ಮುಖವಾಡ ಧರಿಸಿ ಕುದುರೆಯ ಮುಂದೆ ಬಂದ ವ್ಯಕ್ತಿ: ಮುಖವಾಡ ಕಳಚಿದಾಗ ಕುದುರೆ ನೀಡಿದ ರಿಯಾಕ್ಷನ್ ಈಗ ಫುಲ್ ವೈರಲ್!

ನಮ್ಮ ಮುಂದೆ ಯಾರಾದರೂ ಮುಖವಾಡ ಧರಿಸಿ ಬಂದರೆ, ಅವರ ಧ್ವನಿ ಕೇಳಿದರೆ ನಾವು ಗುರುತು ಹಿಡಿಯಬಹುದೇ ವಿನಃ, ಅವರು ಏನೂ ಮಾತನಾಡದೇ ಕೇವಲ ಮುಖವಾಡ ಧರಿಸಿ ನಮ್ಮ‌ ಮುಂದೆ ನಿಂತರೆ ಅಥವಾ ಅವರು ತಮ್ಮ ಧ್ವನಿಯನ್ನು ಬದಲಿಸಿಕೊಂಡು ಮಾತನಾಡಿದರೆ, ಮುಖವಾಡ ಧರಿಸುವವರು ಯಾರು ಎಂಬುದನ್ನು ತಿಳಿಯುವುದಾಗಲೀ ಅಥವಾ ಗುರುತು ಹಿಡಿಯುವುದು ಅಸಾಧ್ಯವಾಗಿ ಬಿಡುತ್ತದೆ. ಆದರೆ ಅವರು ಮುಖವಾಡ ತೆಗೆದ ನಂತರ ನಮಗೆ ಅವರು ನಮಗೆ ಬಹಳ ಬೇಕಾದವರಾಗಿದ್ದರೆ ಎಷ್ಟೋ ದಿನಗಳಿಂದ ಅವರನ್ನು ಭೇಟಿಯಾಗದೇ ಇರುವವರಾದರೇ, ನಾವು ದೀರ್ಘ ಕಾಲದಿಂದ ಭೇಟಿಯಾಗಲು ಬಯಸಿರುವವರು ಅಥವಾ ನಾವು ಊಹೆಯೇ ಮಾಡಿರದವರೇನಾದರೂ ಕಂಡರೆ ಆಗ ಅಲ್ಲಿ ನಮಗೆ ಬಹಳ ಆಶ್ಚರ್ಯ ಖಂಡಿತವಾಗಿ ಆಗುತ್ತದೆ. ಅಲ್ಲದೇ ಕೆಲವೊಮ್ಮೆ ನಮಗೆ ಆ ಕ್ಷಣದಲ್ಲಿ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬೇಕು ಎನ್ನುವುದು ಕೂಡಾ ಅರ್ಥವಾಗದಂತಹ ಪರಿಸ್ಥಿತಿಯು ಎದುರಾಗಿ ಬಿಡುತ್ತದೆ.

ಇಂತಹ ಸನ್ನಿವೇಶಗಳು ಮನುಷ್ಯರಿಗೆ ಬಹುತೇಕ ಅನೇಕ ಸಂದರ್ಭಗಳಲ್ಲಿ ಆಗಿರುವ ಅನುಭವ ಹಾಗೂ ಕೆಲವೊಮ್ಮೆ ನಾವು ಬೇರೆಯವರು ಹೀಗೆ ಮುಖವಾಡ ಹಾಕಿಕೊಂಡು ಮತ್ತೊಬ್ಬರ ಮುಂದೆ ಬಂದು ಮುಖವಾಡ ತೆಗೆದಾಗ ಅವರನ್ನು ನೋಡಿದವರು ನೀಡುವ ರಿಯಾಕ್ಷನ್ ಬಗ್ಗೆ ವಾಸ್ತವವಾಗಿಯೋ, ಟಿವಿ ಸೀರಿಯಲ್ ಅಥವಾ ಸಿನಿಮಾಗಳ ದೃಶ್ಯಗಳಲ್ಲಿಯೋ ನೋಡಿಯೇ ಇರುತ್ತೇವೆ‌. ಆದರೆ ಇದೇ ರೀತಿಯ ಒಂದು ಘಟನೆ ಪ್ರಾಣಿಗಳ ಮುಂದೆ ನಡೆದರೆ, ಅಂದರೆ ಪ್ರಾಣಿಗಳ ಮುಂದೆ ಮುಖವಾಡ ಧರಿಸಿ ಹೋಗಿ, ಸ್ವಲ್ಪ ಹೊತ್ತಿನ ನಂತರ ಅವುಗಳ ಮುಂದೆ ಮುಖವಾಡ ತೆರೆದಾಗ ಅವು ಯಾವ ರೀತಿ ರಿಯಾಕ್ಷನ್ ನೀಡುತ್ತವೆ ಎನ್ನುವುದನ್ನು ಯಾರೂ ಕೂಡಾ ತಿಳಿದಿಲ್ಲ.

ಆದರೆ ಅದನ್ನು ತಿಳಿಸುವಂತಹ ಒಂದು ವೀಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಾ ಸಾಗಿದೆ. ಈ ವೀಡಿಯೋದಲ್ಲಿ ಕುದುರೆಯ ಮುಖದ ಮುಖವಾಡವನ್ನು ಧರಿಸಿದ ವ್ಯಕ್ತಿಯೊಬ್ಬನು ಕುದುರೆಯ ಮುಂದೆ ಹೋಗಿ ನಿಂತಿರುವುದನ್ನು ನಾವು ಗಮನಿಸಬಹುದು. ನಂತರ ಏನಾಗುತ್ತದೆ ಎನ್ನುವುದನ್ನು ನಾವು ವೀಡಿಯೋದಲ್ಲಿ ನೋಡಬಹುದಾಗಿದೆ. ಈ ವೀಡಿಯೋವನ್ನು ಭಾರತೀಯ ಐಎಫ್ಎಸ್ ಅಧಿಕಾರಿಯಾಗಿರುವ ಪ್ರವೀಣ್ ಅಂಗುಸಾಮಿ ಅವರು ತಮ್ಮ ಟ್ವಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ಹಂಚಿಕೊಂಡ ಪ್ರವೀಣ್ ಅವರು ಶೀರ್ಷಿಕೆಯಲ್ಲಿ, ” ನಿಮಗೆ ಆನ್ಲೈನ್ ನಲ್ಲಿ ಪರಿಚಯವಾದ ಆ ವ್ಯಕ್ತಿಯನ್ನು ಭೇಟಿಯಾದ ಕ್ಷಣ” ಎಂದು ಬರೆದುಕೊಂಡಿದ್ದಾರೆ.

ಇನ್ನು ಈ ವೀಡಿಯೋ ವಿಷಯಕ್ಕೆ ಬಂದರೆ ಇದರಲ್ಲಿ ವ್ಯಕ್ತಿಯೊಬ್ಬನು ಕುದುರೆಯ ಮುಖವಾಡವನ್ನು ಧರಿಸಿ, ಒಂದು ಕುದುರೆಯ ಮುಂದೆ ಬಂದು ನಿಲ್ಲುತ್ತಾನೆ. ಕುದುರೆಯ ಮುಖವಾಡ ಧರಿಸಿ ಬಂದವನನ್ನು ನೋಡಿದ ಕುದುರೆ ಮೊದಲು ಅವನ ಮುಖದ ಮೇಲಿರುವ ಕುದುರೆಯ ಮುಖವನ್ನು ನೆಕ್ಕಲು ಆರಂಭಿಸುತ್ತದೆ. ಅನಂತರ ಆ ವ್ಯಕ್ತಿ ನಿಧಾನವಾಗಿ ತನ್ನ ಮುಖದ ಮೇಲಿದ್ದ ಮುಖವಾಡವನ್ನು ತೆರೆದ ಕೂಡಲೇ ಕುದುರೆ ಶಾ ಕ್ ಆಗಿದೆ‌. ಅದು ಆ ವ್ಯಕ್ತಿಯ ಮುಖವನ್ನು ನೋಡಿದ ಕೂಡಲೇ ಕುದುರೆ ಅಲ್ಲಿಂದ ವೇಗವಾಗಿ ಓಡಿ ಹೋಗಿದೆ. ಎಷ್ಟು ವೇಗವಾಗಿ ಓಡಿದೆ ಎಂದರೆ ಅದು ಆ ವ್ಯಕ್ತಿಯ ಕಡೆ ಹಿಂತಿರುಗಿ ಕೂಡಾ ನೋಡಿಲ್ಲ.

ಟ್ವಿಟರ್ ನಲ್ಲಿ ಶೇರಾದ ಈ ವೀಡಿಯೋ ವನ್ನು ಈಗಾಗಲೇ ಸಾವಿರಾರು ಜನರು ನೋಡಿದ್ದು, ನೂರಾರು ಜನರು ಲೈಕ್ ಗಳನ್ನು ನೀಡಿದ್ದಾರೆ. ಕಾಮೆಂಟ್ ಗಳನ್ನು ಮಾಡಿರುವವರು ಕೂಡಾ ಬಹಳ ಫನ್ನಿಯಾಗಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡುತ್ತಾ ಪಾಪ ಕುದುರೆ ಏನನ್ನು ಬಯಸಿತ್ತೋ ಏನೋ ಆದರೆ ಇದು ಮೋಸ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕುದುರೆಗೆ ಶಾ ಕ್ ಆಗಿದೆ ಎಂದು ತಮಾಷೆ ಮಾಡಿದ್ದಾರೆ. ಕುದುರೆಯ ರಿಯಾಕ್ಷನ್ ಬಹಳ ಫನ್ನಿಯಾಗಿದೆ ಎಂದು ಹೇಳಿದ್ದಾರೆ.