ಲಾಕ್ ಡೌನ್ ನಲ್ಲಿ ಮಧ್ಯದ ಆನ್ ಲೈನ್ ಡೆಲಿವರಿ? ಗೈಡ್ ಲೈನ್ ಏನು ಗೊತ್ತಾ ಹಾಗಾದ್ರೆ ಓದಿ ವಿವರ.

ದೆಹಲಿ ಮೇ 3: ಕೇಂದ್ರ ಗೃಹ ಇಲಾಖೆ ಜಾರಿ ಗೊಳಿಸಿದ ಗೈಡ್ ಲಾಯಿನ್ಸ್ ನಲ್ಲಿ ಕೊಟ್ಟ ಮಾಹಿತಿ ಪ್ರಕಾರ ಮೇ 4 ರಿಂದ ಲಾಕ್ ಡೌನ್ ದ 3 ನೇ ಹಂತ ಪ್ರಾರಂಭವಾಗಲಿದೆ. ಇದರಲ್ಲಿ ಮೇಲೆ ಹೇಳಿದ ಪ್ರಕಾರ ಮೂರು ಜೋನ್ ಗಳಲ್ಲಿ ಮಧ್ಯ ವಿಕ್ರಿಗೆ ಅನುಮತಿ ನೀಡಲಾಗಿದೆ. ಎಲ್ಲಿ ಬರೀ ಮಧ್ಯದ ಅಂಗಡಿಗಳಿವೆ ಅಲ್ಲಿ ಅಷ್ಟೇ ಅನುಮತಿ ಇದೆ, ಆದರೆ ಮಾಲ್ ಗಳಲ್ಲಿರುವ ಮಧ್ಯದಂಗಡಿಗಳಿಗೆ ಅನುಮತಿ ಇಲ್ಲ. ಈ ಪರಿಸ್ಥಿತಿಯಲ್ಲಿ ಎಲ್ಲರೂ ಮಧ್ಯದ ಆನ್ ಲೈನ್ ಡಿಲೆವರಿ ಮಾಡಲು ಒತ್ತಾಯ ಮಾಡುತ್ತಿದ್ದಾರೆ. ಕಾರಣ ಮಧ್ಯದ ಅಂಗಡಿಗಳಲ್ಲಿ ಆಗುವ ಜನದಟ್ಟಣೆ ಹಾಗೂ ಸಾಮಾಜಿಕ ಅಂತರದ ನಿಯಮಗಳು ಮುರಿಯದಂತೆ ಪಾಲಿಸಲು ಸಹಕಾರವಾಗುತ್ತದೆ.

ಕೊರೊನಾದ ಈ ಸಂಕಟದಲ್ಲಿ ಮಧ್ಯಮಾರಾಟದಿಂದ ದೊರೆಯುವ ಉತ್ಪನ್ನ ಮಹತ್ವದ್ದಾಗಿದೆ. ಯಾಕೆಂದರೆ ಸರಕಾರದ ಖರ್ಚು ಹೆಚ್ಚಾಗಿ ಉತ್ಪನ್ನ ಮಾತ್ರ ಅತೀ ಕಡಿಮೆಯಾಗಿದೆ.

ISWAI (The International Spirits and Wines Association of India ) ನ ಅಧ್ಯಕ್ಷ ಅಮೃತ ಕಿರಣ್ ಸಿಂಹ ಅವರು ಹಿಂದೂಸ್ತಾನ್ ಟೈಮ್ಸ್ ಗೆ ಕೊಟ್ಟ ಸಂದರ್ಶನದಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಿದ ನಂತರ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತೇವೆ. ನಾವು ಸೇಫ್ ಶೀಲ್ಡ್ ದ ಉಪಯೋಗ ಮಾಡುತ್ತೇವೆ. ಇದರಿಂದ ಕೌಂಟರ್ ಮೇಲೆ ಟ್ರೆ ಇಟ್ಟು ಸಂಪರ್ಕ ರಹಿತ ವಿಕ್ರಿ ಮಾಡಲಾಗುತ್ತದೆ. ಆಮೇಲೆ ಎರಡನೆಯ ಹಂತದಲ್ಲಿ ಹೋಮ್ ಡೆಲಿವರಿ ಬಗ್ಗೆ ವಿಚಾರ ಮಾಡಲಾಗುವದು. ಇದಕ್ಕೆ ಸ್ವಿಗ್ಗಿ ಮತ್ತು ಝೋಮ್ಯಾಟೋ ಅವರಿಂದ ಸಹಾಯ ತೆಗೆದುಕೊಳ್ಳಲಾಗುವದು.

ಇದಕ್ಕಾಗಿ ರಾಜ್ಯ ಸರಕಾರದ ಜೊತೆಗೆ ವಿಚಾರ ವಿನಿಮಯ ನಡೆದಿದೆ. ಸಾಮಾಜಿಕ ಅಂತರ, ದಟ್ಟಣೆ ಹಾಗೂ ಹೋಮ್ ಡೇಲಿವರಿಯ ಆಯ್ಕೆಗಳ ಬಗ್ಗೆಯೂ ದಾರಿ ಹುಡುಕುತ್ತಿದ್ದೇವೆ. ಎಲ್ಲ ನಿಯಮಗಳ ಪಾಲನೆ ಮಾಡುತ್ತ ಜಾರಿಗೊಳಿಸಿದರೆ ಸರಕಾರಕ್ಕೆ 75 ಪ್ರತಿಶತ ಕಂದಾಯದ ಲಾಭವಿದೆ.