ನಿಮ್ಮ ವಾಹನ ಡಿಕ್ಮಿ ಹೊಡೆದು ಬೇರೊಂದು ವಾಹನಕ್ಕೆ ಡ್ಯಾಮೇಜ್ ಆದರೆ ಆಗ ತಪ್ಪದೇ ಈ ವಿಷಯಗಳನ್ನು ಪಾಲಿಸಿ
ಅನೇಕ ಸಂದರ್ಭಗಳಲ್ಲಿ ನಾವು ನಮ್ಮ ಅಥವಾ ಬೇರೆಯವರ ವಾಹನಗಳನ್ನು ತೆಗೆದುಕೊಂಡು ಯಾವುದಾದರೂ ಕೆಲಸಕ್ಕಾಗಿ ರಸ್ತೆಗಿಳಿಯುತ್ತೇವೆ. ಆಗ ಕೆಲವೊಮ್ಮೆ ಅನಿರೀಕ್ಷಿತವಾಗಿ ಬೇರೊಂದು ವಾಹನಕ್ಕೆ ನಮ್ಮ ವಾಹನ ಡಿಕ್ಕಿ ಹೊಡೆಯಬಹುದು ಇದರಿಂದ ಮತ್ತೊಂದು ವಾಹನಕ್ಕೆ ಹಾನಿ ಉಂಟಾಗ ಬಹುದು, ವಾಹನದ ಮೇಲೆ ಸ್ಕ್ರಾಚ್ ಆಗಬಹುದು ಅಥವಾ ವಾಹನ ಚಾಲಕನಿಗೆ ಗಂಭೀರ ಗಾಯಗಳಾಗಬಹುದು. ಇಂತಹ ಸಂದರ್ಭದಲ್ಲಿ ತೊಂದರೆಗೊಳಗಾದ ವಾಹನ ಚಾಲಕರು ತಮ್ಮ ವಾಹನದ ದುರಸ್ತಿಗೆ ಎಂದು ಅತವಾ ಪರಿಹಾರ ಧನವೆಂದು ಹಣವನ್ನು ಕೇಳುವುದು ಸಹಜ. ಆದರೆ ಹಾಗೆ ಹಣಕ್ಕಾಗಿ ಒತ್ತಾಯಿಸುವಾಗ ನೀವು ಹಣವನ್ನು ಕೊಡುವಂತಹ ಅವಶ್ಯಕತೆ ಇರುವುದಿಲ್ಲ. ಅಲ್ಲದೇ ಇಂತಹ ಸಂದರ್ಭಗಳಲ್ಲಿ ಗಾಬರಿ ಆಗಬಾರದು, ನಿಮ್ಮ ವಾಹನದ ಇನ್ಶುರೆನ್ಸ್ ಸರಿಯಾಗಿದ್ದರೆ ನೀವು ಸ್ಥಳದಲ್ಲೇ ಎಂದೂ ರಾಜಿ ಮಾಡಿಕೊಳ್ಳಬೇಡಿ.
ಈ ರೀತಿ ರಸ್ತೆಯಲ್ಲಿ ವಾಹನಗಳ ಆ್ಯ ಕ್ಸಿ ಡೆಂ ಟ್ ನಡೆದಾಗ ಕೆಲವು ನಿಶ್ಚಿತ ರೂಪದ ಕಾರ್ಯ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.
