ಒಂದು ಕಿಲೋಮೀಟರ್ ಚಲಿಸಲು ಟ್ರೆನಿಗೆ ಬೇಕಾಗುವ ಡೀಸೆಲ್ ಎಷ್ಟು ನಿಮಗೆ ಗೊತ್ತಾ? ಉತ್ತರ ಕೇಳಿದರೆ ಅಚ್ಚರಿ ಪಡುವಿರಿ
ಭಾರತೀಯ ರೈಲು ಪ್ರವಾಸದ ಮುಖ್ಯ ಸಾಧನವಾಗಿದೆ. ಸ್ವಾತಂತ್ರ್ಯಕ್ಕಿಂತ ಮೊದಲಿನಿಂದಲೂ ಭಾರತದ ವಿಕಾಸದಲ್ಲಿ ರೈಲು ತುಂಬಾ ಮಹತ್ವದ ಪಾತ್ರವನ್ನು ವಹಿಸಿದೆ. ರೈಲಿನ ಮಾಧ್ಯಮದಿಂದ ದೂರದ ಪ್ರವಾಸವನ್ನು ಸಹಿತ ಆಯಾಸವಿಲ್ಲದೆ ಮಾಡಬಹುದಾಗಿದೆ. ಇತರ ಸಾರಿಗೆ ಸಾಧನೆಗಳಿಗಿಂತ ರೈಲಿನ ಸಾರಿಗೆ ತುಂಬಾ ಕಡಿಮೆ ಖರ್ಚಿನಲ್ಲಿ ಆಗುವುದು. ರೈಲಿಗೆ ಇರುವುದು ಮುಖ್ಯವಾದ ಪಾರ್ಟ್ ಎಂದರೆ ಎಂಜಿನ್. ಇದು ತುಂಬಾ ಶಕ್ತಿಶಾಲಿ ಆಗಿರುತ್ತದೆ. ಇದೇ ಎಂಜಿನ್ ಸಹಾಯದಿಂದ ಟ್ರೈನಿಗೆ ಜೋಡಿಸಿರುವ ಡಬ್ಬಿಗಳು ಸಹಜವಾಗಿ ಓಡಾಡುತ್ತವೆ. ರೈಲಿನ ಉಪಯೋಗ ಬರೀ ಪ್ರವಾಸಕ್ಕಾಗಿ ಅಷ್ಟೇ ಉಪಯೋಗವಾಗುವುದಿಲ್ಲ. ಗೂಡ್ಸ್ ಗಳ ಸರಬರಾಜಿನ ಸಲುವಾಗಿ ಹೆಚ್ಚಿನ ಉಪಯೋಗವಾಗುತ್ತದೆ.
ಇಂಥ ರೈಲುಗಳು ಅಥವಾ ಈ ರೈಲಿನ ಎಂಜಿನ್ ಚಲಿಸಲು ತೆಗೆದುಕೊಳ್ಳುವ ಡೀಸೆಲ್ ಎಷ್ಟು? ಅಥವಾ ಈ ರೈಲಿನ ಎವರೇಜ್ ಎಷ್ಟಿರಬಹುದೆಂದು ಎಂದಾದರೆ ವಿಚಾರ ಮಾಡಿದ್ದೀರಾ? ಸ್ವಂತದ ವೆಹಿಕಲ್ ಉಪಯೋಗಿಸುವಾಗ ಅಥವಾ ನಡೆಸುವಾಗ ಎವರೇಜ್ ಬಗ್ಗೆ ನಾವು ತಲೆಕೆಡಿಸಿಕೊಳ್ಳುತ್ತೇವೆ. ಹಾಗೆಯೇ ಒಂದು ವೇಳೆ ನೀವು ರೈಲಿನ ಏವರೆಜ್ ಬಗ್ಗೆ ವಿಚಾರ ಮಾಡಿದ್ದೇ ಆದಲ್ಲಿ ನಿಮ್ಮ ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರವನ್ನು ತಂದಿದ್ದೇವೆ ಓದಿ.

ಒಂದು ಕಿಲೋಮೀಟರ್ ಸಲುವಾಗಿ ರೈಲು ಎಷ್ಟೊಂದು ಡೀಸೆಲ್ ತೆಗೆದುಕೊಳ್ಳುತ್ತದೆ ಎಂಬುದು ತಿಳಿದುಕೊಳ್ಳುವುದು ಹಾಗೆ ನೋಡಿದರೆ ತುಂಬಾ ಕಷ್ಟದ ಕೆಲಸವಾಗಿದೆ. ಆದರೆ ಬಹಳೇ ರಿಸರ್ಚ್ ಮಾಡಿದನಂತರ ಉತ್ತರ ಒಂದು ದೊರಕಿದೆ.
ಒಂದು ಸ್ಟೇಷನ್ ನಲ್ಲಿ ಲೋಕೋ ಪೈಲೆಟ್ ಒಬ್ಬನು ರೈಲಿನ ಎಂಜಿನ್ ಬಂದ್ ಮಾಡದೆ ಚಾಲು ಕಂಡಿಶನ್ ನಲ್ಲಿ ಉಪಹಾರ ಮಾಡಲು ಹೋಟೆಲಿಗೆ ಬಂದಿದ್ದನು. ಆಗ ಅಲ್ಲಿಯ ಒಬ್ಬ ಪ್ರವಾಸಿಗ ನೀವು ರೈಲನ್ನು ಬಂದ್ ಮಾಡಿ ಬರಬಹುದಿತ್ತಲ್ಲ. ಕಾರಣ ಅದಕ್ಕೆ ಡೀಸೆಲ್ ತಗಲುವುದಿಲ್ಲವೆ? ಮತ್ತು ಒಂದು ಕಿಲೋಮೀಟರ್ ಗೆ ರೈಲು ಎಷ್ಟೊಂದು ಎವರೇಜ್ ನೀಡುತ್ತದೆ ಎಂದು ಕೇಳಿದನು. ಆಗ ಲೋಕೋ ಪೈಲಟ್ ಅದಕ್ಕೆ ಉತ್ತರವಾಗಿ ಹೀಗೆ ಹೇಳಿದರು. ನೀವು ಹೇಳುವುದು ಸರಿ. ಎಂಜಿನ್ ಬಂದ್ ಮಾಡುವುದು ಅಥವಾ ಆಫ್ ಮಾಡುವುದು ಸುಲಭ. ಆದರೆ ಬಂದ್ ಮಾಡಿದ ಎಂಜಿನ್ ಮತ್ತೆ ಸ್ಟಾರ್ಟ್ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ. ಕಾರಣ ಅದನ್ನು ಸ್ಟಾರ್ಟ್ ಮಾಡಲು ಸುಮಾರು ಇಪ್ಪತ್ತೈದು ಲೀಟರ್ ಡೀಸೆಲ್ ತಗಲುವುದು. ಇನ್ನು ಎವರೇಜ್ ಕೇಳಿದರೆ ರೈಲು ಒಂದು ಕಿಲೋಮೀಟರ್ ಚಲಿಸುವ ಸಲುವಾಗಿ ಸುಮಾರು 15 ರಿಂದ 20 ಲೀಟರ್ ಡೀಸೆಲ್ ತೆಗೆದುಕೊಳ್ಳುತ್ತದೆ ಎಂದು ಮಾಹಿತಿ ಹೇಳಿದರು.
