ನಿಷ್ಕಲ್ಮಶ ಪ್ರೇಮ ಈ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಬಲ್ಲುದು: ವೈರಲ್ Video ಹೇಳಿತು ಪವಿತ್ರ ಪ್ರೇಮದ ದೃಶ್ಯ
ಪ್ರೀತಿ ಎಂಬುದಕ್ಕೆ ಅರ್ಥವು ಬಹಳ ವಿಶಾಲವಾದದ್ದು, ಪದಗಳಲ್ಲಿ ವಿವರಣೆ ಮಾಡಲಾಗಿದ್ದು ಹಾಗೂ ಅದು ನಿಷ್ಕಲ್ಮಶ ಹಾಗೂ ನಿಸ್ವಾರ್ಥ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಆಧುನಿಕತೆ, ನಗರೀಕರಣ, ಒತ್ತಡದ ಜೀವನ ಹೀಗೆ ನೂರಾರು ಕಾರಣಗಳನ್ನು ಹೇಳುತ್ತಾ ಪ್ರೀತಿ ಎಂಬುದನ್ನೇ ಜನರು ಮರೆತಿರುವಂತೆ ಇದೆ. ಅಲ್ಲದೇ ಪ್ರೀತಿಯ ಪರಿಭಾಷೆ ಕೂಡಾ ಬದಲಾಗಿ ಹೋಗಿದೆ. ಪ್ರೀತಿ ಪ್ರೇಮ ಅನ್ನೋದೆಲ್ಲಾ ಒಂದು ಬ್ಯುಸಿನೆಸ್ ಅನ್ನೋ ತರ ನಡೀತಾ ಇದೆ ಇಂದಿನ ಜೀವನ. ಆದರೆ ಇದರ ಹೊರತಾಗಿಯೂ ಕೂಡಾ ನಿಷ್ಕಲ್ಮಶ ಪ್ರೀತಿ ಎನ್ನುವುದು ಅಲ್ಲೊಮ್ಮೆ ಇಲ್ಲೊಮ್ಮೆ ನೋಡಲು ಸಿಗುತ್ತದೆ. ಆದರೆ ಅದು ಅಪರೂಪ ಅಥವಾ ವಿರಳವೆನ್ನುವುದು ಮಾತ್ರ ಸುಳ್ಳಲ್ಲ. ನಿಸ್ವಾರ್ಥ ಪ್ರೇಮದ ಬಗ್ಗೆ ಕಥೆಗಳಷ್ಟೇ ನಮ್ಮ ಮಧ್ಯೆ ಉಳಿದಿದೆ ಎನ್ನಬಹುದು.
ಆದರೆ ಯಾವುದೇ ನಿರೀಕ್ಷೆಗಳು ಇಲ್ಲದೇ ಪ್ರೀತಿಗೆ ಬದಲಾಗಿ ನಮಗೆ ಪ್ರೀತಿಯನ್ನು ಮಾತ್ರವೇ ನೀಡುವುದು ಯಾರು ಎನ್ನುವುದಾದರೆ ಅವು ಪ್ರಾಣಿಗಳು ಮಾತ್ರ. ಅವುಗಳ ನಡುವಿನ ಪ್ರೀತಿ ನಿಜಕ್ಕೂ ಅದ್ಭುತ ಎನಿಸುತ್ತದೆ. ಅವು ಮನುಷ್ಯರ ಹಾಗೆ ಯಾವುದೇ ಸ್ವಾರ್ಥ ಅಥವಾ ಕಾರ್ಯಸಾಧನೆಯನ್ನು ಅರಸಿ ಪ್ರೀತಿಯನ್ನು ತೋರುವುದಿಲ್ಲ ಬದಲಾಗಿ ಅವು ನಿಜವಾದ ಪ್ರೀತಿ ಏನು ಎಂಬುದನ್ನು ನಮಗೆ ತಿಳಿಸುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹುದೇ ಒಂದು ನಿಷ್ಕಲ್ಮಶವಾದ ಪ್ರೀತಿಯನ್ನು ತೋರುತ್ತಿರುವ, ಜನರ ಅಪಾರ ಮೆಚ್ಚುಗೆ ಪಡೆದಿರುವ ವೀಡಿಯೋ ಒಂದು ವೈರಲ್ ಆಗಿದೆ.
