ಪಾರಿವಾಳಗಳು ಮಾಡುವ ಕೊಳಕಿನಿಂದ ತೊಂದರೆಯಾಗಿದೆಯೇ? ಹಾಗಿದ್ದರೆ ಈ ಟಿಪ್ಸ್ ಗಳ ಪಾಲನೆ ತಪ್ಪದೇ ಮಾಡಿ!

ಪುರಾತನ ಕಾಲದಲ್ಲಿ ಪಾರಿವಾಳಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂದೇಶಗಳನ್ನು ಕಳುಹಿಸಲು ಬಳಸಿಕೊಳ್ಳುತ್ತಿದ್ದರು. ಅಲ್ಲದೇ ಪಾರಿವಾಳಗಳನ್ನು ಶಾಂತಿದೂತ ಎಂದು ಕೂಡ ಕರೆಯಲಾಗುತ್ತಿತ್ತು. ವರ್ಷಗಳು ಕಳೆದಂತೆ ಪಾರಿವಾಳಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಕೆಲವು ಸಂದರ್ಭಗಳಲ್ಲಿ, ಕೆಲವು ಪ್ರದೇಶಗಳಲ್ಲಿ ಇವು ಮನೆಯೊಳಗೆ ಕೂಡಾ ಬಂದು ಬಿಡುತ್ತವೆ. ಪಾರಿವಾಳಗಳ ಸಂಖ್ಯೆ ಹೆಚ್ಚಾಗಿರುವುದು ಅನೇಕ ತೊಂದರೆಗಳಿಗೆ ಕೂಡಾ ಕಾರಣವಾಗಿದೆ. ಪಾರಿವಾಳಗಳು ಗುಟುರು ಹಾಕುವುದನ್ನು ಬೇಕಾದರೂ ಒಂದು ಹಂತದವರೆಗೆ ಸಹಿಸಬಹುದು. ಆದರೆ ಅವು ಮಾಡುವ ಕೊಳಕನ್ನು ಭರಿಸುವುದು ಮಾತ್ರ ಸಾಧ್ಯವೇ ಇಲ್ಲ. ನಿಮಗೂ ಕೂಡಾ ಪಾರಿವಾಳ ಗಳಿಂದ ಸಮಸ್ಯೆ ಉಂಟಾಗಿದ್ದರೆ ಅದರಿಂದ ಪರಿಹಾರವನ್ನು ಪಡೆದುಕೊಳ್ಳಲು ಬಯಸಿದ್ದರೆ ಈಗ ಹೇಳುವಂತಹ ಟಿಪ್ಸ್ ಗಳನ್ನು ಪಾಲನೆ ಮಾಡಬಹುದಾಗಿದೆ. ಅಮೆರಿಕಾದಲ್ಲಿ 1600 ರ ದಶಕದಲ್ಲಿ ಪಾರಿವಾಳಗಳನ್ನು ಆಹಾರಕ್ಕಾಗಿ ಬಳಸುತ್ತಿದ್ದರು. ಅನಂತರ ಇವುಗಳ ಸಂಖ್ಯೆ ಎಲ್ಲಾ ದೇಶಗಳಲ್ಲಿ ಕೂಡ ಹೆಚ್ಚಿದೆ.

