ದುಬೈಯಲ್ಲಿ ಸಿಗುತ್ತೆ ಅತ್ಯಂತ ದುಬಾರಿ ‘ರಾಯಲ್ ಗೋಲ್ಡ್ ಬಿರಿಯಾನಿ; ಬೆಲೆ ಕೇಳಿದರೇನೇ ಹೊಟ್ಟೆ ತುಂಬುತ್ತೆ!
ತಿನ್ನುವ ಹವ್ಯಾಸಿಗಳಿಗೆ ಹಣ ಎಷ್ಟು ಹೋದರೂ ಪರವಾಗಿಲ್ಲ, ಆದರೆ ತಿನ್ನುವ ಫುಡ್ ಮಾತ್ರ ಬೆಲೆಗೆ ತಕ್ಕಂತೆ ಇರಬೇಕು, ಅಂದರೆ ಆ ಹಣಕ್ಕೆ ತಕ್ಕಂತೆ ಆಹಾರ ಮತ್ತು ಅದರ ರುಚಿ ಇರಬೇಕು ಎನ್ನುತ್ತಾರೆ.
ಕೆಲವರು ಹಣದ ಅಪವ್ಯಯಕ್ಕೆ ಹೆದರಿ ತಮ್ಮ ಆಸೆ ಆಕಾಂಕ್ಷೆಗಳ ಮೇಲೆ ತಣ್ಣೀರು ಎರಚಿ ಕೊಳ್ಳುತ್ತಾರೆ. ಇನ್ನು ಕೆಲವರು ತಿನ್ನಲಿಕ್ಕಾಗಿ ಸಾಲವಾದರೂ ಚಿಂತೆಯಿಲ್ಲ ಎನ್ನುವವರೂ ಇರುತ್ತಾರೆ. ಅವರ ಪ್ರಕಾರ ಹಣ ಗಳಿಸುವದೇ ತಿನ್ನಲು, ಉಣ್ಣಲು, ತೊಡಲು, ಸುತ್ತಾಡಲು ಮತ್ತು ಮಜಾ ಮಾಡಲು ಎನ್ನುತ್ತಾರೆ. ಇರುವ ವರೆಗೆ ನಮ್ಮ ಹಣವನ್ನು ನಾವೇ ಭೋಗಿಸಲು ಸಾಧ್ಯವಾಗದೆ ಇದ್ದರೆ ಗಳಿಸುವದ್ಯಾಕೆ ಎನ್ನುತ್ತಾರೆ.
ಆದರೆ ಯಾವುದೇ ವ್ಯಕ್ತಿ ತಿನ್ನಲು ಹೆಚ್ಚೆಂದರೆ ಎಷ್ಟು ಖರ್ಚು ಮಾಡುತ್ತಾನೆ. ಅಥವಾ ನೀವೆಷ್ಟು ಖರ್ಚು ಮಾಡುವಿರಿ? ಕಾರಣ ಇಲ್ಲಿ ಹೇಳುವ ಒಂದು ಪ್ಲೇಟ್ ಬಿರಿಯಾನಿ ಬೆಲೆ ಕೇಳಿದರೆ ತಲೆ ಸುತ್ತಿ ಬಂದು ಕಣ್ಣಿಗೆ ಕತ್ತಲೆ ಬರುತ್ತದೆ. ಇದಕ್ಕೆ ಆರ್ಡರ್ ಕೊಡುವ ಮೊದಲು ನೂರು ಸಲ ವಿಚಾರ ಮಾಡಬೇಕಾಗುತ್ತದೆ.
ಯಾಕೆಂದರೆ, ದುಬೈನ ಹೆಸರಾಂತ ಹೋಟೆಲ್ ನಲ್ಲಿಯ ಪ್ರಸಿದ್ಧ ರಾಯಲ್ ಬಿರಿಯಾನಿಯ ಬೆಲೆ ಬರೀ 20 ಸಾವಿರ ರೂಪಾಯಿಗಳಷ್ಟು ಇದೆ. ಈ ಬಿರಿಯಾನಿಯನ್ನು 24 ಕ್ಯಾರೆಟ್ ಬಂಗಾರದಿಂದ ಅಲಂಕೃತ ಹೊಳಿಸಿರುತ್ತಾರೆ. ಇದೇ ಕಾರಣದಿಂದ ಈ ಬಿರಿಯಾನಿಯ ಹೆಸರು ರಾಯಲ್ ಗೋಲ್ಡ್ ಬಿರಿಯಾನಿ ಎಂದು ಪ್ರಸಿದ್ಧವಾಗಿದೆ. ಈ ಬಿರಿಯಾನಿಯಲ್ಲಿ ಕಾಶ್ಮೀರಿ ಮಟನ್ ಕಬಾಬ್, ಹಳೆಯ ದೆಹಲಿಯ ಮಟನ್ ಚಾಪ್ಸ್, ರಾಜಪೂತ್ ಚಿಕನ್ ಕಬಾಬ್, ಮೋಗಲಾಯಿ ಕೋಫ್ತಾ ಮತ್ತು ಮಲಾಯಿ ಚಿಕನ್ ಹೀಗೆ ಅನೇಕ ಪದಾರ್ಥಗಳ ಸಮಾವೇಶ ಇರುತ್ತದೆ.

ಇನ್ನು ಅದರ ಜೊತೆಗೆ ರಾಯತಾ ಮತ್ತು ಸಾಸ್ ನೀಡಲಾಗುವದು. ಯಾರೇ ಈ ಆರ್ಡರ್ ಕೊಟ್ಟರೆ ಅವರಿಗೆ ಸರ್ವ್ ಮಾಡಲು 45 ನಿಮಿಷಗಳ ಸಮಯ ಬೇಕಾಗುತ್ತದೆ. ಈ ಬಿರಿಯಾನಿಯನ್ನು ನೀವು ಆರು ಜನರ ಜೊತೆಗೆ ಶೇರ್ ಮಾಡಿ ತಿನ್ನಬಹುದಾಗಿದೆ.
ಕೇಸರಿಯ ಎಳೆಯ ಮುಖಾಂತರ ಶೃಂಗಾರ ಗೊಳಿಸಿದ ಈ ಬಿರಿಯಾನಿಯು ತುಂಬಾ ಸುಂದರವಾಗಿ ಕಾಣುತ್ತದೆ. ಇದರ ಸವಿ ಶಬ್ದಗಳಲ್ಲಿ ವರ್ಣನೆ ಮಾಡಲು ಸಾಧ್ಯವಿಲ್ಲ. ರೆಸ್ಟೋರೆಂಟ್ ಈ ಬಿರಿಯಾನಿಯನ್ನು ಹೋಟೆಲಿನ ಮೊದಲ ವರ್ಷ ಪೂರ್ತಿಯ ಸಂಭ್ರಮಾಚರಣೆಯ ಕಾರಣದಿಂದಾಗಿ ತಮ್ಮ ಮೆನುವಿನಲ್ಲಿ ಸಮಾವೇಶಗೊಳಿಸಿದೆ.
ಈ ಬಿರಿಯಾನಿಯನ್ನು ತಿನ್ನಬೇಕಾದರೆ ನಿಮ್ಮ ಜೇಬು ಸಹ ತುಂಬಾ ಗರಂ ಇರಬೇಕು. ಒಂದು ವೇಳೆ ನೀವು ಆರ್ಡರ್ ಕೊಟ್ಟಿದ್ದೆ ಆದರೆ ನಿಮ್ಮ 20 ಸಾವಿರ ರೂಪಾಯಿಗಳು ಹೋದಂತೆ ಅರ್ಥ. ಆದರೆ ತಿನ್ನುವ ಹವ್ಯಾಸವಿರುವ ವರಿಗೆ ಇದು ಯಾವ ಲೆಕ್ಕ…