RCB ಖರೀದಿಸಿದ DC ಯ ‘ಈ’ ಇಬ್ಬರು ಆಟಗಾರರು ಟ್ರಾಫಿ ಗೆಲ್ಲಿಸಿ ಕೊಡಬಹುದು!

ಸದ್ಯಕ್ಕೆ ಎಲ್ಲ ಐಪಿಎಲ್ ತಂಡಗಳಲ್ಲಿ ತಮ್ಮ ಹಳೆಯ ಆಟಗಾರರನ್ನು ಮುಕ್ತ ಮಾಡಿ ಹೊಸ ಆಟಗಾರರನ್ನು ತಂಡದಲ್ಲಿ ಸೇರಿಸಿಕೊಳ್ಳುವ ಪ್ರಯತ್ನ ನಡೆದಿದೆ. ಒಟ್ಟಿನಲ್ಲಿ ಮೊದಲು ಗೆದ್ದ ತಂಡ ಮತ್ತೊಮ್ಮೆ ಮತ್ತು ಗೆಲ್ಲದ ತಂಡ ಈ ಸಲವಾದರೂ ಕಪ್ ಗೆದ್ದೇ ಗೆಲ್ಲಬೇಕು ಎಂಬ ಆಸೆಯಿಂದ ತಮ್ಮ ತಂಡವನ್ನು ಬಲಾಢ್ಯ ತಂಡ ವನ್ನಾಗಿಸಲು ಪ್ರಯತ್ನ ನಡೆಸಿವೆ. 2021 ರ ಹಂಗಾಮಿಗಾಗಿ ಎಲ್ಲ ತಂಡಗಳಿಗೆ ತಮ್ಮ ತಂಡದಲ್ಲಿ ಸ್ಥಾನ ನಿಗದಿ ಮಾಡಿದ ಮತ್ತು ತಮ್ಮ ತಂಡದಿಂದ ಮುಕ್ತ ಗೊಳಿಸಿದ ಆಟಗಾರರ ಹೆಸರನ್ನು ಅಂತಿಮಗೊಳಿಸಲು ಸೂಚಿಸಲಾಗಿತ್ತು. ಆ ಪ್ರಕಾರ ಎಲ್ಲ ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಜಾಹೀರು ಪಡಿಸಿವೆ.

ತದನಂತರ, ಡೆಲ್ಲಿ ಕ್ಯಾಪಿಟಲ್ ತಂಡವು ತಮ್ಮ ಎರಡು ಆಟಗಾರರನ್ನು RCB ತಂಡಕ್ಕೆ ಬದಲಿ ಆಟಗಾರರೆಂದು ನೀಡಿದೆ. IPL ನ 14 ನೇ ಹಂಗಾಮಿಗಾಗಿ ಎಲ್ಲ ತಂಡಗಳು 4 ಫೆಬ್ರುವರಿ ವರೆಗೆ ಆಟಗಾರರನ್ನು ತಮ್ಮ ತಮ್ಮಲ್ಲಿ ಬಲಾಯಿಸಿಕೊಳ್ಳಲು ಸಾಧ್ಯವಿದೆ. ಆದ್ದರಿಂದ ಡೆಲ್ಲಿ ತಂಡವು ತಮ್ಮ ತಂಡದಲ್ಲಿರುವ ಡೇನಿಯಲ್ ಸ್ಯಾಮ್ ಮತ್ತು ಹರ್ಷಲ್ ಪಟೇಲ್ ಇವರಿಗೆ ಬದಲಿ ಆಟಗಾರರೆಂದು ಬೆಂಗಳೂರು ತಂಡಕ್ಕೆ ನೀಡಿದೆ.

ಡೇನಿಯಲ್ ಸ್ಯಾಮ್ ಮತ್ತು ಹರ್ಷಲ್ ಪಟೇಲ್ ಈ ಇಬ್ಬರು ಆಟಗಾರರು ಬೆಂಗಳೂರು ತಂಡಕ್ಕೆ ತುಂಬಾ ಮುಖ್ಯವಾಗಿದ್ದಾರೆ. ಕಾರಣ ವಿರಾಟ್ ಅವರು ಈ ಸಲವಾದರೂ ಕಪ್ ಗೆದ್ದೇ ಗೆಲ್ಲಬೇಕೆಂದು RCB ತಂಡವನ್ನು ಮತ್ತೆ ಹೊಸದಾಗಿ ಕಟ್ಟುವ ಪ್ರಯತ್ನ ನಡೆದಿದೆ. ಆದ್ದರಿಂದಲೇ ತಮ್ಮ 10 ಆಟಗಾರರನ್ನು ಮುಕ್ತ ಗೊಳಿಸಿದ್ದಾರೆ.