ಭಾರತದಲ್ಲಿ ಪಾರಿವಾಳಗಳ ಸಂಖ್ಯೆ ಏರಿಕೆಯು ಒಂದು ಬಹುದೊಡ್ಡ ಸಮಸ್ಯೆಯಾಗಿದೆ. ಇಲ್ಲಿ ಜನರು ಪಾರಿವಾಳಗಳಿಗೆ ಆಹಾರವನ್ನು ನೀಡುತ್ತಾರೆ. ದಿನದಿಂದ ದಿನಕ್ಕೆ ಪಾರಿವಾಳಗಳಿಗೆ ಜನರ ಭಯ ಕೂಡಾ ಇಲ್ಲದಾಗಿದೆ. ಧಾನ್ಯಗಳು ಬೀಜಗಳು ಹಾಗೂ ಬ್ರೆಡ್ ಕ್ರಂಬ್ಸ್ ಅನ್ನು ಆಹಾರವಾಗಿ ಅವಲಂಬಿಸಿರುವ ಈ ಪಾರಿವಾಳಗಳು ನಮ್ಮ ದೇಶದಲ್ಲಿ ಸಾಕಲ್ಪಡುತ್ತವೆ. ಪಾರಿವಾಳಗಳ ಆಮ್ಲಿಯ ತ್ಯಾಜ್ಯ ರೋಗಗಳನ್ನು ಹರಡುತ್ತದೆ. ಪಾರಿವಾಳಗಳು ಇತರೆ ಪಕ್ಷಗಳಂತೆ ತೆರೆದ ಆಕಾಶದಲ್ಲಿ ಹಾರಲು ಇಷ್ಟಪಡುವುದಿಲ್ಲ. ಸಾಮಾನ್ಯವಾಗಿ ಅವು ಮನೆಯ ಕಿಟಕಿಗಳು, ಮೆಟ್ಟಿಲುಗಳು, ಬಾಲ್ಕನಿಗಳಲ್ಲಿ ತಮ್ಮ ಅಡಗುತಾಣವನ್ನು ಮಾಡಿಕೊಳ್ಳುತ್ತವೆ. ಅವು ವಿಸರ್ಜಿಸುವ ತ್ಯಾಜ್ಯ ದು ರ್ವಾ ಸನೆಯನ್ನು ಬೀರುವುದು ಮಾತ್ರವಲ್ಲದೇ, ಅದನ್ನು ತೊಳೆದು ಸ್ವಚ್ಛ ಮಾಡುವುದು ಕೂಡಾ ಕಷ್ಟವಾಗುತ್ತದೆ. ಹಾಗಿದ್ದರೆ ಪಾರಿವಾಳ ಗಳಿಂದ ಉಂಟಾಗುವ ಸಮಸ್ಯೆಗಳನ್ನು ತಡೆಯಲು ಕೆಲವು ಮಾರ್ಗಗಳನ್ನು ತಿಳಿಯೋಣ ಬನ್ನಿ

ಪಾರಿವಾಳಗಳ ವಿಂಡ್ ಚೈಂಸ್, ಅಲ್ಯುಮಿನಿಯಂ ಫಾಯಿಲ್ ಗಳಿಗೆ ಹೆದರುತ್ತವೆ. ಅಲ್ಲದೆ ಹೊಳೆಯುವ ರಬ್ಬರ್ ಹಾವುಗಳು ಹಾಗೂ ಆಕಾಶಬುಟ್ಟಿಗಳನ್ನು ಅವು ಇಷ್ಟಪಡುವುದಿಲ್ಲ. ಆದ್ದರಿಂದ ಅವುಗಳನ್ನು ಬಳಸುವ ಮೂಲಕ ಪಾರಿವಾಳಗಳನ್ನು ದೂರ ಇಡಬಹುದು

ಲಪಾರಿವಾಳಗಳು ಕುಳಿತುಕೊಳ್ಳುವ ಸ್ಥಳದಲ್ಲಿ ಸಾಧ್ಯವಾದರೆ ಪ್ರತಿದಿನ ನೀರನ್ನು ಹಾಕುತ್ತಿರಿ. ಆಗ ಪಾರಿವಾಳಗಳು ಅಲ್ಲಿ ಬಂದು ಕೂರುವುದಿಲ್ಲ. ಸಾಮಾನ್ಯವಾಗಿ ಪಾರಿವಾಳಗಳಿಗೆ ಪ್ರತಿದಿನ ತಾವು ಕುಳಿತುಕೊಳ್ಳುವ ಜಾಗಕ್ಕೆ ಮರಳಿ ಬಂದು ಕೂರುವ ಕೆಟ್ಟ ಅಭ್ಯಾಸವಿರುತ್ತದೆ. ಅಲ್ಲದೇ ಅವು ತಾವು ಕುಳಿತುಕೊಳ್ಳುವ ಜಾಗವನ್ನು ಎಂದಿಗೂ ಮರೆಯುವುದಿಲ್ಲ.

