ಫೇಕ್ ಗೊರಿಲ್ಲಾ ಪ್ರಾಂಕ್ ಮಾಡಲು ಹೋದ ಯೂಟ್ಯೂಬರ್: ನಾಯಿಗಳು ಕೊಟ್ಟ ಪ್ರತಿಕ್ರಿಯೆ ನೋಡಿ ಆದ ಶಾಕ್!
ಸೋಶಿಯಲ್ ಮೀಡಿಯಾ ಗಳಲ್ಲಿ ಯೂಟ್ಯೂಬ್ ವಿಡಿಯೋಗಳು ಬಹಳಷ್ಟು ಕ್ರೇಜ್ ಹೊಂದಿವೆ. ಅದು ಅಲ್ಲದೇ ಯಾವುದಾದರೂ ಒಂದು ಯುಟ್ಯೂಬ್ ಚಾನೆಲ್ ನಲ್ಲಿ ಯಾವುದಾದರೂ ಒಂದು ವಿಷಯದ ವೀಡಿಯೋ ವೈರಲ್ ಆಯ್ತು ಎಂದರೆ ಅದೇ ಕ್ಯಾಟಗರಿಗೆ ಸೇರಿದ ಇನ್ನೊಂದಷ್ಟು ವಿಡಿಯೋಗಳು ಬರಲು ಆರಂಭಿಸುತ್ತದೆ. ಆದರೆ ಎಲ್ಲ ವಿಡಿಯೋಗಳು ಕೂಡಾ ವೈರಲ್ ಆಗುವುದು ಮಾತ್ರ ಸ್ವಲ್ಪ ಕಷ್ಟವಾಗಬಹುದು. ಆದರೆ ಪ್ರಾಂಕ್ ವಿಡಿಯೋಗಳಿಗೆ ಮಾತ್ರ ಸದಾ ಬೇಡಿಕೆ ಇದ್ದೇ ಇರುತ್ತದೆ. ಫ್ರಾಂಕ್ ವಿಡಿಯೋಗಳು ನೋಡುಗರಿಗೆ ಖುಷಿಯನ್ನು ನೀಡುವುದಲ್ಲದೆ, ಅದರಲ್ಲಿನ ತಮಾಷೆಯ ಅಂಶಗಳು ನೋಡುಗನನ್ನು ನಕ್ಕು ನಲಿಸುತ್ತದೆ. ಈ ವಿಡಿಯೋಗಳು ಕೂಡಾ ಶೇರ್ ಆದಂತಹ ಕೆಲವೇ ಗಂಟೆಗಳು ಅಥವಾ ದಿನಗಳಲ್ಲಿ ಭರ್ಜರಿಯಾಗಿ ವೈರಲ್ ಆಗಿದೆ ಶೇರ್ ಆಗುತ್ತಾ ಸಾಗುತ್ತದೆ.
ಪ್ರಾಂಕ್ ವಿಡಿಯೋಗಳಲ್ಲಿ ಇತ್ತೀಚೆಗೆ ಟೈಗರ್ ಪ್ರಾಂಕ್ ವಿಡಿಯೋಗಳು ಸಾಕಷ್ಟು ಸದ್ದನ್ನು ಮಾಡಿದ್ದವು. ನಕಲಿ ಹುಲಿಯನ್ನೋ ಅಂದರೆ ಹುಲಿಯ ಬೊಂಬೆಯನ್ನೋ ಅಥವಾ ವ್ಯಕ್ತಿಯೊಬ್ಬನು ಹುಲಿಯ ವೇಷವನ್ನು ಧರಿಸಿಯೋ ಮಲಗಿರುವ ನಾಯಿಗಳು ಇಲ್ಲವೇ ಕೋತಿಗಳ ಹತ್ತಿರ ಹೋಗಿ, ಅವು ಅನಿರೀಕ್ಷಿತವಾಗಿ ಹುಲಿಯನ್ನು ನೋಡಿದಾಗ ನೀಡುವ ಭ ಯ ದ ಪ್ರತಿಕ್ರಿಯೆಗಳನ್ನು ವಿಡಿಯೋ ಮಾಡುವ ಮೂಲಕ ಯೂಟ್ಯೂಬರ್ ಗಳು ಪ್ರೇಕ್ಷಕರ ಮುಂದೆ ಇರಿಸಿದ್ದರು. ಈ ವಿಡಿಯೋಗಳು ಸಖತ್ ಮನರಂಜನೆ ನೀಡುವುದರ ಜೊತೆಗೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ವೀಕ್ಷಣೆಗಳನ್ನು ಕೂಡ ಪಡೆದುಕೊಂಡಿರುವುದು ಉಂಟು.
ಈಗ ಅಂತಹುದೇ ಪ್ರಾಂಕ್ ವೀಡಿಯೋದಲ್ಲಿ ಹೊಸ ಪ್ರಯತ್ನವೊಂದಕ್ಕೆ ಯೂಟ್ಯೂಬರ್ ಒಬ್ಬರು ಪ್ರಯತ್ನಪಟ್ಟಿದ್ದಾರೆ. ಈ ಬಾರಿ ಟೈಗರ್ ಬದಲಾಗಿ ಅವರು ಗೊರಿಲ್ಲಾ ವೇಷವನ್ನು ಧರಿಸಿ ಮಲಗಿರುವ ನಾಯಿಗಳ ಬಳಿಗೆ ಹೋಗಿ ಪ್ರಾಂಕ್ ವಿಡಿಯೋ ಮಾಡಿ ರೆಕಾರ್ಡ್ ಹಾಕಿದ್ದಾರೆ. ಈ ವಿಡಿಯೋದಲ್ಲಿ ನಾವು ಗಮನಿಸಿದಾಗ ವ್ಯಕ್ತಿಯೊಬ್ಬರು ಗೊರಿಲ್ಲಾ ವೇಷದಲ್ಲಿ ರಸ್ತೆಬದಿಗಳಲ್ಲಿ ಅಥವಾ ಅಂಗಡಿಗಳ ಬಳಿ ಇಲ್ಲವೇ ಮನೆಗಳ ಹತ್ತಿರ ಮಲಗಿರುವ ನಾಯಿಗಳ ಬಳಿಗೆ ಹೋಗಿ, ಅನಿರೀಕ್ಷಿತವಾಗಿ ಗೊರಿಲ್ಲಾ ಬಂದಾಗ ಆ ನಾಯಿಗಳು ಹೇಗೆ ಪ್ರತಿಕ್ರಿಯೆ ನೀಡುತ್ತವೆ ಎಂಬುದನ್ನು ವಿಡಿಯೋ ಮಾಡಿದ್ದಾರೆ. ಈ ಹಿಂದೆ ನೋಡಿದಂತಹ ಟೈಗರ್ ಟ್ರೈನ್ ವಿಡಿಯೋಗಳಲ್ಲಿ ನಕಲಿ ಟೈಗರ್ ಅಥವಾ ಟೈಗರ್ ವೇಶ ಧರಿಸಿರುವ ವ್ಯಕ್ತಿಯನ್ನು ನೋಡಿದ ಕೂಡಲೇ ನಾಯಿಗಳು ಓಡಿಹೋಗುತ್ತಿದ್ದವು.
ಆದರೆ ಈ ವಿಡಿಯೋದಲ್ಲಿ ಗೊರಿಲ್ಲಾ ವೇಷದಲ್ಲಿ ಬಂದಂತಹ ವ್ಯಕ್ತಿಯನ್ನು ನೋಡಿದ ನಾಯಿಗಳು ಭಯದಿಂದ ಓಡಿ ಹೋಗಿಲ್ಲ. ಬದಲಾಗಿದೆ ಅವು ಗೊರಿಲ್ಲಾವನ್ನು ನೋಡಿ ಅದರ ಮೇಲೆ ತಿರುಗಿ ಬಿದ್ದಿವೆ. ಬೊಗಳಿ ಕಚ್ಚಲು ಮುಂದಾಗಿರುವುದನ್ನು ನಾವು ಗಮನಿಸಬಹುದು. ಅಲ್ಲದೇ ನಾಯಿಗಳ ಕೋ ಪವನ್ನು ನಿರೀಕ್ಷೆ ಮಾಡಿರದ ಆ ವ್ಯಕ್ತಿಯು ನಾಯಿಗಳು ತನ್ನ ಮೇಲೆ ಧಾ ಳಿ ಮಾಡಿ ಕಚ್ಚುವವು ಎನ್ನುವ ಭಯದಿಂದ ಹತ್ತಿರ ಬಂದ ಕೂಡಲೇ ತನ್ನ ಗೊರಿಲ್ಲಾ ಮುಖವಾಡವನ್ನು ತೆಗೆದು ಹಾಕಿದ್ದಾನೆ. ಆಗ ಆತನ ಮುಖ ನೋಡಿದೆ ನಾಯಿಗಳು ಕೂಡಾ ಸುಮ್ಮನಾಗಿದೆ. ಆದರೆ ಒಂದೆರಡು ಕಡೆ ಮಾತ್ರ ಎಂದಿನಂತೆ ಗೋರೊಲಾವನ್ನು ನೋಡಿ ನಾಯಿಗಳು ಭಯದಿಂದ ಓಡಿವೆ.
ವಿಡಿಯೋ ನೋಡಿ
ವೈರಲ್ ಆಗಿರುವ ಈ ವಿಡಿಯೋವನ್ನು ಈಗಾಗಲೇ 16 ಲಕ್ಷ ಜನ ವೀಕ್ಷಣೆಯನ್ನು ಮಾಡಿದ್ದಾರೆ. 46 ಸಾವಿರಕ್ಕಿಂತ ಜನರು ಇಷ್ಟಪಟ್ಟಿದ್ದಾರೆ. ಇನ್ನು ಕಾಮೆಂಟ್ ಗಳಲ್ಲಿ ವೈವಿಧ್ಯಮಯವಾದ ವಾಕ್ಯಗಳನ್ನು ನಾವು ಗಮನಿಸಬಹುದಾಗಿದೆ. ನೆಟ್ಟಿಗರೊಬ್ಬರು ಬಲಶಾಲಿಯಾದ ನಾಯಿಗಳು ಬಲವಾದ ಪ್ರದೇಶಗಳಿಂದ ಬರುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ನಾನು ಸಾಕಿರುವ ನಾಯಿಯ ಮುಂದೆ ಬಂದು ಈ ಪ್ರಾಂಕ್ ಮಾಡು,ಆಮೇಲೆ ನೀನು ಒಂದು ನೆನಪಾಗಿ ಉಳಿದುಬಿಡುವೆ ಎಂದು ಹಾಸ್ಯ ಮಾಡಿದ್ದಾರೆ. ಮತ್ತೆ ಕೆಲವರು ನಾಯಿಗಳನ್ನು ಅವುಗಳ ಪಾಡಿಗೆ ಅವುಗಳಿಗೆ ಇರಲು ಬಿಟ್ಟುಬಿಡಿ. ಅವುಗಳಿಗೆ ತೊಂದರೆ ಕೊಡಬೇಡಿ ಎಂದು ಸಲಹೆ ನೀಡಿದ್ದಾರೆ.