ಆಹಾರ ಸಿಕ್ಕಿತೆಂದು ಸಂತಸದಿಂದ ಕಣ್ಣೀರು ಹಾಕಿದ ನಾಯಿ: ಭಾವುಕ ವೀಡಿಯೋ ನೋಡಿ ಕಣ್ಣೀರು ಸುರಿಸಿದ ನೆಟ್ಟಿಗರು

ಮಾನವೀಯತೆ ಎನ್ನುವುದು ಮಾನವ ಜೀವನದಲ್ಲಿ ಇರಬೇಕಾದ ಅತ್ಯಮೂಲ್ಯವಾದ ಗುಣ, ಆದರೆ ಇತ್ತೀಚಿನ ವರ್ಷಗಳಲ್ಲಿ ಮಾನವೀಯತೆ ಎನ್ನುವುದು ಕಣ್ಮರೆಯಾಗುತ್ತಿದೆ. ಯಾರೇ ನೋ ವು ಹಾಗೂ ಸಂ ಕಷ್ಟದಲ್ಲಿ ಇದ್ದರೂ ಸಹಾ ಅನೇಕರು ನೋಡಿದರೂ ಕೂಡಾ ನೋಡದಂತೆ, ತಾವಾಯಿತು ತಮ್ಮ ಜೀವನವಾಯ್ತು ಎನ್ನುವಂತೆ ಬದುಕುವುದು ನಿಜಕ್ಕೂ ಅನೇಕ ಸಲ ಅ ಸಹನೀಯ ಎನಿಸುತ್ತದೆ. ಮನುಷ್ಯರು ಮನುಷ್ಯರ ಬಗ್ಗೆಯೇ ಮಾನವೀಯತೆ ತೋರದ ಈ ಕಾಲದಲ್ಲಿ ಇನ್ನು ಮೂಕ ಪ್ರಾಣಿಗಳ ಮೇಲೆ ದಯೆ, ಕರುಣೆ ತೋರಿಸುವುದು ಸಾಧ್ಯವಿದೆಯೇ? ಆಗಾಗ ಪ್ರಾಣಿಗಳ ಮೇಲೆ ಕೂಡಾ ದೌ ರ್ಜ ನ್ಯ ತೋರುವ ಕೆಲವರ ಸುದ್ದಿಗಳು ಕೂಡಾ ಮಾದ್ಯಮದಲ್ಲಿ ನೋಡಿದಾಗ ಇದೆಂತಹ ಸಮಾಜದಲ್ಲಿ ನಾವಿದ್ದೇವೆ ಎಂದು ಆಲೋಚಿಸುವಂತಹ ಪರಿಸರದಲ್ಲಿ ನಾವು ಇದ್ದೇವೆ ಎನ್ನುವುದು ಕೂಡಾ ವಾಸ್ತವವಾಗಿದೆ.

ಆದರೆ ಇಂತಹ ಸಮಾಜದಲ್ಲೇ ಕೆಲವರು ಅಪರೂಪಕ್ಕೊಮ್ಮೆ ಮಾನವೀಯತೆಯನ್ನು ಮೆರೆಯುವ ವಿಷಯಗಳು ಕೂಡಾ ಸುದ್ದಿಯಾಗುತ್ತವೆ. ಇಂದು ನಮ್ಮ ಸುತ್ತಮುತ್ತಲೂ ಬದುಕುತ್ತಿರುವ ಅನೇಕ ಪ್ರಾಣಿಗಳಿಗೆ ನಮ್ಮ ಒಂದು ದಯೆ, ಕರುಣೆಯ ಅಗತ್ಯ ಎನ್ನುವುದು ಇದೆ. ಅಂತಹುದೇ ಒಂದು ಭಾವನಾತ್ಮಕ ಸನ್ನಿವೇಶವೊಂದು ವೀಡಿಯೋದಲ್ಲಿ ರೆಕಾರ್ಡ್ ಆಗಿದ್ದು, ಈ ವೀಡಿಯೋ ನೋಡಿದಾಗ ನಿಜಕ್ಕೂ ಕೂಡಾ ನಮ್ಮ ಕಣ್ಣು ತೇವವಾದರೂ ನಾವು ಆಶ್ಚರ್ಯ ಪಡಬೇಕಿಲ್ಲ. ಮಾನವೀಯತೆಯಿಂದ ಮಾಡಿದ ಒಂದು ಸಣ್ಣ ಸಹಾಯಕ್ಕೆ ಬೀದಿ ನಾಯಿ ಕೂಡಾ ಕಣ್ಣೀರು ಹಾಕಿರುವ ವೀಡಿಯೋ ಒಂದು ವೈರಲ್ ಆಗಿದೆ‌.

ಪ್ರಾಣಿಗಳಲ್ಲೂ ಕೂಡಾ ಭಾವನೆಗಳು ಇರುತ್ತವೆ, ಅವು ಕೂಡಾ ಭಾವುಕವಾಗಿ ಪ್ರತಿಕ್ರಿಯೆ ನೀಡುತ್ತವೆ ಎನ್ನವುದನ್ನು ಹೇಳುವಂತೆ ಇದೆ ಈ ವೀಡಿಯೋ. ಬೀದಿ ನಾಯಿಯೊಂದು ರಸ್ತೆಯಲ್ಲಿ ಕುಳಿತಿದ್ದು ಅದು ಆಹಾರಕ್ಕಾಗಿ ನೋಡುವಾಗ ಮಹಿಳೆಯೊಬ್ಬರು ಅದಕ್ಕೆ ಆಹಾರವನ್ನು ನೀಡಲು ಮುಂದಾದಾಗ ಆ ನಾಯಿಯು ಆನಂದದಿಂದ ಕಣ್ಣೀರು ಹಾಕಿರುವ ವೀಡಿಯೋ ಇದಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಈಗ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಉತ್ತರ ಚೀನಾದ ಶಾಂಕ್ಸಿ ಪ್ರಾವಿನ್ಸ್ ನ ಜಿನ್ಜಾಂಗ್ ಎನ್ನುವ ಪ್ರದೇಶದಲ್ಲಿ ಈ ಘಟನೆ ನಡೆದಿದೆ ನೋಡುಗನ ಹೃದಯವನ್ನು ಮುಟ್ಟುವಂತೆ ಇದೆ ಈ ವೀಡಿಯೋ.

ನಾಯಿಯೊಂದು ರಸ್ತೆಯಲ್ಲಿ ಹಸಿವಿನಿಂದ ಯಾರಾದರೂ ಆಹಾರ ನೀಡುವರೇನೋ ಎಂದು ತನ್ನ ಮುಂಬಾಗಲುಗಳನ್ನು ಎತ್ತಿ ಕೇಳುತ್ತಿರುವಂತೆ ಕಂಡು ಬರುತ್ತಿದೆ. ನಾಯಿಯನ್ನು ನೋಡಿ ಮಹಿಳೆಯೊಬ್ಬರು ಅದಕ್ಕೆ ಆಹಾರ ನೀಡಲು ಮುಂದಾದಾಗ ನಾಯಿಯು ಆಕೆಯ ಬಳಿಗೆ ಓಡಿ ಬಂದಿದೆ. ಅಲ್ಲದೇ ಆಕೆ ಆಹಾರವನ್ನು ನೀಡಲು ಮುಂದಾದಾಗ ಅದರ ಕಣ್ಣಿಂದ ಕಣ್ಣೀರು ಬಂದಿದೆ. ತನಗೆ ಆಹಾರ ನೀಡಲು ಬಂದಿದ್ದನ್ನು ನೋಡಿದ ಆ ನಾಯಿಯು ಸಂತೋಷಕ್ಕೆ ಪಾರವೆಯೇ ಇಲ್ಲದಂತೆ ಖುಷಿಗೊಂಡಿದ್ದು, ಆ ಸಂತೋಷವೇ ಅದರ ಕಣ್ಣಿನಿಂದ ಕಣ್ಣೀರು ಬರುವಂತೆ ಮಾಡಿದೆ. ಇದಾದ ನಂತರ ಆ ಮಹಿಳೆ ಮತ್ತೊಮ್ಮೆ ನಾಯಿ ಇದ್ದ ಪಾರ್ಕ್ ಗೆ ಬಂದಿದ್ದಾರೆ. ಆಗ ನಾಯಿಯು ಆಕೆಯನ್ನು ಗುರುತಿಸಿ ಆಕೆಯ ಬಳಿಗೆ ಓಡೋಡಿ ಬಂದಿದೆ.

ವಿಡಿಯೋ ನೋಡಿ

ಅಲ್ಲದೇ ಆಕೆ ಮತ್ತೊಮ್ಮೆ ಅದಕ್ಕೆ ಇನ್ನೊಂದು ಆಹಾರದ ಟ್ರೀಟ್ ನೀಡಲು ಮುಂದಾದಾಗ ನಾಯಿಯ ಕಣ್ಣಲ್ಲಿ ಮತ್ತೊಮ್ಮೆ ಕಣ್ಣೀರು ತುಂಬಿರುವುದು ಕಾಣುತ್ತದೆ. ನಾಲ್ಕು ದಿನಗಳ ಹಿಂದೆ ಶೇರ್ ಆದ ಈ ವೀಡಿಯೋವನ್ನು ಈಗಾಗಲ 4 ಲಕ್ಷ 99 ಸಾವಿರ ದಾಟಿದ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವೀಡಿಯೋ ನೋಡಿ ಪ್ರತಿಕ್ರಿಯೆ ನೀಡಿದವರು ಕೂಡಾ ವೀಡಿಯೋ ನೋಡಿದರೆ ಕಣ್ಣೀರು ಬರುವಂತಿದೆ, ಆ ಮಹಿಳೆಗೆ ಧನ್ಯವಾದಗಳನ್ನು ತಿಳಿಸಬೇಕು ಎಂದಿದ್ದಾರೆ.‌ ಇನ್ನು ಕೆಲವರು ಆಕೆಯ ಮಾನವೀಯತೆಯ ಗುಣಕ್ಕೆ ಮೆಚ್ಚುಗೆಯನ್ನು ನೀಡಿದ್ದಾರೆ. ಒಬ್ಬರು ಚೀನಿಯರು ನಾಯಿಗಳನ್ನು ತಿನ್ನುವರು, ಆದರೆ ಈಕೆ ಅದಕ್ಕೆ ವಿ ರು ದ್ಧವಾಗಿ ದಯೆ ಕರುಣೆ ತೋರಿದ್ದಾರೆ ಎಂದಿದ್ದಾರೆ.