ಭಾರತ ವಿರೋಧಿ ನೀತಿಯಿಂದ ಚೀನಾ ಪರಿಸ್ಥಿತಿ ನೋಡಿ ಕಂಗಲಾದ ಪಾಕ್ ಅಮೆರಿಕಾದ ಮುಂದೆ ಮಾಡಿದ ಮನವಿಯೇನು ಗೊತ್ತಾ?
ಭಾರತದ ನೆರೆಯ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನಗಳ ಜೊತೆ ನಮ್ಮ ಸಂಬಂಧ ಅಷ್ಟಾಗಿ ಉತ್ತಮವಾಗಿಲ್ಲ. ಈ ಎರಡೂ ರಾಷ್ಟ್ರಗಳು ಕೂಡಾ ಮೊದಲಿನಂದಲೂ ಭಾರತದ ನೀತಿಯನ್ನು ವಿ ರೋ ಧ ಮಾಡುತ್ತಲೇ ಬರುತ್ತಿದ್ದು, ಒಂದಲ್ಲಾ ಒಂದು ಕಾರಣಕ್ಕೆ ಕಾಲು ಕೆರೆದು ನಿಂತಿರುತ್ತವೆ. ಆದರೆ ಇತ್ತೀಚಿನ ಬೆಳವಣಿಗೆಗಳಲ್ಲಿ ಭಾರತವನ್ನು ಸದಾ ವಿ ರೋ ಧಿ ಸುತ್ತಿರುವ ಚೀನಾದ ಪರಿಸ್ಥಿತಿಯನ್ನು ಪರಿವೀಕ್ಷಣೆ ಮಾಡಿರುವ ಭಾರತದ ನೆರೆ ರಾಷ್ಟ್ರ ಪಾಕಿಸ್ತಾನವು ಗಾಬರಿಗೊಂಡಂತೆ ಕಾಣುತ್ತಿದೆ. ಈಗ ಆ ತಂ ಕಕ್ಕೆ ಒಳಗಾಗಿರುವ ಪಾಕಿಸ್ತಾನವು ಭಾರತದೊಂದಿಗೆ ತನ್ನ ಸಂಬಂಧಗಳನ್ನು ತಿಳಿಗೊಳಿಸಲು, ಭಾರತದೊಂದಿಗೆ ಉತ್ತಮ ಸಂಬಂಧವನ್ನು ವೃದ್ಧಿ ಪಡಿಸಲು ಹಾಗೂ ಶಾಂತಿ ಪುನಃ ಸ್ಥಾಪನೆಗೆ ತನಗೆ ನೆರವನ್ನು ನೀಡುವಂತೆ ಅಮೆರಿಕದ ಬಳಿ ಮನವಿಯೊಂದನ್ನು ಮಾಡಿಕೊಂಡಿದೆ. ಪಾಕಿಸ್ತಾನವು ಭಾರತದೊಂದಿಗೆ ಶಾಂತಿ ಸಂಧಾನದ ಮಾತುಕತೆಯನ್ನು ಮಾಡಲು ಬಯಸಿರುವುದಾಗಿ, ಈ ವಿಚಾರದಲ್ಲಿ ಅಮೇರಿಕ ಮಧ್ಯಸ್ಥಿಕೆ ವಹಿಸುವ ಮೂಲಕ ತನಗೆ ಸಹಾಯ ಮಾಡಬೇಕಾಗುತ್ತದೆ ಎಂದು ಅಮೇರಿಕಾದಲ್ಲಿರುವ ಪಾಕಿಸ್ತಾನದ ರಾಯಭಾರಿ ಅಸಾದ್ ಮಜೀದ್ ಖಾನ್ ಅವರು ಹೇಳಿದ್ದಾರೆ.
ಥಿಂಕ್ ಟ್ಯಾಂಕ್ ನ ಕಾರ್ಯಕ್ರಮದಲ್ಲಿ ಮಾತನಾಡಿದ ಅಮೆರಿಕಾದಲ್ಲಿರುವ ಪಾಕಿಸ್ತಾನದ ರಾಯಭಾರಿ ಅಸಾದ್ ಮಜೀದ್ ಖಾನ್ ಅವರು, ಪಾಕಿಸ್ತಾನವು ಶಾಂತಿಯುತ ನೆರೆ ಹೊರೆಗೆ ಸಿದ್ಧವಾಗಿರುವುದಾಗಿ ಹೇಳಿದ್ದಾರೆ. ಆದರೆ ಅಂತಹ ವಾತಾವರಣವನ್ನು ಸೃಷ್ಟಿ ಮಾಡಲು ಭಾರತ ಕೂಡಾ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ. ಕಳೆದ ಕೆಲವು ಸಮಯದಿಂದಲೂ ಕೂಡಾ ಪಾಕಿಸ್ತಾನವು ಭಾರತದೊಂದಿಗೆ ಮಾತುಕತೆಯನ್ನು ನಡೆಸುವ ಕೋರಿಕೆಯನ್ನು ಪದೇಪದೇ ವ್ಯಕ್ತಪಡಿಸಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹಾಗೂ ವಿದೇಶಾಂಗ ಸಚಿವರಾದ ಶಾ ಮೊಹಮ್ಮದ್ ಕುರೇಶಿ ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧವಾಗಿರುವ ವಿಚಾರವನ್ನು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಆದರೆ ಭಾರತ ಮಾತ್ರ ಭ ಯೋ ತ್ಪಾ ದ ನೆ ಮತ್ತು ಮಾತುಕತೆ ಏಕಕಾಲದಲ್ಲಿ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದಿದ್ದಾರೆ.
ಡಾನ್ ಪತ್ರಿಕೆಯ ವರದಿಯ ಪ್ರಕಾರ ವಾಷಿಂಗ್ಟನ್ ನ ಸ್ಟಿಮ್ಸನ್ ಕೇಂದ್ರದಲ್ಲಿ ಭಾಷಣ ಮಾಡುವಾಗ ಪಾಕ್ ರಾಯಭಾರಿಯಾಗಿರುವ ಅಸಾದ್ ಮಜೀದ್ ಖಾನ್ ನೆರೆಹೊರೆಯ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿಯನ್ನು ಪುನಃಸ್ಥಾಪಿಸಲು ಅಮೆರಿಕ ತನ್ನ ಸಂವಾದವನ್ನು ಪ್ರಾರಂಭಿಸಬೇಕು ಎಂದು ಪಾಕಿಸ್ತಾನವು ಬಯಸುತ್ತದೆ ಎಂದಿದ್ದಾರೆ. ಅಲ್ಲದೆ ಈ ಶಾಂತಿ ಮಾತುಕತೆಗೆ ಅಗತ್ಯವಿರುವ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿಯು ಭಾರತಕ್ಕೂ ಇರಬೇಕು ಎಂದು ಹೇಳಿದ್ದಾರೆ. ಮಜೀದ್ ಅವರು ನೀಡಿರುವ ಈ ಹೇಳಿಕೆಗೆ ಭಾರತ ಸರ್ಕಾರವು ಇದುವರೆಗೆ ಕೂಡ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ.
ಇದೇ ವೇಳೆಯಲ್ಲಿ ಮಜೀದ್ ಆಫ್ಘಾನಿಸ್ಥಾನದ ವಿಷಯವನ್ನೂ ಕೂಡಾ ಪ್ರಸ್ತಾಪ ಮಾಡಿದ್ದು, ಅಮೇರಿಕಾದಲ್ಲಿರುವ ಬೈಡನ್ ಸರ್ಕಾರವು ತನ್ನ ಪರವಾಗಿ ಆಫ್ಘಾನಿಸ್ತಾನದ ಜೊತೆಗೆ ಕೂಡ ಶಾಂತಿ ಪುನಃಸ್ಥಾಪನೆಯ ಕುರಿತಾಗಿ ಮಾತನಾಡಬೇಕಿದೆ. ವಿಶೇಷವಾಗಿ ತಾಲಿಬಾನ್ ನೊಂದಿಗೆ ಮಾತುಕತೆ ನಡೆಸಬೇಕು ಎಂದು ಹೇಳಿದ್ದು, ಪಾಕಿಸ್ತಾನವು ಕೂಡಾ ಶಾಂತಿ ಪುನಃ ಸ್ಥಾಪನೆಗೆ ಅಗತ್ಯ ಇರುವ ಎಲ್ಲ ಪ್ರಯತ್ನಗಳನ್ನು ಈಗಾಗಲೇ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಒಂದೆಡೆ ಭಾರತದೊಂದಿಗೆ ಶಾಂತಿ ಮಾತುಕತೆಗೆ ತಾವು ಸಿದ್ದರಿದ್ದೇವೆ ಎನ್ನುತ್ತಲೇ ಇನ್ನೊಂದು ಕಡೆ ಮಜೀದ್ ವಿ ರು ದ್ಧವಾಗಿ ವಿ ಷವನ್ನು ಕೂಡಾ ಕಾರಿದ್ದಾರೆ.
ಮಜೀದ್ ಮಾತನಾಡುತ್ತಾ 2019 ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ನಡೆದಂತಹ ಧಾ ಳಿ ಯ ವಿಷಯವನ್ನು ಪ್ರಸ್ತಾಪಿಸುತ್ತಾ, ಈ ದಾ ಳಿ ಗೆ ಪಾಕಿಸ್ತಾನದ ಕಾರಣ ಎಂದು ದೆಹಲಿಯ ಸರ್ಕಾರವು ನಮ್ಮ ಮೇಲೆ ಆ ರೋ ಪವನ್ನು ಹೊರಿಸಿರುವುದು ಮಾತ್ರವಲ್ಲದೇ ಪಾಕಿಸ್ತಾನದಲ್ಲಿ ಭ ಯೋ ತ್ಪಾ ದಕರ ತರಬೇತಿ ಶಿಬಿರಗಳು ಇವೆ ಎಂದು ಹೇಳಿದೆ. ಆದರೆ ಇಲ್ಲಿ ವಾಸ್ತವವನ್ನು ಗಮನಿಸಿದಾಗ ಭಾರತೀಯ ರಾಜಕೀಯದ ಲಾಭಕ್ಕಾಗಿ ಪಾಕಿಸ್ತಾನ ಗುರಿಯಾಗಿದೆ. ನಮ್ಮ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಶಾಂತಿ ಮಾತುಕತೆಗಾಗಿ ಭಾರತದ ಮುಂದೆ ಅನೇಕ ಬಾರಿ ಪ್ರಸ್ತಾಪ ಮಾಡಿದ್ದಾರೆ ಆದರೆ ಭಾರತ ಮಾತ್ರ ಯಾವುದಕ್ಕೂ ಉತ್ತರ ನೀಡುತ್ತಿಲ್ಲ ಎಂದು ದೂ ರಿ ದ್ದಾರೆ.

ಇದೆಲ್ಲವುಗಳ ನಂತರ ಮಜೀದ್ ಅವರು ಪಾಕಿಸ್ತಾನವು ಭಾರತದೊಂದಿಗೆ ವ್ಯಾಪಾರ ಸಂಪರ್ಕವನ್ನು ಕೂಡ ವೃದ್ಧಿಪಡಿಸಲು ಬಯಸುತ್ತದೆ ಎಂದು ಹೇಳಿದ್ದು, ಈ ನಿಟ್ಟಿನಲ್ಲಿ ಭಾರತ ಸರ್ಕಾರವು ಕಾಶ್ಮೀರದಲ್ಲಿ ತೆಗೆದುಕೊಂಡಂತಹ ಏಕಪಕ್ಷೀಯವಾದ ನಿರ್ಣಯಗಳನ್ನು ಹಿಂಪಡೆದುಕೊಳ್ಳಬೇಕು ಎಂಬ ಸಲಹೆಯನ್ನು ಕೂಡ ನೀಡಿದ್ದಾರೆ. ಒಟ್ಟಾರೆ ಅಮೆರಿಕಾದಲ್ಲಿ ಪಾಕಿಸ್ತಾನದ ರಾಯಭಾರಿ ಮಜೀದ್ ಅಮೇರಿಕಾದ ಹೊಸ ಸರ್ಕಾರವು ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಪುನಸ್ಥಾಪನೆಗೆ ಸಹಕಾರವನ್ನು ನೀಡಬೇಕೆಂದು ಮನವಿಯನ್ನು ಮಾಡಿಕೊಂಡಿದ್ದಾರೆ.