Video: ಒಂದೇ ಜಿಗಿತದಲ್ಲಿ ನೀರಲಿದ್ದ ಮೊಸಳೆಯನ್ನು ಹಿಡಿದು ಕೊಂ-ದ ಜಾಗ್ವಾರ್; ಜಾಗ್ವಾರ್ ತಾಕತ್ ನೋಡಿ ವಿಸ್ಮಯಗೊಂಡ ಜನ!
ಪ್ರಕೃತಿ ಎಂಬುದು ಒಂದು ವಿಸ್ಮಯ. ಇಲ್ಲಿ ಯಾವಾಗ, ಏನು, ಹೇಗೆ ನಡೆಯುತ್ತದೆ ಎಂಬುದನ್ನು ಯಾರಿಂದಲೂ ಕೂಡಾ ಊಹಿಸಲು ಸಾಧ್ಯವೇ ಇಲ್ಲ. ಈಗ ಇದ್ದದ್ದು ಇನ್ನೊಂದು ಕ್ಷಣ ಇಲ್ಲವಾಗದೇ ಹೋಗಬಹುದು. ಇಂತಹ ವಿಸ್ಮಯ ಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಪ್ರಕೃತಿಯ ಮಡಿಲಿನಲ್ಲಿ ಜೀವ ವೈವಿಧ್ಯತೆಯ ತಾಣ ಎಂದರೆ ಅದು ಅರಣ್ಯ. ಅರಣ್ಯಗಳಲ್ಲಿನ ವನ್ಯ ಜೀವಿಗಳ ಬದುಕೇ ಒಂದು ರೋಚಕ ಕಥೆ, ಅಲ್ಲಿ ನಡೆಯುವ ಸನ್ನಿವೇಶಗಳು ಮಾನವನ ಜೀವನಕ್ಕೊಂದು ಪಾಠವಾಗುತ್ತದೆ. ಬದುಕಲು ಕಲಿಸುತ್ತದೆ, ಜೀವನವೆಂಬುದು ಒಂದು ಹೋ ರಾ ಟ ಎನ್ನುವುದನ್ನು ಕಣ್ಮುಂದೆ ತಂದಿರಿಸುತ್ತದೆ ಅಲ್ಲಿ ಜೀವಿಗಳ ಜೀವನದ ಚಿತ್ರಣ. ಇಂತಹ ಅದ್ಭುತ ತಾಣಗಳಲ್ಲಿ ನಡೆಯುವ ಅದೆಷ್ಟೋ ಘಟನೆಗಳು ಅನೂಹ್ಯ ಹಾಗೂ ವರ್ಣನಾತೀತ ಕೂಡಾ ಹೌದು.
ಅರಣ್ಯದಲ್ಲಿ ಜೀವನ ಮಾಡುವ ಜೀವಿಗಳು ಯಾವಾಗ ತಮ್ಮ ಯಾವೊಂದು ವಿಶೇಷ ಗುಣವನ್ನು ಪ್ರದರ್ಶನ ಮಾಡುವುದೋ ನಾವು ಹೇಳುವುದು ಅಸಾಧ್ಯ. ಆದರೆ ಸೋಶಿಯಲ್ ಮೀಡಿಯಾಗಳು, ವೈಲ್ಡ್ ಲೈಫ್ ಫೋಟೋಗ್ರಫಿ, ವೈಲ್ಡ್ ಲೈಫ್ ವೀಡಿಯೋ ಗಳ ಮೂಲಕ ಇಂದು ಜನರಿಗೆ ಆ ವನ್ಯ ಜೀವಿಗಳ ಬದುಕಿನ ನೈಜ ಚಿತ್ರಣವನ್ನು ನೋಡಲು ಸಾಧ್ಯವಾಗಿದೆ. ಅನೇಕರು ಈ ವೀಡಿಯೋಗಳನ್ನು ಮನರಂಜನೆಯ ದೃಷ್ಟಿಯಿಂದ ನೋಡಿದರೆ, ಇನ್ನೂ ಅನೇಕರು ಅದರಲ್ಲಿ ಒಂದು ಜೀವನ ಸತ್ಯವನ್ನು ಕಂಡುಕೊಳ್ಳುತ್ತಾರೆ. ಒಟ್ಟಾರೆ ಈ ವೀಡಿಯೋಗಳು ವೈರಲ್ ಆಗಿ ಜನರ ಗಮನ ಸೆಳೆಯುತ್ತವೆ.
ಸೋಶಿಯಲ್ ಮೀಡಿಯಾಗಳಲ್ಲಿ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ಆಗಾಗ ವಿಶೇಷ ಎನಿಸುವ ವನ್ಯ ಜೀವಿಗಳ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ವೀಡಿಯೋಗಳು ಬಹಳ ಬೇಗ ಜನರ ಗಮನ ಸೆಳೆಯುತ್ತವೆ ಅದಕ್ಕೆ ಪ್ರಮುಖ ಕಾರಣ ವನ್ಯ ಜೀವಿಗಳ ಬದುಕು. ಈಗ ಅವರು ಅಂತಹುದೇ ಒಂದು ವೀಡಿಯೋ ಶೇರ್ ಮಾಡಿದ್ದು ಇದರಲ್ಲಿ ಜಾಗ್ವಾರ್ ಒಂದು ಹೇಗೆ ಒಂದೇ ಜಿಗಿತದಲ್ಲಿ ನೀರೊಳಗಿದ್ದ ಮೊಸಳೆಯ ಮೇಲೆ ಆ ಕ್ರ ಮ ಣ ಮಾಡಿ, ಅದನ್ನು ಕೊಂ ದು ಹಾಕುತ್ತದೆ ಎಂಬುದನ್ನು ನೋಡಬಹುದು. ಜಾಗ್ವಾರ್ ನ ಗಮನ, ಏಕಾಗ್ರತೆ ಹಾಗೂ ಆ ಕ್ರ ಮಣ ಕೌಶಲ್ಯ ಕ್ಕೆ ಈ ವೀಡಿಯೋ ಅತ್ಯುತ್ತಮ ಉದಾಹರಣೆಯಾಗಿದೆ.
ವೀಡಿಯೋ ನೋಡಿದಾಗ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ದೃಶ್ಯದ ಆರಂಭದಲ್ಲಿ ಜಾಗ್ವಾರ್ ಅದೃಶ್ಯವಾಗಿತ್ತೇನೋ ಎನ್ನುವಂತೆ ಇದ್ದಕ್ಕಿದ್ದಂತೆ ಮರಗಳ ಮಧ್ಯೆ ಯಿಂದ ವೇಗವಾಗಿ ಬರುವ ಜಾಗ್ವಾರ್ ಒಂದೇ ನೆಗೆತಕ್ಕೆ ನೀರಿನೊಳಗೆ ಧುಮುಕಿ, ಅದರಲ್ಲಿ ಸಾಗಿ ಹೋಗುತ್ತಿದ್ದ ಮೊಸಳೆಯೊಂದನ್ನು ಹಿಡಿದು, ಅದನ್ನು ಕಚ್ಚಿ ಕೊಂ ದು ಹಾಕುವುದನ್ನು ನೋಡಿದಾಗ, ಬೇರೆ ಜೀವಿಗಳನ್ನು ಅನಾಯಾಸವಾಗಿ ಹಿಡಿಯುವ ಮೊಸಳೆಯನ್ನು ಜಾಗ್ವಾರ್ ಕೊಂ ದ ರೀತಿ ನೋಡಿದಾಗ ಪ್ರಕೃತಿ ವನ್ಯ ಜೀವಿಗಳಲ್ಲಿ ಎಂತಹ ಶಕ್ತಿಯನ್ನು, ಚಾಣಾಕ್ಷತನವನ್ನು ಅಡಗಿಸಿದೆ ಎಂಬುದು ಕೂಡಾ ನಮ್ಮ ಮುಂದೆ ಬರುತ್ತದೆ.
ವಿಡಿಯೋನೋಡಿ
The word 'jaguar' comes from the indigenous word 'yaguar', which means 'he who kills with one leap'. pic.twitter.com/ISRJsXTJi7
— Susanta Nanda IFS (@susantananda3) December 26, 2020
ಸುಶಾಂತ್ ಅವರು ಶೇರ್ ಮಾಡಿರುವ ಈ ವೀಡಿಯೋವನ್ನು ಈಗಾಗಲೇ 11 ಸಾವಿರಕ್ಕಿಂತ ಅಧಿಮ ಮಂದಿ ವೀಕ್ಷಣೆ ಮಾಡಿದ್ದು, ಸಾವಿರಕ್ಕಿಂತ ಅಧಿಕ ಮಂದಿ ಲೈಕ್ಸ್ ಗಳನ್ನು ನೀಡಿದ್ದಾರೆ. ನೆಟ್ಟಿಗರು ಪ್ರಕೃತಿಯ ನಡುವಿನ ವನ್ಯ ಜೀವಿಗಳ ಈ ಅದ್ಭುತ ದೃಶ್ಯವನ್ನು ನೋಡಿ ಅಚ್ಚರಿ ಯನ್ನು ಪಟ್ಟಿದ್ದಾರೆ. ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡುತ್ತಾ, ಕಾಡಿನ ನಿಯಮ, ಆಹಾರ ಸರಪಣಿಯಲ್ಲಿ ಯಾರೊಬ್ಬರೂ ಹೆಚ್ಚಲ್ಲ ಎಂದು ಹೇಳಿದ್ದಾರೆ. ಜಾಗ್ವಾರ್ ನ ಜಗತ್ತು ಅದ್ಭುತ ಹಾಗೂ ಊಹಿಸಲು ಸಾಧ್ಯವಿಲ್ಲ ಎಂದಿದ್ದಾರೆ ಮತ್ತೊಬ್ಬ ನೆಟ್ಟಿಗರು.ಜಾಗ್ವಾರ್ ನ ಕೌಶಲ್ಯವು ಬಹಳ ರೋಚಕ ಎಂದು ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ.