ಈ ಮುಸ್ಲಿಂ ದೇಶದ ಹೊಸ ಕಾನೂನಿನ ಪ್ರಕಾರ, ಇನ್ಮುಂದೆ ಭಾರತೀಯ ಜನರು ಈ ದೇಶದಲ್ಲಿ ಜಾಬ್ ಮಾಡುವಂತಿಲ್ಲ!
ಈ ಮುಸ್ಲಿಂ ದೇಶ ಹೊಸ ಕಾನೂನು ಒಂದನ್ನು ಬಂಹಿರಂಗ ಪಡೆಸಿದೆ ಅದರ ಅನುಸಾರ ಭಾರತೀಯ ಜನರು ಮತ್ತು ಇತರ ದೇಶದ ಜನರು ಈ ದೇಶದಲ್ಲಿದ್ದು ಕೆಲಸ ಮಾಡುವಂತಿಲ್ಲ. ಹೌದು ಈ ಹೊಸ ನಿಯಮ ಜಾರಿಯಲ್ಲಿ ತಂದ ದೇಶ ಯಾವುದೆಂದರೆ ಓಮಾನ್. ಓಮಾನ್ ದೇಶದಲ್ಲಿ ಮುಂಬರುವ ದಿನಗಳಲ್ಲಿ ಓಮಾನ್ ದೇಶದ ಜನರ ಹೊರೆತು ಪಡೆಸಿ ಬೇರೆ ಯಾವುದೇ ದೇಶದ ಜನರು ಈ ದೇಶದಲ್ಲಿ ಸಾರ್ವಜನಿಕ ಮತ್ತು ಸರಕಾರಿ ಕ್ಷೇತ್ರದಲ್ಲಿ , ಕಂಪನಿಗಳಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ.
ದೊರೆತ ಮಾಹಿತಿಯ ಅನುಸಾರ, ಈ ವಿಷಯದ ಕುರಿತು ಓಮಾನ್ ವಿತ್ತ ಮಂತ್ರಾಲಯ ವು ಕಳೆದ ದಿನಗಳ ಹಿಂದೆ ಒಂದು ಆದೇಶ ವನ್ನು ಜಾರಿಯಲ್ಲಿ ತಂದಿದೆ. ಈ ಆದೇಶದ ಅನುಸಾರ ಸರಕಾರ ಕ್ಷೇತ್ರದ ನೌಕರಿಯಲ್ಲಿ ವಿದೇಶಿ ಜನರ ಬದಲಾಗಿ ಓಮಾನ್ ಜನರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಾರಂಭ ಮಾಡಲು ತಿಳಿಸಿದ್ದಾರೆ. ಅಂದರೆ ಸರಕಾರಿ ನೌಕರಿಯಲ್ಲಿ ವಿದೇಶಿಯರ ಬದಲಾಗಿ ಕೇವಲ ಸ್ಥಾನಿಯ ಜನರಿಗೆ ಮಾತ್ರ ಆಯ್ಕೆ ಮಾಡಲಾಗುವದು.

ಆದರೆ, ಓಮಾನ್ ಸರ್ಕಾರದ ಮುಖಾಂತರ ಜಾರಿಯಲ್ಲಿ ತಂದ ಹೊಸ ಆದೇಶ ತಾತ್ಕಾಲಿಕವಾಗಿ ಕಾರ್ಯಾಚರಣೆ ಮಾಡುವದಿಲ್ಲ. ಸರಕಾರಕ್ಕೆ ಆದೇಶವನ್ನು ಕಾರ್ಯಾಚರಣೆ ಮಾಡಲು ಸುಮಾರು ಒಂದು ವರ್ಷಗಳ ವರೆಗೆ ಸಮಯ ಬೇಕಾಗುವದು.