ಕೊರೊನಾ ವ್ಯಾಕ್ಸಿನ್ ಪಡೆದ ನಂತರ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಅನುಸರಿಸ ಬೇಕು: ತಪ್ಪದೇ ತಿಳಿಯಲೇ ಬೇಕಾದ ಮಾಹಿತಿ.

ಬಹುಶಃ 2020 ಯಲ್ಲಿ ಕೊರೊನಾ ಇಲ್ಲದ ಸುದ್ದಿಗಳೇ ಇಲ್ಲ. ಮಾನವ ಜೀವನವನ್ನು ಸಂಪೂರ್ಣವಾಗಿ ಬದಲಿಸಿ ಹಾಕಿದ ಕೊರೊನಾದಿಂದ ಕಲಿತ ಪಾಠಗಳು ಅದೆಷ್ಟೋ. ದೇಶದ ಪ್ರತಿಯೊಬ್ಬ ಪ್ರಜೆಯೂ ಕೂಡಾ ಕೊರೊನಾ ಮುಗಿದು ಹೊಸ ವರ್ಷ ಶುಭವನ್ನು ತರಲಿ ಎನ್ನುವುದಾಗಿದೆ. ಅದಕ್ಕೆ ತಕ್ಕಂತೆ ಈಗಾಗಲೇ ದೇಶದಲ್ಲಿ ಕೊರೊನಾ ವ್ಯಾಕ್ಸಿನ್ ನ ಟ್ರಯಲ್ ರನ್ ಕೂಡಾ ಆರಂಭವಾಗಿದ್ದು, ಜನರಲ್ಲಿ ಒಂದು ಹೊಸ ಹುರುಪು, ಹೊಸ ಆಶಾ ಭಾವವೊಂದು ಮೂಡಿದೆ. ದೇಶದ ನಾನಾ ಭಾಗಗಳಲ್ಲಿ ವ್ಯಾಕ್ಸಿನ್ ನ ಟ್ರಯಲ್ ರನ್ ಮುನ್ನಡೆಯುತ್ತಿರುವುದು ಸುದ್ದಿ ಮಾದ್ಯಮಗಳಲ್ಲಿ ದೊಡ್ಡ ಸುದ್ದಿಗಳಾಗಿ ಜನರ ಮುಂದೆ ಬರುತ್ತಿವೆ‌‌, ಇದರೆ ಹಿನ್ನೆಲೆಯಲ್ಲಿ ಕೊರೊನಾ ವ್ಯಾಕ್ಸಿನ್ ಪಡೆದ ನಂತರ ಆ ವ್ಯಕ್ತಿಯ ಕಡೆ ಎಷ್ಟು ಗಮನ ನೀಡಲಾಗುವುದು, ಆ ವ್ಯಕ್ತಿ ಮಾಡಬೇಕಾದದ್ದು ಏನು? ಎಂದು ತಿಳಿಯೋಣ ಬನ್ನಿ.

ಕೊರೊನಾ ವ್ಯಾಕ್ಸಿನ್ ಪಡೆದಂತಹ ವ್ಯಕ್ತಿಯು ವ್ಯಾಕ್ಸಿನ್ ಪಡೆದ ಸೆಂಟರ್ ನಲ್ಲಿ ಕನಿಷ್ಠ ಪಕ್ಷ ಅರ್ಧ ಗಂಟೆಯಾದರೂ ಉಳಿದುಕೊಂಡು ವಿಶ್ರಾಂತಿಯನ್ನು ಪಡೆಯಬೇಕು. ಈ ಸಮಯದಲ್ಲಿ ಆ ವ್ಯಕ್ತಿಯ ದೇಹ ಪ್ರಕೃತಿಯಲ್ಲಿ ಯಾವುದೇ ಬದಲಾವಣೆ ಕಂಡು ಬಂದರೂ ಕೂಡಾ ಅವರಿಗೆ ಕೂಡಲೇ ಅಗತ್ಯ ಇರುವ ಚಿಕಿತ್ಸೆಯನ್ನು ನೀಡುವ ಸಲುವಾಗಿ ಅವರನ್ನು ಅರ್ಧ ಗಂಟೆ ಲಸಿಕಾ ಕೇಂದ್ರದಲ್ಲೇ ಉಳಿಸಿಕೊಳ್ಳಲಾಗುವುದು. ಇನ್ನು ಲಸಿಕೆಯ ವಿಷಯವಾಗಿ ಅದರ ಅನುಮೋದನೆಯ ಬಗೆಗಿನ ಟೀ ಕೆಗಳನ್ನು ಭಾರತ್ ಬಯೋಟೆಕ್ ತಿರಸ್ಕರಿಸಿದ್ದು, ಪ್ರತಿ ಲಸಿಕೆಯ ತಯಾರಿಕೆಗೆ ಭಾರತ ಸರ್ಕಾರಕ್ಕೆ 300 ರೂಪಾಯಿಗಳ ವೆಚ್ಚ ತಗಲುತ್ತದೆ ಎಂದು ತಿಳಿಸಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯವು ಸೋಮವಾರದಂದು ಕೊರೊನಾ ಲಸಿಕೆಯನ್ನು ಪಡೆದ ವ್ಯಕ್ತಿಯು ಲಸಿಕಾ ಕೇಂದ್ರದಲ್ಲಿ ಕಡ್ಡಾಯವಾಗಿ ಕನಿಷ್ಠ ಅರ್ಧ ಗಂಟೆ ಉಳಿದು ವಿಶ್ರಾಂತಿ ಪಡೆಯಲೇಬೇಕು ಎಂದು ನಿರ್ದೇಶನವನ್ನು ನೀಡಿದೆ. ಲಸಿಕೆ ಪಡೆದ ನಂತರ ಯಾವುದೇ ರೀತಿಯ ವ್ಯತ್ಯಾಸ ಅಥವಾ ಆರೋಗ್ಯ ಅಥವಾ ದೇಹಸ್ಥಿತಿಯಲ್ಲಿ ಯಾವುದೇ ರೀತಿಯ ಬದಲಾವಣೆಯ ಅನುಭವ ಆದರೆ ಕೂಡಲೇ ಹತ್ತಿರ ಇರುವ ಆರೋಗ್ಯ ಅಧಿಕಾರಿಗಳು, ಎಎನ್ಎಂ ಅಧಿಕಾರಿಗಳು ಅಥವಾ ಆಶಾ ಕಾರ್ಯಕರ್ತೆಯರಿಗೆ ಮಾಹಿತಿಯನ್ನು ನೀಡಬೇಕು ಎಂಬ ಸೂಚನೆಯನ್ನು ಕೂಡಾ ನೀಡಲಾಗಿದೆ.