ವೈರಲ್ ಆಗಿರುವ ವೀಡಿಯೋವನ್ನು ನೋಡಿದಾಗ ಅದು ಕೆಲವೇ ಸೆಕೆಂಡ್ ಗಳ ವೀಡಿಯೋ ಆದರೂ ನಮ್ಮಲ್ಲಿ ನಾವು ಕಳೆದು ಹೋಗುವಂತೆ ಇದೆ ಈ ವೀಡಿಯೋ. ಎರಡು ಜೀವಿಗಳ ನಡುವಿನ ಪವಿತ್ರ ಪ್ರೇಮ ಅಥವಾ ಪ್ರೀತಿಯನ್ನು ನಮ್ಮ ಕಣ್ಮುಂದೆ ತಂದಿಡುವಂತಹ ಅಪರೂಪದ ಅಥವಾ ಅತ್ಯಮೂಲ್ಯ ಎನಿಸುವ ವೀಡಿಯೋ ಇದಾಗಿದೆ. ನಿಜವಾದ ಪ್ರೀತಿಯ ಮೌಲ್ಯ ಏನೆಂದು ತಿಳಿದ ಪ್ರತಿಯೊಬ್ಬರಿಗೂ ಕೂಡಾ ಈ ವೀಡಿಯೋ ಅವರ ಹೃದಯವನ್ನು ತಟ್ಟುವಂತೆ, ಮನಸ್ಸಿನಲ್ಲಿ ಒಂದು ತಣ್ಣನೆಯ ಅನುಭವವನ್ನು ನೀಡುವಂತೆ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಹಾಗಾದರೆ ಈ ವೀಡಿಯೋದಲ್ಲಿ ಸನ್ನಿವೇಶ ಏನು ಎನ್ನುವುದಾದರೆ, ಟ್ವಿಟರ್ ಬಳಕೆದಾರರೊಬ್ಬರು ಎರಡು ಕಾಂಗರೂಗಳು ಒಂದನ್ನೊಂದು ಮುದ್ದಿಸುತ್ತಿರುವ, ಮುತ್ತಿಡುತ್ತಿರುವ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಅವರು ವೀಡಿಯೋ ಜೊತೆಗೆ ಶೀರ್ಷಿಕೆಯಲ್ಲಿ ಪ್ರೀತಿ ಎನ್ನುವುದು ಈ ಗ್ರಹವನ್ನು ಇನ್ನಷ್ಟು ಉತ್ತಮ ಸ್ಥಳವನ್ನಾಗಿ ಮಾಡುವುದು ಎಂದು ಬರೆದುಕೊಂಡಿದ್ದು ಅದು ಅಕ್ಷರಶಃ ಸತ್ಯ ಎನ್ನುವಂತಹ ದೃಶ್ಯವನ್ನು ನಾವು ನೋಡಬಹುದಾಗಿದೆ. ಎರಡು ಕಾಂಗರೂಗಳು ಒಂದನ್ನೊಂದು ಅಪ್ಪಿಕೊಂಡು, ಒಂದನ್ನೊಂದು ಮುದ್ದಿಸುತ್ತಾ ಇರುವ ದೃಶ್ಯ ವಾವ್ ಎಂತಹ ನಿರ್ಮಲ ಪ್ರೇಮ ಇದು ಎಂದು ಉದ್ಗಾರ ತೆಗೆಯುವಂತೆ ಮಾಡಿ ಬಿಡುತ್ತದೆ.
Love makes this planet a better one.. pic.twitter.com/WG0aKfiVRG
— Buitengebieden (@buitengebieden_) January 3, 2021
ಈ ವೀಡಿಯೋವನ್ನು 34 ಸಾವಿರಕ್ಕಿಂತಲೂ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ಎರಡು ಸಾವಿರದ ಹತ್ತಿರ ಲೈಕ್ಸ್ ಗಳನ್ನು ನೀಡಿದ್ದಾರೆ ನೆಟ್ಟಿಗರು. ವೀಡಿಯೋ ನೋಡಿ ಕಾಮೆಂಟ್ ಮಾಡಿದವರಲ್ಲಿ ಬಹುತೇಕ ಎಲ್ಲರೂ ಈ ನಿರ್ಮಲ ಪ್ರೀತಿಯನ್ನು ಹೊಗಳಿದ್ದಾರೆ. ಕೆಲವರು ಇಷ್ಟು ಸುಂದರವಾದ ವೀಡಿಯೋ ಎಲ್ಲಿ ಸಿಕ್ಕಿತು ಎಂದರೆ, ಒಬ್ಬ ಟ್ವಿಟರ್ ಬಳಕೆದಾರರು ಈ ವೀಡಿಯೋ 2021 ಕ್ಕೊಂದು ಶುಭಾರಂಭವನ್ನು ನೀಡುವಂತೆ ಇದೆ ಎಂದು ಕೂಡಾ ಹೇಳಿದ್ದಾರೆ. ಒಟ್ಟಿನಲ್ಲಿ ಒಂದು ಅದ್ಭುತವಾದ ಪ್ರೀತಿಯ ದೃಶ್ಯವನ್ನು ನೋಡಬೇಕೆನಿಸಿದರೆ ಈ ವೀಡಿಯೋ ನೋಡಲೇಬೇಕು.