ಮುದ್ದು ಮಗಳಿಗಾಗಿ ಗೊಂಬೆ ಖರೀದಿಸಿದ ದಂಪತಿ; ಒಳಗಡೆ ಇರುವ ವಸ್ತು ನೋಡಿ ಫುಲ್ ಶಾಕ್!

ಎಷ್ಟೋ ಸಲ ಸಹಜವಾಗಿ ನಾವು ಕೆಲವೊಂದು ವಸ್ತುಗಳನ್ನು ಮಕ್ಕಳಿಗಾಗಿ ಮತ್ತು ನಮಗಾಗಿ ಖರೀದಿಸುತ್ತೇವೆ. ಕೆಲವೊಮ್ಮೆ ನಮಗೆ ಗೊತ್ತಿಲ್ಲದೆಯೇ ಆ ವಸ್ತುಗಳಿಂದ ಸಿಗಬಾರದ ಕಷ್ಟಕ್ಕೆ ಸಿಲುಕಿ ಒದ್ದಾಡುತ್ತೆವೆ.

ಅಮೆರಿಕೆಯ ಏರಿಜೋನಾ ಪ್ರಾಂತದ ಫೀನಿಕ್ಸ್ ನಲ್ಲಿಯೂ ಇದೇ ರೀತಿಯ ಒಂದುಘಟನೆ ನಡೆದಿದೆ. ಇಲ್ಲಿ ವಾಸಿಸುವ ದಂಪತಿಗಳು ತಮ್ಮ ಮಗಳಿಗಾಗಿ ಹಸಿರು ಬಣ್ಣದ ಒಂದು ಸುಂದರ ಬೊಂಬೆಯನ್ನು ಖರೀದಿಸಿದ್ದಾರೆ. ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದರೆ ಸಾಕು ಆಟಿಗೆ ಸಾಮಾನುಗಳಿಂದ ಮನೆ ತುಂಬಿ ಹೋಗುತ್ತದೆ. ಈಗಿನ ಪೋಷಕರು ಮಕ್ಕಳಿಗಾಗಿ ಆಟಿಗೆ ಸಾಮಾನುಗಳನ್ನು ಖರೀದಿಸುವಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. ಆಟಿಗೆ ಸಾಮಾನುಗಳನ್ನು ಯಾರು ತೆರೆದು ನೋಡುವ ಗೋಜಿಗೆ ಹೋಗುವದಿಲ್ಲ. ಕೆಲವು ದಿವಸಗಳ ನಂತರ ಈ ಗೊಂಬೆ ಸ್ವಲ್ಪ ಕೊಳಕಾದ ಕಾರಣದಿಂದಾಗಿ ಅದನ್ನು ವಾಶ್ ಮಾಡಲು ಪ್ರಯತ್ನಿಸುವಾಗ ಅದರಲ್ಲಿ ಒಂದು ಪಾಲಿಥಿನ್ ಚೀಲದಲ್ಲಿ ಕೆಲವು ಗುಳಿಗೆಗಳು ಕಂಡು ಬಂದಿವೆ. ಆ ಗುಳಿಗೆಗಳನ್ನು ಸರಿಯಾಗಿ ಪರಿಶೀಲಿಸಿ ನೋಡಿದಾಗ ಗೊತ್ತಾಗಿದೆ ಅವು ಡ್ರಗ್ಸ್ ನ ಗುಳಿಗೆಗಳು ಇವೆ ಎಂದು. ಅವು ಅಷ್ಟಿಷ್ಟಲ್ಲ ಒಟ್ಟು 5 ಸಾವಿರ ಗುಳಿಗೆಗಳು ಇದ್ದವು. ಇವುಗಳನ್ನು ನೋಡಿ ದಂಪತಿಗಳ ರಾತ್ರಿಯ ನಿದ್ರೆಯೇ ಹಾರಿ ಹೋಗಿದೆ.

ತಕ್ಷಣ ಮುಂಜಾನೆ ಫೀನಿಕ್ಸ್ ಪಟ್ಟಣದ ಪೊಲೀಸರಿಗೆ ನಡೆದ ಘಟನೆಯ ವರದಿ ಒಪ್ಪಿಸಿದ್ದಾರೆ. ಆನಂತರ ತಾವು ಗೊಂಬೆಯನ್ನು ಖರೀದಿಸಿದ ಅಂಗಡಿಯ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆ ಗುಳಿಗೆಗಳು ಫೆಂಟ್ ನಾಯಿಲ್ ಹೆಸರಿನ ಮಾದಕ ದ್ರವ್ಯಕ್ಕೆ ಸಂಬಂಧಿಸಿದ ಡ್ರಗ್ಸ್ ಇದೆ ಎಂದು ತಿಳಿದು ಬಂದಿದೆ. ಸದ್ಯ ಡ್ರಗ್ಸ್ ನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆಯನ್ನು ಕೈಗೆ ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ಮಕ್ಕಳಿಗೆ ಆಟಿಗೆ ಸಾಮಾನುಗಳನ್ನು ಖರೀದಿಸುವಾಗಲು ಪೋಷಕರು ಇನ್ನಷ್ಟು ಗಮನ ಹರಿಸಬೇಕು ಎನ್ನುವಂತಾಗಿದೆ.