ಸೈನಿಕನ ಬಳಿ ಇದ್ದ ಗನ್ ತನಗೆ ಬೇಕೆಂದು ರಸ್ತೆಯಲ್ಲೇ ಅತ್ತು ಗಲಾಟೆ ಮಾಡಿದ ಪುಟಾಣಿ ಬಾಲಕ: ವೈರಲ್ ವೀಡಿಯೋ ನೋಡಿ ನಕ್ಕ ನೆಟ್ಟಿಗರು
ಪುಟಾಣಿ ಮಕ್ಕಳು ಬಹಳ ಮುಗ್ಧತೆಯಿಂದ ಕೂಡಿರುತ್ತಾರೆ. ಅವರಿಗೆ ಯಾವುದು ಸರಿ? ಯಾವುದು ತಪ್ಪು ?ಎನ್ನುವ ಅವಾಗಹನೆ ಇರುವುದಿಲ್ಲ. ಯಾವ ವಸ್ತುಗಳು ತಮಗೆ ಅ ಪಾ ಯವನ್ನು ತಂದೊಡ್ಡುತ್ತವೆ ಎನ್ನುವ ಮಾಹಿತಿ ಕೂಡಾ ಅವರಲ್ಲಿ ಇರುವುದಿಲ್ಲ. ಪುಟಾಣಿ ಮಕ್ಕಳ ಮನರಂಜನೆಗಾಗಿ ಮನೆಯಲ್ಲಿ ಹಿರಿಯರು ವೈವಿಧ್ಯಮಯವಾದಂತಹ ಆಟಿಕೆಗಳನ್ನು ತಂದು ಕೊಡುವುದು ಸಹಜ. ಇಂತಹ ಆಟಿಕೆಗಳಿಂದ ಮಕ್ಕಳಿಗೆ ಬೇಸರ ಕಳೆಯುತ್ತದೆ ಆದರೆ ಕೆಲವು ಆಟಿಕೆಗಳು ಮಾತ್ರ ಅವರನ್ನು ಹಠ ಮಾಡುವಂತೆ ಕೂಡಾ ಮಾಡುತ್ತವೆ. ತಮ್ಮಲ್ಲಿರುವ ಆಟಿಕೆಯಂತದ್ದೇ ಬೇರೆಯವರ ಬಳಿ ಇದ್ದು ಅದು ಚೆನ್ನಾಗಿದೆ ಎನಿಸಿದರೆ ಮಕ್ಕಳು ಅಂತಹುದೇ ತಮಗೂ ಬೇಕೆಂದು ಹಠ ಹಿಡಿಯುವುದನ್ನು ನಾವೆಲ್ಲ ನೋಡಿರುತ್ತೇವೆ. ಈಗ ಅಂತಹದೇ ಒಂದು ಘಟನೆ ನಡೆದಿದ್ದು ಇಲ್ಲಿ ಪುಟಾಣಿ ಬಾಲಕ ತನಗೆ ಯಾವ ಆಟಿಕೆ ಬೇಕೆಂದು ಹಠ ಮಾಡಿದ್ದೇನೆ ಎನ್ನುವ ವಿಚಾರ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಪುಟ್ಟ ಬಾಲಕನೊಬ್ಬನ ವಿಡಿಯೋ ವೈರಲ್ ಆಗುತ್ತಾ ಸಾಗಿದೆ. ಈ ವಿಡಿಯೋವನ್ನು ನೋಡಿದವರೆಲ್ಲಾ ಕೂಡ ನಗುವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವಿಡಿಯೋ ನೋಡಿದರೆ ನೀವು ಕೂಡಾ ತಪ್ಪದೇ ನಗುವಿರಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇಷ್ಟಕ್ಕೂ ಈ ವಿಡಿಯೋದಲ್ಲಿ ಇರುವಂತಹ ದೃಶ್ಯ ವಾದರೂ ಏನು? ಎನ್ನುವುದಾದರೆ ಅದು ಬಹಳ ಆಸಕ್ತಿಕರವಾಗಿದೆ. ವಿಡಿಯೋದಲ್ಲಿ ನಾವು ಗಮನಿಸಿದಾಗ ರಸ್ತೆಯೊಂದರ ಕೊನೆಯಲ್ಲಿ ಸೈನಿಕನೋರ್ವ ನಿಂತಿದ್ದಾರೆ. ಅವರ ಸೊಂಟದ ಭಾಗದಲ್ಲಿ ಬಂದೂಕು ಕಾಣುತ್ತಿದೆ. ಇದನ್ನು ಗಮನಿಸಿದ ಬಾಲಕನೊಬ್ಬನು ಕೂಡಲೇ ರಸ್ತೆ ಬದಿಯಲ್ಲಿ ನಿಂತಿದ್ದ ಸೈನಿಕನ ಬಳಿಗೆ ಓಡಿ ಹೋಗಿದ್ದು ತನಗೆ ಆ ಸೈನಿಕನ ಹತ್ತಿರ ಇರುವ ಬಂದೂಕು ನೀಡಬೇಕೆಂದು ಹಠ ಹಿಡಿದು ಜೋರಾಗಿ ಅಳಲು ಪ್ರಾರಂಭಿಸಿದ್ದಾನೆ. ಈ ಫನ್ನಿ ವಿಡಿಯೋ ಇದೀಗ ಎಲ್ಲರ ಗಮನವನ್ನು ಸೆಳೆಯುತ್ತಿದೆ
ವಿಡಿಯೋದಲ್ಲಿ ನೋಡಿದಾಗ ರಸ್ತೆ ಬದಿಯಲ್ಲಿ ಸೈನಿಕನು ತನ್ನ ಬಂದೂಕಿನ ಸಹಿತವಾಗಿ ನಿಂತಿರುವುದನ್ನು ನಾವು ಕಾಣಬಹುದು. ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಾಲಕನೊಬ್ಬನು ಸೈನಿಕನ ಬಳಿ ಬಂದೂಕು ಇರುವುದನ್ನು ನೋಡಿದ ಕೂಡಲೇ ಅವರ ಬಳಿಗೆ ಓಡಿ ಹೋಗಿದ್ದಾನೆ. ಸೈನಿಕನ ಬಳಿ ಇದ್ದಂತಹ ಬಂದೂಕನ್ನು ಹಿಡಿದುಕೊಂಡು ಅದನ್ನು ಎಳೆದಾಡಿದ್ದಾನೆ. ಆ ಬಂದೂಕು ತನಗೆ ಬೇಕೆಂದು ಹಠ ಹಿಡಿದಿದ್ದಾನೆ. ಸೈನಿಕನು ಬಾಲಕನಿಗೆ ಅದನ್ನು ಕೊಡಲು ಸಾಧ್ಯವಿಲ್ಲ ಎಂದು ಹೇಳಿದಾಗ ಆ ಪುಟಾಣಿ ಬಾಲಕನು ಜೋರಾಗಿ ಅಳುವುದಕ್ಕೆ ಪ್ರಾರಂಭ ಮಾಡಿದ್ದಾನೆ. ಇದನ್ನು ನೋಡಿದ ಸೈನಿಕ ಆ ಬಂದೂಕಿನ ಬದಲಾಗಿ ಬೇರೆ ಹೊಸ ಬಂದೂಕು ಕೊಡಿಸುವುದಾಗಿ ಹೇಳಿದ್ದಾರೆ. ಆದರೆ ಬಾಲಕ ಅದಕ್ಕೆ ಒಪ್ಪಿಕೊಳ್ಳದೇ ತನಗೆ ಅವರ ಬಳಿ ಇರುವ ಬಂದೂಕೇ ಬೇಕೆಂದು ಹಠ ಹಿಡಿದು ಅತ್ತಿದ್ದಾನೆ.
