ಆಸ್ಟ್ರೇಲಿಯಾದ ಕಾಡುಗಳಿಂದ ರಕ್ಷಿಸಲ್ಪಟ್ಟಿತು ಈ ಕುರಿ: ಇದರ ಮೈಮೇಲಿದ್ದ ಉಣ್ಣೆ ನೋಡಿ ಶಾಕ್ ಆದ ಪ್ರಾಣಿ ರಕ್ಷಣಾ ಸಂಸ್ಥೆಯ ಸಂಸ್ಥಾಪಕ! Video ನೋಡಿ

ಜಗತ್ತಿನ ಕೆಲವು ಭಾಗಗಳಿಂದ ಆಗಾಗ ವಿಸ್ಮಯ ವಿಚಿತ್ರ ಹಾಗೂ ದಿಗ್ಭ್ರಮೆಯನ್ನು ಉಂಟು ಮಾಡುವಂತಹ ಸುದ್ದಿ-ಸಮಾಚಾರಗಳು ಬರುತ್ತಲೇ‌ ಇರುತ್ತವೆ. ಕೆಲವೊಂದು ಸುದ್ದಿಗಳು ಎಲ್ಲರ ಗಮನವನ್ನು ಸೆಳೆದು ಬಿಡುತ್ತವೆ. ಇನ್ನೂ ಕೆಲವು ಸುದ್ದಿಗಳು ಜನರನ್ನು ಆಶ್ಚರ್ಯದಲ್ಲಿ ಮುಳುಗಿಸುತ್ತದೆ. ಅಲ್ಲದೇ ಆ ವಿಚಾರಗಳ ಸಂಪೂರ್ಣ ವಿವರವನ್ನು ತಿಳಿದುಕೊಳ್ಳಲು ಅನೇಕರು ಬಯಸುತ್ತಾರೆ. ಆದರೆ ಕೆಲವೊಮ್ಮೆ ಇಂತಹ ವಿಸ್ಮಯ ಹುಟ್ಟಿಸುವಂತಹ ವಿಷಯಗಳು ಸಾಮಾನ್ಯವೇ ಆಗಿದ್ದರೂ ಕೂಡಾ, ಅವು ಎಲ್ಲರ ಬಂದಾಗ ಅದೊಂದು ವಿಸ್ಮಯದಂತೆ ಕಂಡು ಬಿಡುತ್ತದೆ. ಇಲ್ಲಿ ನಾವು ಹೇಳಲೇಬೇಕಾದ ಮತ್ತೊಂದು ವಿಶೇಷವೆಂದರೆ ಇಂತಹ ವಿಷಯಗಳು ದೊಡ್ಡ ಸುದ್ದಿ ಹಾಗೂ ಸದ್ದಾದಾಗ ಒಂದಷ್ಟು ಜನ ಅದನ್ನು ನಂಬುವುದೂ ದೂರದ ಮಾತು, ಇದೆಲ್ಲಾ ಗ್ರಾಫಿಕ್ಸ್, ಫೋಟೋ ಎಡಿಟ್ ಎಂದು ಕೂಡಾ ಹೇಳಿ ಸುಮ್ಮನಾಗಿಬಿಡುತ್ತಾರೆ. ಆದರೆ ಕೆಲವೊಮ್ಮೆ ವಿಚಿತ್ರ ಎನ್ನುವ ಸುದ್ದಿಗಳು ವಾಸ್ತವವಾಗಿ ನಿಜವಾಗಿರುತ್ತದೆ ಹಾಗೂ ಪ್ರಕೃತಿಯಲ್ಲಿನ ಕೆಲವೊಂದು ವಿಸ್ಮಯಗಳನ್ನು ನಮ್ಮ ಮುಂದೆ ಇರಿಸಿರುತ್ತವೆ.

