ಹಂದಿಗಳ ಮುಂದೆ ಫೇಕ್ ಟೈಗರ್ ಪ್ರಾಂಕ್ ಮಾಡಲು ಹೋಗಿ ತಾನೇ ಪ್ರಾಂಕ್ ಆದ ಯೂಟ್ಯೂಬರ್: ಬಿದ್ದು ಬಿದ್ದು ನಕ್ಕ ನೆಟ್ಟಿಗರು
ಫೇ ಕ್ ಟೈಗರ್ ಫ್ರಾಂಕ್ ವಿಡಿಯೋಗಳು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರಂಗಳಲ್ಲಿ ಸಾಕಷ್ಟು ಸದ್ದನ್ನು ಮಾಡುತ್ತಾ ,ವೈರಲ್ ಆಗಿದೆ. ಈ ವೀಡಿಯೋಗಳು ಜನರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿರುವುದು ಕೂಡಾ ನಿಜ. ಸಾಮಾನ್ಯವಾಗಿ ವೈರಲ್ ಆಗಿರುವ ವಿಡಿಯೋಗಳಲ್ಲಿ ನಾಯಿಗಳು ಮಲಗಿರುವ ಕಡೆ ಹುಲಿಯ ಬೊಂಬೆಯನ್ನು ತೆಗೆದುಕೊಂಡು ಹೋಗಿ ಅದನ್ನು ಮಲಗಿರುವ ನಾಯಿಯ ಪಕ್ಕದಲ್ಲಿಡುತ್ತಾರೆ. ಎಚ್ಚರಗೊಂಡ ನಾಯಿಯು ಹುಲಿಯನ್ನು ನೋಡಿದಾಗ ಭಯದಿಂದ ನೀಡುವ ಪ್ರತಿಕ್ರಿಯೆಗಳನ್ನು ವೀಡಿಯೋದಲ್ಲಿ ರೆಕಾರ್ಡ್ ಮಾಡಿ ಯೂಟ್ಯೂಬ್ ನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು. ಈ ವಿಡಿಯೋಗಳು ಭರ್ಜರಿ ವೈರಲ್ ಆದ ಕಾರಣ ಅಂತಹ ಮತ್ತಷ್ಟು ಮಗದಷ್ಟು ಪ್ರಯತ್ನಗಳು ನಡೆದು ನಾಯಿ, ಕೋತಿಗಳ ಬಳಿ ಫೇಕ್ ಟೈಗರ್ ಅನ್ನು ಇರಿಸಿ ವೀಡಿಯೋ ಮಾಡಿ ಶೇರ್ ಮಾಡಿಕೊಂಡರು ಯೂಟ್ಯೂಬರ್ ಗಳು.
ಹೀಗೆ ಯೂಟ್ಯೂಬರ್ ಗಳು ಫೇಕ್ ಟೈಗರ್ ಪ್ರಾಂಕ್ ವೀಡಿಯೋ ಮೂಲಕವೇ ಲಕ್ಷ-ಲಕ್ಷ ವೀಕ್ಷಣೆಗಳನ್ನು, ಸಾವಿರಾರು ಸಂಖ್ಯೆಯಲ್ಲಿ ಲೈಕ್ಸ್ ಗಳನ್ನು ಹಾಗೂ ಕಾಮೆಂಟ್ಗಳನ್ನು ಪಡೆದುಕೊಂಡು ಜನರ ಮೆಚ್ಚುಗೆಯನ್ನು ಗಳಿಸಿದ್ದರು. ನಾಯಿಯ ಬಳಿ ಹೀಗೆ ಟೈಗರ್ ಪ್ರಾಂಕ್ ಮಾಡುತ್ತಿದ್ದ ಯೂಟ್ಯೂಬರ್ ಒಬ್ಬ ಒಂದು ಬದಲಾವಣೆಯೊಂದಿಗೆ ನಾಯಿಯ ಬದಲಾಗಿ, ಬೇರೊಂದು ಪ್ರಾಣಿಯ ಬಳಿ ಇದೇ ಟೈಗರ್ ಪ್ರಾಂಕ್ ಮಾಡುವ ಪ್ರಯತ್ನವನ್ನು ಮಾಡಿದ್ದಾನೆ. ಆ ವೀಡಿಯೋ ಕೂಡಾ ಆತ ಶೇರ್ ಮಾಡಿಕೊಂಡಿದ್ದು, ಆತನ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲ ನೋಡಿದಾಗ ನೆಟ್ಟಿಗರು ಎಲ್ಲರೂ ಕೂಡ ಬಿದ್ದು ಬಿದ್ದು ನಗುವಂತಾಗಿದೆ. ಆದರೆ ನಕ್ಕಿರುವುದು ಪ್ರಾಣಿ ಭ ಯ ಪಟ್ಟಿದ್ದಕ್ಕಾಗಿ ಖಂಡಿತ ಅಲ್ಲ.
ಫೇ ಕ್ ಟೈಗರ್ ಪ್ರಾಂಕಿಗಾಗಿ ಆತ ಈ ಬಾರಿ ನಾಯಿಯ ಬದಲಿಗೆ ಹಂದಿಗಳನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಹಂದಿಗಳು ಮಲಗಿರುವ ಜಾಗಕ್ಕೆ ಹೋಗಿ ಎಂದಿನಂತೆ ನಕಲಿ ಹುಲಿಯನ್ನು ಹಂದಿಯ ಪಕ್ಕದಲ್ಲಿ ಇರಿಸಿದ್ದಾನೆ. ನಿದ್ರೆ ಮಾಡುತ್ತಿರುವ ಹಂದಿಯನ್ನು ಎಬ್ಬಿಸಲು ಹುಲಿ ಘರ್ಜನೆಯ ಆಡಿಯೋ ರೆಕಾರ್ಡ್ ಅನ್ನು ಕೂಡ ಇಟ್ಟು ಜೋರಾದ ಶಬ್ದವನ್ನು ಮಾಡಲಾಗಿದೆ. ಹುಲಿಯ ಘರ್ಜನೆಯನ್ನು ಕೇಳಿಸಿಕೊಂಡಾಗ ಹಿಂದಿನ ವೀಡಿಯೋಗಳಲ್ಲಿ ಸಾಮಾನ್ಯವಾಗಿ ನಾಯಿಗಳು ಎದ್ದು ಬಿದ್ದು ಓಡುವುದನ್ನು ಗಮನಿಸಿದ್ದೇವೆ ಆದರೆ ಈ ವೀಡಿಯೋದಲ್ಲಿ ಹಂದಿಗಳ ಪ್ರತಿಕ್ರಿಯೆ ಮಾತ್ರ ಬಹಳ ವಿಭಿನ್ನವಾಗಿದೆ.
ಹುಲಿಯ ಸದ್ದನ್ನು ಕೇಳಿಸಿಕೊಂಡ ಹಂದಿಗಳು ಭಯ ಅಥವಾ ಆ ತಂ ಕ ದಿಂದ ಎದ್ದು ಓಡಿ ಹೋಗಿಲ್ಲ. ಬದಲಾಗಿ ಅವು ನಿಧಾನವಾಗಿ ಮೇಲೆದ್ದು ತಮ್ಮ ಮೈಕೊಡವಿಕೊಂಡು ಹುಲಿಯ ಬೊಂಬೆಯನ್ನು ನೋಡಿ ಯಾವುದೇ ಭಯ ಇಲ್ಲ ಎಂಬಂತೆ ಅಲ್ಲಿಂದ ಎದ್ದು ಪಕ್ಕಕ್ಕೆ ಹೋಗಿವೆ. ಇನ್ನೂ ಕೆಲವು ಹುಲಿಯ ಬೊಂಬೆ ನೋಡುತ್ತಾ ತಮ್ಮ ಮೈಯನ್ನು ಕೆರೆದುಕೊಳ್ಳುತ್ತಾ, ನಿದ್ದೆ ಹಾಳು ಮಾಡಿದವನಿಗೆ ಹಿಡಿ ಶಾ ಪ ಹಾಕಿದಂತೆ ಕಂಡಿದೆ. ಹುಲಿಯನ್ನು ನೋಡಿ ಹಂದಿಗಳು ಕೂಡ ಓಡುತ್ತವೆ ಎಂದು ಆಸೆಯಿಂದ ನೋಡುತ್ತಿದ್ದವರಿಗೆ ಈ ವಿಡಿಯೋ ನಿಜಕ್ಕೂ ಊಹೆ ಮಾಡಿರದ ಸನ್ನಿವೇಶಗಳನ್ನು ಮುಂದಿಟ್ಟಿದ್ದು, ಹಂದಿಗಳು ಹುಲಿಯ ಶಬ್ದ ಕೇಳಿಸಿದರೂ ಆರಾಮವಾಗಿ ಸೋಮಾರಿತನ ಮೆರೆಯುತ್ತವೆ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿದಂತೆ ಇದೆ.
ವಿಡಿಯೋ ನೋಡಿ
ಈ ವಿಡಿಯೋವನ್ನು 24 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, 19 ಸಾವಿರಕ್ಕೂ ಅಧಿಕ ಮಂದಿ ಲೈಕ್ ಗಳನ್ನು ನೀಡಿದ್ದಾರೆ. ಇನ್ನು ಕಾಮೆಂಟ್ಗಳನ್ನು ಮಾಡಿದವರು ಪ್ರಾಂಕ್ ವಿಡಿಯೋ ಮಾಡಲು ಹೋದ ಯೂಟ್ಯೂಬರ್ ಸ್ವತಃ ಹಂದಿಗಳ ಮುಂದೆ ಪ್ರಾಂಕ್ ಆಗಿ ಹೋದ ಎಂದು ಹಾಸ್ಯ ಮಾಡಿದ್ದಾರೆ. ಇನ್ನು ಕೆಲವರು ಹಂದಿಗಳು ನಾಯಿಗಳಿಗಿಂತ ಬುದ್ಧಿವಂತ ಪ್ರಾಣಿಗಳು, ಅವುಗಳಿಗೆ ಹುಲಿ ನೇರವಾಗಿ ಆ ಕ್ರ ಮಣ ಮಾಡುವುದೇ ವಿನಃ ಹಿಂದಿನಿಂದ ಶಬ್ದ ಮಾಡುವುದಿಲ್ಲ ಎನ್ನುವುದು ತಿಳಿದಿದೆ ಎಂದಿದ್ದಾರೆ. ಇನ್ನು ಕೆಲವರು ಬಹುಶಃ ಹಂದಿಗಳು ಹುಲಿಯನ್ನು ಇದುವರೆಗೂ ನೋಡಿಲ್ಲ ಅದಕ್ಕೆ ಅವುಗಳಿಗೆ ಈ ಹುಲಿಯನ್ನು ನೋಡಿದಾಗ ಭ ಯ ಆಗಿಲ್ಲ ಎಂದಿದ್ದಾರೆ.