ಸದಾ ಗಡ್ಡವಿರುವ ಅಪ್ಪನನ್ನು ನೋಡಿದ್ದ ಮಗು, ಗಡ್ಡ ಶೇವ್ ಆದ ಅಪ್ಪನ ಮುಖ ನೋಡಿ ಕೊಟ್ಟಳು ಶಾಕಿಂಗ್ ಎಕ್ಸ್‌ಪ್ರೆಷನ್: ವೀಡಿಯೋ ಆಯ್ತು ವೈರಲ್
ಮಕ್ಕಳ ಆಟ ಚೆಂದ, ಮಕ್ಕಳ ನೋಟ ಚೆಂದ ಪುಟಾಣಿ ಮಕ್ಕಳು ಮನೆಯಲ್ಲಿ ಇದ್ದರೆ ಅಲ್ಲಿ ಬೇಸರ ಅನ್ನೋದೆ ಇರಲ್ಲ ಹೀಗೆಲ್ಲಾ ಹೇಳೋ ನಾವು ಅನೇಕ ಸಂದರ್ಭಗಳಲ್ಲಿ ಈ ಮಕ್ಕಳು ನೀಡೋ ಎಕ್ಸ್‌ಪ್ರೆಷನ್ ಗಳನ್ನು ನೋಡಿರೋದೇ ಇಲ್ಲ. ಆದರೆ ಕೆಲವರು ಹಾಗಲ್ಲ ತಮ್ಮ ಮಕ್ಕಳಿಗೆ ತಾವು ಮಕ್ಕಳಾಗಿದಾಗ ಏನೆಲ್ಲಾ ಆಟ ಆಡಿದ್ರು, ಹೇಗೆಲ್ಲಾ ತುಂಟಾಟ ಮಾಡಿದ್ರು ಅನ್ನೋದನ್ನು ತೋರಿಸೋಕೆ, ಆ ಮಧುರವಾದ ಸ್ಮರಣೆಗಳನ್ನು ಸದಾ ಇರೋ ಹಾಗೆ ಮಾಡಬೇಕು ಅಂತ ಫೋಟೋಗಳು, ವೀಡಿಯೋಗಳಲ್ಲಿ ತಮ್ಮ ಮಕ್ಕಳ ಮುದ್ದು ಮುದ್ದಾದ ಆಟಗಳನ್ನು, ಹಾಡುಗಳನ್ನು, ತುಂಟಾಟಗಳನ್ನು ಎಲ್ಲವನ್ನೂ ಕೂಡಾ ಸಂಗ್ರಹಿಸಿ ಇಡ್ತಾರೆ. ಇನ್ನೂ ಕೆಲವರು ತಮ್ಮ ಮಕ್ಕಳ ಈ ಮುದ್ದಾದ ಎಕ್ಸ್‌ಪ್ರೆಷನ್ ಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ತಮ್ಮ ಸಂತೋಷವನ್ನು ಎಲ್ಲರಿಗೂ ಹಂಚೋದು ಕೂಡಾ ಉಂಟು.
ಹೀಗೆ ಹಂಚಿಕೊಂಡ ವೀಡಿಯೋಗಳು ಕೂಡಾ ಬಹಳ ವೈರಲ್ ಆಗುತ್ತವೆ ಮಾತ್ರವೇ ಅಲ್ಲದೇ ಜನರ ಮೆಚ್ಚುಗೆಗಳು ಕೂಡಾ ಹರಿದು ಬರುತ್ತವೆ. ಒಂದು ವೀಡಿಯೋ ಈಗ ವೈರಲ್ ಆಗಿದ್ದು ಇದರಲ್ಲಿ ಕೂಡಾ ಮಗುವೊಂದು ನೀಡುವ ಅಪರೂಪದ ಎಕ್ಸ್‌ಪ್ರೆಷನ್ ಗಳು ರೆಕಾರ್ಡ್ ಆಗಿದ್ದು, ವೀಡಿಯೋ ನೋಡುವ ಪ್ರತಿಯೊಬ್ಬರೂ ಕೂಡಾ ಆ ಮುದ್ದು ಮಗು ಒಂದು ಅನಿರೀಕ್ಷಿತವಾದ, ತಾನು ಊಹಿಸಿರದಂತಹ ಸನ್ನಿವೇಶ ಎದುರಾದಾಗ ತಾನು ಇಷ್ಡು ದಿನ ನೋಡಿದ ವ್ಯಕ್ತಿಯ ಮುಖದಲ್ಲೊಂದು ದೊಡ್ಡ ಬದಲಾವಣೆ ಆದಾಗ ಅದು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನಾವು ನೋಡಬಹುದಾಗಿದೆ. ಹಾಗಾದ್ರೆ ಈ ವೀಡಿಯೋದಲ್ಲಿ ಇರೋ ಸನ್ನಿವೇಶ ಏನು? ಜನರ ಮೆಚ್ಚುಗೆಗೆ ಪಾತ್ರವಾದ ಆ ಸಂದರ್ಭ ಏನದು? ಅನ್ನೋ ಕುತೂಹಲ ನಿಮಗೆ ಆಗಿದ್ರೆ ಅದಕ್ಕೆ ಉತ್ತರ ಇಲ್ಲಿದೆ.