ವ್ಯಾಕ್ಸಿನ್ ಪಡೆದವರಿಗೆ, ಸಾಮಾನ್ಯ ಮಟ್ಟದಲ್ಲಿ ಜ್ವರ ಬರುವುದು, ಲಸಿಕೆ ನೀಡಿದ ಜಾಗದಲ್ಲಿ ಸೌಮ್ಯವಾದ ನೋವು ಕಂಡು ಬರುವುದು ಸಾಮಾನ್ಯ ಲಕ್ಷಣವಾಗಿರುತ್ತದೆ. ಅದಕ್ಕೆ ಹೆದರುವ ಅವಶ್ಯಕತೆ ಇಲ್ಲ ಎನ್ನಲಾಗಿದೆ‌. ಅಲ್ಲದೇ ಕೇಂದ್ರ ಸರ್ಕಾರವು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವ್ಯಾಕ್ಸಿನ್ ಪಡೆದವರಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಅಥವಾ ಇನ್ನೇನಾದರೂ ಅನುಮಾನ ಹುಟ್ಟಿಸುವಂತಹ ಪರಿಣಾಮಗಳನ್ನು ಬೀರಿದರೆ ಅಗತ್ಯ ಇರುವ ಚಿಕಿತ್ಸೆಯನ್ನು ನೀಡಲು ಅನಿವಾರ್ಯವಾಗಿರುವ ಎಲ್ಲಾ ಸಿದ್ಧತೆಗಳನ್ನು ಕೂಡಾ ಮಾಡಿಕೊಂಡಿರಬೇಕು ಎಂದು ಕೂಡಾ ಸೂಚನೆಯನ್ನು ಹೊರಡಿಸಿದೆ.

ಆರೋಗ್ಯ ಸಚಿವಾಲಯವು ವ್ಯಾಕ್ಸಿಮ್ ಪಡೆದ ನಂತರ ಕೂಡಾ ಜನರು ಕೋವಿಡ್ ಸ್ನೇಹಪರ ನಡವಳಿಕೆಯನ್ನು ಅಳವಡಿಸಿಕೊಳ್ಳಬೇಕು ಎಂದು ಕೂಡಾ ಸೂಚನೆಯನ್ನು ನೀಡಿದೆ. ಅಂದರೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಹಾಗೂ ಸ್ಯಾನಿಟೈಸರ್ ಗಳನ್ನು ನಿಯಮಿತವಾಗಿ ಬಳಕೆ ಮಾಡುವುದನ್ನು ನಿಲ್ಲಿಸಬಾರದು ಎಂದು ಹೇಳಿದೆ. ಕೊರೊನಾ ವ್ಯಾಕ್ಸಿನ್ ಪಡೆದಿದ್ದೇವೆ ಎನ್ನುವ ಕಾರಣಕ್ಕೆ ಯಾವುದೇ ರೀತಿಯ ಅಜಾಗರೂಕತೆ ಇರಬಾರದು ಎನ್ನುವ ಮುನ್ನೆಚ್ಚರಿಕೆಯನ್ನು ಈ ಮೂಲಕ ಆರೋಗ್ಯ ಸಚಿವಾಲಯವು ನೀಡಿದೆ.