ಮಾರುತಿ ಸುಝುಕಿ ಅತೀ ಶೀಘ್ರದಲ್ಲೇ ಪರಿಚಯಸಲಿದೆ ಎಲೆಕ್ಟ್ರಿಕ್ OMNI, ಬೆಲೆ ಕೇವಲ…

ಮಧ್ಯಮ ವರ್ಗದವರ ಅನೇಕ ಬಿಜಿನೆಸ್ ಕೆಲಸಗಳಿಗೆ ಉತ್ತಮ ಕಾರ್ಯ ನಿರ್ವಹಿಸಿದ ಕ್ರೆಡಿಟ್ ಈ ವಾಹನಕ್ಕೆ ಕೊಡಲೇಬೇಕು. ಯಾಕೆಂದರೆ, ಮಕ್ಕಳಿಗೆ ಶಾಲೆಗೆ ಒಯ್ಯುವದರಿಂದ ಹಿಡಿದು ಮನೆಗೆ ಮರಳಿ ತರುವುದರ ಜೊತೆಗೆ ಅನೇಕ ಬೇರೆ ಕೆಲಸಗಳಿಗೆ ಸಹಾಯವಾಗುವ ಈ ವಾಹನ ಸದ್ಯ ಬೇರೆ ಅವತಾರದಲ್ಲಿ ನಮಗೆ ಪರಿಚಯವಾಗಲಿದೆ. ತಮಾಷೆಯ ವಿಷಯವೆಂದರೆ, ಚಲನ ಚಿತ್ರಗಳಲ್ಲಿ ಅಪಹರಣ ಮಾಡುವುದಕ್ಕಾಗಿ ನಿರ್ದೇಶಕನ ನೆಚ್ಚಿನ ವಾಹನ ಅಂದರೆ ಇದೇ ಎಂದು ಬೇರೆ ಹೇಳಬೇಕಾಗಿಲ್ಲ.

ಈಗ OMNI EV ಯ ಹೊಸದಾದ ಮಾಡಲ್ ಬಗ್ಗೆ ಹೇಳುವುದಾದರೆ, ಐಸಿ ಎಂಜಿನ್ ಮೇಲೆ ನಡೆಯುವ ಮಾಡಲ್ ಹಾಗೆಯೇ ಇದು ಸಹ ಬಾಕ್ಸಿ ಡಿಜಾಯಿನ್ ನಲ್ಲಿಯೇ ಇದೆ. ಹಳೆಯ ಮಾಡಲ್ ಕ್ಯಾಬ್-ಓವರ್ ಆಕಾರದ ಬದಲಾಗಿ ಒಂದು ಅರ್ಧ ಬಾನೆಟ್ ಮಾಡಲ್ ನೀಡಲಾಗಿದೆ. ಮತ್ತು ಏರೋಡೈನಾಮಿಕ್ ಡಿಜಾಯಿನ್ ನಿಂದಾಗಿ ಈ ವಾಹನದ ಕಾರ್ಯ ಕ್ಷಮತೆಯಲ್ಲಿ ಮತ್ತಷ್ಟು ಉತ್ತಮವಾಗಿದೆ. ಈ ಕಾರಣದಿಂದಾಗಿ ಸುರಕ್ಷೆಯೂ ಇನ್ನಷ್ಟು ಹೆಚ್ಚಾಗಿದೆ. ಮುಂದಿನ ಭಾಗಲ್ಲಿರುವ ಸಿ ಆಕಾರದ ಮತ್ತು ಸರಳ ರೇಖೆಯಲ್ಲಿ LED ಇನ್ಸರ್ಟ್ ಮಾಡಿಸ್ ಸಮಾನ ಆಯತದ ಆಕೃತಿಯಲ್ಲಿ ನೀಡಿದ ಹೆಡ್ ಲ್ಯಾಂಪ್ ಗಳಿಂದಾಗಿ ವಾಹನವು ಪ್ರೀಮಿಯಂ ಹಾಗೂ ಸುಂದರವಾಗಿ ಕಾಣುತ್ತಿದೆ.

ಬಾನೆಟ್ ಮತ್ತು ಫ್ರಂಟ್ ಬಂಪರ್ ನಲ್ಲಿ ಅಖಂಡವಾದ ಸರ್ಫೆಸಿಂಗ್ ಜೊತೆಗೆ ಸ್ವಲ್ಪ ಕಡಿಮೆ ಪ್ರೊಫೈಲ್ ಲುಕ್ ನೀಡುವ ವಾಹನ ಈ omni ಆಗಿದೆ. ಕೆಳಗಿನ ಭಾಗದಲ್ಲಿ ಅಡ್ಡವಾಗಿ LED ಫಾಗ್ ಲೈಟ್ ನೀಡಲಾಗಿದೆ. ಬದಿಗೆ ಚೌರಸ ವ್ಹೀಲ್ ಕಮಾನು ಹಾಗೆಯೇ ಕನ್ನಡಿಯ ಜೊತೆಗೆ ಅಲಾಯ್ ವ್ಹೀಲ್ ನೀಡಿದ್ದಾನೆ.

ಕಪ್ಪು ಬಣ್ಣದ ಅಂಡರ್ ಬಾಡಿ ಕ್ಲಾಡಿಂಗ್ಜ್ ಹಾಗೂ ಉದ್ದ ಗ್ರಾವುಂಡ್ ಕ್ಲಿಯರೆನ್ಸ್ ನಿಂದಾಗಿ ವಾಹನಕ್ಕೆ ತುಂಬಾ ಸುಂದರ ಲುಕ್ ಬಂದಿದೆ. ಬಾಗಿಲುಗಳು ಮಾತ್ರ ಮೊದಲಿನ ಹಾಗೆಯೇ ಇವೆ. ಸೈಡ್ ಓರ್ವಿಎಂ ಸಲುವಾಗಿ ಟರ್ನ ಇಂಡಿಕೇಟರ್ ಗಳನ್ನು ಕೊಡಲಾಗಿದೆ. ಹಿಂಬದಿಯಲ್ಲೂ LED ಲೈಟ್ ಇಂಡಿಕೇಟರ್ ಗಳ ವ್ಯವಸ್ಥೆ ಮಾಡಲಾಗಿದೆ.

ಈ ಎಲ್ಲ ಬದಲಾವಣೆಗಳಿಂದ ಈ ವಾಹನ ತುಂಬಾ ಸುಂದರವಾಗಿ ಎದ್ದು ಕಾಣುತ್ತಿದೆ. ಹಿಂದಿನ ಬದಿಯಲ್ಲೂ ವೈಪರ್, ದಿಫೋಗರ್ಸ್, ಫಾಗ್ ಲ್ಯಾಂಪ್ಸ್ ಹೀಗೆ ಅನೇಕ ಸೌಲಭ್ಯಗನ್ನು ಕಾಣಬಹುದು.

ಈ ಹೊಸ ವಿನ್ಯಾಸದ omni EV 4000 mm ಉದ್ದವಿದ್ದು, 1735=mm ಅಗಲವಾಗಿದೆ. ಹಾಗೂ ಎತ್ತರ 1860 mm ಇದೆ. ಮೊದಲಿನ ಆವೃತ್ತಿಯ ಈ ವಾಹನದ ಎತ್ತರ 1860 mm ಉದ್ದ 1410 mm ಎತ್ತರ 1640 mm ಇತ್ತು.

ಹೀಗಾಗಿ ಒಟ್ಟಿನಲ್ಲಿ ಮೊದಲಿನ ಮಾಡಲ್ ಗಿಂತಲೂ ಹೊಸದಾದ ಈ ಮಾಡಲ್ ದೊಡ್ಡದಾಗಿದೆ. Omni EV ಈ ವಾಹನದ ಎಕ್ಸ್ ಶೋರೂಮ್ ಬೆಲೆ 5 ರಿಂದ 7 ಲಕ್ಷ ರೂಪಾಯಿಗಳವರೆಗೆ ನಿಗದಿ ಪಡಿಸಲಾಗಿದೆ.