಸ್ಟ್ ಮಾರ್ಕ್ ವೆನ್ ರೆಸ್ಟ್ ಇವರು ಹೇಳಿದ್ದಾರೆ.