ಬಾತ್ರೂಮ್ ಫೋಟೋ ಶೇರ್ ಮಾಡಿಕೊಂಡು ಟ್ರೋಲಾದ ಸುಂದರಿ: ಈಕೆ ವಿಶ್ವದ ಕಿರಿಯ ವಯಸ್ಸಿನ ಕೋಟ್ಯಾಧಿಪತಿ ಕೂಡಾ ಹೌದು
ವಿಶ್ವದ ಕಡಿಮೆ ವಯಸ್ಸಿನ ಕೋಟ್ಯಾಧಿಪತಿ ಗಳಲ್ಲಿ ಕೈಲಿ ಜೆನರ್ ಕೂಡಾ ಒಬ್ಬರು. ಇತ್ತೀಚೆಗೆ ಆಕೆ ಒಂದು ಫೋಟೋ ವನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಸ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಈ ಫೋಟೋದಲ್ಲಿ ಆಕೆ ತಮ್ಮ ಕೋಟ್ಯಂತರ ರೂಪಾಯಿಗಳ ಬೆಲೆ ಬಾಳುವ ಐಷಾರಾಮಿ ಮನೆಯಲ್ಲಿನ ಅಂದವಾದ ಸ್ನಾನದ ಕೋಣೆಯನ್ನು ಹಾಗೂ ಸ್ನಾನದ ಕೋಣೆಯಲ್ಲಿ ರುವ ದುಬಾರಿಯಾದಂತಹ ಶವರನ್ನು ತೋರಿಸಿದ್ದಾರೆ. ಆದರೆ ಕೈಲಿ ತೋರಿಸಿರುವ ಫೋಟೋ ನೋಡಿದ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರ ಗಮನ ಅವರ ಸ್ನಾನದ ಕೋಣೆಯಲ್ಲಿನ ಶವರ್ ನಲ್ಲಿ ಸಣ್ಣದಾಗಿ ಬರುತ್ತಿದ್ದ ನೀರಿನ ಕಡೆಗೆ ತಿರುಗಿದೆ. ಅದನ್ನು ನೋಡಿದ ನಂತರ ನೆಟ್ಟಿಗರು ಹಾಗೂ ಅಭಿಮಾನಿಗಳು ಕೂಡ ಕೈಲಿಯನ್ನು ಎಷ್ಟು ಸಾಧ್ಯವೋ ಅಷ್ಟು ಗೇಲಿ ಮಾಡತೊಡಗಿದ್ದಾರೆ. ಆಕೆಯ ಪೋಸ್ಟ್ ಗೆ ಬಗೆಬಗೆಯ ರೀತಿಯಲ್ಲಿ ಕಾಮೆಂಟ್ ಗಳನ್ನು ಹಾಕುವ ಮೂಲಕ ಕೈಲಿ ಜೆನೇರ್ ಳ ಕಾಲೆಳೆಯುವ ಪ್ರಯತ್ನವನ್ನು ಮಾಡಿದ್ದಾರೆ.
ಕೈಲಿ ಜೆನರ್ ಹಾಲಿವುಡ್ ನ ಬಹಳ ಜನಪ್ರಿಯವಾದ ಅಂತಹ ಕರ್ದಾಶಿಯಾ ಜೆನರ್ ಕುಟುಂಬದ ಒಂದು ಭಾಗವಾಗಿದ್ದಾರೆ. ಅಲ್ಲದೇ ಈಕೆ ಜಗತ್ತಿನ ಶ್ರೀಮಂತರಲ್ಲಿ ಸ್ಥಾನವನ್ನು ಕೂಡಾ ಪಡೆದಿದ್ದು ಹಲವು ಬಾರಿ ಫೋರ್ಬ್ಸ್ ಪಟ್ಟಿಯಲ್ಲಿ ವಿಶ್ವದ ಅತಿ ಕಡಿಮೆ ವಯಸ್ಸಿನ ಕೋಟ್ಯಾಧಿಪತಿ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಇನ್ನು ಜನಪ್ರಿಯತೆ ಹೆಚ್ಚಿದಂತೆ ಸೆಲೆಬ್ರೆಟಿಗಳು ಕೆಲವು ಸಮಸ್ಯೆಗಳನ್ನು ಕೂಡಾ ಎದುರಿಸಬೇಕಾಗುತ್ತದೆ. ಇಂತಹ ಸಮಸ್ಯೆಗಳಲ್ಲಿ ಒಂದು ಅನೇಕ ಜನರ ದೃಷ್ಟಿಯು ಜನಪ್ರಿಯತೆ ಪಡೆದವರ ಪ್ರತಿಯೊಂದು ಚಟುವಟಿಕೆಯ ಮೇಲೆ ಇರುವುದು ಎಂದೇ ಹೇಳಬಹುದು. ಅದೇ ಕಾರಣದಿಂದಲೇ ಕೈಲಿ ಮೇಲೆಯೂ ಕೂಡ ಕೋಟ್ಯಂತರ ಜನರ ದೃಷ್ಟಿ ಇದ್ದೇ ಇದೆ.
ಸೋಶಿಯಲ್ ಮೀಡಿಯಾ ಗಳಲ್ಲಿ ಅಪಾರ ಸಂಖ್ಯೆಯ ಫಾಲೋಯರ್ಸ್ ಹೊಂದಿರುವ ಕೈಲಿ, ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದು, ಈಕೆ ಆಗಾಗ ತಮ್ಮ ಜೀವನದ ಹಲವು ವಿಚಾರಗಳನ್ನು ಹಂಚಿಕೊಳ್ಳುವ ಜೊತೆಗೆ ತಮ್ಮ ಮನೆಯ ದೃಶ್ಯಗಳನ್ನು ಕೂಡ ವಿಡಿಯೋ ಮೂಲಕ ತೋರಿಸುತ್ತಾರೆ. ಈಗ ಅಂತಹುದೇ ಒಂದು ಪ್ರಯತ್ನ ಮಾಡುವಾಗ ಆಕೆ ಅನೇಕರ ಟೀಕೆಗೆ ಹಾಗೂ ಟ್ರೋಲಿಗೆ ಕಾರಣವಾಗಿ ಇದು ದೊಡ್ಡ ಸುದ್ದಿಯಾಗಿದೆ. ಕೈಲಿ ಕೆಲವೇ ದಿನಗಳ ಹಿಂದೆ ತಮ್ಮ ಮನೆಯ ಸುಂದರವಾದ ಸ್ನಾನದ ಕೋಣೆಯನ್ನು ಕೂಡಾ ಒಂದು ಫೋಟೋ ತೆಗೆದು, ಅದನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರೀಸ್ ಮೂಲಕ ಎಲ್ಲರೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.
ಹೀಗೆ ಶೇರ್ ಮಾಡುವಾಗ ಅವರ ಶವರ್ ನಲ್ಲಿ ನೀರು ಬರ್ತಿದ್ದು, ಅದರ ಪ್ರೆಷರ್ ಬಹಳ ಕಡಿಮೆ ಇದೆ. ಇದನ್ನು ನೋಡಿದ ಕೂಡಲೇ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಲು ಆರಂಭಿಸಿದ್ದಾರೆ. ಕೈಲಿ 35 ಮಿಲಿಯನ್ ಡಾಲರ್ ಗಳ ಐಶಾರಾಮಿ ಮನೆಯಲ್ಲಿ ಇದ್ದರೂ ಕೂಡಾ ಅವರ ಬಾತ್ರೂಮಿನಲ್ಲಿ ಸಾಮಾನ್ಯ ಜನರ ಮನೆಯ ಶವರ್ ನಂತಹ ಪ್ರೆಶರ್ ನಲ್ಲಿ ನೀರು ಬರುತ್ತದೆ ಎಂದು ಹಾಸ್ಯ ಮಾಡಿದ್ದಾರೆ. ಅನೇಕರು ತಮ್ಮ ಕಾಮೆಂಟ್ ಗಳ ಮೂಲಕ ಕೈಲಿಯ ಬಾತ್ ರೂಮ್ ಬಗ್ಗೆ ಹಾಸ್ಯ ಚಟಾಕಿಗಳನ್ನು ಕೂಡಾ ಹಾರಿಸಿ ಕೈಲಿಯನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.
TOTALLY UNEXPECTED: Kylie Jenner shares picture of her shower. Gets roasted for having awful water pressure in $35 million home. pic.twitter.com/u3rbhfYGOd
— Def Noodles (@defnoodles) January 18, 2021
ಕೆಲವು ನೆಟ್ಟಿಗರು ಕೈಲಿ ಅವರ ಮನೆಯ ಬಾತ್ರೂಮಿನಲ್ಲಿ ಇರುವ ಶವರಿ ಗಿಂತ ತಮ್ಮ ಮನೆಗಳ ಶವರಿನಲ್ಲೇ ನೀರು ಇನ್ನೂ ಹೆಚ್ಚಿನ ಪ್ರೆಶರ್ ಹೊಂದಿದೆ ಎಂದಿದ್ದಾರೆ. ಇನ್ನೂ ಕೆಲವರು ಕೈಲಿ ಕೂಡಾ ಸಾಮಾನ್ಯ ಜನರಂತೆ ಸ್ಲೋ ಇಂಟರ್ನೆಟ್ ಹಾಗೂ ಇನ್ನಿತರ ಸಮಸ್ಯೆಗಳನ್ನು ಎದುರಿಸುತ್ತಾರೆಯೇ ಎನ್ನುವ ಅನುಮಾನ ನಮಗಿತ್ತು. ಆದರೆ ಈಗ ಅವರ ಶವರ್ ನ ಪರಿಸ್ಥಿತಿ ನೋಡಿದ ಮೇಲೆ ನಮಗೆ ನಮ್ಮ ಎಲ್ಲಾ ಪ್ರಶ್ನೆಗಳಿಗೆ ಕೂಡಾ ಉತ್ತರ ಸಿಕ್ಕಿದೆ ಎಂದು ಕೈಲಿಯನ್ನು ಗೇಲಿ ಮಾಡುವ ಮೂಲಕ, ಅವರ ಕಾಲೆದಿದ್ದಾರೆ. ಒಟ್ಟಾರೆ ಕೈಲಿ ಮತ್ತು ಅವರ ಐಶಾರಾಮೀ ಮನೆಯ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡುತ್ತಾ ಸಾಗಿದ್ದಾರೆ.
I was sitting in bed last night waiting for my lagging wifi to load my Netflix & I sat there wondering if Kylie Jenner had to deal with internet lag. Now I’m thinking she just might lmao. https://t.co/sRIQXI7i2f
— carolyn (@Caroleeeeeeeen) January 17, 2021