ನೌಕಾಪಡೆಯಲ್ಲಿ ಉದ್ಯೋಗ ಮಾಡಲು ಆಸಕ್ತಿಯಿರುವವರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ: ಟ್ರೆಡ್ ಮೆನ್ ಪೋಸ್ಟ್ ಭರ್ತಿ 2021

ಭಾರತೀಯ ನೌಕಾ ಪಡೆಯು ನಾಗರೀಕ ಪ್ರವೇಶ ಪರೀಕ್ಷೆಗಳಿಗೆ INCET TMM/01/2021 ನ ಮೂಲಕ ವಿವಿಧ ಗ್ರೂಪ್ ನಲ್ಲಿ ವಿವಿಧ ಶ್ರೇಣಿಗಳ ಹುದ್ದೆಗಳಿಗಾಗಿ
ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಿದೆ. ನೌಕಾ ಸೇನೆಯಲ್ಲಿ ಉದ್ಯೋಗವನ್ನು ಮಾಡಲು ಬಯಸುವವರಿಗೆ ಇದೊಂದು ಸುವರ್ಣಾವಕಾಶ ಎಂದೇ ಹೇಳಬಹುದಾಗಿದೆ. ಈಗ ಹೊರಡಿಸಿರುವ ನೇಮಕಾತಿ ಸೂಚನೆಯ ಅನುಸಾರವಾಗಿ ಸಂಬಂಧಿತ ವಿಷಯದಲ್ಲಿ ಅಗತ್ಯವಾದ ಅರ್ಹತೆ ಹಾಗೂ ಅನುಭವವನ್ನು ಹೊಂದಿರುವ ಎಲ್ಲಾ ಅಭ್ಯರ್ಥಿಗಳು ಕೂಡ ಇದೇ ಫೆಬ್ರವರಿ 22 ರಿಂದ joinindiannavy.gov.in ನಲ್ಲಿಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನದಲ್ಲಿ ನೀಡಲಾಗಿರುವ ಆನ್ಲೈನ್ ಲಿಂಕ್ ನ ಮೂಲಕ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಸಾಧ್ಯವಿದೆ ಎಂದು ತಿಳಿಸಲಾಗಿದೆ.

ಪ್ರಮುಖ ದಿನಾಂಕಗಳು ( ಸಂಭವನೀಯ)
ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿರುವ ದಿನಾಂಕ 22: 2: 2021

ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 07:03:2021

*ಭಾರತೀಯ ನೌಕಾಪಡೆಯ ನಾಗರಿಕ ಪ್ರವೇಶ ಪರೀಕ್ಷೆ INCET TMM 01/2021 ಖಾಲಿ ಇರುವ ಹುದ್ದೆಗಳ ವಿವರಗಳು (ಸಂಭವನೀಯ)

ಈಸ್ಟರ್ನ್ ನೇವಲ್ ಕಮಾಂಡ್ – 710 ಪೋಸ್ಟ್ಗಳು

ವೆಸ್ಟರ್ನ್ ನೇವಲ್ ಕಮಾಂಡ್ – 324 ಪೋಸ್ಟ್ಗಳು

ಸದರ್ನ್ ನೇವಲ್ ಕಮಾಂಡ್ – 125 ಪೋಸ್ಟ್ಗಳು

*ಭಾರತೀಯ ನೌಕಾಪಡೆಯ ನಾಗರಿಕ ಪ್ರವೇಶ ಪರೀಕ್ಷೆಯ ಅಂದರೆ INCET TMM 01/2021 ಅರ್ಹತಾ ಮಾನದಂಡಗಳು:

*ಶೈಕ್ಷಣಿಕ ಅರ್ಹತೆ: ಯಾವುದೇ ಮಾನ್ಯತೆ ಪಡೆದ ಕೈಗಾರಿಕಾ ತರಬೇತಿ ಸಂಸ್ಥೆಯ (ಐಟಿಐ) ಪ್ರಮಾಣ ಪತ್ರದೊಂದಿಗೆ, ಹತ್ತನೇ ತರಗತಿ ಪಾಸಾಗಿರುವ ಎಲ್ಲಾ ಅಭ್ಯರ್ಥಿಗಳು ಕೂಡಾ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

*ಭಾರತೀಯ ನೌಕಾಪಡೆಯ ನಾಗರಿಕ ಪ್ರವೇಶ ಪರೀಕ್ಷೆ INCET TMM 01/2021 ವಯಸ್ಸಿನ ಮಿತಿ – 18 ರಿಂದ 25 ವರ್ಷದ ನಡುವೆ (ಸರ್ಕಾರಿ ಮಾನದಂಡಗಳ ಪ್ರಕಾರ ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳಿಗೆ ವಯಸ್ಸಿನ ವಿಚಾರದಲ್ಲಿ ಸಡಿಲಿಕೆ ಇರುತ್ತದೆ)

*ಭಾರತೀಯ ನೌಕಾಪಡೆಯ ನಾಗರಿಕ ಪ್ರವೇಶ ಪರೀಕ್ಷೆ INCET TMM 01/2021 ಆಯ್ಕೆ ಮಾನದಂಡ: ಅರ್ಜಿಗಳ ತಪಾಸಣೆ, ಲಿಖಿತ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪರೀಕ್ಷಾ ಯೋಜನೆ ಈ ಕೆಳಗಿನಂತಿರುತ್ತದೆ.

ಪರೀಕ್ಷಾ ಯೋಜನೆ:

ಎಲ್ಲಾ ಶಾರ್ಟ್ ಲಿಸ್ಟ್ / ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್, ನ್ಯೂಮರಿಕಲ್ ಆಪ್ಟಿಟ್ಯೂಡ್ / ಕ್ವಾಂಟಿಟೇಟಿವ್ ಎಬಿಲಿಟಿ, ಜನರಲ್ ಅವೇರ್ನೆಸ್ ಕುರಿತು ವಸ್ತುನಿಷ್ಠ ಪ್ರಕಾರದ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿರುತ್ತದೆ. ಈ ಪರೀಕ್ಷೆಯ ಒಟ್ಟು ಅಂಕಗಳು 100 ಆಗಿರುತ್ತದೆ. ಅಭ್ಯರ್ಥಿಗಳಿಗೆ ತಮ್ಮ ನೋಂದಾಯಿತ ಇಮೇಲ್ ಐಡಿಯಲ್ಲಿ ಆನ್‌ಲೈನ್ ಪರೀಕ್ಷೆಯ ದಿನಾಂಕ, ಸಮಯ ಮತ್ತು ಸ್ಥಳದ ಬಗ್ಗೆ ತಿಳಿಸಲಾಗುವುದು.

ಭಾರತೀಯ ನೌಕಾಪಡೆಯ ನಾಗರಿಕ ಪ್ರವೇಶ ಪರೀಕ್ಷೆಗೆ ಹೇಗೆ ಅರ್ಜಿ ಸಲ್ಲಿಸಬೇಕು INCET TMM 01/2021: ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 22 2021 ರಿಂದ ಮಾರ್ಚ್ 7 ರವರೆಗೆ ಆನ್‌ಲೈನ್ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.