ಕಾರು ಕೆಟ್ಟಿತೆಂದು ಅದನ್ನು ಕುದುರೆ ಸವಾರಿ ಮಾಡುವಂತೆ ಓಡಿಸಿದ ವ್ಯಕ್ತಿ: ವೀಡಿಯೋ ಶೇರ್ ಮಾಡಿ ವಾರೆವ್ಹಾ ಎಂದ ಉದ್ಯಮಿ ಆನಂದ್ ಮಹೀಂದ್ರಾ

ಉದ್ಯಮಿ ಆನಂದ್ ಮಹೀಂದ್ರಾ ಅವರು ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ವಿಶೇಷ ವೀಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಒಂದು ವೀಡಿಯೋ ವನ್ನು ಶೇರ್ ಮಾಡಿಕೊಂಡಿದ್ದು, ಸ್ವಲ್ಪ ಸರಳತೆಯನ್ನು ಬಳಸಿಕೊಂಡರೆ ಬಹಳ ದೂರದವರೆಗೆ ಹೋಗಬಹುದು ಎನ್ನುವುದನ್ನು ಸೂಚಿಸುವಂತೆ ಇದೆ. ಆನಂದ್ ಮಹೀಂದ್ರಾ ಅವರು ಶೇರ್ ಮಾಡಿಕೊಂಡಿರುವ ಈ ವೀಡಿಯೋದ ಹಾಕಿರುವ ಜೊತೆಗೆ ಜುಗಾಡ್ ಎನ್ನುವುದು ಕೇವಲ ಭಾರತೀಯ ವಿಶೇಷತೆ ಮಾತ್ರವಲ್ಲ, ಇದು ಎಂತಹ ಪದ ಎಂದರೆ ಇದನ್ನು ವಿಶಾಲಾರ್ಥದಲ್ಲಿ ಒಂದು ಕ್ಲೆವರ್ ಹ್ಯಾಕ್ ಅಥವಾ ಚತುರತೆಯ ಕಾರ್ಯ ಎಂದು ಕರೆಯಬಹುದು ಎಂದು ಅನುವಾದ ಮಾಡಬಹುದಾಗಿದೆ. ಹಿಂದಿಯಲ್ಲಿ ಜುಗಾಡ್ ಎನ್ನುವ ಪದವನ್ನು ಕೆಲಸಕ್ಕೆ ಬಾರದ್ದು, ಸವೆದು ಹಾಳಾಗಿರುವುದು ಎಂದೆಲ್ಲಾ ಯಾವ ವಸ್ತುಗಳನ್ನು ಕರೆಯಲಾಗುವುದೋ ಅಂತಹ ಸಂಪನ್ಮೂಲಗಳನ್ನು ಸೃಜನಶೀಲವಾಗಿ ಬಳಸಿಕೊಳ್ಳುವುದೇ ಆಗಿದ್ದು, ಭಾರತೀಯರು ಇದರಲ್ಲಿ ಸಾಧನಶೀಲತೆಯನ್ನು ಮೆರೆವ ಉದಾಹರಣೆಯಾಗಿದೆ.

ವೀಡಿಯೋದ ಆರಂಭದಲ್ಲಿ ಒಬ್ಬ ವ್ಯಕ್ತಿಯು ತನ್ನ ಕಾರನ್ನು ತಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ. ಅವರ ವಾಹನ ಒಂದು ಕಡೆ ಸ್ಥಿರವಾಗಿ ನಿಂತಿರುವುದು ನಮ್ಮ ಗಮನಕ್ಕೆ ಬರುತ್ತದೆ‌. ಈ ಸಮಸ್ಯೆಯಿಂದ ಪ್ರಭಾವಿತನಾದ ವ್ಯಕ್ತಿ ಅದಕ್ಕೊಂದು ಪರಿಹಾರ ಮಾಡಬೇಕೆಂದು, ತನ್ನ ಪ್ರಯಾಣವನ್ನು ಮುಂದುವರೆಸಬೇಕೆಂದು ನಿಶ್ಚಯ ಮಾಡಿದವನಂತೆ ಒಂದು ಹ್ಯಾಕ್ ನೊಂದಿಗೆ ಬರುತ್ತಾನೆ. ಆತನು ಕಾರ್ ಹುಡ್ ಅನ್ನು ತೆರೆಯುತ್ತಾನೆ. ಅನಂತರ ಒಂದು ಕೇಬಲ್ ನಂತಹುದನ್ನು ಹೊರ ತೆಗೆದು ಅದನ್ನು ಒಂದು ಹಗ್ಗದಂತೆ ಬಳಸಿಕೊಳ್ಳುತ್ತಾನೆ. ನಂತರ ಆತ ವಾಹನದ ಹಿಂಭಾಗದಲ್ಲಿ ಅದನ್ನು ಹಿಡಿದು ನಿಂತುಕೊಂಡಾಗ ವಾಹನವು ಸ್ಟಾರ್ಟ್ ಆಗಿ ಅದು ವೇಗವನ್ನು ಪಡೆಯಲು ಸಹಾಯವಾಗುತ್ತದೆ.