ಇಂತಹದೇ ಒಂದು ಸುದ್ದಿ, ಎಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿ ಮಾಡುವಂತಹ ಸಮಾಚಾರ ಒಂದು ಆಸ್ಟ್ರೇಲಿಯಾದಿಂದ ಬಂದಿದೆ. ಸಾಮಾನ್ಯವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ದಿನನಿತ್ಯ ಸಂಚಾರ ಮಾಡುವವರಿಗೆ ದಾರಿಯಲ್ಲಿ ಅಥವಾ ಅಕ್ಕ-ಪಕ್ಕ ಗಿಡ ಅಥವಾ ಪೊದೆಗಳಲ್ಲಿ ಕುರಿಗಳು ಕಾಣಿಸಿಕೊಳ್ಳುತ್ತವೆ. ಹೀಗೆ ದಾರಿಯಲ್ಲಿ ಕುರಿಯೊಂದು ಕಾಣಿಸಿಕೊಂಡರೆ ಜನ ಅಷ್ಟಾಗಿ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದರ ಕಡೆ ಗಮನವನ್ನು ಕೂಡಾ ನೀಡುವುದಿಲ್ಲ. ಆದರೆ ಕುರಿಯಾ ಮೈಮೇಲೆ ಚರ್ಮದ ರೂಪದಲ್ಲಿ ಸಂಗ್ರಹವಾದ ಉಣ್ಣೆಯ ಪ್ರಮಾಣವು ಸಾಮಾನ್ಯ ಕುರಿಗಳಿಗಿಂತ ಅಧಿಕವಾಗಿ ಕಂಡರೆ ಮಾತ್ರ ಸಹಜವಾಗಿಯೇ ಎಲ್ಲರ ದೃಷ್ಟಿ ಅದರ ಕಡೆಗೆ ಹೊರಳುತ್ತದೆ. ಇಂತಹುದೇ ಒಂದು ಕುರಿಯು ಆಸ್ಟ್ರೇಲಿಯಾದಲ್ಲಿ ಕಂಡುಬಂದಿದ್ದು ಈ ಕುರಿಯ ಮೈಮೇಲೆ ಬೆಳೆದಿದ್ದ ಉಣ್ಣೆಯ ಪ್ರಮಾಣವನ್ನು ನೋಡಿ ಪ್ರತಿಯೊಬ್ಬರೂ ಕೂಡಾ ಆಶ್ಚರ್ಯ ಪಡುವಂತಾಗಿದೆ.

ದೊರೆತಿರುವ ಮಾಹಿತಿಗಳ ಪ್ರಕಾರ ಈ ಕುರಿಗೆ ಬರಾಕ್ ಎನ್ನುವ ಹೆಸರನ್ನು ಇಡಲಾಗಿದೆ. ಸ್ಥಳೀಯ ನಿಪುಣರು ಹಾಗೂ ಕುರಿಗಳ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಂಡಿರುವವರು ಪ್ರಕಾರ ಈ ಕುರಿಯು ಕಳೆದ ಸುಮಾರು ಐದು ವರ್ಷಗಳಿಂದಲೂ ಕಾಡಿನಲ್ಲಿ ಅಲೆದಾಡಿಕೊಂಡು ಇದೆ ಎನ್ನಲಾಗಿದೆ. ಆದ್ದರಿಂದಲೇ ಅದರ ಮೈಮೇಲೆ ಬೆಳೆದಂತಹ ಉಣ್ಣೆಯನ್ನು ಕಾಲಕಾಲಕ್ಕೆ ಕತ್ತರಿಸಲು ಸಾಧ್ಯವಾಗಿಲ್ಲ. ಹೀಗೆ ಸತತವಾಗಿ ಐದು ವರ್ಷಗಳಿಂದಲೂ ಅದರ ಮೈ ಮೇಲೆ ಬೆಳೆದಿರುವಂತಹ ಉಣ್ಣೆಯ ಪ್ರಮಾಣ ಈಗ ಒಟ್ಟು 35 ಕಿಲೋಗ್ರಾಂ ಇದೆ ಎನ್ನಲಾಗಿದೆ. ಈ ವಿಶೇಷ ಕುರಿಯು ವಿಕ್ಟೋರಿಯನ್ ಸ್ಟೇಟ್ ಫಾರೆಸ್ಟ್ ಗೆ ಹೋಗಿದ್ದ ಸಮೂಹ ಒಂದಕ್ಕೆ ಸಿಕ್ಕಿದ್ದು ಎನ್ನಲಾಗಿದ್ದು ಅವರು ಪ್ರಸ್ತುತ ಈ ಕುರಿಯನ್ನು ಸ್ಥಳೀಯ ಪ್ರಾಣಿ ರಕ್ಷಣಾ ಸಂಸ್ಥೆಯೊಂದಕ್ಕೆ ಒಪ್ಪಿಸಿದ್ದಾರೆ. ಈ ಸಂಸ್ಥೆಯಲ್ಲಿ ಕುರಿಯ ಆರೈಕೆಯನ್ನು ಮಾಡಲಾಗುತ್ತಿದೆ.

ಮಾಧ್ಯಮಗಳ ವರದಿಯ ಪ್ರಕಾರ ಎಡ್ಗರ್ ಮಿಷನ್ ಫಾರ್ಮ್ ಸೆಂಚುರಿ ಸಂಸ್ಥೆಯ ಸಂಸ್ಥಾಪಕರಾದ ಪ್ಯಾಮ್ ಅಹರ್ನ್ ಅವರು ಈ ಕುರಿಯ ಬಗ್ಗೆ ಆಶ್ಚರ್ಯವನ್ನು ವ್ಯಕ್ತ ಪಡಿಸಿದ್ದಾರೆ. ಕುರಿಯ ವಿಷಯವನ್ನು ