ಬಾಲಿವುಡ್ ನಟ ಅಜಯ್ ದೇವಗನ್ ಜೊತೆ ಇಲ್ಲಿಯವರೆಗೂ ಸ್ಕ್ರೀನ್ ಶೇರ್ ಮಾಡಿಲ್ಲ ‘ಈ’ 3 ಸ್ಟಾರ್ ನಟಿಯರು; ಕಾರಣ..?
ಬಾಲಿವುಡ್ ನಲ್ಲಿ ಅಜಯ್ ದೇವಗನ್ ಅವರು ಕೊಟ್ಟ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಎತ್ತಿದ ಕೈ. ರೋಲ್ ಯಾವುದೇ ಇರಲಿ, ಸರಿಯಾಗಿ ನಿಭಾಯಿಸಿ ಎಲ್ಲರಿಂದಲೂ ಸೈ ಎನಿಸಿಕೊಳ್ಳುವ ಜಾಯಮಾನದವರು. ಪಾತ್ರ ಆಕ್ಷನ್ ಇರಲಿ, ಕಾಮಿಡಿ ಇರಲಿ, ಐತಿಹಾಸಿಕವಾಗಿರಲಿ ಯಾವುದೇ ರೀತಿಯದ್ದಾಗಿರಲಿ ಪ್ರೇಕ್ಷಕರಿಂದ ಹೊಗಳಿಸಿಕೊಂಡಿದ್ದು ನಿಜ.
ಇತ್ತೀಚೆಗೆ ತೆರೆ ಕಂಡ ಶಿವಾಜಿ ಮಹಾರಾಜರ ಸರದಾರನಾಗಿ ಕಾರ್ಯ ನಿರ್ವಹಿಸುತ್ತ ವೀರಗತಿಗೆ ಪ್ರಾಪ್ತವಾದ ‘ತಾನಾಜಿ ಮಾಲುಸರೆ’ ಅವರ ಜೀವನದ ಮೇಲೆ ಆಧಾರಿತ ಐತಿಹಾಸಿಕ ‘ತಾನಾಜಿ’ ಚಿತ್ರವು ಅವರ ಅದ್ಭುತ ನಟನೆಗೆ ಹಿಡಿದ ಕನ್ನಡಿಯಾಗಿತ್ತು. ಈ ಚಿತ್ರ ಅವರಿಗೆ ಮತ್ತಷ್ಟು ಗರಿಮೆ, ಯಶಸ್ಸು ತಂದುಕೊಟ್ಟಿತು. ಸ್ಕೋರ್ ಟ್ರೆಂಡ್ ಇಂಡಿಯಾದ ಜನಪ್ರಿಯತೆಯ ಚಾರ್ಟ್ ನಲ್ಲಿ ಅಜಯ್ ಅವರು ಪ್ರಥಮ ಸ್ಥಾನವನ್ನು ಗಿಟ್ಟಿಸಿದ್ದಾರೆ.
ಸದ್ಯ ಅಜಯ್ ಅವರು ತಮ್ಮ ನಟನಾ ಕೌಶಲ್ಯಕ್ಕೆ ಬೇರೆ ಯಾವುದೇ ಉದಾಹರಣೆ ಕೊಡುವ ಅವಶ್ಯಕತೆ ಇಲ್ಲ. ಅಷ್ಟೊಂದು ಸುಂದರವಾಗಿ, ಸಹಜವಾಗಿ ಪಾತ್ರಗಳನ್ನು ನಿರ್ವಹಿಸುತ್ತಾರೆ. ಹೀಗಾಗಿ ಅಭಿಮಾನಿಗಳಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ. ಇಷ್ಟಿದ್ದರೂ ಬಾಲಿವುಡ್ ನಲ್ಲಿ ಕೆಲವು ಜನಪ್ರಿಯ ನಟಿಯರು ಅಜಯ್ ಜೊತೆಗೆ ಇನ್ನುವರೆಗೂ ಸ್ಕ್ರೀನ್ ಹಂಚಿಕೊಂಡಿಲ್ಲ. ಇದಕ್ಕೆ ಕಾರಣ ಅಜಯ್ ಅವರ ಜೊತೆಗೆ ಕೆಲಸ ಮಾಡಲು ಹೆದರಿಕೆಯಾಗುತ್ತದಂತೆ. ಇದರ ಮೇಲೆ ಬಹುಶಃ ನೀವು ವಿಶ್ವಾಸ ಇಡಲಿಕ್ಕಿಲ್ಲ. ಆದರೆ ಇದು ನಿಜವಿದೆ. ದಿನದಿಂದ ದಿನಕ್ಕೆ ಅಜಯ್ ಅವರ ಜನಪ್ರಿಯತೆ ಹೆಚ್ಚಾಗುತ್ತಿದ್ದರೂ ಈ ನಟಿಯರಲ್ಲಿ ಮಾತ್ರ ಅಜಯ್ ಅವರ ಬಗೆಗೆ ವಿಚಾರ, ಗೌರವ ಹಾಗೆಯೇ ಇದೆ. ಹಾಗೆ ನೋಡಲಾಗಿ ಈ ಪಟ್ಟಿ ತುಂಬಾ ದೊಡ್ಡದಿದೆ. ಆದರೆ ಇಲ್ಲಿ ಜನಪ್ರಿಯ ನಟಿಯರ ಹೆಸರನ್ನು ಅಷ್ಟೇ ಕೊಟ್ಟಿದ್ದೇವೆ.

