ಐಎಎಸ್ ಸಂದರ್ಶನ: ನಿಮ್ಮ ಮನೆಗೆ ಬೆಂಕಿ ಬಿದ್ದು, ಊರಲ್ಲಿ ದಂಗೆ ನಡೆಯುವಾಗ ನೀವು ಮೊದಲು ಎಲ್ಲಿಗೆ ಹೋಗುವಿರಿ?

ಐಎಎಸ್ ಲಿಖಿತ ಪರೀಕ್ಷೆಗಳನ್ನು ಪಾಸ್ ಮಾಡಿದವರಿಗೆ ಅನಂತರದ ಬಹುದೊಡ್ಡ ಸವಾಲು ಅಥವಾ ಬಹುದೊಡ್ಡ ಸಾಧನೆಯೆಂದರೆ ಪರೀಕ್ಷೆಗಳ ನಂತರ ನಡೆಸುವ ಸಂದರ್ಶನ ಆಗಿರುತ್ತದೆ. ಐಎಎಸ್ ಅಭ್ಯರ್ಥಿಗಳಿಗೆ ನಡೆಸುವ ಸಂದರ್ಶನದಲ್ಲಿ ಬಹಳ ಕ ಠಿ ಣ ವಾದ ಆದರೆ ನೋಡಲು ಮತ್ತು ಕೇಳಲು ಬಹಳ ಸುಲಭದಂತೆ ಕಾಣುವ, ಅಭ್ಯರ್ಥಿಗಳ ಬುದ್ಧಿಮತ್ತೆಯನ್ನು ಪರೀಕ್ಷೆ ಮಾಡುವ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಲ್ಲದೆ ಸಂದರ್ಶನದ ವೇಳೆ ಕೇಳುವ ಪ್ರಶ್ನೆಗಳ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಸಾಕಷ್ಟು ವಿಷಯಗಳು ಸುದ್ದಿಯಾಗುತ್ತಲೇ ಇರುತ್ತವೆ. ಐಎಎಸ್ ಸಂದರ್ಶನದ ವೇಳೆ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳುವ ಅವಕಾಶಗಳು ಇರುತ್ತವೆ ಎನ್ನಲಾಗಿದ್ದು, ಈ ಪ್ರಶ್ನೆಗಳನ್ನು ಕೇಳುವ ಪ್ರಮುಖ ಉದ್ದೇಶ ಅಭ್ಯರ್ಥಿಗಳ ವಿಷಯ ಜ್ಞಾನಕ್ಕಿಂತ ಅವರ ಬುದ್ಧಿಮತ್ತೆಯು ಯಾವ ಮಟ್ಟಕ್ಕೆ ಇದೆ ಎಂಬುದನ್ನು ಪರೀಕ್ಷಿಸಲು ಎನ್ನಲಾಗುತ್ತದೆ.‌

ಎಷ್ಟೇ ಬುದ್ಧಿವಂತರು ಎನಿಸಿಕೊಂಡವರು ಕೂಡಾ ಸಂದರ್ಶನದ ವೇಳೆ ಕೇಳುವ ಪ್ರಶ್ನೆಗಳನ್ನು ಉತ್ತರಿಸುವಲ್ಲಿ ಕೆಲವೊಮ್ಮೆ ತಡಬಡಾಯಿಸುವುದು ಕೂಡ ಸಾಮಾನ್ಯ ಎನ್ನಲಾಗಿತ್ತದೆ. ಆದ್ದರಿಂದಲೇ ಸಂದರ್ಶನಕ್ಕಾಗಿ ಅಭ್ಯರ್ಥಿಗಳು ಸಾಕಷ್ಟು ಶ್ರಮವಹಿಸಿ ಸಿದ್ಧತೆಯನ್ನು ನಡೆಸುತ್ತಾರೆ ಎನ್ನಲಾಗಿದೆ ಇಂದು ನಾವು ಐಎಎಸ್ ಸಂದರ್ಶನದಲ್ಲಿ ಕೇಳಲಾಗುವ ಪ್ರಶ್ನೆಗಳು ಹಾಗೂ ಅವುಗಳ ಉತ್ತರಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಈ ಪ್ರಶ್ನೆಗಳು ಹಾಗೂ ಉತ್ತರಗಳನ್ನು ಗಮನಿಸಿದಾಗ ನಮಗೆ ಕೂಡಾ ಐಎಎಸ್ ಪರೀಕ್ಷೆ ಸಿದ್ಧತೆ ಹೇಗೆ ಶ್ರಮವಹಿಸಿ ಮಾಡಬೇಕೆನ್ನುವ ವಿಚಾರ ಕೂಡಾ ಸ್ಪಷ್ಟವಾಗುತ್ತದೆ.‌

ಪ್ರಶ್ನೆ-1: ಒಂದು ಕೋಣೆಯಲ್ಲಿ ವ್ಯಕ್ತಿಯೊಬ್ಬನು ಫ್ಯಾನ್ ಗೆ ನೇ ಣು ಹಾಕಿಕೊಂಡಿದ್ದಾನೆ. ಆದರೆ ಆ ವ್ಯಕ್ತಿಯು ನೇ ಣು ಹಾಕಿಕೊಳ್ಳಲು ಫ್ಯಾನ್ ತನ್ನ ಕೈಗೆ ಎಟುಕಿಸಿಕೊಳ್ಳಲು ಯಾವುದೇ ವಸ್ತುವನ್ನು ಕಾಲ ಕೆಳಗೆ ಇಟ್ಟುಕೊಂಡಿಲ್ಲ. ಕೋಣೆಯ ನೆಲದ ಮೇಲೆ ನೀರು ಕಾಣುತ್ತಿದೆ. ಹಾಗಾದರೆ ಆ ವ್ಯಕ್ತಿಯು ಹೇಗೆ ನೇ ಣು ಹಾಕಿಕೊಂಡ?
ಉತ್ತರ: ಆತ ಮಂಜಿನ ಗಡ್ಡೆಯ ಮೇಲೆ ನಿಂತು ಪ್ಯಾನಿಗೆ ನೇಣು ಹಾಕಿಕೊಂಡಿದ್ದಾನೆ. ಮಂಜ ಗಡ್ಡೆ ಕರಗಿ ನೀರಾಗಿ ಕೋಣೆಯೆಲ್ಲಾ ನೀರಾಗಿದೆ.

ಪ್ರಶ್ನೆ-2: 200, 500 ಮತ್ತು 2000 ರೂಪಾಯಿಗಳ ನೋಟುಗಳ ಮುದ್ರಣಕ್ಕೆ ತಗಲುವ ವೆಚ್ಚ ಎಷ್ಟು? ಉತ್ತರ : ರಿಸರ್ವ್ ಬ್ಯಾಂಕಿನ ವಾರ್ಷಿಕ ವರದಿಯಲ್ಲಿ 200 ರೂಪಾಯಿ ನೋಟು ಮುದ್ರಿಸುವ ಬೆಲೆ 2.93, 500 ನೋಟು ಮುದ್ರಿಸುವ ಮೌಲ್ಯ 2.94 ಮತ್ತು 2000 ನೋಟು ಮುದ್ರಿಸುವ ಮೌಲ್ಯ 3.54 ಎಂದು ಹೇಳಿದೆ.

ಪ್ರಶ್ನೆ- 3: ಒಂದು ಮೊಟ್ಟೆ ಬೇಯಲು ಹತ್ತು ನಿಮಿಷಗಳ ಕಾಲಾವಧಿ ಬೇಕಾಗುತ್ತದೆ. ಹಾಗಾದರೆ ನಾಲ್ಕು ಮೊಟ್ಟೆಗಳನ್ನು ಬೇಯಿಸಲು ತಗಲುವ ಸಮಯವೆಷ್ಟು
ಉತ್ತರ: ಹತ್ತು ನಿಮಿಷಗಳೇ ಬೇಕಾಗುವುದು.

ಪ್ರಶ್ನೆ- 4 : ಒಬ್ಬ ಮಹಿಳೆ 1935ರಲ್ಲಿ ಹುಟ್ಟಿ, 1935 ರಲ್ಲಿ ಮರಣ ಹೊಂದಿದಳು. ಆದರೆ ಸಾಯುವಾಗ ಆಕೆಯ ವಯಸ್ಸು 70 ಆಗಿತ್ತು ? ಹೇಗೆ ತಿಳಿಸಿ
ಉತ್ತರ: 1935 ಎನ್ನುವುದು ಆಕೆಯ ಹುಟ್ಟಿದ ಹಾಗೂ ಸ ತ್ತ ಕೋಣೆಯ ನಂಬರ್ ಆಗಿತ್ತು.

ಪ್ರಶ್ನೆ-5 ಮನುಷ್ಯನ ಜೀವನದಲ್ಲಿ ಸದಾ ಬೆಳೆಯುತ್ತಲೇ ಹೋಗುವುದೇನು?
ಉತ್ತರ: ಮನುಷ್ಯನ ವಯಸ್ಸು.

ಪ್ರಶ್ನೆ-6 : OK ಇದರ ಪೂರ್ತಿ ರೂಪ ಏನು?
ಉತ್ತರ: ದೈನಂದಿನ ಜೀವನದಲ್ಲಿ ಸಾಮಾನ್ಯವಾಗಿ ಎಲ್ಲರೂ ಬಳಸುವ ಈ ಪದದ ಪೂರ್ತಿ ರೂಪ ಅನೇಕರಿಗೆ ತಿಳಿದಿಲ್ಲ. OK ಪದದ ಪೂರ್ಣ ರೂಪ objection killed. ಅಲ್ಲದೇ ಅದೇ ಸಂದರ್ಭದಲ್ಲಿ ಇದನ್ನು Olla Kalla ಅಥವಾ Oll correct ಎಂದು ಬಳಸಲಾಗುತ್ತದೆ. ಅಮೆರಿಕ‌ನ್ ಇಂಗ್ಲಿಷ್ ಭಾಷೆಯಲ್ಲಿ
Olla Kalla ಎಂದರೆ ಎಲ್ಲಾ ಸರಿಯಾಗಿದೆ ಎಂದರ್ಥ ನೀಡುವುದು. ಇದು ಯಾವುದೇ ವಿಚಾರ ಸರಿಯಾಗಿದೆ ಎಂದು ಒಪ್ಪಲು ಬಳಕೆಯಾಗುತ್ತದೆ.

ಪ್ರಶ್ನೆ -7 : ಗಾಯವಾದಾಗ ಮನುಷ್ಯರ ಹಾಗೆ ಅಳುವ ಜೀವಿ ಯಾವುದು?
ಉತ್ತರ :ಕರಡಿ.

ಪ್ರಶ್ನೆ-8: ಭಾಗಲ್ ಪುರ ಯಾವುದಕ್ಕಾಗಿ ಜನಪ್ರಿಯತೆ ಪಡೆದುಕೊಂಡಿದೆ?
ಉತ್ತರ: ಈ ಪ್ರಶ್ನೆಯನ್ನು ಬಿಹಾರದ ಸೌರಭ್ ಕುಮಾರ್ ಎನ್ನುವವರಿಗೆ ಕೇಳಲಾಗಿತ್ತು. ಅವರು ಇದಕ್ಕೆ ಉತ್ತರ ನೀಡುತ್ತಾ ಈ ಸ್ಥಳವು ಸಿಲ್ಕ್ ಗೆ ಪ್ರಸಿದ್ಧ , ಇತಿಹಾಸದಲ್ಲಿ ವಿಕ್ರಮಶಿಲಾ ಪ್ರಾಚೀನ ವಿಶ್ವವಿದ್ಯಾಲಯ ಇಲ್ಲಿತ್ತು. ಈ ಸ್ಥಳ ಗಾಂಗೇಟಿಕ್ ಡಾಲ್ಫಿನ್ ಗಳಿಗೂ ಪ್ರಸಿದ್ಧಿ ಎಂದು ತಿಳಿಸಿದ್ದು ಮಾತ್ರವಲ್ಲದೇ ಬಾಗಲ್ಪರ ಕೆಲವು ನಕಾರಾತ್ಮಕ ಕಾರಣಗಳಿಗೂ ಹೆಸರಾಗಿದ್ದು ವಿವಾದಗಳು, ಕೋ ಮು ಗ ಲ ಭೆಗಳು, 1980 ರಲ್ಲಿ ಇಲ್ಲಿನ ಕಾರಾಗೃಹದಲ್ಲಿ ಖೈದಿಗಳ ಕಣ್ಣಿಗೆ ಆ್ಯ ಸಿ ಡ್ ಹಾಕಿದ ಘಟನೆ ಬಗ್ಗೆ ತಿಳಿಸಿದ್ದು ಮಾತ್ರವೇ ಅಲ್ಲದೇ ಅಜಯ್ ದೇವಗನ್ ಅವರ ಗಂಗಾ ಜಲ್ ಸಿನಿಮಾದ ಕಥೆ ಇದೆ ಎಂದು ವಿವರ ನೀಡಿದ್ದರು.

ಪ್ರಶ್ನೆ-9 : ನಿಮ್ಮ ಮನೆಗೆ ಬೆಂಕಿ ಬಿದ್ದಿದೆ, ನಿಮ್ಮೂರಿನಲ್ಲಿ ದಂ ಗೆ ಎದ್ದಿದೆ. ಈ ಪರಿಸ್ಥಿತಿ ಯಲ್ಲಿ ನೀವು ಮೊದಲು ಎಲ್ಲಿಗೆ ಹೋಗುವಿರಿ?
ಉತ್ತರ: ಎಲ್ಲಿ ಲಾ ಅಂಡ್ ಆರ್ಡರ್ ಸಮಸ್ಯೆ ಆಗಿದೆಯೋ ಅಲ್ಲಿಗೆ ಮೊದಲು ಹೋಗುವೆ. ಹೋಗುವ ದಾರಿಯಲ್ಲಿ ಅಗ್ನಿ ಶಾಮಕ ದಳ ಹಾಗೂ ಪೋಲಿಸ್ ಸ್ಟೇಷನ್ ಗೆ ಕರೆ ಮಾಡಿ ಮನೆಯ ವಿಷಯ ತಿಳಿಸುವೆ.