ಅನುಷ್ಕಾ ಶೆಟ್ಟಿ ಅಲ್ಲ, ‘ಈ’ ಸುಂದರ ನಟಿಯೊಂದಿಗೆ ಮದುವೆಯಾಗಲಿದ್ದರು ಪ್ರಭಾಸ್! ನೋಡಿ Photos

ಸದ್ಯ ಚಿತ್ರ ರಸಿಕರಿಗೆ ಕಾಡುತ್ತಲಿರುವ ಮುಖ್ಯ ಪ್ರಶ್ನೆ ಎಂದರೆ ಬಾಹುಬಲಿ ನಟ ಪ್ರಭಾಸ್ ಅವರು ಯಾರನ್ನು ವರಿಸುತ್ತಾರೆ. ಹಾಗೆ ನೋಡಲಾಗಿ ಅವರ ಮದುವೆಯ ಬಗ್ಗೆ ಮತ್ತು ಮದುವೆಯಾಗಲಿರುವ ನಟಿಯ ಬಗ್ಗೆ ಹುಟ್ಟುವ ಗಾಸಿಪ್ ಗಳಿಗೇನು ಕಮ್ಮಿ ಇಲ್ಲ. ಅದಕ್ಕೆ ಕಾರಣವೂ ಹಾಗೆ ಇದೆ. ಏಕೆಂದರೆ ಸೌತ್ ನ ಈ ಸೂಪರ್ ಸ್ಟಾರ್ ಗೆ ಇಡೀ ಜಗತ್ತೇ ಗುರುತಿಸುತ್ತದೆ.

ಹೀಗಾಗಿ ಕೊಟ್ಯಾವಧಿ ಅಭಿಮಾನಿಗಳನ್ನು ಹೊಂದಿರುವ ಪ್ರಭಾಸ್ ಅವರ ಈ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಯಾರ ಜೊತೆಗೆ ಮದುವೆ ಯಾಗುತ್ತಾರೆ ಎಂಬುದು ತಿಳಿದುಕೊಳ್ಳುವ ಹಂಬಲ ಇವರಲ್ಲಿ ಇದ್ದೇ ಇದೆ. ಪ್ರಭಾಸ್ ಅವರು ಚಿತ್ರರಂಗದ ಕುಟುಂಬದಿಂದಲೇ ಬಂದಿದ್ದಾರೆ. ಅವರ ಮನೆಯಲ್ಲಿಯ ಅನೇಕ ಸದಸ್ಯರು ಫಿಲಂ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಾರೆ. ಮೊದಲು ಅಷ್ಟೊಂದು ಯಶಸ್ಸು ಕಾಣದ ಪ್ರಭಾಸ್ ಅವರಿಗೆ ಮಾತ್ರ ನಂತರ ಯಶಸ್ಸು ಬೆನ್ನೆ ಬಿಡುತ್ತಿಲ್ಲ.

2015 ರಿಂದ ಬಾಹುಬಲಿಯ ಚಿತ್ರದಿಂದ ಅವರ ಅದೃಷ್ಟ ಬದಲಾಗಿ ಬಿಟ್ಟಿತು. ಈ ಚಿತ್ರದಲ್ಲಿ ನಟಿಸಿದ ಸಹನಾಯಕಿ ಅನುಷ್ಕಾ ಅವರ ಜೊತೆಗೂ ಅವರ ಹೆಸರು ಹೆಚ್ಚಾಗಿ ಕೇಳಿ ಬಂತು. ಇಬ್ಬರೂ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಇಬ್ಬರು ಈ ವಿಷಯವಾಗಿ ಎಂದೂ ಸ್ಪಷ್ಟೀಕರಣವನ್ನು ಕೊಟ್ಟಿಲ್ಲ. ಇಷ್ಟೇ ಅಲ್ಲ, ನಿಮಗೆ ಕೇಳಿ ಆಶ್ಚರ್ಯ ವೆನಿಸಬಹುದು, ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಅವರಿಗೆ ಸುಮಾರು 5000 ಹುಡುಗಿಯರು ಮದುವೆಗಾಗಿ ಪ್ರಪೋಸ್ ಮಾಡಿದ್ದಾರಂತೆ. ಈಗ ಅವರ ಜೊತೆಗೆ ಮದುವೆಯಾಗಲಿರುವ ನಟಿ ಅನುಷ್ಕಾ ಅಲ್ಲ, ನಿಹಾರಿಕಾ ಕೊಂಡಿನೆಲಾ. ಇವರು ಇಲ್ಲಿಯವರೆಗೆ ಸುಮಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಕಳೆದ ಅನೇಕ ದಿನಗಳಿಂದ ಮೀಡಿಯಾದಲ್ಲಿ ಇಬ್ಬರ ಅಫೇರ್ ಗಳ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಇವರು ಇನ್ನೂ ಈ ಬಗ್ಗೆ ಎಲ್ಲಿಯೂ ಹೇಳಿಲ್ಲ. ಪ್ರಭಾಸ್ ಅವರಂತೆ ನಿಹಾರಿಕಾ ಅವರ ಕುಟುಂಬವು ಸಂಪೂರ್ಣವಾಗಿ ಚಿತ್ರರಂಗದಲ್ಲೇ ಕೆಲಸ ಮಾಡುತ್ತದೆ. ನಿಹಾರಿಕಾ ಇವರು ಮೆಗಾಸ್ಟಾರ್ ಚಿರಂಜೀವಿ ಮತ್ತು ಕಲ್ಯಾಣ್ ಅವರ ಸೋದರ ಸೊಸೆಯಾಗಿದ್ದಾರೆ. ಅಷ್ಟೇ ಅಲ್ಲ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಾಮ್ ಚರಣ್ ಅವರ ತಂಗಿ ಇದ್ದಾಳೆ. ಹೀಗೆ ದೊಡ್ಡ ಕುಟುಂಬದಲ್ಲಿಯೇ ಜನಿಸಿದ್ದಾರೆ. ಹೀಗಾಗಿ ಆದಷ್ಟು ಬೇಗ ಇವರಿಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಹರಡಿದ್ದವು. ಇವರಿಬ್ಬರ ಮದುವೆಯ ತಯಾರಿ 2019 ರಲ್ಲಿಯೇ ನಡೆದಿತ್ತು. ಆದರೆ ಯಾವುದೋ ಕಾರಣದಿಂದಾಗಿ ಇಬ್ಬರ ಮದುವೆ ಮಧ್ಯದಲ್ಲಿಯೇ ನಿಂತು ಬಿಟ್ಟಿತು. ಕೊನೆಗೆ 2020 ರಲ್ಲಿ ನಿಹಾರಿಕಾ ಅವರು ಬೇರೆಯವರ ಜೊತೆಗೆ ಮದುವೆಯಾದರು. ಆದರೆ ಪ್ರಭಾಸ್ ಅವರು ಮಾತ್ರ ಇನ್ನು ಮದುವೆಯಾಗದೆ ಹಾಗೆಯೇ ಇದ್ದಾರೆ.