ಮಾಲ್ಡೀವ್ಸ್ ನಲ್ಲಿ ಕ್ರಿಕೆಟಿಗ ಚಹಲ್ ಮತ್ತು ಧನಾಶ್ರೀ ವರ್ಮಾ ಸೆಕೆಂಡ್ ಹನಿಮೂನ್: ಬಿ ಕಿ ನಿ ಯಲ್ಲಿ ಅಭಿಮಾನಿಗಳ ಹೃದಯಕ್ಕೆ ಲಗ್ಗೆಯಿಟ್ಟ ಧನಾಶ್ರೀ!

ಗಂಡ ಕ್ರಿಕೆಟ್ ಸ್ಟಾರ್ , ಹೆಂಡತಿ ಸೋಶಿಯಲ್ ಮೀಡಿಯಾಗಳಲ್ಲಿ ಡಾನ್ಸಿಂಗ್ ಸ್ಟಾರ್. ಯಾರದು ಎಂದು ಕೆಲವರಿಗೆ ಪ್ರಶ್ನೆ ಮೂಡಿರಬಹುದು. ಆದರೆ ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಸಕ್ರಿಯವಾಗಿರುವವರಿಗೆ ಹಾಗೂ ಡಾನ್ಸ್ ಗಳಲ್ಲಿ ಆಸಕ್ತಿ ಇರುವವರಿಗೆ ಈಗಾಗಲೇ ನಾವು ಯಾರ ಬಗ್ಗೆ ಹೇಳುತ್ತಿದ್ದೇವೆ ಎಂಬುದಕ್ಕೆ ಉತ್ತರ ಕೂಡಾ ಹೇಳಿ ಬಿಟ್ಟಿರುತ್ತಾರೆ. ನಾವು ಹೇಳುತ್ತಿರುವುದು ಮತ್ತಾರೂ ಅಲ್ಲ ಭಾರತೀಯ ಕ್ರಿಕೆಟ್ ನ ಯುವ ಆಟಗಾರ ಯಜ್ವೇಂದ್ರ ಚಹಲ್ ಹಾಗೂ ಅವರ ಪತ್ನಿ ಸೋಶಿಯಲ್ ಮೀಡಿಯಾಗಳ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಧನಾಶ್ರೀ ವರ್ಮಾ ಅವರ ಬಗ್ಗೆ. ಧನಾಶ್ರೀ ವರ್ಮಾ ಮತ್ತು ಯಜ್ವೇಂದ್ರ ಚಹಲ್ ಅವರು ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡ ನಂತರ ಫೋಟೋ ಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸೆನ್ಸೇಷನ್ ಹುಟ್ಟು ಹಾಕಿದ್ದರು. ಅವರ ಫೋಟೋಗಳು ಎಲ್ಲೆಲ್ಲೂ ಕೂಡಾ ವೈರಲ್ ಆಗಿ ಗಮನ ಸೆಳೆದಿದ್ದವು.

ಯಜ್ವೇಂದ್ರ ಚಹಲ್ ಕ್ರಿಕೆಟ್ ನಲ್ಲಿ ತನ್ನ ಸಾಧನೆ ಮಾಡುತ್ತಿರುವಾಗಲೇ ಇತ್ತ ಸೋಶಿಯಲ್ ಮೀಡಿಯಾಗಳಲ್ಲಿ ಧನಾಶ್ರೀ ಅವರ ಡಾನ್ಸಿಂಗ್ ವೀಡಿಯೋಗಳು ಭರ್ಜರಿ ವೈರಲ್ ಆಗ ತೊಡಗಿದವು. ಧನಾಶ್ರೀ ವರ್ಮಾ ಬಾಲಿವುಡ್ ನ ಸೂಪರ್ ಹಿಟ್ ಹಾಡುಗಳಿಗೆ ಹಾಕುವ ಹೆಜ್ಜೆಗಳು, ಆಕೆಯ ಡಾನ್ಸ್ ಸ್ಟೈಲ್ ಡಾನ್ಸ್ ಪ್ರಿಯರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದವು. ಧನಾಶ್ರೀ ವರ್ಮಾ ವೃತ್ತಿಯಿಂದ ಡಾಕ್ಟರ್ ಆದರೂ ಕೂಡಾ ಆಕೆ ಹೆಸರಾಗಿರುವುದು ಮಾತ್ರ ಜನಪ್ರಿಯ ಆಗಿರುವುದು ಮಾತ್ರ ಯೂಟ್ಯೂಬರ್ ಹಾಗೂ ಕೊರಿಯೋಗ್ರಾಫರ್ ಆಗಿ ಎನ್ನುವುದು ಕೂಡಾ ವಾಸ್ತವ. ಧನಾಶ್ರೀ ವರ್ಮಾ ಶೇರ್ ಮಾಡುವ ವೀಡಿಯೋಗಳು ಕೆಲವೇ ಗಂಟೆಗಳಲ್ಲಿ ವೈರಲ್ ಆಗುವುದು ಕೂಡಾ ಆಕೆಯ ಜನಪ್ರಿಯತೆಗೆ ಕಾರಣವಾಗಿದೆ.