ತೊಂದರೆಗೆ ಒಳಗಾದವರನ್ನು ಹತ್ತಿರದ ಪೊಲೀಸ್ ಸ್ಟೇಷನ್ ಗೆ ಬರುವಂತೆ ಸೂಚನೆ ನೀಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಮೇಲೆ ಯಾವುದೇ ಹೊಣೆಗಾರಿಕೆ ಇರುವುದಿಲ್ಲ. ಅಲ್ಲದೇ ವಾಹನದ ಇನ್ಶುರೆನ್ಸ್ ಸರಿಯಾಗಿದ್ದರೆ ವಾಹನಕ್ಕೆ ಆಗಿರುವ ತೊಂದರೆಯ ಪರಿಹಾರವನ್ನು ಒದಗಿಸುವ ಜವಾಬ್ದಾರಿ ಇನ್ಶುರೆನ್ಸ್ ಕಂಪನಿಯದ್ದಾಗಿರುತ್ತದೆ. ಅಲ್ಲದೇ ಇನ್ಶುರೆನ್ಸ್ ಕಂಪನಿ ಗಳು ಕೂಡಾ ಪರಿಹಾರವನ್ನು ನೀಡುವ ಸಂದರ್ಭದಲ್ಲಿ ಕೆಲವು ಶರತ್ತುಗಳನ್ನು ವಿಧಿಸುತ್ತದೆ. ಅಪಘಾತದ ಸಮಯದಲ್ಲಿ ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿಯ ಬಳಿ ಆತನ ಚಾಲನಾ ಪರವಾನಗಿ ಹಾಗೂ ಅನ್ಯ ದಾಖಲೆಗಳು ಲಭ್ಯವಿರಬೇಕು,ವಾಹನ ಚಾಲನಾ ಪರವಾನಗಿಯು ಮೊದಲು ಯಾವುದೇ ಕಾರಣಕ್ಕೂ ಜಫ್ತಿ ಆಗಿರಬಾರದು. ಒಂದು ವೇಳೆ ನಿಮ್ಮ ಬಳ್ಳಿ ಲರ್ನಿಂಗ್ ಲೈಸನ್ಸ್ ಇದ್ದರೂ ಪರವಾಗಿಲ್ಲ ಅದನ್ನು ವಾಹನ ಚಾಲನೆ ಮಾಡುವಾಗ ನಿಮ್ಮ ಬಳಿ ಇಟ್ಟುಕೊಂಡಿರಬೇಕು.
ಏಕೆಂದರೆ ಕೇಂದ್ರ ಮೋಟಾರು ವಾಹನ ಕಾಯ್ದೆ 1989 ರ ಪ್ರಕಾರ ಲರ್ನಿಂಗ್ ಲೈಸೆನ್ಸ್ ನಿಮಗೆ ವಾಹನವನ್ನು ಚಲಾಯಿಸಲು ಹಕ್ಕನ್ನು ನೀಡುತ್ತದೆ. ನಿಮಗೇನಾದರೂ ಯಾವುದೇ ಬೈಕ್ ಅಥವಾ ಕಾರ್ ನೊಂದಿಗೆ ಅಪಘಾತವಾದರೆ ಅಲ್ಲೇ ರಾಜಿ ಮಾಡಿಕೊಳ್ಳಬೇಕಾಗಿಲ್ಲ. ಏಕೆಂದರೆ ಇನ್ಶುರೆನ್ಸ್ ಇದ್ದರೆ ಅದರ ಎಲ್ಲಾ ಹೊಣೆಗಾರಿಕೆಗಳನ್ನು ಇನ್ಶುರೆನ್ಸ್ ಕಂಪನಿ ಭರಿಸಬೇಕಾಗುತ್ತದೆ. ಇದೇ ವೇಳೆಯಲ್ಲಿ ನೀವು ಅರ್ಥಮಾಡಿಕೊಳ್ಳಬೇಕಾದ ಇನ್ನೊಂದು ಪ್ರಮುಖ ವಿಷಯವಿದೆ, ತೊಂದರೆಗೊಳಗಾದ ವಾಹನಕ್ಕೂ ಕೂಡ ಇನ್ಶುರೆನ್ಸ್ ಇರುತ್ತದೆ. ಆ ವಾಹನ ಚಾಲಕನು ನಿಮ್ಮಿಂದ ಪರಿಹಾರದ ಹಣವನ್ನು ಪಡೆಯುವುದು ಮಾತ್ರವೇ ಅಲ್ಲದೆ ತನ್ನ ವಾಹನದ ಇನ್ಶುರೆನ್ಸ್ ಕಂಪನಿಯಿಂದ ಕೂಡಾ ಪರಿಹಾರದ ಹಣವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾನೆ.
ಅಪಘಾತ ಸಂಭವಿಸಿದ ಕೂಡಲೇ ಪೊಲೀಸ್ ಸ್ಟೇಷನ್ ನಲ್ಲಿ ವಿಷಯವನ್ನು ತಿಳಿಸಿ ವಾಹನದ ದಾಖಲೆಗಳನ್ನು ನೀಡಬೇಕಾಗುತ್ತದೆ. ಆನಂತರ ಇನ್ಶುರೆನ್ಸ್ ಕಂಪನಿಗೆ ಪಾಲಿಸಿ ನಂಬರ್ ಸಹಿತವಾಗಿ ಎಲ್ಲಾ ಮಾಹಿತಿಯನ್ನು ನೀಡಬೇಕು. ಒಂದು ವೇಳೆ ಅ ಪ ಘಾ ತದ ಸಂದರ್ಭದಲ್ಲಿ ಯಾರಿಗಾದರೂ ಗಾಯಗಳಾಗಿದ್ದರೆ ಅಥವಾ ಸಾ ವು ಸಂಭವಿಸಿದರೆ ನಿಮ್ಮ ಪರವಾಗಿ ಕೋರ್ಟ್ ನಲ್ಲಿ ಇನ್ಶುರೆನ್ಸ್ ಕಂಪನಿ ಕೇಸ್ ನಡೆಸಬೇಕಾಗುವುದು. ಸೆಕ್ಷನ್ 2-1 (ಐ) ಕಾಯ್ದೆಯ ಅನ್ವಯ ನಿಮ್ಮ ವಾಹನ ಡಿಕ್ಕಿ ಹೊಡೆದಾಗ ಯಾರಾದರೂ ಗಂಭೀರವಾಗಿ ಗಾಯಗೊಂಡರೆ ಅಥವಾ ಮೃ ತ್ಯು ಸಂಭವಿಸಿದ್ದರೆ,
ಗರಿಷ್ಠ ಮೊತ್ತವನ್ನು ನೀಡಲಾಗುತ್ತದೆ ಎಂದು ಹೇಳುತ್ತದೆ. ಮೋಟಾರು ವಾಹನ ಕಾಯ್ದೆ 1988 ರ ಸೆಕ್ಷನ್ 2-1 ರ ಪ್ರಕಾರ, ತರ್ಡ್ ಪಾರ್ಟಿಗೆ ನಷ್ಟದ 7.5 ಲಕ್ಷ ರೂ. ಕವರ್ ಆಗುತ್ತದೆ.
ಕೋರ್ಟ್ ನಿಂದ ಸಮನ್ಸ್ ಬಂದಾಗ ಕೋರ್ಟ್ ನ ಮುಂದೆ ಹಾಜರಾಗಿ ಅ ಪ ಘಾ ತದ ಎಲ್ಲಾ ಸ್ಪಷ್ಟ ಮಾಹಿತಿ, ಸಾಧ್ಯವಾದಲ್ಲಿ ಒಂದು ನಕ್ಷೆ ಸಿದ್ಧ ಮಾಡಿ ಕೊಡಬೇಕು. ಸರಿಯಾದ ಮಾಹಿತಿ ನೀಡಿದರೆ ಕೇ ಸ್ ಬಹಳ ಬೇಗನೆ ಮುಗಿಸಲು ನೆರವಾಗುತ್ತದೆ.
ನಿಮ್ಮ ವಾಹನಕ್ಕೆ ಅಪಘಾತವಾದಾಗ ನಿಮ್ಮ ಬಳಿ ವಾಹನಕ್ಕೆ ಸಂಬಂಧಿಸಿದ ಎಲ್ಲಾ ಸರಿಯಾದ ದಾಖಲೆಗಳು ಇರಬೇಕು. ನಿಮ್ಮ ಬಳಿ ಅಧಿಕೃತವಾದ ವಾಹನ ಚಾಲನಾ ಪರವಾನಗಿ ಇರಲೇಬೇಕು. ಒಂದು ವೇಳೆ ದಾಖಲೆಗಳು ಸರಿಯಾಗಿಲ್ಲ, ಅಥವಾ ನಿಮ್ಮ ಬಳಿ ಚಾಲನಾ ಪರವಾನಗಿ ಇಲ್ಲವೆಂದರೆ ಆಗ ಇನ್ಶುರೆನ್ಸ್ ಕಂಪನಿ ನಿಮ್ಮ ಅಭಿಯೋಗ ವನ್ನು ಸ್ವೀಕರಿಸುವುದಿಲ್ಲ.
ಬದಲಿಗೆ ಅ ಪ ಘಾ ತ ದಎಲ್ಲಾ ಹೊಣೆಗಾರಿಕೆಯೂ ನಿಮ್ಮದೇ ಆಗಿರುತ್ತದೆ. ಅದು ಮಾತ್ರವೇ ಅಲ್ಲದೇ ಅ ಪ ಘಾ ತ ಸಂಭವಿಸುವ ವೇಳೆಯಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ ಆಗಲೂ ಕೂಡ ವಿಮಾ ಕಂಪನಿಯು ಇದರ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವುದಿಲ್ಲ. ಬದಲಿಗೆ ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದಕ್ಕೆ ನೀವೇ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ಬೇಜವಾಬ್ದಾರಿಯಿಂದ ವಾಹನ ಚಲಾಯಿಸಿ ಸಮಸ್ಯೆ ಆಗಿದ್ದರೆ ಅದರಿಂದಲೂ ಕೂಡ ನೀವೇ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.