ಪ್ರತಿದಿನ ಹಾರಿ ಬಂದು ಕಿಟಕಿ ಯನ್ನು ಕುಟುಕುತ್ತಿದ್ದ ಗುಬ್ಬಚ್ಚಿ: ವೈರಲ್ ವೀಡಿಯೋದಲ್ಲಿನ ಕಾರಣವನ್ನು ವಿವರಿಸಿದರು IFS ಅಧಿಕಾರಿ
ಸಾಮಾಜಿಕ ಜಾಲತಾಣಗಳಲ್ಲಿ ಒಂದು ಗುಬ್ಬಚ್ಚಿಯ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆ ವೀಡಿಯೋ ನೋಡಿದರೆ ಪ್ರತಿಯೊಬ್ಬರೂ ಕೂಡಾ ಆಶ್ಚರ್ಯ ಚಕಿತರಾಗುತ್ತಿದ್ದಾರೆ. ಈ ವೀಡಿಯೋದಲ್ಲಿ ಒಂದು ಗುಬ್ಬಚ್ಚಿ ಪ್ರತಿದಿನ ಕೂಡಾ ಒಂದು ಮನೆಯ ಕಿಟಕಿಯ ಬಳಿ ಬಂದು ಕುಳಿತು ತನ್ನ ಕೊಕ್ಕಿನಿಂದ ಆ ಗಾಜಿನ ಕಿಟಕಿಯನ್ನು ಕುಕ್ಕುತ್ತಿತ್ತು ಎನ್ನಲಾಗಿದೆ. ಈ ವೀಡಿಯೋವನ್ನು ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಗುಬ್ಬಿಯು ಹೀಗೇಕೆ ಮಾಡಿದೆ ಎನ್ನುವ ಪ್ರಶ್ನೆಯನ್ನು ಕೂಡಾ ಅವರು ಕೇಳಿದ್ದಾರೆ. ಈ ವೀಡಿಯೋಗೆ ಐಎಫ್ಎಸ್ ಅಧಿಕಾರಿ ಅಂಗುಸಾಮಿ ಅವರು ಉತ್ತರವನ್ನು ನೀಡಿದ್ದು, ಅವರು ನೀಡಿರುವ ಉತ್ತರವು ಎಲ್ಲರ ಗಮನವನ್ನು ಸೆಳೆದಿರುವುದು ಮಾತ್ರವೇ ಅಲ್ಲದೇ ಆ ಉತ್ತರವನ್ನು ನೋಡಿದವರಿಗೆ ಕೂಡಾ ಅದು ನಗುವನ್ನು ತರಿಸುವ ಹಾಗೆ ಇರುವುದು ಕೂಡಾ ವಾಸ್ತವವಾಗಿದೆ.
ವೀಡಿಯೋದಲ್ಲಿ ಗಮನಿಸಿದಾಗ ಗುಬ್ಬಚ್ಚಿಯೊಂದು ಕಿಟಕಿಯ ಬಳಿ ಬಂದು, ಕಿಟಕಿಯ ಗಾಜಿನ ಬಾಗಿಲನ್ನು ತನ್ನ ಕೊಕ್ಕಿನಿಂದ ಕುಟುಕುವುದನ್ನು ನಾವು ನೋಡಬಹುದು. ಈ ವೀಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡ ಟ್ವಿಟರ್ ಬಳಕೆದಾರನು, ವೀಡಿಯೋದ ಶೀರ್ಷಿಕೆಯಲ್ಲಿ, “ಈ ಗುಬ್ಬಚ್ಚಿಯು ಹೀಗೆ ಪ್ರತಿದಿನ ಕಿಟಕಿಯ ಬಳಿ ಬಂದು ಕುಳಿತು ಕೊಕ್ಕಿನಿಂದ ಗಾಜನ್ನು ಕುಟುಕುವುದಕ್ಕೆ ಕಾರಣವೇನೆಂದು ಯಾರಾದರೂ ತಿಳಿಸುವಿರಾ? ಎಂದು ಬರೆದುಕೊಂಡಿದ್ದಾರೆ. ಹಾಗೆ ಬರೆದುಕೊಂಡಿರುವುದು ಮಾತ್ರವೇ ಅಲ್ಲದೇ ಅವರು ಇಂಡಿಯನ್ ಫಾರೆಸ್ಟ್ ಆಫೀಸರ್ಸ್ ಅನ್ನು ಈ ವೀಡಿಯೋಗೆ ಟ್ಯಾಗ್ ಮಾಡಿದ್ದಾರೆ ಕೂಡಾ.
