‘ಶತೃಗಳಿಗೆ ಮಣ್ಣು ಮುಕ್ಕಿಸಲು ಸಿದ್ಧವಾಗಿದೆ ‘ಹೆಲಿನಾ’ !! ಪೋಖ್ರಾನ್ ನಲ್ಲಿ ನಡೆಯಿತು ಕ್ಷಿಪಣಿಯ ಯಶಸ್ವಿ ಪ್ರಯೋಗ

ದೇಶದ ಭದ್ರತೆ ಹಾಗೂ ರಕ್ಷಣೆಯ ಜವಾಬ್ದಾರಿ ಸರ್ಕಾರದ ಗುರುತರ ಜವಾಬ್ದಾರಿ ಆಗಿರುತ್ತದೆ. ಅದರಲ್ಲೂ ನೆರೆಯ ರಾಷ್ಟ್ರಗಳಿಂದಲೇ ಅ ಪಾ ಯ ಎದುರಾಗಲಿದೆ ಎನ್ನುವಾಗಲಂತೂ ರಾಷ್ಟ್ರಗಳು ಸಾಕಷ್ಟು ಎಚ್ಚರಿಕೆಯಿಂದ ಇರಲೇಬೇಕಾದಂತಹ ಅನಿವಾರ್ಯತೆ ಇದೆ. ಅದರಲ್ಲೂ ಆಧುನಿಕ ತಂತ್ರಜ್ಞಾನ ಬೆಳೆದಂತೆ ದೇಶಗಳು ತಮ್ಮಲ್ಲಿರುವ ಶಸ್ತ್ರಾಸ್ತ್ರ ಗಳನ್ನು ಇನ್ನಷ್ಟು ಮತ್ತಷ್ಟು ಆಧುನಿಕೀಕರಣ ಮಾಡುತ್ತಿದ್ದು ಹೊಸ ಹೊಸ ಹಾಗೂ ಮಾ ರ ಕ ಹಾಗೂ ಭೀ ಕ ರ ಎನಿಸುವಂತಹ ಶಸ್ತ್ರಾಸ್ತ್ರ ಗಳ ತಯಾರಿಕೆಯಲ್ಲಿ ತೊಡಗಿಕೊಂಡಿವೆ. ಇದಕ್ಕೆ ನಮ್ಮ ದೇಶವೂ ಕೂಡಾ ಹೊರತಾಗಿಯೇನಿಲ್ಲ. ಶ ತೃ ಗಳಿಂದ ರಕ್ಷಣೆ ಪ್ರಮುಖ ಆದ್ಯತೆಯಾಗಿದ್ದು ಅದಕ್ಕೆ ಇರುವ ಏಕೈಕ ಮಾರ್ಗವೆಂದರೆ ಅದು ಆಧುನಿಕ ಹಾಗೂ ಬಲಿಷ್ಠವಾದ ಶ ಸ್ತ್ರಾ ಸ್ತ್ರ ಹಾಗೂ ಸೈನ್ಯವನ್ನು ಹೊಂದಿರುವುದೇ ಅಗಿದೆ.

ಈ ನಿಟ್ಟಿನಲ್ಲಿ ಭಾರತದಲ್ಲಿ ಕೂಡಾ ಅನೇಕ ಹೊಸ ಹೊಸ ಶ ಸ್ತ್ರಾ ಸ್ತ್ರಗಳ ನಿರ್ಮಾಣ ನಡೆಯುತ್ತಿದೆ. ವೈಜ್ಞಾನಿಕವಾಗಿ ದೇಶೀಯ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಹೊಸ ಕ್ಷಿಪಣಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಈಗ ಭಾರತ ಕೂಡಾ ಶಸ್ತ್ರಾಸ್ತ್ರ ಗಳ ನಿರ್ಮಾಣದಲ್ಲಿ ಸ್ವಾವಲಂಬಿ ಆಗಿದೆ ಎಂದು ಕೂಡಾ ನಾವು ಹೇಳಬಹುದಾಗಿದ್ದು, ವಿಶ್ವದ ಪ್ರಬಲ ಸೈನ್ಯ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ಭಾರತ ಕೂಡಾ ಸೇರಿದೆ ಎನ್ನುವುದನ್ನು ಯಾರೂ ಕೂಡಾ ನಿರಾಕರಣೆ ಮಾಡುವಂತಿಲ್ಲ. ಇಂಡಿಯನ್ ವಾಯು ಪಡೆಯು ಶುಕ್ರವಾರದಂದು ಪೋಖ್ರಾನ್ ಫೈರಿಂಗ್ ರೇಂಜ್ ನಲ್ಲಿ ಶ ತೃ ಟ್ಯಾಂಕರ್ ಗಳನ್ನು ಹೊ ಡೆ ದುರುಳಿಸಲು ಎಲ್ಲಕ್ಕಿಂತ ಪರಿಣಾಮಕಾರಿ ಎಂದು ನಂಬಲಾಗಿರುವ ಕ್ಷಿಪಣಿ ಹೆಲಿನಾದ ನವೀಕರಿಸಲಾದ ಆವೃತ್ತಿಯ (ಅಡ್ವಾನ್ಸ್ಡ್ ಎಡಿಷನ್) ಯಶಸ್ವಿ ಪ್ರಯೋಗವನ್ನು ಮಾಡಿದೆ.

ಹೆಲಿಕಾಪ್ಟರ್ ಧೃವ ದಿಂದ ಈ ಕ್ಷಿಪಣಿಯನ್ನು ಉಢಾವಣೆ ಮಾಡಲಾಯಿತು. ಉಢಾವಣೆ ಮಾಡಲ್ಪಟ್ಟ ಕ್ಷಿಪಣಿಯು ಗುರಿಯನ್ನು ಬಹಳ ನಿಖರವಾಗಿ ಹೊ ಡೆ ಯುವ ಮೂಲಕ ನಾ ಶ ಪಡಿಸಿದೆ‌. ಮೂರು ದಿನಗಳಿಂದ ಕೂಡಾ ಭಾರತೀಯ ವಾಯುಸೇನೆ ಹಾಗೂ ಡಿ ಆರ್ ಡಿ ಓ ನ ತಂಡವು ಇಲ್ಲಿ ಬೀಡು ಬಿಡುವ ಮೂಲಕ ಹೆಲಿನಾದ ಪರೀಕ್ಷೆಯನ್ನು ನಡೆಸಲು ಸಿದ್ಧತೆಗಳನ್ನು ನಡೆಸಿದ್ದವು ಎನ್ನಲಾಗಿದೆ.‌
ಸೈನ್ಯದ ಮೂಲಗಳ ಪ್ರಕಾರ ಮೂರನೇ ತಲೆಮಾರಿನ ದಾಗೋ ಔರ್ ಭೂಲ್ ಜಾವೋ (ಬಚ್ಚಿಡು, ಮರೆತು ಹೋಗು) ಎನ್ನುವ ತಂತ್ರಜ್ಞಾನದ ಆಧಾರದಲ್ಲಿ ಕೆಲಸ ಮಾಡುವ ತಂತ್ರಜ್ಞಾನವನ್ನು ಈ ಬಾರಿ ದೇಶೀಯವಾಗಿ
ಸಿದ್ಧಪಡಿಸಲಾಗಿರುವ ಈ ಕ್ಷಿಪಣಿಗೆ ಧೃವಾಸ್ತ್ರ ಎಂದು ಕೂಡಾ ಹೆಸರಿಡಲಾಗಿದೆ.

ಈ ಕ್ಷಿಪಣಿಯನ್ನು ಹೆಲಿಕಾಪ್ಟರ್ ನ ಮೂಲಕ ಗುರಿಯ ಕಡೆಗೆ ಉಡಾವಣೆ ಮಾಡುವ ಕಾರಣದಿಂದಾಗಿ ಇದಕ್ಕೆ ಹೆಲಿನಾ ಎನ್ನುವ ಹೆಸರನ್ನು ನೀಡಲಾಗಿದೆ ಎನ್ನಲಾಗಿದೆ. ಡಿ ಆರ್ ಡಿ ಓ ದ ವಿಜ್ಞಾನಿಗಳು ಹೇಳುವಂತೆ ಈ ಹೊಸ ಕ್ಷಿಪಣಿಯು ಎಲ್ಲಾ ರೀತಿಯ ಹವಾಮಾನ ಹಾಗೂ ಹಗಲು ಮತ್ತು ರಾತ್ರಿಗಳಲ್ಲಿ ಕೂಡಾ ತನ್ನ ಗುರಿಯನ್ನು ನಿಖರವಾಗಿ ಆ ಕ್ರ ಮಣ ಮಾಡಿ ನಾ ಶ ಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ.‌ ಈ ಕ್ಷಿಪಣಿಯ ರೇಂಜ್ ನಾಲ್ಕರಿಂದ ಎಂಟು ಕಿಮೀ ಗಳ ವ್ಯಾಪ್ತಿಯಾಗಿದ್ದು, ಧೃವಾಸ್ತ್ರ ಹೆಸರಿನ ಹೆಲಿನಾ ಶ ಸ್ತ್ರಾ ಸ್ತ್ರ ವ್ಯವಸ್ಥೆಯ ರೂಪಾಂತರದ ಒಂದು ಅಸ್ತ್ರವನ್ನುವ ಭಾರತೀಯ ವಾಯು ಪಡೆಗೆ ಸೇರಿಸಲಾಗುವುದು ಎನ್ನಲಾಗಿದೆ. ಇನ್ನು ಹೆಲಿನಾ ಕ್ಷಿಪಣಿಯ ವ್ಯವಸ್ಥೆಯನ್ನು ಭಾರತೀಯ ಸೇನೆಗೆ ಸೇರಿಸಲಾಗುವುದು ಎನ್ನಲಾಗಿದೆ.

ವಿಡಿಯೋ ನೋಡಿ

ಪರೀಕ್ಷೆಯ ನಂತರ ಕ್ಷಿಪಣಿಯನ್ನು ಭಾರತೀಯ ವಾಯುಪಡೆಗೆ ಸೇರಿಸಲಾಗುವುದು ಎನ್ನಲಾಗಿದೆ. ಇದರ ಉಪಯೋಗವನ್ನು ಧೃವ ಹೆಲಿಕಾಪ್ಟರ್ ನ ಜೊತೆಯಲ್ಲಿ ಮಾಡಲಾಗುವುದು. ಅಲ್ಲದೇ ಇದನ್ನು ಲಘು ಯು ದ್ಧ ಹೆಲಿಕಾಪ್ಟರ್ ಗಳ ಮೂಲಕ ಕೂಡಾ ಉಡಾವಣೆಯನ್ನು ಮಾಡಲು ಸಾಧ್ಯವಿದೆ ಎನ್ನಲಾಗಿದೆ. ಈ ಕ್ಷಿಪಣಿಯು ಯು ದ್ಧ ಭೂಮಿಯಲ್ಲಿ ಮುನ್ನಡೆಯುತ್ತಿರುವಂತಹ ಶ ತೃ ಟ್ಯಾಂಕರ್ ಗಳನ್ನು ನಾ ಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ವಿಶ್ವದ ಯಾವುದೇ ಟ್ಯಾಂಕ್ ಅನ್ನು ಕೂಡಾ ನಾ ಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ.