IPL ಎಲ್ಲ ತಂಡಗಳ ಮಾಲೀಕರ ಪಟ್ಟಿ; ಚೆನ್ನೈ ತಂಡದ ಮಾಲೀಕರ ಹೆಸರು ಕೇಳಿದರೆ ಅಚ್ಚರಿ ಪಡುವಿರಿ!
BCCI ಹುಟ್ಟು ಹಾಕಿದ IPL ಈಗ ದಿನದಿನಕ್ಕೆ ಬೆಳೆದು ಸದ್ಯ 14 ನೇ ಹಂಗಾಮಿಗೆ ಬಂದು ತಲುಪಿದೆ. ಸದ್ಯ ಇದು ಜಗತ್ತಿನ ನೆಚ್ಚಿನ ಕ್ರಿಕೆಟ್ ಪಂದ್ಯಾಟವಾಗಿದೆ. ಈ IPL ಪಂದ್ಯಗಳಲ್ಲಿ ಬಾಲಿವುಡ್ ನಿಂದ ಹಿಡಿದು ದೊಡ್ಡ ದೊಡ್ಡ ಉದ್ಯೋಗಿಗಳು ಹಣವನ್ನು ಹೂಡಿಕೆ ಮಾಡಿ ಪಾಲುದಾರರಾಗಿದ್ದಾರೆ. ಈ ಐಪಿಲ್ ತಂಡಗಳ ಮಾಲೀಕತ್ವವನ್ನು ಹೊಂದಲು ಈ ಮಾಲೀಕರು BCCI ಗೆ ತುಂಬಾ ಮೊತ್ತವನ್ನು ನೀಡಿದ್ದಾರೆ.
IPL-2021, ತಂಡ ಮತ್ತು ತಂಡದ ಮಾಲೀಕರು….

ರಾಯಲ್ ಚಾಲೆಂಜರ್ಸ್ ಬೆಂಗಳೂರು- ಮಹೇಂದ್ರ ಕುಮಾರ್.
RCB ತಂಡದ ಮಾಲೀಕರಾದ ಮಹೇಂದ್ರ ಕುಮಾರ್ ಶರ್ಮಾ ಇವರು ಯುನೈಟೆಡ್ ಸ್ಪೀರಿಟ್ ಕಂಪನಿಯ ಮಾಲೀಕರಾಗಿದ್ದಾರೆ. ಇವರು RCB ತಂಡವನ್ನು ಉದ್ಯಮಿ ವಿಜಯ್ ಮಲ್ಯ ಅವರಿಂದ ಖರೀದಿಸಿದ್ದಾರೆ. ಈ ತಂಡದ ನಾಯಕ ವಿರಾಟ್ ಕೊಹ್ಲಿ ಇದ್ದು ಇಲ್ಲಿಯವರೆಗೆ ಐಪಿಲ್ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ.
ಮುಂಬಯಿ ಇಂಡಿಯನ್ಸ್- ನೀತಾ ಅಂಬಾನಿ.
ಈ ತಂಡದ ಮಾಲೀಕರಾದ ನೀತಾ ಅಂಬಾನಿ ಇವರು ರಿಲಾಯನ್ಸ್ ಇಂಡಸ್ಟ್ರಿಯ ಮಾಲೀಕ ಮುಕೇಶ್ ಅಂಬಾನಿಯವರ ಪತ್ನಿಯಾಗಿದ್ದಾರೆ. ಆದರೂ ಅಧಿಕೃತವಾಗಿ ನೋಡಲಾಗಿ ಮುಂಬಯಿ ಇಂಡಿಯನ್ಸ್ ತಂಡ ಮಾಲೀಕತ್ವವು ರಿಲಾಯನ್ಸ್ ಇಂಡಸ್ಟ್ರಿಗೆ ಸೇರಿದೆ.
ಈ ತಂಡವು ಇಲ್ಲಿಯವರೆಗೆ ಐಪಿಲ್ ನಲ್ಲಿ ಒಳ್ಳೆಯ ದಾಖಲೆ ಹೊಂದಿದೆ. ಐಪಿಲ್ ಇತಿಹಾಸದಲ್ಲಿ ಈ ತಂಡ ಒಟ್ಟು 5 ಬಾರಿ ವಿಜೇತರಾಗಿ ಹೊಮ್ಮಿದೆ. ಈ ತಂಡದ ನಾಯಕ ಹಿಟ್ ಮ್ಯಾನ್ ರೋಹಿತ್ ಶರ್ಮಾ ಇದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್- ಜೆ ಎಂ ಅರ್ ಮತ್ತು ಜೆ ಎಸ್ ಡಬ್ಲ್ಯೂ ಗ್ರೂಪ್.
ಪಾರ್ಥ ಜಿಂದಾಲ್ ಈ ಗ್ರೂಪಿನ ಪ್ರಮುಖರಾಗಿದ್ದಾರೆ. ಈ ತಂಡದ ನಾಯ್ಕ ಶ್ರೇಯಸ್ ಅಯ್ಯರ್ ಇದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್- ಎನ್ ಶ್ರೀನಿವಾಸನ್.
ಬಿಸಿಸಿಐ ಮಾಜಿ ಅಧ್ಯಕ್ಷರಾದ ಎನ್ ಶ್ರೀನಿವಾಸನ್ ಇವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರಾಗಿದ್ದಾರೆ. ಹಾಗೆ ನೋಡಲಾಗಿ ಈ ತಂಡದ ಮಾಲೀಕತ್ವವು ಇಂಡಿಯಾ ಸಿಮೆಂಟ್ ಲಿಮಿಟೆಡ್ ಕಡೆಗೆ ಇದೆ. ಏನ್ ಶ್ರೀನಿವಾಸನ್ ಇವರು ಇಂಡಿಯಾ ಸಿಮೆಂಟ್ ಲಿಮಿಟೆಡ್ ಮಾಲೀಕರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಲ್ಲಿಯವರೆಗೆ ಮೂರು ಬಾರಿ ಐಪಿಎಲ್ ಪಟ್ಟವನ್ನು ಧರಿಸಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್:- ಪ್ರೀತಿ ಜಿಂಟಾ ಮತ್ತು ಸುರೇಂದ್ರ ಪಾಲ್.
ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಮಾಲೀಕತ್ವವು ನಾಲ್ಕು ವ್ಯಕ್ತಿಗಳ ಕೈಯಲ್ಲಿದೆ. ಇವರಲ್ಲಿ ಪ್ರೀತಿ ಜಿಂಟಾ, ಸುರೇಂದ್ರ ಪಾಲ್, ನೆಸ್ ವಾಡಿಯಾ ಮತ್ತು ಮೋಹಿತ್ ಬರ್ಮನ್. ಈ ತಂಡದ ನಾಯಕತ್ವದ ಜವಾಬ್ದಾರಿ ಕನ್ನಡಿಗರಾದ ಕೆಎಲ್ ರಾಹುಲ್ ಅವರ ಹೆಗಲ ಮೇಲಿದೆ.
ಕೊಲ್ಕತ್ತಾ ನೈಟ್ ರೈಡರ್ಸ್:- ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕತ್ವ ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ ಅವರ ಕಡೆಗಿದೆ. ಜೂಹಿ ಚಾವ್ಲಾ ಅವರ ಪತಿ ಜಯ ಮೆಹತಾ ಅವರು ಸಹ ತಂಡದ ಸಹ ಮಾಲೀಕರಾಗಿದ್ದಾರೆ. ಶಾರುಖ್ ಖಾನ್ ಅವರ ಕಂಪನಿಯಾದ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಕಡೆಗೂ ತಂಡದ ಮಾಲೀಕತ್ವವಿದೆ. ಈ ತಂಡವು ಇಲ್ಲಿಯವರೆಗೆ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ. ಸದ್ಯ ಈ ತಂಡದ ನಾಯಕ ದಿನೇಶ್ ಕಾರ್ತಿಕ್ ಇದ್ದಾರೆ.
ರಾಜಸ್ಥಾನ್ ರಾಯಲ್ಸ್:- ಮನೋಜ್ ಬಡಾಲೆ ಮತ್ತು ಲಚಲನ್ ಮುರ್ದೊಚ್
ಮೇಲೆ ಪ್ರಸ್ತಾಪಿಸಿದ ಇಬ್ಬರು ಮಾಲೀಕರು ಎಮರ್ಜಿಂಗ್ ಮೀಡಿಯಾ ಕಂಪನಿಯ ಮಾಲೀಕರು ಆಗಿದ್ದಾರೆ. ಈ ತಂಡದ ನಾಯಕ ಆಸ್ಟ್ರೇಲಿಯಾ ತಂಡದ ನಾಯಕರಾದ ಸ್ಟೀವನ್ ಸ್ಮಿತ್ ಇದ್ದಾರೆ. ಈ ಸಂಘವು ಇಲ್ಲಿಯವರೆಗೆ ಐಪಿಎಲ್ ನ ಒಂದೇ ಒಂದು ಸಲ ಮೊಟ್ಟಮೊದಲ ಬಾರಿಯ ಟ್ರೋಫಿಯನ್ನು ಗೆದ್ದಿದೆ.
ಸನ್ರೈಸರ್ಸ್ ಹೈದರಾಬಾದ್:- ಕಲಾನಿಧಿ ಮಾರನ್ ಮತ್ತು ಸನ್ ಟಿವಿ ನೆಟ್ವರ್ಕ್.
ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಲೀಕತ್ವ ಕಲಾನಿಧಿ ಮಾರನ್ ಮತ್ತು ಸನ್ ಟಿವಿ ನೆಟ್ವರ್ಕ್ ಕಡೆಗಿದೆ. ಮಾರನ್ ಇವರು ಸನ್ ಟಿವಿ ನೆಟ್ವರ್ಕ್ ನ ಮಾಲೀಕರಾಗಿದ್ದಾರೆ. ಈ ತಂಡದ ನಾಯಕ ಡೇವಿಡ್ ವಾರ್ನರ್ ಇದ್ದು ಹೈದರಾಬಾದ್ ತಂಡವು ಒಂದು ಬಾರಿ ಐಪಿಎಲ್ ಪಟ್ಟ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದೆ.