ತಮ್ಮ ಮನೆಗಿಂತಲೂ ಐಶಾರಾಮೀ ಸೌಲಭ್ಯಗಳನ್ನು ಹೊಂದಿದೆ ನೀತಾ ಅಂಬಾನಿ ಅವರ 230 ಕೋಟಿ ಬೆಲೆಯ ಈ ಪ್ರೈವೇಟ್ ವಿಮಾನ; ನೋಡಿ ಫೋಟೋಗಳು

ಏಷ್ಯಾದ ಪ್ರಭಾವಶಾಲಿ ಉದ್ಯಮಿ ಮಹಿಳೆ ಎನ್ನುವ ಹೆಸರು ಬಂದರೆ ಅದರಲ್ಲಿ ನೀತಾ ಅಂಬಾನಿ ಅವರ ಹೆಸರು ತಪ್ಪದೇ ಇರುತ್ತದೆ. ಸೋಶಿಯಲ್ ಮೀಡಿಯಾ ಗಳಲ್ಲಿ ಲಕ್ಷಾಂತರ ಹಿಂಬಾಲಕರನ್ನು ಹೊಂದಿರುವ ನಿತಾ ಅಂಬಾನಿ ಅವರು ತನ್ನ ಸೌಂದರ್ಯ ಹಾಗೂ ವಿಶಿಷ್ಟ ಜೀವನ ಶೈಲಿಯಿಂದಾಗಿ ಸದಾ ಸುದ್ದಿ ಮಾಧ್ಯಮಗಳ ತಾಜಾ ಸುದ್ದಿಗಳಲ್ಲಿ ಮಂಚೂಣಿಯಲ್ಲಿ ಇರುತ್ತಾರೆ. ನೀತಾ ಅಂಬಾನಿ ಅವರು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ತನ್ನ ಪ್ರಭಾವವನ್ನು ಹೊಂದಿದ್ದು, ಏಷ್ಯಾದ ಅತಿ ದೊಡ್ಡ ಶ್ರೀಮಂತ ಮುಕೇಶ್ ಅಂಬಾನಿ ಅವರ ಪತ್ನಿ ಎನ್ನುವುದರ ಹೊರತಾಗಿ ನೀತಾ ಅಂಬಾನಿ ತನ್ನದೇ ಆದಂತಹ ವಿಶಿಷ್ಟವಾದ ಪರಿಚಯವನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಮಹಿಳೆಯಾಗಿದ್ದಾರೆ.

ರಿಲಯನ್ಸ್ ಗ್ರೂಪ್ ಮಾಲೀಕ ಮುಖೇಶ್ ಅಂಬಾನಿ ಅವರು ಏಷ್ಯಾದ ಉದ್ಯಮಿಗಳಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದು, ಏಷ್ಯಾದ ನಂಬರ್ ಒನ್ ಶ್ರೀಮಂತ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರಡ. ಪ್ರತಿ ವರ್ಷ ಬರುವ ಅಂಕಿ-ಅಂಶಗಳ ಪ್ರಕಾರ ಮುಕೇಶ್ ಅಂಬಾನಿ ಅವರು 5.60 ಲಕ್ಷ ಕೋಟಿಗಳ ಸಂಪತ್ತಿನ ಮಾಲೀಕರಾಗಿದ್ದು, ಅವರ ಪತ್ನಿ ನೀತಾ ಅಂಬಾನಿ ಕೂಡ ಯಶಸ್ವಿ ಉದ್ಯಮಿ ಮಹಿಳೆಯಾಗಿದ್ದು ಐಷಾರಾಮಿ ಜೀವನವನ್ನು ಬಹಳ ಮೆಚ್ಚುವ ಮಹಿಳೆಯಾಗಿದ್ದಾರೆ.
57 ವರ್ಷ ವಯಸ್ಸಿನ ನೀತು ಅಂಬಾನಿಯವರ ಬಳಿ ಬಹಳಷ್ಟು ಬೆಲೆಬಾಳುವ ಅತ್ಯಮೂಲ್ಯ ವಸ್ತುಗಳು ಇದೆ.‌

ಅವುಗಳಲ್ಲಿ ಒಂದು ನೀತಾ ಅಂಬಾನಿ ಅವರ ಪ್ರೈವೇಟ್ ಜೆಟ್. ಸಾಮಾನ್ಯವಾಗಿ 8 ಕೋಟಿ ರೂ. ಬೆಲೆಬಾಳುವ ಬಿ ಎಂ ಡಬ್ಲ್ಯೂ 760 ಕಾರಿನಲ್ಲಿ ಸಂಚರಿಸುವ ನೀತಾ ಅಂಬಾನಿ, ತಮ್ಮ ದೂರ ಪ್ರಯಾಣ ಅಥವಾ ವಿದೇಶ ಪ್ರಯಾಣ ಗಳಿಗೆ ತಮ್ಮದೇ ಆದಂತಹ ಸಕಲ ಐಶಾರಾಮೀ ಸವಲತ್ತುಗಳನ್ನು ಹೊಂದಿರುವ ಪ್ರೈವೇಟ್ ಜೆಟ್ಟನ್ನು ಹೊಂದಿದ್ದಾರೆ. ಈ ಜೆಟ್ ವಿಮಾನವನ್ನು ಅವರ ಜನ್ಮದಿನಕ್ಕೆ ಪತಿ ಮುಕೇಶ್ ಅಂಬಾನಿ ಯವರು ಉಡುಗೊರೆಯಾಗಿ ನೀಡಿದ್ದಾರೆ. ನೀತಾ ಅಂಬಾನಿ ಅವರ ಖಾಸಗಿ ವಿಮಾನ ಯಾವುದೇ ಫೈವ್ ಸ್ಟಾರ್ ಹೋಟೆಲ್ ಗಿಂತ ಯಾವುದೇ ವಿಚಾರದಲ್ಲಿ ಕೂಡಾ ಕಡಿಮೆಯೇನಿಲ್ಲ.

2007ರಲ್ಲಿ ನೀತಾ ಅಂಬಾನಿ ಅವರ 44ನೇ ಹುಟ್ಟುಹಬ್ಬಕ್ಕೆ ಮುಕೇಶ್ ಅಂಬಾನಿ ಯವರು ಕಸ್ಟಮ್ ಫಿಟ್ಟೆಡ್ ಏರ್ ಬಸ್ 319 ಅನ್ನು ತಮ್ಮ ಪ್ರೀತಿಯ ಮಡದಿದೆ ಕಾಣಿಕೆಯಾಗಿ ನೀಡಿದ್ದು, ಈ ವಿಮಾನದ ಮೌಲ್ಯ ಬರೋಬ್ಬರಿ 230 ಕೋಟಿಗಳು ಎನ್ನಲಾಗಿದೆ. ಇದರಲ್ಲಿ ಸುಮಾರು ಹತ್ತರಿಂದ ಹನ್ನೆರಡು ಜನರು ಬಹಳ ಆರಾಮವಾಗಿ ಪ್ರಯಾಣ ಮಾಡಲು ಅವಕಾಶವಿದೆ. ಮುಖೇಶ್ ಅಂಬಾನಿಯವರು ತಮ್ಮ ಪತ್ನಿಯ ಅಗತ್ಯತೆಗಳನ್ನು ಅರಿತು ಕೊಂಡು ಅರಿತುಕೊಂಡು ವಿಮಾನವನ್ನು ನಿರ್ಮಾಣ ಮಾಡಿಸಿದ್ದು, ಉದ್ಯಮಿ ಮಹಿಳೆಯಾಗಿರುವ ನೀತಾ ಅಂಬಾನಿ ಅವರ ಈ ವಿಮಾನದಲ್ಲಿ ಸಕಲ ಸೌಲಭ್ಯಗಳನ್ನು ಉಳ್ಳಂತಹ ಒಂದು ಮೀಟಿಂಗ್ ರೂಂ ಕೂಡ ಇದೆ.

ವಿಮಾನದ ಒಳಗೆ ಫೈವ್ ಸ್ಟಾರ್ ಹೋಟೆಲ್ ರೆಸ್ಟೋರೆಂಟ್ ಮಾದರಿಯ ಒಂದು ಡೈನಿಂಗ್ ಹಾಲ್ ಕೂಡ ಇದೆ, ಅದೇ ರೀತಿ ಮೂಡನ್ನು ತಂಪಾಗಿಸಲು ಒಂದು ಸ್ಕೈಬಾರ್ ಕೂಡ ಈ ವಿಮಾನದಲ್ಲಿ ಲಭ್ಯವಿದೆ. ಇನ್ನ ಮನರಂಜನೆಗಾಗಿ ಗೇಮಿಂಗ್ ಸೌಲಭ್ಯ, ಮ್ಯೂಸಿಕ್ ಸಿಸ್ಟಮ್, ಸ್ಯಾಟಲೈಟ್ ಟಿವಿಗಳು, ವೈರ್ ಲೆಸ್ ಕಮ್ಯುನಿಕೇಶನ್ ನಂತಹ ಎಲ್ಲಾ ಆಧುನಿಕ ವ್ಯವಸ್ಥೆಗಳನ್ನು ಕೂಡಾ ಈ ವಿಮಾನದಲ್ಲಿ ಅಳವಡಿಸಲಾಗಿದ್ದು, ಬೋರ್ ಆಗಲು ಯಾವುದೇ ಅವಕಾಶ ಇಲ್ಲ. ಇಷ್ಟೆಲ್ಲವುಗಳ ಜೊತೆಗೆ ಅಟ್ಯಾಚ್ಡ್ ಬಾತ್ ರೂಮ್ ಇರುವ ಮಾಸ್ಟರ್ ಬೆಡ್ ರೂಂ ಕೂಡಾ ಈ ವಿಮಾನದಲ್ಲಿ ಇದೆ. ಒಟ್ಟಾರೆ ನೀತಾ ಅವರ ಈ ಪ್ರೈವೇಟ್ ಜೆಟ್ ಒಂದು ಮಿನಿ ಅರಮನೆಯೇ ಸರಿ.