ಗೆಲ್ಲುವ ಮೊದಲೇ ಸಂಭ್ರಮ ಆಚರಿಸಲು ಹೋದ ಸ್ಪರ್ಧಿ: ಹಿಂದಿನಿಂದ ಬಂದವನು ಬಹುಮಾನ ಗೆದ್ದು ಹೋದ! ನೋಡಿ Video

ಸೂಪರ್ ಬೈಕ್ ಗಳ ರೇಸ್ ನಲ್ಲಿ ಗೆದ್ದವರು ಕೊನೆಯ ಹಂತದಲ್ಲಿ ಬೈಕ್ ಮೇಲೆ ಬರುವಾಗಲೇ ಬೈಕ್ ರೈಡಿಂಗ್ ನಲ್ಲೇ ತಮ್ಮ ಕೈಯನ್ನು ಎತ್ತಿ ವಿಜಯವನ್ನು ಪಡೆದ ಸೆಲೆಬ್ರೇಟ್ ಮಾಡುತ್ತಾ ಸ್ಟಂಟ್ ಮಾಡುವುದು ಕೂಡಾ ಸಾಮಾನ್ಯವಾಗಿರುತ್ತದೆ‌. ಸೂಪರ್ ರೇಸ್ ಬೈಕ್ ಗಳ ರೇಸ್ ಕೂಡಾ ನೋಡಲು ಮನರಂಜನೆ ಮಾತ್ರವೇ ಅಲ್ಲದೇ ಬಹಳ ಥ್ರಿಲ್ಲಿಂಗಾಗಿ ಕೂಡಾ ಇರುತ್ತದೆ. ಅದಕ್ಕೆ ಅನೇಕರಿಗೆ ಬೈಕ್ ರೇಸ್ ಎನ್ನುವುದು ಒಂದು ಕ್ರೇಜ್ ಆಗಿರುತ್ತದೆ. ವಿಶ್ವದ ಹಲವು ದೇಶಗಳಲ್ಲಿ ಬೈಕ್ ರೇಸ್ ಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳು ಇರುವುದು ಕೂಡಾ ನಿಜ ಹಾಗೂ ಆಗಾಗ ಇವುಗಳ ಸ್ಪರ್ಧೆಗಳನ್ನು ಕೂಡಾ ಏರ್ಪಡಿಸುವ ಮೂಲಕ ಬೈಕ್ ರೈಡಿಂಗ್ ಕ್ರೇಜ್ ಇರುವವರಿಗೆ ಒಂದು ಸುವರ್ಣ ಅವಕಾಶವನ್ನು ಕೂಡಾ ನೀಡಲಾಗುತ್ತದೆ. ಇದಕ್ಕೆ ಬೈಕರ್ ಗಳು ತರಬೇತಿ ಕೂಡಾ ಪಡೆಯುತ್ತಾರೆ.

ಬ್ರೆಜಿಲ್ ನಲ್ಲಿ ಹೀಗೆ ಒಂದು ಸೂಪರ್ ಬೈಕ್ ರೇಸ್ ನಡೆದಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಂತಹ ಬೈಕ್ ರೇಸರ್ ಒಬ್ಬರು ಗೆಲ್ಲುವುದಕ್ಕಿಂತ ಮೊದಲೇ ತನ್ನ ಗೆಲುವಿನ ಸಂಭ್ರಮವನ್ನು ಆಚರಣೆ ಮಾಡಲು ತೊಡಗಿದ್ದಾರೆ, ಬೈಕ್ ಮೇಲಿಂದ ತನ್ನ ಎರಡು ಕೈಗಳನ್ನು ಮೇಲೆತ್ತಿ ಗೆದ್ದೆನೆಂಬ ಖುಷಿಯಿಂದ ಕೈಗಳನ್ನು ಎತ್ತಿ ತೋರಿಸುತ್ತಾ ಸಂಭ್ರಮಾಚರಣೆಯನ್ನು ಮಾಡಿದ್ದಾರೆ. ಆದರೆ ದು ರಾ ದೃ ಷ್ಟ ವಶಾತ್ ಈಗ ಅದೇ ಕಾರಣದಿಂದಾಗಿ ರೇಸ್ನಲ್ಲಿ ಮೊದಲ ಸ್ಥಾನದ ಬದಲಾಗಿ ಮೂರನೆಯ ಸ್ಥಾನಕ್ಕೆ ತೃಪ್ತಿ ಪಡುವಂತಹ ಪರಿಸ್ಥಿತಿ ಎದುರಾಗಿದೆ. ಮಾಧ್ಯಮಗಳ ಸುದ್ದಿಯ ಪ್ರಕಾರ ಆಂಡ್ರೆ ವೆರಿಸ್ಸಿಮೊ ಎನ್ನುವ ಬೈಕರ್ ಗೋಯಾನಾ ನಗರದ ಆಟೊಡ್ರೊಮೊ ಇಂಟರ್ನ್ಯಾಷನಲ್ ಐರ್ಟನ್ ಸೆನ್ನಾದಲ್ಲಿ ಮೊದಲ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದರು.

ಆದರೆ ತಾನೇ ಗೆದ್ದನೆಂಬ ಖುಷಿಯಲ್ಲಿ ಸಂಭ್ರಮಾಚರಣೆ ಮಾಡುತ್ತಾ ಆತ ಹಿಂತಿರುಗಿ ನೋಡುವಾಗಲೇ ತಕ್ಷಣ ಇಬ್ಬರು ಸ್ಪರ್ಧಿಗಳು ಹಿಂದಿನಿಂದ ಬರುತ್ತಿರುವುದನ್ನು ಗಮನಿಸಿದ್ದಾನೆ. ಬೈಕ್ ರೇಸ್ ನಲ್ಲಿ ಕೊನೆಯ ಹಂತಕ್ಕೆ ಅಥವಾ ಕೊನೆಯ ತಿರುವಿನತ್ತ ಬಂದ ಕೂಡಲೇ ಇನ್ನೂ ಸ್ವಲ್ಪ ದೂರದ ಕ್ರಮಿಸುವ ಅಗತ್ಯ ಇದ್ದರೂ ತಾನೇ ಗೆಲ್ಲುವುದು ಎನ್ನುವ ಅತಿಯಾದ ವಿಶ್ವಾಸದಿಂದ ಬೈಕರ್ ಅಲ್ಲೇ ತನ್ನ ಎರಡು ಕೈಗಳನ್ನು ಮೇಲೆತ್ತಿ ಸ್ಪರ್ಧೆ ನೋಡಲು ಬಂದಿದ್ದವರ ಕಡೆಗೆ ವಿಜಯದ ಸಂಭ್ರಮದಿಂದ ಕೈಯನ್ನು ಬೀಸಿದ್ದಾರೆ. ಆದರೆ ಆ ವೇಳೆಗೆ ಆತನ ಪ್ರತಿಸ್ಪರ್ಧಿಗಳಾಗಿದ್ದ ಓಸ್ವಾಲ್ಡೋ ಫಿಲ್ಹೋ ಮತ್ತು ಮಾರ್ಸೆಲ್ಲೊ ಸ್ಕಾಫ್‌ಗೆ ಅವರ ನಡುವಿನ ಅಂತರವನ್ನು ಕವರ್ ಮಾಡಲು ಸಾಧ್ಯವಾಗಿದೆ.

