ಕಾರಿನ ಬೋನಟ್ ಮೇಲೆ ಬಂದು ಕುಳಿತ ಆನೆ; ಜಾಣ್ಮೆ ತೋರಿದ ಕಾರ್ ಚಾಲಕ್! ನೀವು ಈ ವೈರಲ್ Video ನೋಡಿದ್ದೀರಾ?
ರಸ್ತೆಯಲ್ಲಿ ಸಂಚಾರ ಮಾಡುವಾಗ ನಮ್ಮ ವಾಹನಗಳಿಗೆ ಅಡ್ಡವಾಗಿ ಆನೆಯೊಂದು ಬಂದು ಬಿಟ್ಟರೆ ಹೇಗಿರುತ್ತದೆ?ಎಂಬುದನ್ನು ಊಹೆ ಮಾಡಿಕೊಂಡಾಗ ಅದೊಂದು ರೋಮಾಂಚನವನ್ನು ಉಂಟು ಮಾಡುವ ಸನ್ನಿವೇಶ ಎನಿಸಿಬಿಡುತ್ತದೆ. ಆದರೆ ಜಗತ್ತಿನ ಕೆಲವು ಭಾಗಗಳಲ್ಲಿ ಜನರು ಸಂಚಾರ ಮಾಡುವ ರಸ್ತೆಗಳಲ್ಲಿ ಪ್ರತಿದಿನ ಕೂಡ ಅವರು ಪ್ರಾಣಿಗಳ ಸಂಪರ್ಕಕ್ಕೆ ಬೇಕಾಗಿರುತ್ತದೆ. ಅದು ಅನಿವಾರ್ಯ ಕೂಡ ಆಗಿದ್ದು, ಅವರಿಗೆ ಅದು ಬಿಟ್ಟರೆ ಬೇರೆ ಪರ್ಯಾಯ ಮಾರ್ಗ ಕೂಡಾ ಇಲ್ಲ ಎನ್ನುವುದು ವಾಸ್ತವ. ಆದರೆ ಇಲ್ಲಿ ಸಂಚರಿಸುವ ಪ್ರಾಣಿಗಳು ತಮ್ಮ ಪಾಡಿಗೆ ತಾವು ಓಡಾಡುವುದನ್ನು ನಾವು ವೀಡಿಯೋಗಳಲ್ಲಿ ನೋಡಿರುತ್ತೇವೆ. ಆದರೆ ಹಾಗೆ ನಿಶ್ಯಬ್ದ ವಾಗಿ ಹೋಗದೇ, ಪ್ರಾಣಿಗಳು ವಾಹನದ ಹತ್ತಿರಕ್ಕೆ ಬಂದರೆ ಪರಿಸ್ಥಿತಿ ಹೇಗಿರಬಹುದು? ಎಂಬುದನ್ನು ತೋರಿಸುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ
ಕಾಡಿನ ಹಾದಿಯಲ್ಲಿ ಸಂಚರಿಸುವಾಗ, ಮಾರ್ಗ ಮಧ್ಯದಲ್ಲಿ ರಸ್ತೆಯನ್ನು ದಾಟಲು ಆನೆಯೊಂದು ಬಂದಿದೆ. ಅದನ್ನು ನೋಡಿದ ಕಾರಿನ ಚಾಲಕ ಆನೆ ಅಲ್ಲಿಂದ ಹೋಗಲಿ ಎಂದು ತಮ್ಮ ಕಾರನ್ನು ಅಲ್ಲೇ ನಿಲ್ಲಿಸಿದ್ದಾನೆ. ಆನೆ ರಸ್ತೆ ದಾಟಿದ ನಂತರ ಆರಾಮವಾಗಿ ಮುಂದಕ್ಕೆ ಹೋಗಬಹುದು ಎನ್ನುವ ಆಲೋಚನೆಯಿಂದ ಆತ ತನ್ನ ವಾಹನವನ್ನು ನಿಲ್ಲಿಸಿದ್ದಾರೆ. ಆನೆಗಳು ಸಾಮಾನ್ಯವಾಗಿ ಯಾವುದೇ ಸದ್ದುಗದ್ದಲವಿಲ್ಲದೆ ತಮ್ಮ ಪಾಡಿಗೆ ತಾವು ರಸ್ತೆಯನ್ನು ದಾಟುತ್ತವೆ. ಆದರೆ ಇಲ್ಲಿ ನಡೆದ ಘಟನೆಯಲ್ಲಿ ಆನೆಯು ರಸ್ತೆ ದಾಟುವಾಗ ಕಾರಿನ ಕಡೆಗೆ ಅದು ಆಕರ್ಷಿತವಾಗಿದೆ. ಕಾರನ್ನು ನೋಡಿ ಅದರ ಆಸಕ್ತಿ ಕೆರಳಿದೆ. ರಸ್ತೆ ದಾಟುವ ಬದಲು ಆನೆ ಕಾರಿನ ಹತ್ತಿರಕ್ಕೆ ಸುಳಿದಿದೆ.
ಕಾರಿನ ಹತ್ತಿರಕ್ಕೆ ಬಂದ ಆನೆ ಕಾರಿನ ಬಲ ಎಷ್ಟಿದೆ ಎಂದು ಪರೀಕ್ಷೆ ಮಾಡುವ ಹಾಗೆ ಅದರ ಮೇಲೆ ತನ್ನ ಬಲಪ್ರಯೋಗ ಮಾಡಿದೆ. ಆನೆ ಹಾಕಿದ ಬಲದ ಪರಿಣಾಮ ಕಾರಿನ ಬಾನೆಟ್ ಮುಂಭಾಗ, ಸೈಡ್ ಮಿರರ್ ಗಳು ಒಡೆದು ಹೋಗಿದೆ. ವೀಡಿಯೋವನ್ನು ನೋಡಿದಾಗ, ರಸ್ತೆಯಲ್ಲಿ ನಿಂತಿದ್ದ ಕಾರನ್ನು ನೋಡಿದ ಆನೆ ಅದರ ಹತ್ತಿರ ಬಂದು, ತನ್ನ ಒಂದು ಕಾಲನ್ನು ಕಾರಿನ ಮುಂಭಾಗದ ಟೈಯರ್ ನ ಮೇಲೆ ಇಡುತ್ತದೆ. ಅನಂತರ ಅದು ತನ್ನ ಬಲವನ್ನೆಲ್ಲಾ ಉಪಯೋಗಿಸಿ ಕಾರನ್ನು ಅಲ್ಲಾಡಿಸುತ್ತದೆ. ತರುವಾಯ ಅದು ಮುಂದೆ ಬಂದು ಕಾರಿನ ಬಾನೆಟ್ ಮೇಲೆ ಕುಳಿತುಬಿಡುತ್ತದೆ. ಆನೆ ಕುಳಿತ ತೂಕಕ್ಕೆ ಕಾರು ಕೂಡ ಮುಂದಕ್ಕೆ ಬಾಗುತ್ತದೆ. ಆದರೆ ಅಷ್ಟಕ್ಕೆ ತೃಪ್ತಿಯಾಗದ ಆನೆ ಎದ್ದು ನಿಂತು ಬಾನೆಟ್ ಮೇಲೆ ತನ್ನ ಕಾಲುಗಳನ್ನು ಇಟ್ಟು ನಿಂತುಕೊಳ್ಳುವ ಪ್ರಯತ್ನ ಮಾಡುತ್ತದೆ.
ಇದನ್ನು ನೋಡುವಾಗ ಬಹುಶಃ ಕಾರಿನಲ್ಲಿ ಇಲ್ಲವೇನೋ ಎಂದು ಜನ ಭಾವಿಸುತ್ತಾರೆ ಆದರೆ ಕಾರಿನಲ್ಲಿದ್ದವರು ಅದೇ ಸರಿಯಾದ ಅವಕಾಶ ಎಂದು ಸರಿಯಾದ ಅವಕಾಶ ಸಿಕ್ಕ ಕೂಡಲೇ ಒಂದು ನಿಮಿಷ ಕೂಡಾ ತಡ ಮಾಡದೇ ಕಾರನ್ನು ರಿವರ್ಸ್ ತೆಗೆದುಕೊಂಡು ಅಲ್ಲಿಂದ ದೂರ ಹೋಗುವಲ್ಲಿ ಯಶಸ್ವಿಯಾಗುತ್ತಾರೆ. ವೈರಲ್ ಆಗಿರುವ ಈ ವಿಡಿಯೋವನ್ನು ಈಗಾಗಲೇ 33 ಸಾವಿರಕ್ಕಿಂತ ಅಧಿಕ ಮಂದಿ ರಕ್ಷಣೆಯನ್ನು ಮಾಡಿದ್ದರೆ. ನೂರಾರು ಜನರು ಇದಕ್ಕೆ ಲೈಕ್ಸ್ ಗಳನ್ನು ನೀಡುತ್ತಾ ರಿಟ್ವೀಟ್ ಕೂಡ ಮಾಡಿದ್ದಾರೆ. ಕಾಮೆಂಟ್ ಗಳ ವಿಷಯಕ್ಕೆ ಬಂದರೆ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ಗಳನ್ನು ಮಾಡಿದ್ದಾರೆ.
ವಿಡಿಯೋ ನೋಡಿ
ವೀಡಿಯೋ ಶೇರ್ ಮಾಡಿಕೊಂಡ ಶೀರ್ಷಕೆಯಲ್ಲಿ ಆಹ್ವಾನ ಇಲ್ಲದೇ ನನ್ನ ಮನೆಗೆ ಬಂದರೆ ಏನು ಮಾಡುವೆ ನೋಡು? ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಆನೆ ವಾರ್ನಿಂಗ್ ನೀಡಿದೆ ಎನ್ನುವ ಅರ್ಥದಲ್ಲಿ ಅವರು ಬರೆದಿದ್ದಾರೆ. ಇನ್ನು ನೆಟ್ಟಿಗರೊಬ್ಬರು ಆನೆಯ ಮೇಲೆ ಕೋಪ ಮಾಡಿಕೊಳ್ಳಬೇಡಿ, ಅದು ಕಾರಿನ ಟಯರ್ ಗಳ ಒತ್ತಡವನ್ನು ಪರೀಕ್ಷೆ ಮಾಡುತ್ತಿದೆ ಎಂದು ಹಾಸ್ಯ ಮಾಡಿದ್ದಾರೆ. ಮತ್ತೊಬ್ಬರು ಓ ಮೈ ಗಾಡ ಆನೆಗೆ ಇರುವ ಬಲ ಅದ್ಭುತ ಎಂದಿದ್ದಾರೆ. ಮತ್ತೊಬ್ಬರು ಅವರು ಆ ಆನೆಗೆ ನೋ ವುಂಟು ಮಾಡಲಿಲ್ಲ ತಾನೇ? ಎಂದು ಪ್ರಶ್ನೆ ಮಾಡಿದ್ದಾರೆ.