ಹರ್ಷಲ್ ಮತ್ತು ಡ್ಯಾನಿಯಲ್ ಇಬ್ಬರ IPL ಪ್ರದರ್ಶನ.

ಹರ್ಷಲ್ ಪಟೇಲ್ ಅವರು ಐಪಿಲ್ ಸ್ಪರ್ಧೆಯಲ್ಲಿ ಇಲ್ಲಿಯವರೆಗೆ 48 ಪಂದ್ಯಗಳನ್ನು ಆಡಿ 45 ವಿಕೆಟ್ ಗಳನ್ನೂ ಕಬಳಿಸಿದ್ದಾರೆ. ಜೊತೆಗೆ ಬ್ಯಾಂಟಿಂಗ್ ಸಾಮರ್ಥ್ಯವನ್ನು ಸಹಿತ ಹೊಂದಿದ್ದಾರೆ.

ಇನ್ನು ಡೇನಿಯಲ್ ಅವರ ಬಗ್ಗೆ ಹೇಳಬೇಕಾದರೆ ಇವರು ಆಸ್ಟ್ರೇಲಿಯಾ ಆಟಗಾರರಾಗಿದ್ದು ಎಡಗೈ ವೇಗಿ ಇದ್ದಾರೆ. ಅದರ ಜೊತೆಗೆ ಆಕ್ರಮಣಶೀಲ ಅಬ್ಬರದ ಆಟಕ್ಕೆ ಹೆಸರಾಗಿದ್ದಾರೆ. ಡೇನಿಯಲ್ ಸ್ಯಾಮ್ ಅವರು ಐಪಿಲ್ ನಲ್ಲಿ ಒಟ್ಟು 40 ಪಂದ್ಯಗಳನ್ನಾಡಿ 446 ರನ್ ಗಳನ್ನೂ ಜಮಾಯಿಸಿದ್ದಾರೆ. ಆಸ್ಟ್ರೇಲಿಯಾದ ಫೇಮಸ್ ಬಿಗ್ ಬ್ಯಾಷ್ ಲೀಗ್ ನಲ್ಲಿ 10 ಅರ್ಧ ಶತಕಗಳು ಬಾರಿಸಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರು RCB ತಂಡ ಇಲ್ಲಿಯವರೆಗೆ ಕಪ್ ಗೆಲ್ಲದ ಬೇಡದ ದಾಖಲೆಯನ್ನು ಮುರಿದು 2021 ರಲ್ಲಿ ಕಪ್ ಗೆಲ್ಲಿಸಿ ಕೊಡುವ ಸಾಧ್ಯತೆಗಳಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಕ್ತ ಮಾಡಿದ ಆಟಗಾರರು ಈ ಕೆಳಗಿನಂತೆ ಇದ್ದಾರೆ.

ಆರ್ಸಿಬಿ ತಂಡವು ಹದಿನಾಲ್ಕನೇ ಹಂಗಾಮಿನ ಹರಾಜಿನ ಮೊದಲು ತನ್ನ 10 ಆಟಗಾರರನ್ನು ಮುಕ್ತ ಮಾಡಿದೆ. ಇದರಲ್ಲಿ ಮೋಯಿನ್ ಅಲಿ, ಶಿವಂ ದುಬೆ, ಗುರುಕೀರತ್ ಸಿಂಗ ಮನ್, ಏರೋನ್ ಪಿಂಚ್, ಕ್ರಿಸ್ ಮೋರಿಸ್, ಪಾರ್ಥಿವ್ ಪಟೇಲ್ ಮತ್ತು ಡೇಲ್ ಸ್ಟೇನ್ ಇದ್ದಾರೆ. 2021 ರ ಐಪಿಎಲ್ ಕ್ರೀಡಾಕೂಟ ಭಾರತದಲ್ಲಿಯೇ ಆಯೋಜಿಸುವ ಸಾಧ್ಯತೆಗಳು ತುಂಬಾ ಇವೆ.