ಕೊರೊನಾ ಲಸಿಕೆ ವಿಚಾರದಲ್ಲಿ ರಾಜ್ಯಗಳಿಗೆ ಮಾರ್ಗಸೂಚಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ: ಯಾರಿಗೆ ಕೊರೊನಾ ಲಸಿಕೆ ನೀಡಬಾರದು?
ಕಳೆದ ಒಂದು ವರ್ಷದಿಂದಲೂ ಕೂಡಾ ಒಂದು ರೀತಿಯಲ್ಲಿ ಆ ತಂ ಕವನ್ನು ಸೃಷ್ಟಿ ಮಾಡಿರುವ ಕೊರೊನಾ ನಿಯಂತ್ರಣಕ್ಕಾಗಿ ಇದೀಗ ಭಾರತ ಸರ್ಕಾರವು ಕೋವಿಡ್-19 ಲಸಿಕೆಗಳನ್ನು ದೇಶದ ವಿವಿಧ ರಾಜ್ಯಗಳಿಗೆ ಈಗಾಗಲೇ ರವಾನಿಸಿದೆ. ಅಲ್ಲದೇ ಇದೇ 16 ನೇ ತಾರೀಖಿನಿಂದ ಲಸಿಕೆಯನ್ನು ನೀಡುವ ಕಾರ್ಯ ಕೂಡಾ ಆರಂಭ ಮಾಡಲಾಗುವುದು ಎಂದು ಕೂಡಾ ಹೇಳಲಾಗಿದೆ. ಆದರೆ ಅದಕ್ಕಿಂತಲೂ ಮೊದಲು ಕೇಂದ್ರ ಆರೋಗ್ಯ ಸಚಿವಾಲಯವು ಕೊರೊನಾ ಲಸಿಕೆಯನ್ನು ನೀಡುವ ವಿಷಯದಲ್ಲಿ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಗರ್ಭಿಣಿಯರು ಹಾಗೂ ಮಕ್ಕಳಿಗೆ ಹಾಲುಣಿಸುವ ತಾಯಂದಿರಿಗೆ ಕೊರೋನಾ ಲಸಿಕೆಯನ್ನು ನೀಡಬಾರದು ಎನ್ನುವ ಸೂಚನೆಯನ್ನು ನೀಡಿದೆ. ಏಕೆಂದರೆ ಈವರೆಗೂ ಕೂಡ ಕೊರೋನಾ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯಲ್ಲಿ ಗರ್ಭಿಣಿ ಮಹಿಳೆಯರು ಅಥವಾ ಮಕ್ಕಳಿಗೆ ಹಾಲುಣಿಸುವ ತಾಯಂದಿರ ಮೇಲೆ ಲಸಿಕೆಯ ಪ್ರಯೋಗವನ್ನು ಮಾಡಲಾಗಿಲ್ಲ.
ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರವೊಂದನ್ನು ಬರೆದಿದೆ. ಹೀಗೆ ಬರೆದ ಪತ್ರದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಕೋವಿಡದ-19 ಲಸಿಕೆಗಳನ್ನು ಬಳಸುವ ಬಗ್ಗೆ, ಅದನ್ನು ನೀಡಲು ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಎಲ್ಲಾ ವಿಷಯಗಳ ಕುರಿತಾಗಿ ವಿವರಣೆಯನ್ನು ನೀಡಿದ್ದು, ಕೊರೊನಾ ಲಸಿಕೆಯನ್ನು ದೇಶದಲ್ಲಿನ 18 ವರ್ಷ ವಯಸ್ಸಿನ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮಾತ್ರವೇ ನೀಡಬೇಕೆಂದು ನಿರ್ದೇಶನವನ್ನು ನೀಡಿದೆ. ಅಗತ್ಯವಿದ್ದರೆ ಕೋವಿಡ್-19 ಹಾಗೂ ಇತರೆ ಲಸಿಕೆಗಳ ನಡುವೆ ಕನಿಷ್ಠ ಪಕ್ಷ 14 ದಿನಗಳ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಕೂಡ ಮಾಹಿತಿಯನ್ನು ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾದ ಮನೋಹರ್ ಅಗನಾನಿ ಅವರು ರಾಜ್ಯಗಳಿಗೆ ಬರೆದಂತಹ ಪತ್ರದಲ್ಲಿ, ಕೊರೋನಾ ಲಸಿಕೆಯನ್ನು ಬೇರೊಂದು ಲಸಿಕೆಯೊಂದಿಗೆ ಯಾವುದೇ ಕಾರಣಕ್ಕೂ ಕೂಡಾ ವಿನಿಮಯ ಮಾಡಿಕೊಳ್ಳಲು ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಅಂದರೆ ಮೊದಲ ಡೋಸ್ ಮತ್ತು ಎರಡನೇ ಡೋಸ್ ಬೇರೆ ಬೇರೆ ಲಸಿಕೆಯಾಗಿರಬಾರದು.ಮೊದಲನೆಯ ಡೋಸ್ ನಲ್ಲಿ ಯಾವ ಲಸಿಕೆಯನ್ನು ಪಡೆದಿರುವರೋ, ಎರಡನೆಯ ಡೋಸ್ ನಲ್ಲಿ ಕೂಡಾ ಅದೇ ಲಸಿಕೆಯನ್ನು ಪಡೆಯಬೇಕು ಎಂದು ಸೂಚಿಸಲಾಗಿದೆ.
ಲಸಿಕೆಗಳ ಕ್ಲಿನಿಕಲ್ ಟ್ರಯಲ್ ನಲ್ಲಿ ಈ ಲಸಿಕೆಗಳನ್ನು ಗರ್ಭಿಣಿ ಮಹಿಳೆಯರ ಮೇಲಾಗಲೀ ಅಥವಾ ಎಳೆಯ ಮಕ್ಕಳಿಗೆ ಹಾಲುಣಿಸುತ್ತಿರುವ ತಾಯಂದಿರ ಮೇಲಾಗಲಿ ಪ್ರಯೋಗ ಮಾಡಲಾಗಿಲ್ಲ. ಆದ್ದರಿಂದ ಅವರ ಮೇಲೆ ಇದರ ಪರಿಣಾಮ ಹೇಗಿರುತ್ತದೆ ಎಂಬುದು ತಿಳಿದಿಲ್ಲ. ಆದ್ದರಿಂದ ಗರ್ಭಿಣಿಯರೇ ಆಗಲಿ, ಗರ್ಭಿಣಿ ಅಗಿರುವ ಬಗ್ಗೆ ಇನ್ನು ಖಚಿತವಾದ ಮಾಹಿತಿ ಬರದೇ ಇರುವವರು ಹಾಗೂ ಎಳೆಯ ಮಕ್ಕಳಿಗೆ ಹಾಲುಣಿಸುತ್ತಿರುವ ತಾಯಂದಿರಿಗೆ ಕೊರೋನಾ ಲಸಿಕೆಯನ್ನು ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಇದಲ್ಲದೇ ಇನ್ನು ಕೆಲವು ಲಕ್ಷಣಗಳನ್ನು ಗುರುತಿಸಲಾಗಿದ್ದು, ಆ ಲಕ್ಷಣಗಳು ಕಂಡು ಬರುವವರಿಗೂ ಕೂಡಾ ಈ ಲಸಿಕೆಯನ್ನು ನೀಡಬಾರದು ಎನ್ನುವ ಸೂಚನೆಯನ್ನು ನೀಡಲಾಗಿದೆ.

ಅಂದರೆ ಒಂದು ಕೊರೊನಾ ಲಸಿಕೆಯನ್ನು ಪಡೆದ ನಂತರ ಆನ್ ಫ್ಲಾಕ್ಟೋಟಿಕ್ ಅಥವಾ ಅಲರ್ಜಿ ರಿಯಾಕ್ಷನ್ ನಿಂದ ಏನಾದರು ಪರಿಣಾಮ ಉಂಟಾಗಿದ್ದರೆ ಅಂತಹವರಿಗೆ ಕೂಡಾ ಲಸಿಕೆಯನ್ನು ನೀಡಬಾರದು ಎನ್ನಲಾಗಿದೆ. ಲಸಿಕೆ, ಚುಚ್ಚುಮದ್ದಿನ ಚಿಕಿತ್ಸೆ, ಔಷಧೀಯ ಉತ್ಪನ್ನಗಳು ಅಥವಾ ಆಹಾರ ಪದಾರ್ಥಗಳಿಂದಾಗಿ ತಕ್ಷಣವೇ ಅಥವಾ ಸ್ವಲ್ಪ ವಿಳಂಬವಾಗಿ ಅಲರ್ಜಿಯ ಸಮಸ್ಯೆಯನ್ನು ಎದುರಿಸುತ್ತಿರುವ ವ್ಯಕ್ತಿಯ ಮೇಲೆ ಕೂಡಾ ಕೊರೊನಾ ಲಸಿಕೆಯನ್ನು ಪ್ರಯೋಗ ಮಾಡಲಾರದು ಎನ್ನುವ ಸೂಚನೆ ನೀಡಲಾಗಿದೆ. ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿರುವ ರೋ ಗಿ ಗಳಿಗೆ ಕೂಡಾ ಕೊರೊನಾ ಲಸಿಕೆ ನೀಡಲಾಗುವುದಿಲ್ಲ.