ಕೊನೆಗೆ ಆ ಪುಟಾಣಿಯ ತಾಯಿ ಬಂದು ಅವನನ್ನು ಎತ್ತಿಕೊಂಡು ಸಮಾಧಾನ ಮಾಡಿದ್ದಾರೆ. ರಸ್ತೆಯಲ್ಲಿ ಇದ್ದ ಇನ್ನೂ ಕೆಲವು ಜನರು ಹಾಗೂ ಸೈನಿಕರು ಕೂಡಾ ಪುಟಾಣಿ ಕಂದನ ಹಠವನ್ನು ನೋಡಿ ನಕ್ಕಿದ್ದಾರೆ. ಸೋಶಿಯಲ್ ಮೀಡಿಯಾ ತಾಣಗಳಾದ ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ಬಾಲಕನ ಬಂದೂಕಿಗಾಗಿ ಹಠ ಮಾಡುತ್ತಾ ಅಳುತ್ತಿರುವ ಈ ವಿಡಿಯೋ ಸಾಕಷ್ಟು ವೈರಲ್ ಆಗಿರುವುದರ ಜೊತೆಗೆ, ನೆಟ್ಟಿಗರು ಈ ವಿಡಿಯೋ ಬಹಳ ಕ್ಯೂಟಾಗಿದೆ ಎಂದು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ನೆಟ್ಟಿಗರಲ್ಲಿ ಒಬ್ಬರು, ಈ ಪುಟ್ಟ ಬಾಲಕನು ಬಂದೂಕಿನಿಂದ ಗುಂಡನ್ನು ಹಾರಿಸಲು ಪ್ರಯತ್ನ ಪಡುತ್ತಿದ್ದಾನೆ ಆದರೆ ಬಂದೂಕು ಲಾಕ್ ಆಗಿದೆ. ಇಲ್ಲದೇ ಹೋಗಿದ್ದರೆ ಎಂತಹ ಅ ಪಾ ಯ ಸಂಭವಿಸುತ್ತಿತ್ತು ಎಂಬುದನ್ನು ನಾವು ಊಹೆ ಮಾಡಿಕೊಳ್ಳುವುದು ಕೂಡಾ ಸಾಧ್ಯವಿಲ್ಲ ಎಂದು ತಮ್ಮ ಆ ತಂ ಕವನ್ನು ವ್ಯಕ್ತಪಡಿಸಿದ್ದಾರೆ.
ವಿಡಿಯೋ ನೋಡಿ
ಇನ್ನು ಕೆಲವು ನೆಟ್ಟಿಗರು ವಿಡಿಯೋವನ್ನು ನೋಡಿ ಪುಟ್ಟ ಬಾಲಕನ ಮುಗ್ಧತೆಯನ್ನು ಮೆಚ್ಚಿಕೊಂಡಿದ್ದಾರೆ. ಅದರಲ್ಲಿ ಒಬ್ಬರು ಈ ಬಾಲಕನಿಗೆ ಹೊಸ ಬಂದೂಕು ಬೇಕಾಗಿಲ್ಲ, ಬದಲಿಗೆ ಸೈನಿಕನ ಬಳಿಯಲ್ಲಿ ಇರುವಂತಹ ಬಂದೂಕೇ ಬೇಕಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಬಾಲಕ ಬಹಳ ಅಮಾಯಕ, ಪುಟ್ಟ ಮಕ್ಕಳ ಇಂತಹ ಹಠ ಕೂಡ ಅವರಲ್ಲಿನ ಮುಗ್ಧತೆಯನ್ನು ತೋರಿಸುತ್ತದೆ ಎಂದಿದ್ದಾರೆ. ಒಟ್ಟಾರೆ ಸಾವಿರಾರು ಜನರು ಈ ವಿಡಿಯೋವನ್ನು ನೋಡಿ ಬಾಲಕನ ಮುಗ್ಧ ನಡೆಗೆ ಮಾರುಹೋಗಿದ್ದಾರೆ.