ವೀಡಿಯೋದಲ್ಲಿ ಇಬ್ಬರು ವ್ಯಕ್ತಿಗಳಿದ್ದು ಒಬ್ಬನು ಕಾರಿನೊಳಗೆ ಕುಳಿತು ವಾಹನವನ್ನು ಚಾಲನೆ ಮಾಡಿದರೆ, ಇನ್ನೊಬ್ಬಾತನು ವಾಹನದ ವೇಗವನ್ನು ನಿಯಂತ್ರಣದಲ್ಲಿ ಇಡಲು ವಾಹನದ ಹಿಂದೆ ಇದ್ದು, ಕುದುರೆಯ ಲಗಾಮು ಹಿಡಿದು ಚಲಾಯಿಸುತ್ತಿರುವಂತೆ ಕಾಣುತ್ತದೆ. ಈ ವೀಡಿಯೋ ಫುಟೇಜ್ ಅನ್ನು ಶೇರ್ ಮಾಡಿಕೊಂಡ ಆನಂದ್ ಮಹೀಂದ್ರಾ ಅವರು, ವೀಡಿಯೋ ಹಳೆಯದಂತೆ ಕಾಣುತ್ತಿದೆಯಾದರೂ ಕೂಡಾ ಈ ವೀಡಿಯೋವನ್ನು ನೋಡಲು ಬಹಳ ಉಲ್ಲಾಸದಾಯಕವಾಗಿದೆ‌. ನಾವು ಜುಗಾಡ್ ಎಂದರೆ ಅದು ಭಾರತೀಯ ವಿಶೇಷ ಎಂದು ಎಲ್ಲರೂ ಭಾವಿಸಿದ್ದೀರಿ. ನಾವು ವಾಹನಗಳ ಇಂಜಿನ್ ಗಳ ಶಕ್ತಿಯನ್ನು ಹಾರ್ಸ್ ಪವರ್ ಗೆ ಹೋಲಿಕೆಯನ್ನು ಮಾಡುತ್ತೇವೆ. ಅಲ್ಲದೇ ನಮ್ಮ ಕಾರುಗಳನ್ನು ಕೂಡಾ ನಾವು ರಥಗಳಿಗೆ ಹೋಲಿಕೆ ಮಾಡುವುದನ್ನು ಕೂಡಾ ಗಮನಿಸಿದ್ದೇವೆ‌.

ಆನಂದ್ ಮಹೀಂದ್ರಾ ಅವರು ಶೇರ್ ಮಾಡಿಕೊಂಡಿರುವ ಈ ವೀಡಿಯೋವನ್ನು ಈಗಾಗಲೇ ಒಂದು ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ನಾಲ್ಕು ಸಾವಿರಕ್ಕಿಂತ ಅಧಿಕ ಮಂದಿ ಈ ವೀಡಿಯೋವನ್ನು ಮೆಚ್ಚಿಕೊಂಡಿದ್ದು , ನೂರಾರು ಜನರು ಇದಕ್ಕೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅದರಲ್ಲಿ ಅನೇಕರು ತಮ್ಮ ನಿತ್ಯ ಜೀವನದಲ್ಲಿ ಇಂತಹ ಜುಗಾಡ್ ಗಳ ಬಳಕೆಯನ್ನು ಹೇಗೆಲ್ಲಾ ಮಾಡಿರುವ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿರುವುದನ್ನು ನಾವು ಇಲ್ಲಿ ಗಮನಿಸಬಹುದಾಗಿದೆ. ನೆಟ್ಟಿಗರೊಬ್ಬರು ಈ ವೀಡಿಯೋ ನೋಡಿ ಪ್ರತಿಕ್ರಿಯೆ ನೀಡುತ್ತಾ, ಒಮ್ಮೆ ಬೆಂಗಳೂರಿನಲ್ಲಿ ಆಟೋ ದಲ್ಲಿ ಆಕ್ಸಿಲರೇಟರ್ ಕೇಬಲ್ ವಿಫಲವಾದಾಗ ಆಟೋ ಡ್ರೈವರ್ ಇಂತದ್ದೇ ಕೆಲಸವನ್ನು ಮಾಡಿದ್ದ ಎಂದು ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ.

ಆಗ ಆಟೋ ಡ್ರೈವರ್ ಕೇಬಲ್ ಗಳನ್ನು ಆಟೋ ಬಾಡಿಗೆ ಕಟ್ಟಿದರು‌. ಎಡಗೈನಲ್ಲಿ ಗೇರ್ ಗಳನ್ನು ಹಾಕುತ್ತಾ, ಬಲಗೈನಲ್ಲಿ ಕೇಬಲ್ ಅನ್ನು ಹಿಡಿದು, ಬಲಗಾಲನ್ನು ಆಕ್ಸಿಲರೇಟರ್ ಮೇಲೆ ಇಟ್ಟಿದ್ದ ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ. ಮತ್ತೊಬ್ಬರು ಟ್ವೀಟ್ ಮಾಡಿ ನನ್ನ ಬೈಕ್ ನಲ್ಲಿ ಒಮ್ಮೆ ಆಕ್ಸಿಲರೇಟರ್ ವೈರ್ ಕೈಕೊಟ್ಟಾಗ, ಆಗ ಇದೇ ರೀತಿ ಕೇಬಲ್ ಅನ್ನು ಮ್ಯಾನ್ಯುಯಲ್ ಆಗಿ ಹೊರಗೆ ಎಳೆದಿದ್ದೆ ಆದರೆ ಅದು 25 ವರ್ಷಗಳ ಹಿಂದೆ ಎಂದು ಬರೆದುಕೊಂಡು ತನ್ನ ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ. ಆನಂದ್ ಮಹೀಂದ್ರ ಅವರು ಶೇರ್ ಮಾಡಿರುವ ಈ ವೀಡಿಯೋಗೆ ಭರ್ಜರಿ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.