ಮಗುವನ್ನು ರಕ್ಷಿಸಲು ತೋಳದ ಮುಂದೆ ತಾನೇ ಬಂದ ನಾಯಿ: ನಿಯತ್ತು ಎಂದರೆ ಇದೇ ಅಲ್ಲವೇ?

ಮನುಷ್ಯರು ಮತ್ತು ನಾಯಿಯ ನಡುವಿನ ಸಂಬಂಧವೂ ಅನಾದಿಕಾಲದಿಂದಲೂ ನಡೆದು ಬಂದಿದೆ. ಈ ಸಂಬಂಧದಲ್ಲಿ ಒಂದು ಪ್ರೀತಿ ಹಾಗೂ ಒಂದು ಅಪ್ಯಾಯತೆಯೂ ಕಂಡುಬರುತ್ತದೆ. ನಾಯಿ ಹಾಗೂ ಮನುಷ್ಯರ ನಡುವಿನ ಸಂಬಂಧದ ಕುರಿತಾಗಿ ಹೇಳುವುದಾದರೆ ಈ ಸಂಬಂಧಕ್ಕೆ ನಾವು ಪದಗಳ ಮೂಲಕ ಹೇಳುವುದಕ್ಕಾಗಲೀ, ವರ್ಣಿಸುವುದಕ್ಕೇ ಆಗಲೀ ಸಾಧ್ಯವಾಗುವುದಿಲ್ಲ. ಇದೊಂದು ಭಾವನಾತ್ಮಕ ಬಂಧ ಕೂಡಾ ಹೌದು. ಮನುಷ್ಯರ ಜೊತೆ ಒಡನಾಟ ಇರುವ ಬೇರೆ ಪ್ರಾಣಿಗಳಿಗೆ ಹೋಲಿಕೆ ಮಾಡಿದರೆ ಮನುಷ್ಯರೊಟ್ಟಿಗೆ ಹೆಚ್ಚು ನಿಕಟವಾಗಿರುವ ಪ್ರಾಣಿಗಳು ಎಂದರೆ ಅವು ನಾಯಿಗಳು ಮಾತ್ರ. ಇನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆ ಅಥವಾ ನಿಯತ್ತು ಎನ್ನುವ ವಿಷಯ ಬಂದಾಗಲೆಲ್ಲ ಅಲ್ಲಿ ಅತ್ಯುತ್ತಮ ಉದಾಹರಣೆಯಾಗಿ ಕಾಣುವುದು ಕೂಡ ನಾಯಿ ಮಾತ್ರವೇ.

ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ ಎಂದು ಕೂಡ ಹೇಳಲಾಗುತ್ತದೆ. ನಾಯಿಗಳು ತಮಗೆ ಅನ್ನವನ್ನು ಹಾಕಿ ಸಾಕಿದವರನ್ನು ಸದಾ ಕಾಯುತ್ತವೆ ಹಾಗೂ ಅವರಿಗಾಗಿ ತಮ್ಮ ಪ್ರಾಣವನ್ನು ನೀಡಲು ಕೂಡ ಹಿಂದೆ-ಮುಂದೆ ಆಲೋಚನೆ ಮಾಡುವುದಿಲ್ಲ. ನಾಯಿಗಳ ನಿಷ್ಠೆ ಹಾಗೂ ನಿಯತ್ತು ಪ್ರತಿ ಬಾರಿ ಕೂಡ ಮನುಷ್ಯನನ್ನು ಆಶ್ಚರ್ಯಚಕಿತರನ್ನಾಗಿ ಮಾಡಿ ಬಿಡುತ್ತವೆ. ಇತ್ತೀಚೆಗಷ್ಟೇ ನಡೆದ ಒಂದು ಘಟನೆಯಲ್ಲಿ ಹತ್ತು ವರ್ಷದ ಮಗುವನ್ನು, ಪ್ರಾಣ ಹರಣ ಮಾಡಲು ಬಂದಂತಹ ತೋಳದ ಬಾಯಿಂದ ರಕ್ಷಣೆ ಮಾಡಲು ನಾಯಿಯೊಂದು ತನ್ನ ಪ್ರಾಣವನ್ನೇ ತ್ಯಾಗ ನೀಡಿರುವ ಘಟನೆ ರಷ್ಯಾದಲ್ಲಿ ನಡೆದಿದೆ.‌ ರಷ್ಯಾದ Sindor, Comi Republic ಎಂಬಲ್ಲಿ ಈ ಭಾವನಾತ್ಮಕ ಘಟನೆಯು ವರದಿಯಾಗಿದೆ.

ಮಗುವಿನ ಹೆಸರು ಎಮಿಲಿಯನ್ ಎನ್ನಲಾಗಿದ್ದು, ಆತ ತನ್ನ ಸಹೋದರ-ಸಹೋದರಿಯರ ಜೊತೆಗೆ ಆಟವಾಡುತ್ತಿದ್ದಂತಹ ವೇಳೆಯಲ್ಲಿ, ಎಮಿಲಿಯನ್ ಬಚ್ಚಿಟ್ಟು ಕೊಳ್ಳುವುದಕ್ಕಾಗಿ ಹಿಮದ ರಾಶಿಯ ಬಳಿ ಹೋಗಿ ಅಡಗಿಕೊಂಡಿದ್ದಾನೆ. ಆತ ಅಲ್ಲಿ ಅಡಗಿಕೊಂಡಿದ್ದ ಸಮಯದಲ್ಲಿ ತೋಳವೊಂದು ಆತನ ಕಡೆಗೆ ಬರುವುದನ್ನು ಅವರ ಸಾಕು ನಾಯಿ ಜೆಸಿ ಗಮನಿಸಿದ್ದು ಗಮನಿಸಿದ್ದು, ಅದಕ್ಕೆ ಅ ಪಾ ಯ ದ ಅರಿವಾದ ಕೂಡಲೇ ಅದು ತೋಳ ಹಾಗೂ ಎಮಿಲಿಯನ್ ಮಧ್ಯಕ್ಕೆ ಹೋಗಿ ನಿಂತಿದೆ. ಆಗ ತೋಳ ಎಮಿಲಿಯನ್ ಬದಲಾಗಿ ನಾಯಿಯ ಕಡೆಗೆ ಹೆಜ್ಜೆ ಹಾಕಿದೆ.

ತೋಳ ಜೆಸಿ ಮೇಲೆ ಆ ಕ್ರ ಮ ಣ ವನ್ನು ಮಾಡಿ ಅದನ್ನು ಹಿಡಿದಿದೆ, ಆಗ ಎಮಿಲಿಯನ್ ಅದೇ ಸರಿಯಾದ ಸಮಯ ಎಂದು ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಓಡಿ ಹೋಗಿ ತನ್ನ ತಂದೆ ತಾಯಿಗೆ ತೋಳ ಜೆಸಿಯನ್ನು ಹಿಡಿದಿರುವ ವಿಷಯವನ್ನು ತಿಳಿಸಿದ್ದಾನೆ. ತೋಳದ ಕೈಗೆ ಸಿಕ್ಕ ಜೆಸಿಯನ್ನು ಕಾಪಾಡಲು ಎಮಿಲಿಯನ್ ನ ತಂದೆ-ತಾಯಿ ಇಬ್ಬರೂ ಕೂಡ ಘಟನೆ ನಡೆದ ಸ್ಥಳಕ್ಕೆ ಬಂದಿದ್ದಾರೆ. ಆದರೆ ಅಲ್ಲಿ ಅವರ ಕಣ್ಣಿಗೆ ಜೆಸಿ ಕಂಡಿಲ್ಲ. ಅವರೆಲ್ಲರೂ ಜೆಸಿಯನ್ನು ಹುಡುಕುತ್ತಾ ಹೊರಟಾಗ, ಒಂದಷ್ಟು ದೂರ ಕ್ರಮಿಸಿದ ನಂತರ ಅವರಿಗೆ ಕಾಡಿನ ಒಂದು ಕಡೆ ಗಾಯಗಳಿಂದ ನರಳುತ್ತ ಬಿದ್ದಿರುವ ಜೆಸಿ ದೊರಕಿದೆ.

ತೋಳ ಮಾಡಿದ ಆ ಕ್ರ ಮ ಣ ದಿಂದಾಗಿ ಜೆಸಿ ಮೈಮೇಲೆ ಬಹಳ ಗಾಯಗಳಾಗಿದ್ದ ಕಾರಣ ಅದು ನರಳುತ್ತಿತ್ತು ಎನ್ನಲಾಗಿದ್ದು, ಎಮಿಲಿಯನ್ ನ ತಾಯಿ ಜೆಸಿಯನ್ನು ಎತ್ತಿಕೊಂಡ ಸಂದರ್ಭದಲ್ಲಿ, ಅವರ ಕೈಯಲ್ಲೇ ಜೆಸಿ ತನ್ನ ಕೊನೆಯುಸಿರನ್ನು ಎಳೆದಿದೆ. ಈ ಘಟನೆಯಯ ನಮಗೆ ನಾಯಿಗಳು ಎಷ್ಟು ನಿಯತ್ತನ್ನು ಹೊಂದಿರುತ್ತವೆ ಹಾಗೂ ಮನುಷ್ಯನಿಗೆ ತನ್ನ ನಿಸ್ವಾರ್ಥ ಸೇವೆಯನ್ನು ನೀಡುವುದಕ್ಕೆ ನಾಯಿಗೆ ಮಿಗಿಲಾದ ಬೇರೊಂದು ಪ್ರಾಣಿ ಇಲ್ಲವೇ ಇಲ್ಲ ಎನಿಸಿಬಿಡುತ್ತದೆ. ಇಂತಹ ಘಟನೆಗಳು ಆದಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದಾಗ ನಾಯಿಗಳ ಬಗ್ಗೆ ಇನ್ನೂ ಗೌರವ ಹೆಚ್ಚಾಗುತ್ತದೆ.