ಈ ವೀಡಿಯೋವನ್ನು ಗಮನಿಸಿದ ಐಎಫ್ಎಸ್ ಅಧಿಕಾರಿ ಪ್ರವೀಣ್ ಅಂಗುಸಾಮಿ ಅವರು ಟ್ವಿಟರ್ ಬಳಕೆದಾರನು ವೀಡಿಯೋ ಶೇರ್ ಮಾಡಿ ಕಾರಣ ಕೇಳಿದ್ದಕ್ಕೆ ಪ್ರತಿಕ್ರಿಯ ಮೂಲಕ ಉತ್ತರವನ್ನು ನೀಡಿದ್ದಾರೆ. ಪ್ರವೀಣ್ ಅವರು ತಮ್ಮ ಪ್ರತಿಕ್ರಿಯೆಯಲ್ಲಿ ಗುಬ್ಬಚ್ಚಿಯು ಕಿಟಕಿ ಬಳಿ ಬಂದು ಕುಳಿತಾಗ, ಕಿಟಕಿ ಬಾಗಿಲಿನ ಗಾಜಿನಲ್ಲಿ ತನ್ನದೇ ಪ್ರತಿಬಿಂಬವನ್ನು ನೋಡಿ ಗೊಂದಲಕ್ಕೆ ಈಡಾಗಿದೆ. ಅದು ಬಹುಶಃ ಆ ಪ್ರತಿಬಿಂಬವನ್ನು ತನ್ನ ಪ್ರತಿಸ್ಪರ್ಧಿ ಎಂದು ಅರ್ಥ ಮಾಡಿಕೊಂಡ ಕಾರಣ ಆ ರೀತಿ ನಿರಂತರವಾಗಿ ಕುಟುಕುವ ಕೆಲಸವನ್ನು ಮಾಡಿದೆ. ಅಲ್ಲದೇ ಇದು ಮೇಟ್ ಆಗುವ ಸಮಯವಾದ್ದರಿಂದ ಇಂತಹ ವರ್ತನೆ ಸಾಮಾನ್ಯ ಎಂದು ಕೂಡಾ ಹೇಳಿದ್ದಾರೆ.
ಈ ವೀಡಿಯೋವನ್ನು ಈಗಾಗಲೇ ಸಾವಿರಾರು ಜನರು ವೀಕ್ಷಣೆಯನ್ನು ಮಾಡಿದ್ದಾರೆ. ಇನ್ನು ಮೊದಲು ವೀಡಿಯೋ ಶೇರ್ ಮಾಡಿಕೊಂಡ ಬಳಕೆದಾರರು, ಜನರು ಇದು ಫೇಕ್ ಅನ್ನದಿರಲಿ ಎನ್ನುವ ಕಾರಣದಿಂದ ಐದನೇ ದಿನ ಗುಬ್ಬಚ್ಚಿ ಮತ್ತೆ ಅದೇ ಕಿಟಕಿಯ ಬಳಿ ಬಂದು ಕುಳಿತು, ಕಿಟಕಿಯ ಗಾಜನ್ನು ತನ್ನ ಕೊಕ್ಕಿನಿಂದ ಕುಟುಕುತ್ತಿರುವ ದೃಶ್ಯವನ್ನು ವೀಡಿಯೋ ಮಾಡಿ ಶೇರ್ ಮಾಡಿಕೊಂಡಿದ್ದಾರೆ. ಅದನ್ನು ಕೂಡಾ ನೂರಾರು ಜನರು ನೋಡಿದ್ದು ತರಹೇವಾರಿ ಕಾಮೆಂಟ್ ಗಳನ್ನು ನೀಡುವ ಮೂಲಕ ತಮ್ಮ ತಮ್ಮ ಅಭಿಪ್ರಾಯಗಳನ್ನು ಅಲ್ಲಿ ಹಂಚಿಕೊಂಡಿದ್ದಾರೆ. ಆದರೆ ಗುಬ್ಬಿಯ ಆ ವರ್ತನೆಗೆ ಕಾರಣ ಮಾತ್ರ ಆ ಟ್ವಿಟರ್ ಬಳಕೆದಾರರಿಗೆ ಸಿಕ್ಕಿದ್ದು ನಿಜ.
ವಿಡಿಯೋ ನೋಡಿ
The bird is seeing its own reflection on the window glass & mistaking it to be a potential competition. Hence the constant pecking. It's quite common. This could also be an indication of beginning of mating season. Just a horny bird, IMHO. https://t.co/MXvBUqNRqy
— Praveen Angusamy, IFS 🐾 (@PraveenIFShere) December 29, 2020
ಇನ್ನು ಈ ವೀಡಿಯೋ ನೋಡಿ ನೆಟ್ಟಿಗರು ಏನೆಂದು ಪ್ರತಿಕ್ರಿಯೆಗಳನ್ನು ನೀಡಿರಬಹುದು ಎಂದು ಒಮ್ಮೆ ಗಮನ ಹರಿಸಿದರೆ, ಅನೇಕರು ಗುಬ್ಬಿಗೆ ಅದರ ಪ್ರತಿಬಿಂಬ ಕಂಡಿದ್ದು ಅದು ಅದಕ್ಕೆ ತಾನೇ ಎಂದು ತಿಳಿಯದ ಕಾರಣ ಹಾಗೆ ವರ್ತಿಸಿದೆ. ಇದು ಬಹಳ ಸಿಂಪಲ್ ವಿಷಯ ಎಂದಿದ್ದಾರೆ. ಮತ್ತೆ ಕೆಲವರು ಐಎಫ್ಎಸ್ ಅಧಿಕಾರಿ ಪ್ರವೀಣ್ ಅವರು ಹೇಳಿರುವಂತೆ ಅದು ಸಂಗಾತಿಯನ್ನು ಬೆರೆಯುವ ಕಾಲವಾಗಿರುವುದರಿಂದ ಅಂತಹ ವರ್ತನೆ ತೋರಿದೆ ಎಂದಿದ್ದಾರೆ. ಒಟ್ಟಾರೆ ವೀಡಿಯೋವನ್ನು ಏಳು ಸಾವಿರಕ್ಕೂ ಅಧಿಕ ಜನರು ನೋಡಿದ್ದು, ಗುಬ್ಬಿಯ ವೀಡಿಯೋ ವೈರಲ್ ಆಗುತ್ತಲಿದೆ.