Viral Video: ಪ್ರಾಣಕ್ಕೆ ಆಪತ್ತು ಎದುರಾದಾಗ ಅದನ್ನು ಎದುರಿಸಿ ಸಿಂಹದ ಗುಂಪಿನ ಧಾ ಳಿಯಿಂದ ತಪ್ಪಿಸಿಕೊಂಡು ಗ್ರೇಟ್ ಎಸ್ಕೇಪ್ ಮಾಡಿದ ಕಾಡೆಮ್ಮೆ
ಸಿಂಹಗಳು ಕಾಡಿನಲ್ಲಿ ಬೇ ಟೆ ಆಡುವ ವಿಧಾನ ನಿಜಕ್ಕೂ ಬಹಳ ರೋಚಕ ಎನಿಸುತ್ತದೆ. ನಾವು ನೋಡಿದಾಗ ಅವು ಸಾಧು ಪ್ರಾಣಿಗಳನ್ನು ಹಿಡಿಯುವುದು ನಮಗೆ ಅವುಗಳ ಕ್ರೂ ರ ತೆ ಎನಿಸುತ್ತದೆ, ಅಯ್ಯೋ ಪಾಪ ಸಿಂಹಗಳಿಂದ ಆ ಸಾಧು ಪ್ರಾಣಿಗಳನ್ನು ರಕ್ಷಣೆ ಮಾಡಬಾರದಾಗಿತ್ತಾ? ಅನ್ಕೊಳ್ತೀವಿ. ಆದರೆ ಅದು ಪ್ರಕೃತಿ ನಿಯಮ ಅನ್ನೋದನ್ನು ಆ ಕ್ಷಣದಲ್ಲಿ ನಾವು ಮರೆತು ಬಿಡ್ತೀವಿ. ಇನ್ನು ಸಿಂಹಗಳು ಬೇ ಟೆ ಆಡೋ ವಿಷಯಕ್ಕೆ ಬಂದರೆ ಸಾಮಾನ್ಯವಾಗಿ ಸಿಂಹಗಳು ಒಂಟಿಯಾಗಿ ಬೇ ಟೆಯನ್ನು ಹಿಡಿಯೋಕೆ ಬರೋಲ್ಲ. ಅವು ಗುಂಪಾಗಿ ಬಂದು, ತಮ್ಮ ಬೇ ಟೆಯು ಯಾವುದೇ ಕಾರಣಕ್ಕೂ ತಪ್ಪಿಸಿಕೊಂಡು ಹೋಗದ ಹಾಗೆ ಎಚ್ಚರ ವಹಿಸಿ ಎಲ್ಲಾ ಕಡೆಯಿಂದ ಲಾಕ್ ಮಾಡಿ, ಅನಂತರ ಒಂದೊಂದಾಗಿ ಹಿಡಿಯಬೇಕಿರುವ ಪ್ರಾಣಿಯ ಮೇಲೆ ಆ ಕ್ರ ಮಣ ಮಾಡ್ತಾವೆ. ಹೀಗೆ ಸಿಂಹಗಳ ಗುಂಪಿಗೆ ಕೈಗೆ ಸಿಕ್ಕ ಪ್ರಾಣಿ ಪ್ರಾಣ ಉಳಿಸಿಕೊಳ್ಳೋದು ಬಹಳ ದೂರದ ಮಾತಾಗಿ ಬಿಡುತ್ತದೆ.
ಆದರೆ ಕೆಲವೊಮ್ಮೆ, ಅಪರೂಪಕ್ಕೆ ಒಮ್ಮೆ ಅಥವಾ ಸಿಂಹಗಳು ಹಿಡಿಯೋಕೆ ಬಂದ ಪ್ರಾಣಿಯ ಅದೃಷ್ಟ, ಹಣೆಬರಹ ಚೆನ್ನಾಗಿತ್ತು ಎಂದರೆ ಅವು ಸಿಂಹಗಳ ದಂಡಿನಿಂದ ಕೂಡಾ ತಮ್ಮ ಪ್ರಾಣವನ್ನು ಉಳಿಸಿಕೊಂಡು ಬಿಡುತ್ತವೆ. ಆದರೆ ಇಂತಹ ಸನ್ನಿವೇಶ ನಡೆಯೋದು ಬಹಳ ಅಪರೂಪ ಅಂತಾನೇ ನಾವು ಹೇಳಬಹುದು. ಇಂತಹ ದೃಶ್ಯಗಳು ನೋಡಿದಾಗ ಕ್ಷಣ ಕ್ಷಣ ಕ್ಕೂ ಕೂಡಾ ಅದು ನಮ್ಮಲ್ಲಿ ಉತ್ಕಂಠತೆಯನ್ನು ಹೆಚ್ಚು ಮಾಡುತ್ತದೆ. ಆ ಪ್ರಾಣಿ ಹೇಗೆ ಇಷ್ಟು ಸಿಂಹಗಳಿಂದ ಪಾರಾಗುತ್ತೆ ಅನ್ನೋ ಕುತೂಹಲ ಮೂಡುತ್ತೆ, ಕೊನೆಗೆ ಆ ಪ್ರಾಣಿ ತನ್ನ ಪ್ರಾಣ ಉಳಿಸಿಕೊಳ್ಳೋದ್ರಲ್ಲಿ ಯಶಸ್ಸನ್ನು ಪಡೆದ್ರೆ ನಮ್ಮ ಮನಸ್ಸಿಗೆ ಸಮಾಧಾನ ಕೂಡಾ ಸಿಗುತ್ತೆ ಎಂದ್ರೆ ತಪ್ಪಾಗೋದಿಲ್ಲ.
ಇಂತಹ ಒಂದು ರೋಚಕ ವೀಡಿಯೋ ಅಂದ್ರೆ ಸಿಂಹಗಳ ಗುಂಪಿಗೆ ಬೇ ಟೆ ಯಾಗಬೇಕಿದ್ದ ಒಂದು ಕಾಡೆಮ್ಮೆ ಅವುಗಳಿಂದ ತಪ್ಪಿಸಿಕೊಂಡ ವೀಡಿಯೋ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ದೃಶ್ಯ ದಕ್ಷಿಣ ಆಫ್ರಿಕಾದ ಕ್ರುಜೆರ್ ರಾಷ್ಟ್ರೀಯ ಉದ್ಯಾನವನದ್ದು ಎನ್ನಲಾಗಿದ್ದು ಇಲ್ಲಿ ಸಿಂಹಗಳಿಂದ ಸುತ್ತುವರೆದ ಕಾಡೆಮ್ಮೆ ಹೇಗೆ ಪ್ರಾಣ ಉಳಿಸಿಕೊಂಡು ಓಡಿತು ಅನ್ನೋದನ್ನು ನೋಡಬಹುದು. ಮೊದಲಿಗೆ ನೀರಿನಲ್ಲಿ ಇದ್ದ ಎಮ್ಮೆಯನ್ನು ಸಿಂಹಗಳು ಹಿಡಿದಿವೆ. ಆದರೆ ಅವು ಅದನ್ನು ಎಳೆದುಕೊಂಡು ಹೊರಗಡೆ ತರೋಕೆ ಆಗಿಲ್ಲ. ಎಮ್ಮೆ ಇದೇ ಪರಿಸ್ಥಿತಿಯ ಸದುಪಯೋಗ ಮಾಡ್ಕೊಂಡು ನೀರಿನೊಳಗೆ ಹೋಗಿದೆ. ನೀರೊಳಗೆ ಹೋಗಲಾರದ ಸಿಂಹಗಳು ಎಮ್ಮೆ ಹೊರಗೆ ಬರಲಿ ಅಂತ ಕಾದಿವೆ.
ಇನ್ನು ಎಮ್ಮೆ ಕೂಡಾ ಎಷ್ಟು ಹೊತ್ತು ನೀರಲ್ಲಿ ಇರೋದು ಎಂದು ಹೊರಗಡೆ ಬರೋಕೆ ಪ್ರಯತ್ನ ಮಾಡಿದೆ, ಆದರೆ ಅಲ್ಲಿ ಎದುರಲ್ಲಿ ಸಿಂಹಗಳು ಹೊಂಡದ ದಂಡೆಯಲ್ಲಿ ಕುಳಿತು ಎಮ್ಮೆಯನ್ನು ಹಿಡಿಯೋಕೆ ಕಾಯ್ತಾ ಇವೆ. ಬೇರೆ ದಾರಿಯಲ್ಲದೆ ಎಮ್ಮೆ ಮತ್ತೆ ನೀರೊಳಕ್ಕೆ ಇಳಿದಿದೆ. ಬೇಟೆಯನ್ನು ಸುಲಭವಾಗಿ ಬಿಡೋಕೆ ಇಷ್ಟ ಇಲ್ಲದ ಸಿಂಹಗಳು ತಾವು ನೀರೊಳಗೆ ಇಳಿದಿವೆ. ಆದರೆ ಎಮ್ಮೆ ಭ ಯ ಪಡದೇ ನೀರಿನ ಹೊಂಡದಲ್ಲಿ ಈಜುತ್ತಾ ಇನ್ನೊಂದು ದಂಡೆಯ ಕಡೆಗೆ ಹೊರಟಿದೆ. ಅಲ್ಲಿಗೆ ಸಿಂಹಗಳು ನಿರಾಶೆಯಿಂದ ಹೊಂಡದ ದಂಡೆಯಲ್ಲಿ ಕುಳಿತು ಎಮ್ಮೆ ನೀರಿನಲ್ಲಿ ಈಜುತ್ತಾ ಹೊಂಡದ ಇನ್ನೊಂದು ದಂಡೆಯ ಬಳಿ ಮೇಲೆದ್ದು ಹೋಗಿದೆ.
ಆದರೆ ಅದನ್ನು ಗಮನಿಸಿದ ಸಿಂಹಗಳು ಆಗಲೂ ಆಸೆ ಬಿಡದೆ ಹೊಂಡದ ದಂಡೆಯ ಸುತ್ತುತ್ತಾ ಎಮ್ಮೆ ಸಿಗಬಹುದು ಎಂದು ಬರುವುದನ್ನು ನೋಡಬಹುದು. ಒಟ್ಟಾರೆ ಎಮ್ಮೆ ಅಷ್ಟು ಸಿಂಹಗಳ ಗುಂಪಿನಿಂದ ಹೊಂಡದೊಳಗೆ ಈಜಿ ಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದು ಒಂದು ಅದ್ಭುತ ಎನಿಸುತ್ತದೆ. ಈ ವೀಡಿಯೋ ವನ್ನು ಒಂದು ಕೋಟಿಗಿಂತ ಅಧಿಕ ಜನರು ವೀಕ್ಷಣೆಯನ್ನು ಮಾಡಿದ್ದಾರೆ. 26 ಸಾವಿರ ಮೀರಿದ ಲೈಕ್ ಗಳು ಬಂದಿದ್ದು, ಸಾವಿರಾರು ಜನರು ಕಾಮೆಂಟ್ ಗಳನ್ನು ಮಾಡಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರೊಬ್ಬರು ಈ ವೀಡಿಯೋ ನೋಡಿದಾಗ ಎಷ್ಟೇ ಅ ಪಾ ಯ ಎದುರಾದರೂ ಭ ಯ ಪಡದೆ ಎದುರಿಸಬೇಕು ಆಗ ಪರಿಹಾರ ಸಿಗುತ್ತದೆ ಎನ್ನುವ ಪಾಠ ಇಲ್ಲಿದೆ ಎಂದಿದ್ದಾರೆ.