ವಿಶ್ವದ ಶ್ರೀಮಂತ ವ್ಯಕ್ತಿ ಮಾನವ ಕುಲಕ್ಕೆ ನೀಡಿದ ಎಚ್ಚರಿಕೆ: ಭೂಮಿಯನ್ನು ತೊರೆಯದಿದ್ದರೆ ಮಾನವ ಸಂಕುಲ ಸರ್ವನಾಶ

ವಿಶ್ವದ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿರುವ ಎಲೆನ್ ಮಸ್ಕ್ ಅವರು ಮಾನವ ಕುಲಕ್ಕೆ ಒಂದು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಮನುಷ್ಯನು ಆದಷ್ಟು ಬೇಗ ಭೂಮಿಯನ್ನು ಬಿಟ್ಟು ಬೇರೆ ಗ್ರಹಗಳ ಮೇಲೆ ವಾಸ ಮಾಡುವ ಪ್ರಯತ್ನವನ್ನು ಮಾಡಬೇಕಾಗಿದೆ, ಇಲ್ಲವಾದರೆ ಅತಿ ಶೀಘ್ರದಲ್ಲೇ ಸಂಪೂರ್ಣ ಮಾನವಕುಲ ವಿ ನಾ ಶವಾಗುವುದು ಖಚಿತ ಎಂದು ಹೇಳಿದ್ದಾರೆ ಸ್ಪೇಸ್ ಎಕ್ಸ್ ಸಂಸ್ಥೆಯ ಮಾಲೀಕರಾಗಿರುವ 49 ವರ್ಷ ವಯಸ್ಸಿನ ಎಲೆನ್ ಮಸ್ಕ್ . ಮಾನವ ಕುಲವನ್ನು ಉಳಿಸಲು ಅವರನ್ನು ಬೇರೆ ಬೇರೆ ಗ್ರಹಗಳಿಗೆ ಕಳುಹಿಸುವ ವ್ಯವಸ್ಥೆಯನ್ನು ಶೀಘ್ರವಾಗಿ ಮಾಡಬೇಕು ಎಂದು ಹೇಳಿರುವ ಅವರು ಈ ಸಂದರ್ಭದಲ್ಲಿ ಅಮೇರಿಕಾದ ಅಪೋಲೋ ಅಂತರಿಕ್ಷ ನೌಕೆಯು ಚಂದ್ರನ ಮೇಲೆ ಇಳಿದು 49 ವರ್ಷಗಳೇ ಕಳೆದುಹೋಗಿವೆ, ಆದರೆ ಅದಾದ ನಂತರ ಬೇರೆ ಯಾವ ಗ್ರಹಕ್ಕೆ ಕೂಡಾ ಮಾನವ ಹೋಗುವ ಪ್ರಯತ್ನ ಮಾಡಿಲ್ಲ. ಅದು ಮಾತ್ರವೇ ಅಲ್ಲದೇ ಮತ್ತೆ ಚಂದ್ರನ ಮೇಲೆ ಇಳಿಯುವ ಪ್ರಯತ್ನವನ್ನು ಕೂಡಾ ಮಾಡಿಲ್ಲ ಎಂದು ಹೇಳಿದ್ದಾರೆ ಮಸ್ಕ್ ಅವರು. ಇನ್ನು ಮುಂದಿನ ಹತ್ತು ವರ್ಷಗಳಲ್ಲಿ ಭೂ ಗ್ರಹಕ್ಕೆ ಹತ್ತಿರವಿರುವ ಮಂಗಳ ಗ್ರಹದ ಮೇಲೆ ಜನರನ್ನು ಇಳಿಸಿ, ಅಲ್ಲಿ ಮನುಷ್ಯರು ನೆಲೆಸಲು, ಜೀವನವನ್ನು ನಡೆಸುವಂತೆ ಮಾಡುವ ಯೋಜನೆಯೊಂದನ್ನು ಅವರು ಹೊಂದಿದ್ದಾರೆ ಎನ್ನಲಾಗಿದೆ.

ಚಂದ್ರ ಮತ್ತು ಮಂಗಳ ಗ್ರಹಗಳು ಭೂಮಿಗೆ ಹತ್ತಿರವಾಗಿದೆ. ಶುಕ್ರ ಮತ್ತು ಬುಧ ಗ್ರಹಗಳು ದೂರದಲ್ಲಿವೆ. ಗುರು ಮತ್ತು ಶನಿ ಗ್ರಹಗಳ ಮೇಲಿನ ವಾತಾವರಣದಲ್ಲಿ ವಿವಿಧ ರೀತಿಯ ಅನಿಲಗಳು ತುಂಬಿದೆ. ಆದರೆ ಮಂಗಳನ ಮೇಲೆ ಅಡಿಯಿಡಲು ಸಾಧ್ಯವಿದೆ ಎಂದಿರುವ ಎಲೆನ್ ಮಸ್ಕ್ ಅವರ ಯೋಜನೆ ಕೇವಲ ಈ ಗ್ರಹಗಳಿಗೆ ಭೇಟಿ ನೀಡುವುದಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಬದಲಾಗಿ ಆ ಗ್ರಹಗಳ ಮೇಲೆ ಮಾನವನ ವಸಾಹತುಗಳನ್ನು ನಿರ್ಮಾಣ ಮಾಡಲು ಅವರು ಬಯಸುತ್ತಿದ್ದಾರೆ. ಮಾನವ ಸಂಕುಲವನ್ನು ಉಳಿಸುವ ಸಲುವಾಗಿ ತಾನು ಈ ಎಲ್ಲವನ್ನೂ ತಾನು ಮಾಡುವುದಾಗಿ ಅವರು ಹೇಳಿಕೊಂಡಿದ್ದಾರೆ. ಸೋಮವಾರದಂದು ಅವರು ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಕ್ಲಬ್ ಹೌಸ್ ನಲ್ಲಿ ತಮ್ಮ ಸ್ಪೇಸ್ ಎಕ್ಸ್ ಹಾಗೂ ಟೆಸ್ಲಾ ಕಂಪನಿಯ ಪರವಾಗಿ ಮಾತನಾಡುತ್ತಾ ಮಂಗಳ ಗ್ರಹದ ಮೇಲೆ ಕಾರ್ಯ ನಿರ್ವಹಣೆ ಮಾಡುವ ನಗರಗಳ ಮಹತ್ವವನ್ನು ತಿಳಿಸುತ್ತಾ, ಅಂತಹ ನಗರಗಳನ್ನು ಸೃಷ್ಟಿಸುವುದರಿಂದ ಮಾತ್ರವೇ ಮಾನವ ಶಕ್ತಿಯನ್ನು ದೀರ್ಘಕಾಲದವರೆಗೆ ಉಳಿಸಿ ಸಂರಕ್ಷಿಸಲು ಸಾಧ್ಯವಿದೆ ಎಂದು ಹೇಳಿದ್ದಾರೆ.

ಎಲೆನ್ ಮಸ್ಕ್ ಅವರು ಹೇಳುವಂತೆ ನಾವು ದಿನೇ ದಿನೇ ಅನ್ಯ ಗ್ರಹಗಳಿಗೆ ಹೋಗುವ ಸಾಮರ್ಥ್ಯವನ್ನು ಹೊಂದಿದ್ದೇವೆಯೇ ಅಥವಾ ಇಲ್ಲವೇ ಎನ್ನುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಬ್ರಹ್ಮಾಂಡದಲ್ಲಿ ಲಕ್ಷಾಂತರ ವರ್ಷಗಳ ಕಾಲ ಪ್ರಗತಿ ಹೊಂದಿದ ನಾಗರಿಕತೆಗಳು ತಮ್ಮ ಆಂತರಿಕ ಅಥವಾ ಬಾಹ್ಯ ಕಾರಣಗಳಿಂದ ಅ ವ ನತಿ ಹೊಂದಿದೆ ಎಂದು ತಿಳಿದಾಗ ನಮಗೆ ಅತ್ಯಾಶ್ಚರ್ಯ ಎನಿಸುತ್ತದೆ. ಪ್ರತಿಯೊಂದು ನಾಗರಿಕತೆಯೂ ಕೂಡ ಒಂದು ಸರ್ಕಲ್ ನಲ್ಲಿ ತಂತ್ರಜ್ಞಾನದ ಸಂಕೀರ್ಣತೆಯಲ್ಲಿ ಮುಂದೆ ಚಲಿಸಿ ಒಂದು ಹಂತದ ನಂತರ ಅವು ತಟಸ್ಥವಾಗಿ ಬಿಡುತ್ತದೆ. ಅಲ್ಲಿಂದಲೇ ಆ ನಾಗರಿಕತೆಗಳ ಅವಸಾನ ಕೂಡಾ ಆರಂಭವಾಗುತ್ತದೆ ಎಂದು ಹೇಳಿದ್ದಾರೆ. ಇದೆಲ್ಲಾ ಈಗಾಗಲೇ ನಡೆದುಹೋಗಿದ್ದು, ನೀವು ಇತಿಹಾಸದ ವಿದ್ಯಾರ್ಥಿಗಳಾಗಿದ್ದಾರೆ ಭೂತಕಾಲದಲ್ಲಿ ಅಳಿದು ಹೋಗಿರುವಂತಹ ಅದೆಷ್ಟೋ ನಾಗರಿಕತೆಗಳ ಇತಿಹಾಸವು ನಿಮಗೆ ತಿಳಿದಿರುತ್ತದೆ ಎಂದು ಉದಾಹರಣೆಯನ್ನು ಕೂಡಾ ನೀಡಿದ್ದಾರೆ.

ಈ ಸಂದರ್ಭದಲ್ಲಿ ಅವರು ಈಜಿಪ್ಟ್‌ ನ ಉದಾಹರಣೆಯನ್ನು ಕೊಡುತ್ತಾ, ಸುಮಾರು 5000 ವರ್ಷಗಳ ಹಿಂದೆ ಈಜಿಪ್ಟ್ ನ ಗಿಜಾದಲ್ಲಿ ಒಂದು ಬೃಹತ್ತಾದ ಪಿರಮಿಡ್ಡನ್ನು ನಿರ್ಮಾಣ ಮಾಡಿದ್ದರು. ಆದರೆ ದಿನ ಕಳೆದಂತೆ ಅಲ್ಲಿನ ಜನರು ಪಿರಮಿಡ್ ನಿರ್ಮಾಣ ಮಾಡುವ ಕಲೆಯನ್ನು ಮರೆತಿದ್ದಾರೆ. ಇದಾದ ನಂತರ ಈಜಿಪ್ಟಿನ ಚಿತ್ರಲಿಪಿಯನ್ನು ಓದುವ ಕೌಶಲ್ಯವನ್ನು ಕೂಡಾ ಮರೆತು ಹೋಗಿದ್ದಾರೆ. ಇಂತಹದೇ ಪಾಠಗಳು ನಮಗೆ ರೋಮನ್ ಸಾಮ್ರಾಜ್ಯ, ಮೆಸಪಟೋಮಿಯಾ ನಾಗರೀಕತೆ ಹಾಗೂ ಸುಮೇರಿಯನ್ ನಾಗರಿಕತೆ ಗಳಿಂದಲೂ ಕೂಡ ದೊರೆಯುತ್ತದೆ. ನಾವು ಕೂಡಾ ಇದೇ ಸರ್ಕಲ್ ನ ಮೂಲಕ ಹಾಲು ಹೋಗುತ್ತೇವೆ ಆದರೆ ಹಿಂತಿರುಗುವ ಬಗ್ಗೆ ಹೆಚ್ಚಾಗಿ ಆಲೋಚಿಸುವುದಿಲ್ಲ ಎನ್ನುತ್ತಾ ಅವರು ಭೂಮಿಗೆ ಬಾಹ್ಯ ಬೆದರಿಕೆಗಳು ಕೂಡಾ ಇದೆ ಎಂದು ಹೇಳಿದ್ದಾರೆ. ಆದರೆ ಎಲೆನ್ ಮಸ್ಕ್ ಅವರು ಅದರ ಬಗ್ಗೆ ಹೆಚ್ಚಿನ ವಿಚಾರಗಳನ್ನು ವಿವರಿಸಿಲ್ಲ. ಸುಮಾರು 60 ದಶಲಕ್ಷ ವರ್ಷಗಳ ಹಿಂದೆ ಭೂಮಿಯ ಮೇಲೆ ಡೈನೋಸಾರ್ ಗಳು ಸಂಚಾರ ಮಾಡುತ್ತಿದ್ದವು.‌ ಆದರೆ ಒಂದು ಕ್ಷು ದ್ರ ಗ್ರಹದ ಡಿಕ್ಕಿಯಿಂದ ಅವುಗಳು ನಾಶವಾದವು ಎಂದು ಅವರು ವಿವರಿಸಿದ್ದಾರೆ.

ಇನ್ನು ವಿಜ್ಞಾನಿಗಳ ಪ್ರಕಾರ ಭೂಮಿಯ ಮೇಲೆ ಐದು ಬಾರಿ ಪ್ರ ಳ ಯ ಸಂಭವಿಸಿದ್ದು ಆಗ ಸರ್ವವು ಕೂಡ ನಾ ಶ ವಾಗಿತ್ತು. ಆದರೆ ವೈಜ್ಞಾನಿಕವಾಗಿ ಪ್ರ ಳ ಯ ಗಳು ಆಗಾಗ ಸಂಭವಿಸುತ್ತಲೇ ಇರುತ್ತದೆ. ಇದು ಸರ್ಕಲ್‌ ನ ಒಂದು ಭಾಗವಾಗಿದೆ. ಅಮೇರಿಕಾದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಕೂಡಾ ಭೂಮಿಯ ಮೇಲೆ ಬಂದೊದಗಲಿರುವ ಆತಂಕಗಳನ್ನು ನಿವಾರಣೆ ಮಾಡುವುದಕ್ಕಾಗಿ ವಿವಿಧ ರೀತಿಯ ರಕ್ಷಣಾ ತಂತ್ರಗಳನ್ನು ರೂಪಿಸುತ್ತಿದೆ. ಇನ್ನು ಮಾನವನ ಭವಿಷ್ಯ ಅಂತರಿಕ್ಷದಲ್ಲಿ ಇದೆ ಎಂದು ನಂಬಿರುವವರು ಎಲೆನ್ ಮಾಸ್ಕ್ ಒಬ್ಬರೇ ಅಲ್ಲ. ಇನ್ನೂ ಕೆಲವರು ಇಂತಹ ವಿಚಾರಗಳನ್ನು ಹೇಳಿದ್ದಾರೆ. ಸುಮಾರು ನಾಲ್ಕೂವರೆ ಶತಕೋಟಿ ವರ್ಷಗಳ ಭೂಮಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಮಾನವ ಭೂಮಿಯ ಹೊರಗೆ ವಾಸಿಸುವ, ಅನ್ಯ ಗ್ರಹ ಕ್ಕೆ ಹೋಗುವ ಅವಕಾಶವಿದೆ. ಆದರೆ ಈ ಸಂದರ್ಭಕ್ಕೆ ಬಹಳ ಕಡಿಮೆ ಸಮಯ ಉಳಿದಿದೆ ಎಂದು ನಮಸ್ಕಾರ ಹೇಳಿದ್ದಾರೆ.