ಯಜ್ವೇಂದ್ರ ಚಹಲ್ ಜೊತೆ ಸಪ್ತಪದಿ ತುಳಿಯುವ ಮೊದಲು ವಧುವಿನ ಡ್ರೆಸ್ ನಲ್ಲಿ ಡಾನ್ಸ್ ಮಾಡಿದ ಧನಾಶ್ರೀ ವರ್ಮಾ: ವೀಡಿಯೋ ಆಯ್ತು ವೈರಲ್
ಸೋಶಿಯಲ್ ಮೀಡಿಯಾಗಳ ಡಾನ್ಸಿಂಗ್ ಸೆನ್ಸೇಷನ್ ಎಂದರೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಅದು ಧನಾಶ್ರೀ ವರ್ಮಾ ಎಂದು. ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಆಗಿರುವ ಯಜ್ವೇಂದ್ರ ಚಹಲ್ ಹಾಗೂ ಧನಾಶ್ರೀ ವರ್ಮಾ ಡಿಸೆಂಬರ್ 22, 2020 ರಂದು ವಿವಾಹ ಬಂಧನದ ಮೂಲಕ ಹೊಸ ಬಾಂಧವ್ಯವೊಂದರಲ್ಲಿ ಬೆಸೆದುಕೊಂಡು ಜೀವನ ಸಂಗಾತಿಗಳಾಗಿದ್ದಾರೆ. ಮದುವೆಯ ನಂತರ ಈ ಜೋಡಿ ತಮ್ಮ ಮದುವೆ, ನಿಶ್ಚಿತಾರ್ಥ, ಸಂಗೀತ್, ಮೆಹೆಂದಿ ಫಂಕ್ಷನ್ ಹೀಗೆ ಎಲ್ಲಾ ಅಂದವಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಇವೆಲ್ಲವುಗಳ ನಡುವೆ ಧನಾಶ್ರೀ ವರ್ಮಾ ಯಜ್ವೇಂದ್ರ ಚಹಲ್ ಅವರ ಜೊತೆಗೆ ಸಪ್ತಪದಿ ತುಳಿಯುವ ಮೊದಲು ಒಂದು ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಧನಾಶ್ರೀ ವರ್ಮಾ ಅವರು ಈ ವೀಡಿಯೋದಲ್ಲಿ ಮದುವೆ ಹೆಣ್ಣಿನ ವಸ್ತ್ರದಲ್ಲೇ ಕುಣಿದಾಡಿದ್ದು, ಅವರ ಭರ್ಜರಿ ಡಾನ್ಸ್ ಮತ್ತೊಮ್ಮೆ ವೈರಲ್ ಆಗಿದೆ. ಧನಾಶ್ರೀ ವರ್ಮಾ ವೃತ್ತಿಯಿಂದ ವೈದ್ಯೆ ಆದರೂ ಕೂಡಾ ಪ್ರವೃತ್ತಿಯಿಂದ ಒಬ್ಬ ಕೊರಿಯೋಗ್ರಫರ್ ಆಗಿದ್ದು ಆಗಾಗ ಒಳ್ಳೊಳ್ಳೆ ಜೋಶ್ ತುಂಬಿದ ಹಾಡುಗಳಿಗೆ ಜೋಶ್ ನೀಡುವ ಸ್ಟೆಪ್ ಗಳನ್ನು ಹಾಕಿ ಕೊರಿಯೋಗ್ರಫಿ ಮಾಡಿರುವ ವೀಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ಅವರು ಮದುವೆಗೆ ಮೊದಲು ಒಂದು ವೀಡಿಯೋ ಶೇರ್ ಮಾಡಿಕೊಂಡಿದ್ದು ಇದು ಎಲ್ಲಾ ಮದುವೆ ಆಗುತ್ತಿರುವ ಹೆಣ್ಣುಗಳಿಗೆ ಎಂದು ಹೇಳಿದ್ದಾರೆ. ಧನಾಶ್ರೀ ಅವರ ಅಭಿಮಾನಿಗಳಿಗೆ ಈ ಹಾಡು ಸಕತ್ ಖುಷಿಯನ್ನು ನೀಡಿದೆ.
ಈ ವೀಡಿಯೋದಲ್ಲಿ ಧನಾಶ್ರೀ ವರ್ಮಾ ವಧುವಿನ ವಸ್ತ್ರ ದಲ್ಲಿ ಅಲಂಕೃತಗೊಂಡಿರುವುದನ್ನು ನಾವು ನೋಡಬಹುದು. ಅವರು ಬಾಲಿವುಡ್ ನ ಕಿಂಗ್ ಖಾನ್ ಖ್ಯಾತಿಯ ಶಾರೂಖ್ ಖಾನ್ ಅವರ ಸಿನಿಮಾ ದಿಲ್ ತೋ ಪಾಗಲ್ ಹೈ ನಾ ದ ಸೂಪರ್ ಡೂಪರ್ ಹಿಟ್ ಸಾಂಗಾದ ಅರೆರೆ ಅರೆರೆ ಏ ಕ್ಯಾ ಹುವಾ ಹಾಡಿಗೆ ಬಹಳ ಖುಷಿಯಿಂದ, ಅಷ್ಟೇ ಜೋಶ್ ನಿಂದ ಕುಣಿದು ಭರ್ಜರಿ ಡಾನ್ಸ್ ಸ್ಟೆಪ್ ಗಳನ್ನು ಹಾಕಿದ್ದಾರೆ. ವೀಡಿಯೋ ಶೇರ್ ಮಾಡಿಕೊಳ್ಳುತ್ತಾ ಕ್ಯಾಪ್ಷನ್ ನಲ್ಲಿ ಈ ವೀಡಿಯೋ ಎಲ್ಲಾ ಮದುವೆ ಹೆಣ್ಣುಗಳಿಗಾಗಿ ಎಂದು ಬರೆದುಕೊಂಡಿದ್ದು, ಶ್ರೀಮತಿ ಚಹಲ್ ಆಗುವ ಮುನ್ನ ಒಂದು ಕ್ವಿಕ್ ಡಾನ್ಸ್ ಎಂದು ಕೂಡಾ ಬರೆದುಕೊಂಡಿದ್ದಾರೆ.
ಮದುವೆಯ ನಂತರ ಧನಾಶ್ರೀ ವರ್ಮಾ ಹಾಗೂ ಯಜ್ವೇಂದ್ರ ಚಹಲ್ ಅವರು ತಮ್ಮ ಹನಿಮೂನ್ ಗಾಗಿ ದುಬೈ ಗೆ ತೆರಳಿದ್ದಾರೆ. ಅಲ್ಲಿ ತಮ್ಮ ಸುಂದರವಾದ ಕ್ಷಣಗಳ ಫೋಟೋಗಳನ್ನು ಕೂಡಾ ಅವರು ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ಖುಷಿಯನ್ನು ನೀಡಿದ್ದಾರೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಭಾರತೀಯ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರು ಕೂಡಾ ದುಬೈನಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದು, ಯಜ್ವೇಂದ್ರ ಚಹಲ್ ಹಾಗೂ ಧನಾಶ್ರೀ ವರ್ಮಾ ಧೋನಿ ಕುಟುಂಬವನ್ನು ಕೂಡಾ ಭೇಟಿ ಮಾಡಿ ಅವರೊಟ್ಟಿಗೆ ಒಂದು ಸಂಭ್ರಮದ ಡಿನ್ನರ್ ಪಾರ್ಟಿ ಕೂಡಾ ಮಾಡಿದ್ದಾರೆ ಎನ್ನಲಾಗಿದೆ.
ವಿಡಿಯೋ ನೋಡಿ
ಧನಾಶ್ರೀ ವರ್ಮಾ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುವ ಅವರ ಡಾನ್ಸ್ ವೀಡಿಯೋಗಳು ಕೆಲವೇ ದಿನಗಳಲ್ಲಿ ವೈರಲ್ ಆಗಿ ಲಕ್ಷ ಲಕ್ಷ ವೀಕ್ಷಣೆಗಳನ್ನು ಪಡೆಯುತ್ತವೆ. ಯಜ್ವೇಂದ್ರ ಚಹಲ್ ಜೊತೆಗೆ ಅವರ ನಿಶ್ಚಿತಾರ್ಥವಾದ ನಂತರದ ದಿನಗಳಲ್ಲಿ ಧನಾಶ್ರೀ ವರ್ಮಾ ಮತ್ತಷ್ಟು ಪಾಪುಲಾರಿಟಿಯನ್ನು ಕೂಡಾ ಪಡೆದುಕೊಂಡರು. ಸೋಶಿಯಲ್ ಮೀಡಿಯಾಗಳಲ್ಲಿ ಧನಾಶ್ರೀ ಅವರ ಹಿಂಬಾಲಕರ ಸಂಖ್ಯೆ ಕೂಡಾ ಹೆಚ್ಚಾಯಿತು. ಬಾಲಿವುಡ್ ನ ಸೂಪರ್ ಹಿಟ್ ಸಾಂಗ್ ಗಳಿಗೆ ನೃತ್ಯ ಸಂಯೋಜನೆ ಮಾಡಿ ಧನಾಶ್ರೀ ಶೇರ್ ಮಾಡುವ ವೀಡಿಯೋ ಭರ್ಜರಿಯಾಗಿ ಅಭಿಮಾನಿಗಳನ್ನು ರಂಜಿಸುವುದು ಕೂಡಾ ಸಾಮಾನ್ಯ ಎನ್ನುವಂತೆ ಆಗಿದೆ.