ಪಂಜಾಬ್ ತಂಡ 5.25 ಕೋಟಿಯ ದೊಡ್ಡ ಮೊತ್ತದ ಹರಾಜಿಗೆ ಖರೀದಿಸಿದ ಈ ಶಾರುಕ್ ಖಾನ್ ಯಾರು ಗೊತ್ತಾ?
ಐಪಿಎಲ್ ಸಮರಕ್ಕೆ ಮತ್ತೆ ತಯಾರಿ ಪ್ರಾರಂಭವಾಗಿದೆ. ಇದರ ಅಂಗವಾಗಿ ಚೆನ್ನೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು. ಈ ಸಲದ ಹರಾಜಿನ ಇತಿಹಾಸದಲ್ಲಿ ಕ್ರಿಸ್ ಮೋರಿಸ್ ಎಲ್ಲರಿಗಿಂತಲೂ ದುಬಾರಿ ಆಟಗಾರರಾದರು. ಭಾರತದ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಮೋರಿಸ್ ಮುರಿದರು. ದೆಹಲಿ ತಂಡ 16 ಕೋಟಿ ರೂಪಾಯಿಗಳಿಗೆ ಯುವರಾಜ್ ರನ್ನು ಖರೀದಿಸಿತ್ತು, ಈಗ ಮೋರಿಸ್ ಅವರನ್ನು ರಾಜಸ್ಥಾನ ತಂಡವು IPL 2021 ರ ಹರಾಜಿನಲ್ಲಿ 16.25 ಕೋಟಿ ರೂಪಾಯಿಗಳ ಮೊತ್ತಕ್ಕೆ ಖರೀದಿಸಿ ತಮ್ಮ ತಂಡದಲ್ಲಿ ಸೇರಿಸಿಕೊಂಡರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಹೊಳಪನ್ನು ತೋರಿಸಿದ ಆಟಗಾರರ ಜೊತೆಗೆ ದೇಶೀಯ ಆಟದಲ್ಲಿ ಮಿಂಚಿದ ಆಟಗಾರರ ಮೇಲೂ ಫ್ರೆಂಚೈಸಿಗಳ ಕಣ್ಣಿದೆ. ಹೀಗಾಗಿಯೇ ಈ ಸಲ ತಮಿಳುನಾಡಿನ 25 ವರ್ಷದ ಸ್ಫೋಟಕ ಬ್ಯಾಟ್ಸ್ ಮನ್ ಶಾರುಕ್ ಖಾನ್ ಬಾಜಿ ಹೊಡೆದಿದ್ದಾರೆ. ಈತನಿಗೆ ಪಂಜಾಬ್ ತಂಡವು ತನ್ನ ತಂಡದಲ್ಲಿ ಸೇರಿಸಿ ಕೊಳ್ಳುವದರಲ್ಲಿ ಯಶಸ್ವಿಯಾಯಿತು.
ಶಾರುಕ್ ಖಾನ್ ಸದ್ಯ ತಮಿಳುನಾಡಿನ ತಂಡದಲ್ಲಿ ತುಂಬಾ ಮಿಂಚುತ್ತಿದ್ದಾರೆ. ಇವರು ಸಯ್ಯದ ಅಲಿ ಮುಷ್ತಾಕ್ ಟ್ರೋಫಿಯ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆದ್ದರಿಂದಲೇ ಪಂಜಾಬ್ ತಂಡದ ಮುಖ್ಯಸ್ಥೆ ಪ್ರೀತಿ ಜಿಂಟಾ 20 ಲಕ್ಷ ರೂಪಾಯಿಗಳ ಬೇಸ್ ಪ್ರೈಜ್ ಇದ್ದ ಶಾರುಕ್ ಖಾನ್ ಅವರಿಗೆ 5.25 ಕೋಟಿ ರೂಪಾಯಿಗಳನ್ನು ಎಣಿಸಿದ್ದಾರೆ. ಇದಕ್ಕೆ ಕಾರಣ ಸಯ್ಯದ ಮುಷ್ತಾಕ್ ಅಲಿ ಟ್ರೋಫಿ 20- ಟ್ವೆಂಟಿ ಸ್ಪರ್ಧೆಯಲ್ಲಿಯ ಭರ್ಜರಿ ಆಟ.
ಈ ಸ್ಪರ್ಧೆಯಲ್ಲಿ ಶಾರುಕ್ ಖಾನ್ ಅವರು 220 ಸ್ಟೈಕ್ ರೇಟ್ ನಿಂದ ರನ್ ಗಳ ಸುರಿಮಳೆಯೇ ಹರಿಸಿದ್ದಾರೆ. ಇವರು ಪ್ರಥಮ ದರ್ಜೆಯ 5 ಪಂದ್ಯಗಳಲ್ಲಿ 231 ರನ್ ಗಳನ್ನೂ ಬಾರಿಸಿದ್ದಾರೆ. ಟಿ-20 ಯಲ್ಲಿ ಇವರು ಒಟ್ಟು 31 ಪಂದ್ಯಗಳಿಂದ 293 ರನ್ ಗಳನ್ನು ದಾಖಲಿಸಿದ್ದಾರೆ. ಬಾಲಿವುಡ್ ನಟ ಶಾರುಕ್ ಖಾನ್ ಅವರ ಕಾರಣದಿಂದಲೇ ಇವರ ಹೆಸರು ಶಾರುಕ್ ಎಂದು ಇಡಲಾಗಿದ್ದರೂ ಇವರು ಮಾತ್ರ ರಜನೀಕಾಂತ್ ಅವರ ದೊಡ್ಡ ಫ್ಯಾನ್ ಆಗಿದ್ದಾರೆ. ತಮಿಳುನಾಡು ತಂಡದ ನಾಯಕರಾದ ದಿನೇಶ್ ಕಾರ್ತಿಕ್ ಅವರು ಸಹ ಈತನನ್ನು ತುಂಬಾ ಹೊಗಳಿದ್ದಾರೆ. ಸ್ಥಾನಿಕ ಕ್ರಿಕೆಟ್ ನಲ್ಲಿ ಶಾರುಕ್ ಅವರು ತುಂಬಾ ಮಿಂಚಿದ್ದಾರೆ. ಹೀಗಾಗಿ ಇಷ್ಟೊಂದು ಮೊತ್ತಕ್ಕೆ ಹರಾಜಾಗುವ ನಿರೀಕ್ಷೆ ಮೊದಲೇ ಹುಟ್ಟಿತ್ತು ಎನ್ನಲಾಗಿದೆ.