ಪ್ರಿಯಾಂಕ ಚೋಪ್ರಾ ಮನೆ ಬಾಡಿಗೆಗೆ ಪಡೆದ ಜಾಕ್ವೆಲಿನಾ ಫರ್ನಾಂಡಿಸ್; ತಿಂಗಳ ಬಾಡಿಗೆ ಎಷ್ಟೆಂದು ತಿಳಿದರೆ ಖಂಡಿತ ಶಾಕ್ ಆಗುತ್ತೆ!
ಬಾಲಿವುಡ್ ನ ಜನಪ್ರಿಯ ನಟಿ, ಪ್ರಸ್ತುತ ಸ್ಟಾರ್ ನಟಿಯರ ಸಾಲಿನಲ್ಲಿ ತನ್ನದೇ ಆದ ಹೆಸರನ್ನು ಪಡೆದಿರುವ ನಟಿ ಜಾಕ್ವೆಲಿನಾ ಫರ್ನಾಂಡೀಸ್. ಶ್ರೀಲಂಕಾ ಮೂಲದ ಈ ನಟಿ ಪ್ರಸ್ತುತ ಬಾಲಿವುಡ್ ನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಜಾಕ್ವೆಲಿನಾ ಸಿನಿಮಾ, ವೆಬ್ ಸಿರೀಸ್ ಹಾಗೂ ಜಾಹೀರಾತುಗಳಲ್ಲಿ ಕೂಡಾ ಬ್ಯುಸಿಯಾಗಿರುವ ನಟಿ. ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವ ಈ ನಟಿ ಅಲ್ಲಿ ದೊಡ್ಡ ಸಂಖ್ಯೆಯ ಹಿಂಬಾಲಕರನ್ನು ಹೊಂದಿದ್ದಾರೆ. ಆಗಾಗ ತನ್ನ ಫೋಟೋಗಳು ಹಾಗೂ ವೀಡಿಯೋಗಳನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಶೇರ್ ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಲೇ ಇರುತ್ತಾರೆ ಜಾಕ್ವೆಲಿನಾ. ಈ ನಟಿಯ ಹಾಟ್ ಫೋಟೋಗಳು ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ.

ನಟಿ ಜಾಕ್ವೆಲಿನಾ ಫರ್ನಾಂಡೀಸ್ ಮುಂಬೈನ್ ಐಶಾರಾಮೀ ಪ್ರದೇಶ ಎನಿಸಿಕೊಂಡಿರುವ ಜುಹುವಿನಲ್ಲಿ ಒಂದು ಐಶಾರಾಮೀ ಮನೆಯಲ್ಲಿ ವಾಸ ಮಾಡಲು ಆರಂಭಿಸಿದ್ದಾರೆ. ಈಗ ಜಾಕ್ವೆಲಿನಾ ವಾಸವಿರುವ ಮನೆಗೆ ಕೂಡಾ ಒಂದು ವಿಶೇಷವಿದೆ. ಹೌದು ಏನು ಆ ವಿಶೇಷ ಎನ್ನುವುದಾದರೆ ಜುಹುವಿನಲ್ಲಿ ಜಾಕ್ವೆಲಿನಾ, ಬಾಲಿವುಡ್ ನ ಮತ್ತೊಬ್ಬ ಸ್ಟಾರ್ ನಟಿಯಾದಂತಹ ಪ್ರಿಯಾಂಕ ಚೋಪ್ರಾ ಅವರ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಇದೇ ಮನೆಯಲ್ಲಿ ವಾಸವಿದ್ದಾಗಲೇ 2018 ರಲ್ಲಿ ನಿಕ್ ಜೋನಸ್ ಜೊತೆಗೆ ವಿವಾಹ ಜೀವನಕ್ಕೆ ಅಡಿಯನ್ನು ಇಟ್ಟಿದ್ದರು.

ನಟಿ ಜಾಕ್ವೆಲಿನಾ ಫರ್ನಾಂಡೀಸ್ ಕೆಲವು ತಿಂಗಳುಗಳ ಹಿಂದೆಯಷ್ಟೇ ಪ್ರಿಯಾಂಕ ಚೋಪ್ರಾ ಅವರ ಅಪಾರ್ಟ್ಮೆಂಟ್ ಕರ್ಮಯೋಗ್ ಅನ್ನು ಬಾಡಿಗೆಗೆ ಪಡೆದುಕೊಂಡು ಅಲ್ಲಿ ವಾಸಿಸಲು ಆರಂಭ ಮಾಡಿದ್ದಾರೆ. ಜಾಕ್ವೆಲಿನಾ ಪ್ರಿಯಾಂಕ ಚೋಪ್ರಾ ಅವರ ಒಪ್ಪಿಗೆಯ ನಂತರ ಈ ಮನೆಯಲ್ಲಿ ಬಾಡಿಗೆಗೆ ಪಡೆದುಕೊಂಡಿದ್ದಾರೆ. 2018 ರಲ್ಲಿ ಪ್ರಿಯಾಂಕ ವಿವಾಹ ನಿಕ್ ಜೋನಸ್ ಜೊತೆ ನಡೆದ ಮೇಲೆ ಪ್ರಿಯಾಂಕ ಅಮೆರಿಕಾಗೆ ಶಿಫ್ಟ್ ಆದರು. ಪ್ರಿಯಾಂಕ ಅಮೆರಿಕಾಗೆ ತೆರಳಿದ ಮೇಲೆ ಅವರ ಈ ಮನೆಯಲ್ಲಿ ಅವರ ತಾಯಿ ಮಧು ಚೋಪ್ರಾ ಮತ್ತು ಪ್ರಿಯಾಂಕ ಅವರ ಸಹೋದರ ಸಿದ್ಧಾರ್ಥ್ ಅವರು ವಾಸ ಮಾಡುತ್ತಿದ್ದರು.

ಆದರೆ ಕೆಲವು ತಿಂಗಳುಗಳ ಹಿಂದೆಯಷ್ಟೇ ಪ್ರಿಯಾಂಕ ಅವರ ತಾಯಿ ಮಧು ಚೋಪ್ರಾ ಹಾಗೂ ಅವರ ಸಹೋದರ ಸಿದ್ಧಾರ್ಥ್ ಇಬ್ಬರೂ ಕೂಡಾ ಯಾರೀ ರೋಡ್ ನಲ್ಲಿರುವ ತಮ್ಮ ಅಪಾರ್ಟ್ಮೆಂಟ್ ಗೆ ಶಿಫ್ಟ್ ಆಗಿದ್ದಾರೆ. ಇದಾದ ನಂತರ ಈ ಅಪಾರ್ಟ್ಮೆಂಟ್ ಖಾಲಿಯಿತ್ತು. ಆದ್ದರಿಂದಲೇ ವಿಷಯ ತಿಳಿದ ಜಾಕ್ವೆಲಿನ ಫರ್ನಾಂಡೀಸ್ ಅವರು ಈ ಮನೆಯನ್ನು ಬಾಡಿಗೆಗೆ ಪಡೆದುಕೊಂಡು ಇಲ್ಲಿಗೆ ಶಿಫ್ಟ್ ಆಗಿದ್ದಾರೆ. ಜಾಕ್ವೆಲಿನಾ ಪ್ರಿಯಾಂಕ ಚೋಪ್ರಾ ಅವರ ಐಶಾರಾಮೀ ಅಪಾರ್ಟ್ಮೆಂಟ್ ನಲ್ಲಿ ಇರುವುದೇನೋ ನಿಜ ಆದರೆ ಈ ಸಕಲ ಸೌಲಭ್ಯ ಗಳಿಂದ ಸುಸಜ್ಜಿತವಾದ ಅಪಾರ್ಟ್ಮೆಂಟ್ ಗೆ ಅಷ್ಟೇ ದುಬಾರಿ ಮೊತ್ತದಲ್ಲಿ ಜಾಕ್ವೆಲಿನಾ ಬಾಡಿಗೆಯನ್ನು ಕೂಡಾ ಪಾವತಿ ಮಾಡುತ್ತಿದ್ದಾರೆ. ಜಾಕ್ವೆಲಿನಾ ಫರ್ನಾಂಡೀಸ್ ತನ್ನ ಈ ಹೊಸ ಮನೆಗೆ ಪಾವತಿ ಮಾಡುತ್ತಿರುವ ಬಾಡಿಗೆ ಒಂದು ಕ್ಷಣ ನಮಗೆ ಶಾ ಕ್ ಎನಿಸಬಹುದು.

ಏಕೆಂದರೆ ಈ ನಟಿ ಈ ಮನೆಗೆ ತಿಂಗಳಿಗೆ ಬರೋಬ್ಬರಿ 6 ಲಕ್ಷ 78 ಸಾವಿರ ರೂಪಾಯಿಗಳ ಬಾಡಿಗೆಯನ್ನು ಪಾವತಿ ಮಾಡುತ್ತಿದ್ದಾರೆ ಎನ್ನುವುದು ಆಶ್ಚರ್ಯ ಉಂಟು ಮಾಡಿದರೂ ಕೂಡಾ ಇದು ವಾಸ್ತವವಾಗಿದೆ. ಇದುವರೆಗೂ ಬಾಡಿಗೆಯ ರೂಪದಲ್ಲಿ ಜಾಕ್ವೆಲಿನಾ 2 ಕೋಟಿ 44 ಲಕ್ಷದ 8 ಸಾವಿರ ರೂಪಾಯಿಗಳನ್ನು ಪಾವತಿ ಮಾಡಿದ್ದಾರೆ. ಜಾಕ್ವೆಲಿನಾ ಪ್ರಸ್ತುತ ಸಿನಿಮಾಗಳಲ್ಲಿ ಬ್ಯುಸಿ ಇದ್ದು ಸೈಫ್ ಅಲಿ ಖಾನ್ ಜೊತೆ ಭೂತ್ ಪೋಲಿಸ್ ಸಿನಿಮಾ ಮುಗಿಸಿ ಬಿಡುವಲ್ಲಿರುವ ನಟಿ ಶೀಘ್ರದಲ್ಲೇ ರೋಹಿತ್ ಶೆಟ್ಟಿ ನಿರ್ದೇಶನದ ಸರ್ಕಸ್ ಸಿನಿಮಾ ಶೂಟಿಂಗ್ ಗೆ ಸೇರಲಿದ್ದಾರೆ.