*ದೀಪಿಕಾ ಪಡುಕೋಣೆ:- ಬಾಲಿವುಡ್ ಮಸ್ತಾನಿ ಎಂದೇ ಖ್ಯಾತರಾದ ದೀಪಿಕಾ ಅವರು ಇಲ್ಲಿಯವರೆಗೆ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇವುಗಳನ್ನು ಮಾಡುವಾಗ ಅನೇಕ ನಟರ ಜೊತೆಗೆ ಕೆಲಸವನ್ನು ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಅಜಯ್ ಅವರ ಜೊತೆಗೆ ಮಾತ್ರ ಕೆಲಸ ಮಾಡಿಲ್ಲ. ದೀಪಿಕಾ ಅವರ ಸ್ವಂತದ ಕೆಲವು ನಿಯಮಗಳಿವೆ. ಅವರು ಇನ್ನುವರೆಗೆ ಸಲ್ಮಾನ್ ಖಾನ್ ಜೊತೆಗೂ ಕೆಲಸ ಮಾಡಿಲ್ಲ.

- ಪ್ರಿಯಾಂಕಾ ಚೋಪ್ರಾ:– ಬಾಲಿವುಡ್ ಪಿಗ್ಗಿ ಖ್ಯಾತಿಯ ಪ್ರಿಯಾಂಕಾ ಅವರು ಬಾಲಿವುಡ್ ನ ಯಶಸ್ವಿ ನಾಯಕಿಯಾಗಿದ್ದಾರೆ. ಇವರು ತಮ್ಮ ಫಿಲ್ಮಿ ಕರಿಯರ್ ನಲ್ಲಿ ಅಜಯ್ ದೇವಗನ್ ಅವರ ಜೊತೆಗೆ ಇಲ್ಲಿಯವರೆಗೆ ಯಾವುದೇ ಚಿತ್ರದಲ್ಲಿ ಭಾಗವಹಿಸಿಲ್ಲ. ಎಷ್ಟೋ ಆಫರ್ ಗಳು ಬಂದಿದ್ದರೂ ಪ್ರಿಯಾಂಕಾ ಅವರು ಅವುಗಳನ್ನು ಸ್ವೀಕರಿಸಿಲ್ಲವಂತೆ.

ಕ್ಯಾಟರಿನಾ ಕೈಫ್:- ಮೂರನೆಯ ಹೆಸರು ಕ್ಯಾಟರಿನಾ ಕೈಫ್ ಅವರದಾಗಿದೆ. ಇವರು ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಅವರ ಜೊತೆಗೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಅಜಯ್ ಅವರ ಸಿಂಘಮ್ ಚಿತ್ರಕ್ಕಾಗಿ ಕ್ಯಾಟರೀನಾ ಮೊದಲ ಆಯ್ಕೆ ಇದ್ದದ್ದು ಬಹುಶಃ ಜಾಸ್ತಿ ಜನರಿಗೆ ಗೊತ್ತಿಲ್ಲ. ಆದರೆ ಕ್ಯಾಟರಿನಾ ಅವರು ಅದನ್ನು ತ್ಯಜಿಸಿದ ನಂತರ ಕಾಜಲ್ ಅಗರವಾಲ್ ಅವರಿಗೆ ಚಾನ್ಸ್ ದೊರಕಿತು.
ಈ ಎಲ್ಲ ನಟಿಯರು ಅಜಯ್ ಅವರ ಜೊತೆಗೆ ನಟಿಸಲು ಹೆದರುತ್ತಾರೆ. ಏಕೆ ಅಂತ ಗೊತ್ತಿಲ್ಲ. ನಮಗೆ ಗೊತ್ತಿದ್ದದ್ದು ಇಷ್ಟು. ಆದರೆ ಇದರ ಹಿಂದಿನ ನಿಜವಾದ ಕಾರಣ ಮತ್ತೆ ಬೇರೆ ಏನಾದರೂ ಇದ್ದರೂ ಇರಬಹುದು.