ಅಂಬಾನಿಯವರ ಮುಂಬಯಿಯಲ್ಲಿಯ ‘ ಆಂಟಿನಾ’ ಮಹಲದ ಮೌಲ್ಯ ಎಷ್ಟು ಗೊತ್ತಾ?
ನಮ್ಮ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ಜಗತ್ತಿನ ಅತ್ಯಂತಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಅಂಬಾನಿಯವರ ಹೆಸರು ಸಹ ಇದೆ. ಅಂಬಾನಿಯವರು ಸಂಪತ್ತು ತುಂಬಾನೇ ಇದೆ. ಆದರೆ ಇಂದು ನಾವು ಅಂಬಾನಿಯವರ ಮುಂಬೈ ನಲ್ಲಿರುವ ಆಂಟಿನಾ ಬಿಲ್ಡಿಂಗ್ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ. ಈ ಅಪಾರ್ಟ್ಮೆಂಟ್ ನಲ್ಲಿ ಸುಮಾರು 27 ಮಹಡಿಗಳಿವೆ. 173 ಮೀಟರ್ ಎತ್ತರ ವಿದೆ. ಅಲ್ಲದೆ ಇದರಲ್ಲಿ ಮೂರು ಹೆಲಿಪ್ಯಾಡ್, 168 ಕಾರ್ ಪಾರ್ಕಿಂಗ್, ಒಂದು ಸಿನಿಮಾ ಗೃಹ, ಹಾಗೆಯೇ ಒಂದು ದೇವಾಲಯ , 4 ಸ್ವಿಮ್ಮಿಂಗ್ ಫೂಲ್ ಇವೆ.

ಇದು ಜಗತ್ತಿನ ಎಲ್ಲಕ್ಕಿಂತ ಹೆಚ್ಚು ಮೌಲ್ಯ ಹೊಂದಿರುವ ಮನೆಯಾಗಿದೆ. ಈ ಮನೆಯಲ್ಲಿ ಸುಮಾರು 600 ಕೋಣೆಗಳಿವೆ ಪ್ರತಿಯೊಂದು ಕೋಣೆಗೆ ಒಬ್ಬ ನೌಕರ ಇದ್ದಾರೆ. ಅಲ್ಲದೆ ಈ ಮನೆಯ ಒಂದು ತಿಂಗಳಿನ ಲೈಟ್ ಬಿಲ್ಲ ಸುಮಾರು ಐದು ಲಕ್ಷಕ್ಕಿಂತ ಹೆಚ್ಚು ಬರುವದು. ಈ ಜಗತ್ಪ್ರಸಿದ್ಧ ಮನೆಯ ಒಟ್ಟು ಮೌಲ್ಯ ಸುಮಾರು 3 ಬಿಲಿಯನ್ ಅಂದರೆ 19 ಸಾವಿರದ 500 ಕೋಟಿ ₹ ಇದೆ. ಈ ಮನೆಯಲ್ಲಿ ಅಂಬಾನಿಯವರು 2012 ರಲ್ಲಿ ಗೃಹ ಪ್ರವೇಶ ಮಾಡಿದ್ದರು. ಅಲ್ಲದೆ ಹಿಂದಿ ಸಿನಿಮಾದಲ್ಲಿ ಶೂಟಿಂಗ್ ಸಲುವಾಗಿ ಸಹ ಉಪಯೋಗ ಮಾಡಿಕೊಂಡಿದ್ದಾರೆ.