ನ್ಯಾಷನಲ್ ಕ್ರಶ್ ಪ್ರೀಯಾ ಪ್ರಕಾಶ್ ವಾರಿಯರ್ ಶೂಟಿಂಗ್ ವೇಳೆ ಅಪಘಾತ; ಸ್ವತಃ Video ಹಂಚಿಕೊಂಡ ನಟಿ! ನೋಡಿ Video

ತನ್ನ ಕಣ್ಸನ್ನೆಯಿಂದಲೇ ಲಕ್ಷಾವಧಿ ಯುವಕರ ಹೃದಯದಲ್ಲಿ ಕಿಚ್ಚು ಹಚ್ಚಿದ ಬೆಡಗಿ ಪ್ರಿಯಾಳು ಒಂದೇ ರಾತ್ರಿಯಲ್ಲಿ ನ್ಯಾಷನಲ್ ಕ್ರಶ್ ಆಗಿದ್ದಳು. ಸದ್ಯ ಈಕೆ ತನ್ನ ಚಲನಚಿತ್ರದ ಪ್ರವಾಸ ತೆಲುಗು ಭಾಷೆಯಿಂದ ಪ್ರಾರಂಭ ಮಾಡಲಿದ್ದಾರೆ. ಇದೇ ಚಿತ್ರದ ಒಂದು ಹಾಡಿನ ಶೂಟಿಂಗ್ ಸಂದರ್ಭದಲ್ಲಿ ಪ್ರಿಯಾಳು ಬಿದ್ದಿದ್ದಾಳೆ. ಆಗ ಪೆಟ್ಟು ನೇರ ತಲೆಗೆ ತಗುಲಿದೆ. ಈ ಅಪಘಾತದ ವಿಡಿಯೋವನ್ನು ಸ್ವತಃ ಪ್ರಿಯಾಳೇ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾಳೆ. ಇದು ಸದ್ಯಕ್ಕೆ ತುಂಬಾ ವೈರಲ್ ಆಗಿದೆ.

ಕ್ರ್ಯಾಕ್ ಚಿತ್ರದ ಮುಖಾಂತರ ಪ್ರಿಯಾ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಇದು ತೆಲುಗು ಭಾಷೆಯ ಚಿತ್ರವಾಗಿದೆ. ಇದೇ ಚಿತ್ರದಲ್ಲಿಯ ಒಂದು ಹಾಡಿನ ಶೂಟಿಂಗ್ ಹೊತ್ತಿನಲ್ಲಿ ಈ ಅಪಘಾತ ನಡೆದಿದೆ. ವಿಶೇಷವೆಂದರೆ ಈ ಅಪಘಾತದ ವಿಡಿಯೋವನ್ನು ಸ್ವತಃ ಪ್ರಿಯಾ ಅವರೇ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ. ಅಪಾರ ಫ್ಯಾನ್ಸ್ ಬಳಗ ಹೊಂದಿರುವ ಪ್ರಿಯಾ ಅವರ ಈ ವಿಡಿಯೋ ತುಂಬಾನೇ ವೈರಲ್ ಆಗಿದೆ.

ವಿಡಿಯೋ ನೋಡಿ

ಈ ಚಿತ್ರೀಕರಣದ ವಿಡಿಯೋದಲ್ಲಿ ನಟ ಹಾಡುತ್ತಾ ಒಂದು ಸ್ಥಳಕ್ಕೆ ಬಂದು ನಿಲ್ಲುತ್ತಾನೆ. ಆಗ ಪ್ರಿಯಾ ಹಿಂದಿನಿಂದ ಬಂದು ನಟನ ಭುಜದ ಮೇಲೆ ಜಿಗಿದು ಕೂಡಲು ಪ್ರಯತ್ನಿಸುತ್ತಾಳೆ. ಇದೇ ಸಮಯದಲ್ಲಿ ಪ್ರಿಯಾಳ ಬ್ಯಾಲೆನ್ಸ್ ತಪ್ಪಿ ನೆಲದ ಮೇಲೆ ಮುಖ ಮೇಲೆ ಮಾಡಿ ಬಿದ್ದಿದ್ದರಿಂದ ತಲೆಗೆ ಪೆಟ್ಟು ಬಿದ್ದಿದೆ. ತಕ್ಷಣ ಅಲ್ಲಿ ಕಾರ್ಯನಿರತವಾದ ಟೀಮ್ ಆಕೆಯನ್ನು ಎಬ್ಬಿಸಲು ಮುಂದಾಗಿದೆ. ಆದರೆ ಪ್ರಿಯಾಳು ಮಾತ್ರ ತನಗೆ ಯಾವುದೇ ರೀತಿಯ ಜೋರಾದ ಪೆಟ್ಟು ಬಿದ್ದಿಲ್ಲ ತಾನು ಸರಿಯಾಗಿಯೇ ಇದ್ದೇನೆ ಎಂದು ಹೇಳಿದ್ದು ಕಂಡು ಬರುತ್ತದೆ.