ಮದುವೆಯಲ್ಲಿ ವಧು-ವರರ ತಲೆಯ ಮೇಲೆ ಅಕ್ಕಿಕಾಳು(ಅಕ್ಷತೆ) ಏಕೆ ಹಾಕುತ್ತಾರೆ ಗೊತ್ತಾ?
ಮಾರ್ಚ್ ಏಪ್ರಿಲ್ ತಿಂಗಳು ಬಂದರೆ ಸಾಕು ನಿಶ್ಚಿತಾರ್ಥ, ಮದುವೆ ಕಾರ್ಯಕ್ರಮಗಳು ಪ್ರಾರಂಭ ವಾಗುವವು. ಆದ್ರೆ ಸದ್ಯಕ್ಕೆ ಕೋರೊನಾ ವೈರಸ್ ನಿಂದಾಗಿ ಎಲ್ಲ ಕಾರ್ಯಕ್ರಮಗಳು ರದ್ದುಪಡಿಸುವಂತೆ ಸರಕಾರ ಆದೇಶಿಸಿದೆ. ನಮಗೆಲ್ಲ ಗೊತ್ತಿರುವ ಹಾಗೆ ಮದುವೆಯಲ್ಲಿ ವಧು-ವರರ ತಲೆಯ ಮೇಲೆ ಅಕ್ಕಿಕಾಳು ಹಾಕುತ್ತಾರೆ. ಅಷ್ಟಕ್ಕೂ ಅಕ್ಕಿಕಾಳೆ ಯಾಕೆ ಹಾಕುತ್ತಾರೆ ಇನ್ನಿತರ ಧಾನ್ಯಗಳು ಏಕೆ ಹಾಕುವದಿಲ್ಲ ಗೊತ್ತಾ? ಅದರ ಹಿಂದಿನ ಕಾರಣ ತಿಳಿದುಕೊಳ್ಳಿ.
ಮೊದಲನೆಯದಾಗಿ ಅಕ್ಕಿ ಇದು ಏಕದಳ ಧಾನ್ಯವಿದೆ. ಅದು ವಿಭಾಗಿಸಲು ಬರುವದಿಲ್ಲ. ಇದರರ್ಥ ಸಂಸಾರದಲ್ಲಿ ಗಂಡ ಹೆಂಡತಿಯರು ಯಾವುದೇ ಕಾರಣಕ್ಕಾಗಿ ಒಬ್ಬರಿಗೊಬ್ಬರು ಬಿಟ್ಟು ಹೋಗಬಾರದು ಅಲ್ಲದೆ ಏನೇ ಸಮಸ್ಯೆ ಬಂದರು ಸಹ ಸಂಸಾರದಲ್ಲಿ ಬಿರುಕು ಬರಬಾರದು ಎಂಬುದು ಮೊದಲನೆಯ ಉದ್ದೇಶವಾಗಿದೆ.
ಅಕ್ಷತೆ ವಧುವರರ ತಲೆಯ ಮೇಲೆ ಹಾಕುವಾಗ ದೇವರ ಕೃಪೆ ಬರುವದು ಎಂಬುದು ಪುರಾಣ ಹೇಳುತ್ತದೆ. .

ಅಲ್ಲದೆ ಹುಡುಗಿ ತನ್ನ ಮನೆಯಲ್ಲಿ ಬೆಳೆದು ಬೇರೆಯವರ ಮನೆಗೆ ಹೋಗುವಳು ಆಗ ಅಕ್ಕಿಯ ಹಾಗೆ ಮೊದಲು ಬೇರೆಯ ಸ್ಥಳದಲ್ಲಿ ಬೆಳೆದು ನಂತರ ರೈತರು ಹಚ್ಚಿದ ಹೊಲದಲ್ಲಿ ಬೆಳೆದು ದೊಡ್ಡದಾಗಿ ಅವರಿಗೆ ಅನ್ನ ನೀಡುವದು ಅದೇ ಪ್ರಕಾರ ತವರು ಮನೆಯಲ್ಲಿ ಬೆಳೆದು ಗಂಡನ ಮನೆಗೆ ಹೋಗಿ ಅಲ್ಲಿ ಉತ್ತಮ ಹೆಣ್ಣಾಗಿ ಮನೆ ಬಾಳಿ ಬೆಳಗಬೇಕು ಎಂಬುದು ಉದ್ದೇಶವಿದೆ.
ಅಕ್ಕಿಗೆ ಯಾವುದೇ ಪ್ರಕಾರದ ಕೀಟ ತಿನ್ನುವದಿಲ್ಲ ಅದೇ ಪ್ರಕಾರವಾಗಿ ಹೆಂಡತಿಯಾಗುವವಳ ತಲೆಯ ಮೇಲೆ ಅಕ್ಕಿಕಾಳು ಬಿದ್ದಾಗ ಅವಳು ಮುಂಬರುವ ಸಂಸಾರದಲ್ಲಿ ಎಂಥ ಸಮಸ್ಯೆ ಬಂದರು ಸಹಿತ ಎದೆಗುಂದದೆ ಸಂಸಾರ ಮುಂದುವರೆಸಬೇಕು ಎಂದು ಹಾರೈಸುತ್ತ ಅಕ್ಕಿ ಕಾಳು ಹಾಕುವರು. ಈ ಎಲ್ಲ ಕಾರಣದಿಂದ ಮದುವೆಯಲ್ಲಿ ವಧು-ವರರ ತಲೆಯ ಮೇಲೆ ಅಕ್ಕಿಕಾಳು ಹಾಕುತ್ತಾರೆ.