ಬಿಕ್ಕಿ ಬಿಕ್ಕಿ ಅಳುತ್ತಾ ನಾನು ಗಂಡನ ಬಳಿ ಹೋಗಬೇಕು, ಎಲ್ಲಿದ್ದಾನೆ ನನ್ನ ಗಂಡ ಎಂದ ಪುಟಾಣಿ ಹುಡುಗಿ: ವೀಡಿಯೋ ನೋಡಿ ನಕ್ಕು ಸುಸ್ತಾದ ನೆಟ್ಟಿಗರು
ಸೋಶಿಯಲ್ ಮೀಡಿಯಾ ಗಳಲ್ಲಿ ಪುಟಾಣಿ ಹುಡುಗಿಯೊಬ್ಬಳ ವಿಡಿಯೋ ಒಂದು ಬಹಳಷ್ಟು ವೈರಲ್ ಆಗುತ್ತಿದೆ. ಪುಟ್ಟ ಬಾಲಕಿಯ ಜೋರಾಗಿ ಮಾತನಾಡುತ್ತಾ, ಕಡೆಗೆ ಅಳುವ ದೃಶ್ಯ ಇರುವ ಈ ವಿಡಿಯೋ ಈಗ ಎಲ್ಲ ಕಡೆ ಸದ್ದು ಮಾಡುತ್ತಿದೆ. ಬಹಳಷ್ಟು ಜನ ಈ ವಿಡಿಯೋವನ್ನು ಈಗಾಗಲೇ ನೋಡಿದ್ದು ಈ ವಿಡಿಯೋದಲ್ಲಿ ಆಳುತ್ತಿರುವ ಪುಟ್ಟ ಬಾಲಕಿಯ ಆಡುವ ಮಾತುಗಳನ್ನು ಕೇಳಿದಾಗ ಅವಳ ಮುಗ್ಧತೆ ಒಂದೆ ಕಡೆಯಾಗದರೆ ಇನ್ನೊಂದು ಕಡೆ ಅಳುವ ಬಾಲಕಿಯ ವಿಡಿಯೋವನ್ನು ನೋಡಿದ ನೆಟ್ಟಿಗರಿಗೆ ಪುಟ್ಟ ಬಾಲಕಿಯ ಆ ಅಳುವಿನಲ್ಲೂ ಕೂಡಾ ಹೊಟ್ಟೆ ಹುಣ್ಣಾಗುವಂತಹ ನಗು ಬರುವುದು ಕೂಡಾ ವಾಸ್ತವ. ಆ ಪುಟ್ಟ ಹುಡುಗಿಯ ಮಾತುಗಳನ್ನು ಕೇಳಿದಾಗ ನಗುವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅಂತಹುದೊಂದು ಪ್ರಶ್ನೆಗಳನ್ನು ಆ ಪುಟ್ಟ ಬಾಲಕಿ ಮಾಡಿರುವಳು. ಇದು ಒಂದು ರೀತಿಯಲ್ಲಿ ಯಾರೂ ಕೂಡಾ ಊಹೆಯನ್ನು ಅಥವಾ ನಿರೀಕ್ಷೆಯನ್ನು ಸಹಾ ಮಾಡಿರುವುದಿಲ್ಲ ಎಂದೇ ಹೇಳಬಹುದು. ಹಾಗಿದ್ದರೆ ವಿಡಿಯೋದಲ್ಲಿ ಆ ಪುಟ್ಟ ಹುಡುಗಿ ಎಲ್ಲರೂ ನಗುವಂತಹ ಯಾವ ಮಾತುಗಳನ್ನು ಆಡಿದ್ದಾಳೆ ಎನ್ನುವ ಪ್ರಶ್ನೆ ನಿಮ್ಮದಾಗಿದ್ದರೆ ಅದಕ್ಕೆ ಉತ್ತರ ಕೊಡ್ತೀನಿ ಬನ್ನಿ.
ಮನೆಯೊಂದರೆ ಮುಂದೆ ಎಲ್ಲಿಗೋ ಹೋಗಲು ಸಿದ್ಧವಾಗಿರುವ ಪುಟ್ಟ ಬಾಲಕಿಯ ಬಳಿ ಬರುವ ಕೆಲವು ಮಹಿಳೆಯರು, ಏನು ಮಾಡ್ತಾ ಇದ್ದೀಯಾ ಏನು ಸಿಕ್ಕಾ ಇಲ್ಲ ನಿನಗೆ, ಎಲ್ಲಿಗೆ ಹೋಗಬೇಕು ಎನ್ನುತ್ತಾರೆ. ಆಗ ಆ ಪುಟ್ಟ ಹುಡುಗಿ ಪತಿಯ ಬಳಿಗೆ ಹೋಗಬೇಕು ಎನ್ನುತ್ತಾಳೆ. ಅದನ್ನು ಕೇಳಿ ಆಶ್ಚರ್ಯ ಪಡುವ ಮಹಿಳೆಯರು ಗಂಡನ ಮನೆಗೆ ಹೋಗ್ಬೇಕಾ? ಗಂಡ ಅಂದ್ರೆ ಯಾರು ಗೊತ್ತಾ? ಅಂತ ಕೇಳ್ತಾರೆ. ಆಗ ಆ ಪುಟ್ಟ ಹುಡುಗಿ ಗಂಡ ಅಂದ್ರೆ ಮಾವ ಅಂತಾಳೆ. ಆಗ ಮಹಿಳೆಯರು ಅಲ್ಲ ಮಾವ ಅತ್ತೆಯ ಗಂಡ, ಅಪ್ಪ ಅಮ್ಮನ ಗಂಡ ಹಾಗೂ ಅಜ್ಜ ಅಜ್ಜಿಯ ಗಂಡ ಅಂತ ಹೇಳಿದ ಕೂಡಲೇ ಪುಟ್ಟ ಬಾಲಕಿಯು ಮತ್ತೊಂದು ಪ್ರಶ್ನೆಯನ್ನು ಕೇಳಿಯೇ ಬಿಡ್ತಾಳೆ.
ಆ ಪುಟ್ಟ ಹುಡುಗಿ ಹಾಗಾದ್ರೆ ನನ್ನ ಪತಿ ಯಾರು? ಅಂತ ಕೇಳ್ತಾರೆ. ನಗು ಬಂದರೂ ಅದನ್ನು ತಡೆದುಕೊಂಡ ಮಹಿಳೆಯರು ಆಗ ನಿನ್ನ ಪತಿ ಎಲ್ಲೋ ಆಡ್ತಾ ಇರ್ತಾನೆ ಎಂದು ಹೇಳಿದಾಗ ಆ ಪುಟ್ಟ ಹುಡುಗಿ ಪತಿ ಎಲ್ಲಿದ್ದಾನೆ ಎಂದಾಗ, ಆ ಮಹಿಳೆಯರು ಆ ಪುಟ್ಟು ಬಾಲಕಿಗೆ ಪತಿ ಎಲ್ಲೋ ಆಟ ಆಡ್ತಾ ಇರ್ತಾನೆ ಎಂದಾಗ ಆ ಹುಡುಗಿ ಅಳೋದಿಕ್ಕೆ ಆರಂಭ ಮಾಡ್ತಾಳೆ. ಆಗ ಮಹಿಳೆಯರು ಮಕ್ಕಳಿಗೆ ಗಂಡ ಇರೋದಿಲ್ಲ, ಪುಟ್ಟ ಮಕ್ಕಳಿಗೆ ಅಣ್ಣ ತಮ್ಮಂದಿರು ಹಾಗೂ ಅಕ್ಕ ತಂಗಿಯರು ಇರುತ್ತಾರೆ ಎಂದು ಹೇಳುತ್ತಾರೆ. ಆದರೆ ಅವರ ಮಾತನ್ನು ಕೇಳಲು ಸಿದ್ಧವಿಲ್ಲದ ಆ ಬಾಲಕಿ ಮಾತ್ರ ಪತಿ ಪತಿ ಎಂದು ಜೋರಾಗಿ ಅಳುವುದಕ್ಕೆ ಆರಂಭ ಮಾಡುತ್ತಾಳೆ.
ಈ ವೀಡಿಯೋವನ್ನು ಶೇರ್ ಮಾಡಿಕೊಂಡ ಟ್ವಿಟರ್ ಬಳಕೆದಾರರು ವೀಡಿಯೋದ ಕ್ಯಾಪ್ಷನ್ ನಲ್ಲಿ ಈ ಮಕ್ಕಳಿಗೆ…. ಹೇಗೆ ತಿಳಿ ಹೇಳುವುದು? ಎಂದು ಬರೆದುಕೊಂಡಿದ್ದಾರೆ. ಟ್ವಟಿರ್ ನಲ್ಲಿ ಶೇರ್ ಆದ ಈ ವೀಡಿಯೋವನ್ನು ಈಗಾಗಲೇ ಹದಿನೇಳು ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ಅಲ್ಲದೇ ಅನೇಕರು ಇದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ನೂರಾರು ಜನ ಈ ವೀಡಿಯೋವನ್ನು ರೀಟ್ವೀಟ್ ಮಾಡಿದ್ದರೆ, ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈಗಾಗಲೇ ಹಲವು ಮಂದಿ ಈ ವೀಡಿಯೋವನ್ನು ಫೇಸ್ ಬುಕ್, ವಾಟ್ಸಾಪ್ ಹಾಗೂ ಇನ್ಸ್ಟಾಗ್ರಾಂ ಗಳಲ್ಲಿ ಕೂಡಾ ಶೇರ್ ಮಾಡಿಕೊಂಡು ವೀಡಿಯೋ ಭರ್ಜರಿ ವೈರಲ್ ಆಗಿದೆ.
ವಿಡಿಯೋ ನೋಡಿ
ये बच्चे भी ना… कौन समझाए इनको…@ipsvijrk @ipskabra @Chhattisgarh_36 pic.twitter.com/ssrMxR81rY
— Vijay kumar (@vkvkmarwat) February 11, 2021
ಈ ವೀಡಿಯೋ ನೋಡಿದ ನೆಟ್ಟಿಗರೊಬ್ಬರು ಈಗಿನ ಕಾಲದ ಮಕ್ಕಳಿಗೆ ದೊಡ್ಡವರಾಗಲು ಬಹಳ ಆತುರ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬರು ಈ ಪುಟ್ಟ ಹುಡುಗಿ ತಾನು ಅಳುತ್ತಲೇ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ನಗುವಂತೆ ಮಾಡಿ ಬಿಟ್ಟಳು ಬಹಳ ಕ್ಯೂಟ್ ವಿಡಿಯೋ ಎಂದು ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಹೀಗೆ ನೆಟ್ಟಿಗರು ವೈವಿದ್ಯಮಯವಾದ ಪ್ರತಿಕ್ರಿಯೆಗಳನ್ನು ನೀಡುತ್ತಾ ಪುಟಾಣಿ ಹುಡುಗಿನ ಮುಗ್ಧವಾದ ಮಾತುಗಳನ್ನು ಕೇಳಿ ನಕ್ಕು ಖುಷಿ ಪಡುತ್ತಿದ್ದಾರೆ. ವೀಡಿಯೋ ನೋಡಿದ ಪ್ರತಿಯೊಬ್ಬರೂ ಕೂಡಾ ಪುಟಾಣಿ ಹುಡುಗಿಯ ಆ ಮಾತುಗಳಿಗೆ ಮಾರು ಹೋಗುತ್ತಿದ್ದಾರೆ.