ನೀರು, ವೈನ್ ಮತ್ತು ದಾಲ್ಚಿನಿ ವಾಸನೆ ಕೂಡ ಪಾರಿವಾಳಗಳಿಗೆ ಇಷ್ಟವಾಗುವುದಿಲ್ಲ. ಆದ್ದರಿಂದ ಇವುಗಳನ್ನು ಮಿಶ್ರಣ ಮಾಡಿ ಪಾರಿವಾಳಗಳು ಕೂರುವ ಸ್ಥಳಗಳಲ್ಲಿ ಸ್ಪ್ರೇ ಮಾಡುವುದರಿಂದ ಪಾರಿವಾಳಗಳು ಮತ್ತೆ ಅತ್ತ ಕಡೆ ಸುಳಿಯುವುದಿಲ್ಲ ಎನ್ನಲಾಗಿದೆ.

ಮಾರುಕಟ್ಟೆಯಲ್ಲಿ ಕಮರ್ಷಿಯಲ್ ಜೆಲ್ ಗಳು ಹಾಗೂ ಬರ್ಡ್ ರೆಪೆಲೆಂಟ್ ಗಳು ಕೂಡಾ ಲಭ್ಯವಿದ್ದು ಅವುಗಳನ್ನು ಕೂಡಾ ಕೊಂಡು ತಂದು ಪಾರಿವಾಳಗಳಿಂದ ಎದುರಾಗುವ ಸಮಸ್ಯೆಯನ್ನು ತಡೆಯಲು ಬಳಸಿಕೊಳ್ಳಬಹುದಾಗಿದೆ.

ಡೆಕಾಯ್ ಕೈಟ್ ( Decoy Kite ) ಎನ್ನುವುದನ್ನು ಕೂಡಾ ಪಾರಿವಾಗಳ ಸಮಸ್ಯೆಯಿಂದ ಮುಕ್ತಿ ಪಡೆಯಲು ಬಳಸಲಾಗುವುದು. ಇದನ್ನು ಬಳಸಿ ನೀವು ಪಾರಿವಾಳಗಳನ್ನು ದೂರ ಮಾಡಬಹುದಾದರೂ ಒಂದು ವೇಳೆ ಪಾರಿವಾಳಗಳಿಗೆ ಇದೊಂದು ವ್ಯಸನವಾದರೆ ಪ್ರಯೋಜನ ಆಗುವುದಿಲ್ಲ.

ಲೇಸರ್ ಲೈಟ್ ಗಳ ಬಳಕೆಯಿಂದಲೂ ಕೂಡಾ ಪಾರಿವಾಳಗಳ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಲೇಸರ್ ಲೈಟ್ ಗಳ ಬೆಳಕನ್ನು ಪಾರಿವಾಳಗಳು ಸಹಿಸಲು ಸಾಧ್ಯವಿಲ್ಲ ಎನ್ನಲಾಗಿದೆಯಾದರೂ ಇದೂ ಕೂಡಾ ಅವುಗಳಿಗೆ ಅಭ್ಯಾಸವಾಗಿ ಹೋದರೆ ಅದರಿಂದ ಯಾವುದೇ ಉಪಯೋಗ ಆಗುವುದಿಲ್ಲ.

ಆ್ಯಂಟಿ ಬರ್ಡ್ ಸ್ಪೈಕ್ಸ್ ಅಥವಾ ಸ್ಪೈಕ್ಸ್ ಸ್ಟ್ರೈಪ್ಸ್ ಎನ್ನುವ ಒಂದು ಸೆಟ್ ಪರಿಕರಗಳನ್ನು ಪಾರಿವಾಳಗಳ ಕಾಟ ತಪ್ಪಿಸಿಕೊಳ್ಳಲು ಅವು ಬಂದು ಕೂರುವ ಜಾಗದಲ್ಲಿ ಅಥವಾ ಅವುಗಳು ಗೂಡುಕಟ್ಟುವ ಸ್ಥಳಗಳಲ್ಲಿ ಇದನ್ನು ಬಳಸಬಹುದು.

ಪ್ಯಾರಲಲ್ ವೈರ್ ( ಸಮಾನಾಂತರ ವೈರ್ ) ನ ಬಳಕೆಯು ಕೂಡಾ ಪಾರಿವಾಳಗಳು ಅಥವಾ ಬೇರೆ ಪಕ್ಷಿಗಳನ್ನು ಮನೆ ಅಥವಾ ಇನ್ನೆಲ್ಲಿಯೇ ಆದರೂ ಸಹಾ ನಮ್ಮಿಂದ ದೂರ ಇಡಲು ಸಾಧ್ಯವಾಗಿದ್ದು ಇದು ಪಾರಿವಾಳಗಳು ಬಂದು ಕೂರುವುದನ್ನು ಹಾಗೂ ಗೂಡು ಕಟ್ಟುವುದನ್ನು ತಪ್ಪಿಸುತ್ತದೆ.

ಬರ್ಟ್ ನೆಟ್ಟಿಂಗ್ ಎನ್ನುವುದು ಸ್ವಲ್ಪ ಸರಿಯಲ್ಲ ಎನಿಸಿದರೂ ಕೂಡಾ ಕೆಲವು ಸ್ಥಳಗಳಲ್ಲಿ ಪಾರಿವಾಳಗಳ ಸಮಸ್ಯೆಯನ್ನು ತಡೆಯಲು ಹಾಗೂ ಅವುಗಳು ಗೂಡು ಕಟ್ಟದಂತೆ ಎಚ್ಚರ ವಹಿಸಲು ಇದು ಸಹಾಯಕವಾಗಿದೆ.

ಸಾಧ್ಯವಾದರೆ ಹದ್ದು ಅಥವಾ ಇನ್ನಾವುದೇ ಬೇ ಟೆ ಹಾರ ಹಕ್ಕಿಗಳನ್ನು ಸಾಕಿ‌. ಆಗ ಪಾರಿವಾಳ ನಿಮ್ಮ ಮನೆಯ ಕಡೆಗೆ ತಲೆ ಕೂಡಾ ಹಾಕುವುದಿಲ್ಲ. ಕೊನೆಯದಾಗಿ ಪಾರಿವಾಳಗಳ ಸಮಸ್ಯೆ ಹೆಚ್ಚಾಗಿರುವ ಕಡೆ ಮನೆಯ ಹೊರಗೆ ತೆರೆದ ಜಾಗಗಳಲ್ಲಿ ಕಸ ಎಸೆಯುವುದಾಗಲೀ ಅಥವಾ ಮನೆಯ ಸುತ್ತ ಮುತ್ತ ಹಕ್ಕಿಗಳಿಗೆ ಆಹಾರ ಹಾಕಬೇಡಿ.

ಇದಲ್ಲದೆ ಪಾರಿವಾಳಗಳ ಗೂಡು ಮತ್ತು ಅವು ಹಾಕುವ ಹಿಕ್ಕೆ ಗಳು ಬ್ಯಾಕ್ಟೀರಿಯಾ, ವೈರಸ್ ಹಾಗೂ ಫಂಗಸ್ ಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಪಾರಿವಾಳಗಳು ಕೊಳಕು ಮಾಡಿರುವ ಜಾಗವನ್ನು ಆದಷ್ಟು ಬೇಗ ಸ್ವಚ್ಛಗೊಳಿಸಬೇಕಾಗುತ್ತದೆ. ಆದರೆ ಹೀಗೆ ಮಾಡುವಾಗ ಮಾಸ್ಕ್ ಅಥವಾ ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಸಾವಧಾನವಾಗಿ ಸ್ವಚ್ಛ ಮಾಡಬೇಕಾಗುತ್ತದೆ. ನಂತರ ಈ ಸ್ಥಳವನ್ನು ಪರಿಣಾಮಕಾರಿಯಾದ ಆ್ಯಂಟಿ ಬ್ಯಾಕ್ಟೀರಿಯಲ್ ಕ್ಲೀನರ್ ಅಥವಾ ಕ್ಲೋರಿನ್ ಬ್ಲೀಚ್ ಸಿಂಪಡಣೆ ಮಾಡಿ ಸ್ವಚ್ಛ ಮಾಡಬೇಕಾಗುತ್ತದೆ. ಇಷ್ಟೆಲ್ಲಾ ಮಾಡಿದ ನಂತರವೂ ಕೂಡ ಪಾರಿವಾಳಗಳು ತಮ್ಮ ಜಾಗವನ್ನು ಬದಲಾಯಿಸದೇ ಸತಾಯಿಸಿದರೆ ಆಗ ಅವುಗಳನ್ನು ಓಡಿಸಲು ತರಬೇತಿಯನ್ನು ಪಡೆದವರನ್ನು ಸಂಪರ್ಕಿಸಿ ಅವರ ಸಹಾಯವನ್ನು ಪಡೆದುಕೊಳ್ಳಬೇಕಾಗುತ್ತದೆ.

MPSC GK in Marathi