ಲಾಕ್ ಡೌನ್ ನಲ್ಲಿ ಸರಕಾರ ಕಳುಹಿಸಿದ ₹500 ಪಡೆಯಲು 50 ಕಿಮೀ ಚಲಿಸಿದ 72ರ ವೃದ್ಧೆ! ಬ್ಯಾಂಕಿನಲ್ಲಿ ಹೋದಾಗ ಗೊತ್ತಾಯಿತು…
ಕೊರೊನಾ ಕಾರಣದಿಂದ ದೇಶದಲ್ಲಿ ಜನರ ಒಳ್ಳೆಯ ಆರೋಗ್ಯಕ್ಕಾಗಿ ಸರಕಾರ ಸಮೇತ ಇನ್ನಿತರ ಘಟಕಗಳು ಒಂದೇ ಸಮನೆ ಶ್ರಮಿಸುತ್ತಿವೆ. ದೇಶದ ಜನರ ಹಿತವನ್ನು ಕಾಪಾಡುವದಕ್ಕಾಗಿ ಲಾಕ್ ಡೌನ್ ಆದೇಶ ಹೊರಡಿಸಲಾಗಿದೆ. ಆದರೆ ಇದರಲ್ಲಿ ಹಿರಿಯರು, ಬಡವರು ಮತ್ತು ಅಸಹಾಯಕರು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಸಹಾಯ ಪಡೆದುಕೊಳ್ಳುವದೊಂದೇ ಇವರ ಮಾರ್ಗವಾಗಿ ಉಳಿದಿದೆ ಅಂತ ಅನಿಸುತ್ತದೆ. ಇಂಥದ್ದೇ ಸಹಾಯದ ಆಸೆ ಇಟ್ಟು ಒಬ್ಬಳು ವೃದ್ಧ ಮಹಿಳೆ 50 ಕೀ. ಮಿ. ಕಾಲ್ನಡಿಗೆಯಿಂದಲೇ ಬ್ಯಾಂಕ್ ತಲುಪಿದ್ದಾಳೆ. ಅಲ್ಲಿ ಹೋದ ನಂತರ ಆಕೆಗೆ ಗೊತ್ತಾಗಿದ್ದು ಅವಳ ಖಾತೆಯಲ್ಲಿ ಹಣವೇ ತಲುಪಿಲ್ಲ ಅಂತ!
ಘಟನೆ U P ಯ ಆಗ್ರಾದ ಸಮೀಪ ನಡೆದಿದೆ. 72 ವರ್ಷದ ಈ ವೃದ್ಧೆ ಹಿಮ್ಮತ್ ಪುರ್ ನಿವಾಸಿಯಾಗಿದ್ದು ದಿನಗೂಲಿ ಮಾಡಿ ಉದರನಿರ್ವಾಹ ಮಾಡುತ್ತಾಳೆ. ಗಂಡ ಹರವೀರ್ ಜೊತೆಗೆ ಆಗ್ರಾದ ಸಮೀಪ ಇವರ ಊರು ಇದೆ. ಲಾಕ್ ಡೌನ್ ನಿಂದ ಕೆಲಸಗಳೆಲ್ಲವೂ ನಿಂತು ಹೋಗಿವೆ. ಹೀಗಾಗಿ ಹತ್ತಿರವಿದ್ದ ಹಣವೆಲ್ಲ ಮುಗಿದು ಹೋಗಿದೆ.

ಜನ್ ಧನ್ ಖಾತೆಯಲ್ಲಿ ಸರಕಾರ 500 ₹ ಗಳನ್ನು ಜಮೆ ಮಾಡಿದ ಯಾರೋ ಹೇಳಿದ ಸುದ್ದಿ ಕೇಳಿ ಈ ಹಣಕ್ಕಾಗಿ ವೃದ್ಧೆ ರಾತ್ರಿಯೇ ತನ್ನ ಪ್ರವಾಸ ನಡೆದುಕೊಂಡು ಶುರು ಮಾಡಿದ್ದಾಳೆ.
50 ಕೀ. ಮೀ. ನಡೆದುಕೊಂಡು ಪಚೋಖೇರಾ ಹೆಸರಿನ ಊರಲ್ಲಿ ಬಂದು SBI ಬ್ಯಾಂಕಲ್ಲಿ ತನ್ನ ಪಾಸ್ ಬುಕ್ ಕೊಟ್ಟು ಬ್ಯಾಂಕ್ ನೌಕರನಿಗೆ ಚೆಕ್ ಮಾಡಲು ಹೇಳಿದಾಗ ಅದರಲ್ಲಿ ಯಾವುದೇ ರೀತಿಯ ಹಣವೇ ಜಮೆಯಾದದ್ದು ಕಂಡು ಬರದ ಕಾರಣ ಹತಾಶಳಾಗಿ ನಿರಾಸೆಯಿಂದ ಮತ್ತೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ತಿರುಗಿದ್ದಾಳೆ.