ವೆರಿಸ್ಸಿನೋ ಅತ್ತ ಅತೀವವಾದ ಆತ್ಮ ವಿಶ್ವಾಸದಿಂದ, ಗೆಲ್ಲುವ ಮೊದಲೇ ತನ್ನ ಗೆಲುವಿನ ಸಂಭ್ರಮವನ್ನು ಆಚರಣೆ ಮಾಡುತ್ತಿದ್ದರೆ, ಓಸ್ವಾಲ್ಡೋ ಮತ್ತು ಮಾರ್ಸೆಲ್ಲೋ ಇಬ್ಬರೂ ಕೂಡಾ ಆತನನ್ನು ಹಿಂದಿಕ್ಕಿ ತಮ್ಮ ಬೈಕ್ ಗಳನ್ನು ಚಾಲನೆ ಮಾಡಿದ್ದಾರೆ. ವೆರಿಸ್ಸಿಮೋನನ್ನು ಹಿಂದಿಕ್ಕಿದ ಇನ್ನರೂ ಬೈಕರ್ ಗಳು ಕೂಡಾ ಅನುಕ್ರಮವಾಗಿ ಮೊದಲನೇ ಹಾಗೂ ಎರಡನೆಯ ಸ್ಥಾನವನ್ನು ತಮ್ಮದಾಗಿಸಿಕೊಂಡರೆ, ಸರಿಯಾಗಿ ಮುಂದೆ ಹೋಗಿ ಮೊದಲನೆಯ ಸ್ಥಾನವನ್ನು ತನ್ನದಾಗಿಸಿಕೊಳ್ಳಬೇಕಿದ್ದ ವೆರಿಸ್ಸಿಮೋ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.
ಮಾಧ್ಯಮವೊಂದರಲ್ಲಿ ವೆರಿಸ್ಸಿಮೋ ನಾನು ಬೈಕನ್ನು ವೇಗವಾಗಿ ಓಡಿಸಲು ಪ್ರಯತ್ನಪಟ್ಟೆ, ಆದರೆ ಅದು ಮೂರನೇ ಗೇರ್ ನಲ್ಲಿ ಇದ್ದುದ್ದರಿಂದ ಅವರಿಬ್ಬರೂ ನನ್ನನ್ನು ಸುಲಭವಾಗಿ ಹಿಂದೆ ಹಾಕಿ ಮುಂದೆ ಹೋದರು ಎಂದಿದ್ದಾರೆ.

ವಿಡಿಯೋ ನೋಡಿ

ನ್ಯೂಸ್ ಗಳಲ್ಲಿ ಮತ್ತು ಸೋಶಿಯಲ್ ಮೀಡಿಯಾ ಗಳಲ್ಲಿ ಈ ವಿಡಿಯೋವನ್ನು ಹಲವು ಬಾರಿ ಪ್ರಸಾರ ಮಾಡಲಾಗಿದೆ.‌ ಇದನ್ನು ನೋಡಿ ಅನೇಕರು ವಿವಿಧ ಬಗೆಯ ಜೋಕ್ಸ್ ಗಳನ್ನು ಮಾಡಿದ್ದಾರೆ. ರೇಸ್ ನ ಎಂಟನೇ ಅಂದರೆ ಕೊನೆಯ ರೌಂಡ್ ನಲ್ಲಿ ಇಂತಹ ಗೊಂದಲವಾಗಿದೆ ಎನ್ನಲಾಗಿದ್ದು, ಸೋತ ವೆರಿಸ್ಸಿಮೋಗೆ ಇವಿಓ ಶ್ರೇಣಿಯಲ್ಲಿ ಸಮಗ್ರ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಹೇಗೋ ಸೋಲಿನಲ್ಲೂ ಕೂಡಾ ಒಂದು ಗೆಲುವನ್ನು ತನ್ನದಾಗಿಸಿಕೊಂಡು ಹೋಗಿದ್ದಾರೆ ವೆರಿಸ್ಸಿಮೋ. ಆದರೆ ಅವರ ಅತಿಯಾದ ಆತ್ಮವಿಶ್ವಾಸ ಅವರಿಗೆ ಮು ಳು ವಾಗಿದ್ದು ಮಾತ್ರ ವಾಸ್ತವ.‌