ಯಜ್ವೇಂದ್ರ ಚಹಲ್ ಹಾಗೂ ಧನಾಶ್ರೀ ವರ್ಮಾ ಇಬ್ಬರು ಕಳೆದ ವರ್ಷ ಡಿಸೆಂಬರ್ ನಲ್ಲಿ ವಿವಾಹ ಬಂಧದ ಮೂಲಕ ಸಾಂಸಾರಿಕ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಯಜ್ವೇಂದ್ರ ಅವರು ಐಪಿಎಲ್ ಗಾಗಿ ದುಬೈನಲ್ಲಿದ್ದಾಗ ಧನಾಶ್ರೀ ವರ್ಮಾ ಆಗ ದುಬೈ ಗೆ ಹೋಗಿ ಯಜ್ವೇಂದ್ರ ಅವರ ಟೀಂ ಗೆ ಚಿಯರ್ ಮಾಡಿದ್ದರು ಅಲ್ಲದೇ ಅವರಿಬ್ಬರು ಸಂತೋಷದಿಂದ ಕಳೆದ ಸುಂದರ ಕ್ಷಣಗಳ ಫೋಟೋಗಳು ಹಾಗೂ ವೀಡಿಯೋಗಳು ಕೂಡಾ ಸದ್ದು ಮಾಡಿದ್ದವು. ಈಗ ಮತ್ತೊಮ್ಮೆ ಧನಾಶ್ರೀ ವರ್ಮಾ ವೀಡಿಯೋ ವೈರಲ್ ಆಗಿದೆ. ಆದರೆ ಈ ಬಾರಿ ಅವರು ಯಾವುದೋ ಸೂಪರ್ ಹಿಟ್ ಹಾಡಿಗೆ ಹೆಜ್ಜೆ ಹಾಕಿ ಅಭಿಮಾನಿಗಳ ಮನಸ್ಸಿಗೆ ಲಗ್ಗೆ ಇಟ್ಟಿಲ್ಲ. ಹಾಗಾದ್ರೆ ಈ ಹೊಸ ವೀಡಿಯೋದ ವಿಶೇಷ ಏನು ಅನ್ನೋದಾದ್ರೆ ವಿಶೇಷ ಖಂಡಿತ ಇದೆ.

ಮದುವೆಯ ನಂತರ ಯಜ್ವೇಂದ್ರ ಚಹಲ್ ಹಾಗೂ ಧನಾಶ್ರೀ ವರ್ಮಾ ತಮ್ಮ ಹನಿಮೂನ್ ನ ಸುಂದರ ದಿನಗಳನ್ನು ಕಳೆಯುವುದಕ್ಕಾಗಿ ಮಾಲ್ಡೀವ್ಸ್ ಗೆ ಹೋಗಿದ್ದಾರೆ. ಮಾಲ್ಡೀವ್ಸ್ ನ ಸುಂದರವಾದ ಬೀಚ್ ನಲ್ಲಿ, ಕೆಂಪು ಬಣ್ಣದ ಓಪನ್ ಗೌನ್ ಧರಿಸಿ ಬಿಕಿನಿಯಲ್ಲಿ ಮಿಂಚಿದ್ದಾರೆ ಧನಾಶ್ರೀ ವರ್ಮಾ. ಇದೇ ವೀಡಿಯೋವನ್ನು ಧನಾಶ್ರೀ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದು ಅವರ ಅಭಿಮಾನಿಗಳು ಧನಾಶ್ರೀ ಅವರ ಹಾಟ್ ಲುಕ್ ನೋಡಿ ಫಿದಾ ಆಗಿದ್ದಾರೆ.‌ ಸಾಗರ ತೀರದಲ್ಲಿ ಐಶಾರಾಮೀ ರೆಸಾರ್ಟ್ ನ ಸುಂದರ ವಾತಾವರಣದಲ್ಲಿ ವೇಳೆಯಲ್ಲಿ ಕೆಂಪು ಬಣ್ಣದ ಧಿರಿಸು, ನೀಲಿ ಬಣ್ಣದ ಬಿಕಿನಿ ಧರಿಸಿದ ಧನಾಶ್ರೀ ಹಾಟ್ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ವಿಡಿಯೋ ನೋಡಿ

ಧನಾಶ್ರೀ ಅವರು ಇನ್ಸ್ಟಾಗ್ರಾಂ ರೀಲ್ ನಲ್ಲಿ ಶೇರ್ ಮಾಡಿಕೊಂಡ ಈ ವೀಡಿಯೋ ವನ್ನು ಈಗಾಗಲೇ ಐದು ಲಕ್ಷಕ್ಕೂ ಅಧಿಕ ಮಂದಿ ಲೈಕ್ ಗಳನ್ನು ನೀಡಿದ್ದು, ಅದಕ್ಕಿಂದ ಹೆಚ್ಚು ಜನರು ಅದನ್ನು ವೀಕ್ಷಣೆ ಮಾಡಿದ್ದಾರೆ. ಒಂದು ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಕಾಮೆಂಟ್ ಮಾಡಿದವರಲ್ಲಿ ಅನೇಕರು ನೀವು ತುಂಬಾ ಹಾಟ್ , ಬ್ಯೂಟಿಫುಲ್‌, ಒಳ್ಳೆ ಲೊಕೇಶನ್ ನಲ್ಲಿ ಒಳ್ಳೆ ಲುಕ್ ಅಂಡ್ ಫೋಸ್ ಎಂದೆಲ್ಲಾ ಹೇಳುತ್ತಾ ಧನಾಶ್ರೀ ವರ್ಮಾ ಅವರ ಸೌಂದರ್ಯವನ್ನು ಹಾಡಿ ಹೊಗಳುತ್ತಿದ್ದು ಧನಾಶ್ರೀ ಅವರ ಈ ಹೊಸ ವೀಡಿಯೋ ಕೂಡಾ ಡಾನ್ಸ್ ವೀಡಿಯೋಗಳಂತೆ ವೈರಲ್ ಆಗುತ್ತಾ ಸಾಗಿದೆ.