ವೀಡಿಯೊ ಪ್ರಕಾರ ಒಂದು ಮುದ್ದಾದ ಹೆಣ್ಣು ಮಗು ತನ್ನ ತಂದೆಯನ್ನು ಮೊದಲಿನಿಂದಲೂ ಗಡ್ಡ ಮೀಸೆಯಲ್ಲೇ ನೋಡಿದೆ. ಬಹುಶಃ ಆ ಮಗುವಿಗೆ ಬುದ್ಧಿ ಬಂದಾಗಿನಿಂದಲೂ ಕೂಡಾ ಅದು ಅವರಪ್ಪನನ್ನು ಗಡ್ಡ ಹಾಗೂ ಮೀಸೆಯಲ್ಲಿ ಇರುವುದನ್ನೇ ನೋಡಿದೆ. ಆದರೆ ಈ ಮಗುವಿಗೆ ಒಂದು ದಿನ ಇದ್ದಕ್ಕಿದ್ದಂತೆ ತನ್ನಪ್ಪ ಗಡ್ಡ ಹಾಗೂ ಮೀಸೆ ಎರಡನ್ನೂ ತೆಗೆದ ನಂತರ ಹೇಗಿರಬೇಡ ಅದರ ಪರಿಸ್ಥಿತಿ. ಅಪರಿಚಿತ ಎದುರಿಗೆ ಬಂದ ಎನ್ನುವಂತೆ ಆಗೋದಿಲ್ವೇ.. ಇಲ್ಲಿ ನಡೆದಿರುವುದು ಕೂಡಾ ಅದೇ.
ಮಗುವಿನ ಅಪ್ಪ ಮುಖದ ಮೇಲೆ ಟವಲ್ ಕವರ್ ಮಾಡಿದಾಗ ಮಗಳು ಅದನ್ನು ಎಳೆದು ಅಪ್ಪನನ್ನು ನೋಡಿ ನಗುತ್ತಾಳೆ.
ಹೀಗೆ ಒಂದೆರಡು ಸಲ ಆಡಿದ ನಂತರ ಅಪ್ಪ ತನ್ನ ಗಡ್ಡ ಹಾಗೂ ಮೀಸೆ ತೆಗೆದು ಮಗಳಿಗೆ ಅದನ್ನು ತಿಳಿಸಿದೆ ಮತ್ತೆ ಟವೆಲ್ ನಿಂದ ಮುಖ ಕವರ್ ಮಾಡಿಕೊಂಡು ಕುಳಿತಿದ್ದಾರೆ. ಆಗ ಮಗಳು ಆಟದಂತೆ ಅಪ್ಪನ ಮುಖದ ಮೇಲಿಂದ ಟವಲ್ ಎಳೆದಾಗ ಗಡ್ಡ ಮೀಸೆ ಇಲ್ಲದ ಅಪ್ಪನನ್ನು ನೋಡಿ ಶಾ ಕ್ ಆಗಿದ್ದಾಳೆ. ಅವಳಿಗೆ ಅದು ಅವರಪ್ಪ ಎನ್ನುವುದು ಗೊತ್ತಾಗಿಲ್ಲ. ಅಪರಿಚತನನ್ನು ನೋಡಿದಂತೆ ನೋಡಿದ, ಚುರುಕಾಗಿದ್ದ ಹುಡುಗಿ ಏಕಾಏಕಿ ಮೌನವಾಗಿ ಆತನನ್ನು ನೋಡುವ ಅವಳ ಎಕ್ಸ್‌ಪ್ರೆಷನ್ ಜನರಿಗೆ ಬಹಳ ಮೆಚ್ಚುಗೆಯಾಗಿದೆ. ಆ ಪುಟ್ಟ ಹುಡುಗಿ ಕಡೆಗೆ ಅದು ಯಾರೋ ಅನ್ಕೊಂಡು ಅಪ್ಪನಿಂದ ಸೈಲೆಂಟಾಗಿ ದೂರ ಓಡಿರುವುದನ್ನು ನಾವು ವೀಡಿಯೋದಲ್ಲಿ ನೋಡಬಹುದಾಗಿದೆ.
ವಿಡಿಯೋ ನೋಡಿ
ಇನ್ನು ಮಗುವಿನ ಈ ಅದ್ಭುತ ರಿಯಾಕ್ಷನ್ ಇರುವ ವೀಡಿಯೋವನ್ನು ಈಗಾಗಲೇ 15ಲಕ್ಷ ಜನರು ವೀಕ್ಷಣೆಯನ್ನು ನೋಡಿದ್ದಾರೆ. 38 ಸಾವಿರಕ್ಕಿಂತ ಅಧಿಕ ಮಂದಿ ಇದನ್ನು ಲೈಕ್ ಮಾಡಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರೊಬ್ಬರು ಮಗುವಿನ ಈ ಎಕ್ಸ್‌ಪ್ರೆಷನ್ ಗೆ ಬೆಲೆ ಕಟ್ಟಲಾಗದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಗಡ್ಡ ಇದ್ದಾಗ ಮುಖ ಚೆನ್ನಾಗಿತ್ತು, ಅದು ತೆಗೆದ ಮೇಲೆ ಭ ಯಾ ನಕ ಅದಕ್ಕೆ ಮಗು ಮುಖ ನೋಡಿ ಭ ಯ ಪಟ್ಟಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ಇನ್ನೂ ಕೆಲವರು ಮಗು ಮಾತ್ರವೇ ಅಲ್ಲ ನಾವು ಮುಖ ನೋಡಿ ಬೇಸರ ಮಾಡ್ಕೊಂಡ್ವಿ ಅಂದಿದ್ದಾರೆ. ಮತ್ತೊಬ್ಬರು ಆ ಮಗು ಯಾರೋ ನೀನು ಕೆಳಗಿಳಿಸು ಅಂದಿರುತ್ತೆ ಅಂತ ಕೂಡಾ ಅನ್ನೊಂಡಿರುತ್ತೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.