Viral Video: ಮದುವೆಯ ಉಡುಗೊರೆಯಾಗಿ ಸಿಕ್ತು ಪೆಟ್ರೋಲ್, ಈರಳ್ಳಿ ಹಾಗೂ ಗ್ಯಾಸ್ ಸಿಲಿಂಡರ್: ಗಿಫ್ಟ್ ನೋಡಿ ಖುಷಿಯಾದ ವಧು-ವರ!

ಪ್ರಸ್ತುತ ದೇಶದಲ್ಲಿ ಪೆಟ್ರೋಲ್ ಬೆಲೆ ದುಬಾರಿಯಾಗಿರುವುದೇ ದೊಡ್ಡ ಸುದ್ದಿಯಾಗಿದ್ದು, ದೇಶ ವ್ಯಾಪಿಯಾಗಿ ಇದನ್ನು ವಿ ರೋ ಧ ಮಾಡಲಾಗುತ್ತಿದೆ. ಪ್ರತಿ ಪಕ್ಷಗಳು ಇದೇ ವಿಷಯವನ್ನು ಇಟ್ಟುಕೊಂಡು ಆಡಳಿತ ಪಕ್ಷದ ಮೇಲೆ ವಾಗ್ದಾಳಿಯನ್ನು ಕೂಡಾ ನಡೆಸಿವೆ‌. ಹೀಗೆ ಪರಿಸ್ಥಿತಿ ಮುಂದುವರೆದರೆ ಸಾಮಾನ್ಯ ಜನರು ಜೀವನ ನಡೆಸುವುದಾದರೂ ಹೇಗೆ? ಎನ್ನುವ ಪ್ರಶ್ನೆ ಎಲ್ಲೆಡೆ ಕೇಳಲಾಗುತ್ತಿದೆ. ದಿನದಿಂದ ದಿನಕ್ಕೆ ಪೆಟ್ರೋಲ್ ನ ದರದಲ್ಲಿ ಸಂಭವಿಸುತ್ತಿರುವ ಏರಿಕೆಯು ಮದ್ಯಮ ವರ್ಗದ ಜನರಿಗೆ ಆ ತಂ ಕವನ್ನು ಉಂಟು ಮಾಡಿದೆ. ಅಲ್ಲದೇ ಪೆಟ್ರೋಲ್ ದರ ಏರಿಕೆಯನ್ನು ನೋಡಿ ಕಂಗಲಾಗಿದ್ದಾರೆ ಜನರು. ಸಾಮಾನ್ಯ ಜನರು ಇನ್ನು ಕೆಲವು ದಿನ ಕಳೆದರೆ ಪೆಟ್ರೋಲ್ ದರ ತಮ್ಮ ಕೈಗೆಟುಕುವುದು ಕೂಡಾ ಅಸಾಧ್ಯವೇನೋ ಎಂದು ಆಲೋಚನೆ ಮಾಡುವಂತಾಗಿದ್ದು ಈ ಪರಿಸ್ಥಿತಿ ಆದಷ್ಟು ಬೇಗ ಸುಧಾರಣೆಯಾಗಲೆಂದು ಆಶಿಸುತ್ತಿದ್ದಾರೆ.

ಇಂಟರ್ನೆಟ್ ನಲ್ಲಿ ಅನೇಕರು ಪೆಟ್ರೋಲ್ ಈಗ ಬಹಳ ಅಮೂಲ್ಯವಾದ ವಸ್ತುವಾಗಿದೆ ಎಂದು ಬರೆದುಕೊಂಡು ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ನಿರಂತರವಾಗಿ ಪೆಟ್ರೋಲ್ ಅದರ ಏರುತ್ತಿರುವ ಬಗ್ಗೆ ಸಾಮಾನ್ಯ ಜನರು ಚಿಂತಿತರಾಗಿದ್ದಾರೆ. ಹೀಗೆ ಪೆಟ್ರೋಲ್ ಅಮೂಲ್ಯವಾದುದು ಎಂದು ಎಲ್ಲರೂ ಹೇಳುವಾಗಲೇ ಯಾರಿಗಾದರೂ ಪೆಟ್ರೋಲ್ ಉಡುಗೊರೆಯಾಗಿ ದೊರೆತರೆ ನಿಜವಾಗಿಯೂ ಗಿಫ್ಟ್ ದೊರೆತ ಒಬ್ಬ ಸಾಮಾನ್ಯ ವ್ಯಕ್ತಿಯು ಅದನ್ನು ಒಂದು ಅಮೂಲ್ಯವಾದ ಗಿಫ್ಟ್ ಎಂದೇ ಭಾವಿಸಬಹುದು ಎಂದರೂ ತಪ್ಪಾಗಲಾರದು. ಇಂತಹುದೇ ಪರಿಸ್ಥಿತಿಯಲ್ಲಿ ತಮಿಳು ನಾಡಿನಲ್ಲಿ ಮದುವೆಯೊಂದರಲ್ಲಿ ವಧು ವರನಿಗೆ ಪೆಟ್ರೋಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ತಮಿಳುನಾಡಿನ ಮದುವೆಯಲ್ಲಿ ವಧು ವರನಿಗೆ ಮದುವೆಗೆ ಬಂದವರು ಪೆಟ್ರೋಲ್ ಅನ್ನು ಉಡುಗೊರೆಯಾಗಿ ನೀಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಇದೀಗ ವೈರಲ್ ಆಗುತ್ತಿದೆ. ಟ್ವಿಟರ್ ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ಇಂತಹುದೊಂದು ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಅದರಲ್ಲಿ ವಧು ವರನಿಗೆ ಮದುವೆಗೆ ಆಗಮಿಸಿರುವ ಅತಿಥಿಗಳು ಪೆಟ್ರೋಲ್ ನ ಜೊತೆಗೆ ಸಿಲಿಂಡರ್ ಮತ್ತು ಈರುಳ್ಳಿಯನ್ನು ಕೂಡಾ ಉಡುಗೊರೆಯಾಗಿ ನೀಡುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ವೀಡಿಯೋದಲ್ಲಿ ನೋಡಿದಾಗ ವಧು ಹಾಗೂ ವರನು ಸ್ಟೇಜ್ ಮೇಲೆ ನಿಂತಿರುವಾಗ ಕೆಲವು ವ್ಯಕ್ತಿಗಳ ಗುಂಪೊಂದು ಅವರಿಗೆ ವಿವಾಹದ ಶುಭಾಶಯವನ್ನು ಕೋರಲು ವೇದಿಕೆಗೆ ಬರುತ್ತದೆ.

ಹೀಗೆ ವೇದಿಕೆಗೆ ಬಂದ ಗುಂಪಿನಲ್ಲಿದ್ದವರು ವಧು ವರನ ಬಳಿಗೆ ಬಂದು ಅವರಿಗೆ ಶುಭ ಹಾರೈಸುತ್ತಾ ಅವರಿಗೆ ಪೆಟ್ರೋಲ್, ಗ್ಯಾಸ್ ಸಿಲಿಂಡರ್ ಮತ್ತು ಈರುಳ್ಳಿಯನ್ನು ನೀಡುತ್ತಾರೆ. ನವ ದಂಪತಿ ಸಹ ಅವರು ನೀಡಿದ ಅಪರೂಪದ ಈ ಉಡುಗೊರೆಯನ್ನು ಕಂಡು ತುಂಬಾ ಸಂತೋಷಪಟ್ಟಿರುವುದು ಕೂಡಾ ನಾವು ನೋಡಬಹುದು. ವೀಡಿಯೋ ವೈರಲ್ ಆಗುತ್ತಿದ್ದು ಈಗಾಗಲೇ ಸಾವಿರಾರು ಜನರು ಈ ವೀಡಿಯೋವನ್ನು ನೋಡಿದ್ದಾರೆ. ಅಲ್ಲದೇ ಬೆಲೆ ಏರಿಕೆಯ ಕಾಲದಲ್ಲಿ ಇವು ನಿಜವಾಗಿಯೂ ಸಾಮಾನ್ಯ ಜನರ ಪಾಲಿಗೆ ಬಹಳ ಅಮೂಲ್ಯವಾದ ವಸ್ತುಗಳು ಎಂಬುದಕ್ಕೆ ಅನುಮಾನ ಇಲ್ಲ ಎಂದಿದ್ದಾರೆ.

ವಿಡಿಯೋ ನೋಡಿ

ಇದೇ ವೇಳೆ ಅನೇಕರು ಕಾಮೆಂಟ್ ಗಳಲ್ಲಿ ರಾಜಕೀಯವನ್ನು ಕೂಡಾ ಮಾತನಾಡಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು ತಮಿಳು ನಾಡು ಮತ್ತು ಕೇರಳಗಳಲ್ಲಿ ಹೇಗೂ ಬಿಜೆಪಿ ಇಲ್ಲ, ಅದಕ್ಕೆ ಅವರು ಇಂತಹ ಅ ಸಮಾಧಾನ ಹೊರಹಾಕುವುದು ಸಾಮಾನ್ಯ ಎಂದಿದ್ದಾರೆ. ಮತ್ತೊಬ್ಬರು ಇವು ನಿಜಕ್ಕೂ ಕೂಡಾ ಅತ್ಯಮೂಲ್ಯವಾದ ಉಡುಗೊರೆಗಳು ಪ್ರಸ್ತುತ ಸಂದರ್ಭದಲ್ಲಿ ಎಂದು ಕೂಡಾ ಹೇಳಿದ್ದಾರೆ. ಒಟ್ಟಾರೆ ವೀಡಿಯೋ ಒಂದು ಕಡೆ ಪ್ರಸ್ತುತ ಪರಿಸ್ಥಿತಿಯ ಅವಗಾಹನೆಯನ್ನು ಒಂದು ಕಡೆ ಮಾಡಿದರೆ ಮತ್ತೊಂದು ಕಡೆ ಇದು ರಾಜಕೀಯ ಚರ್ಚೆಗೆ ಕೂಡಾ ದಾರಿ ಮಾಡಿಕೊಟ್ಟಿದೆ.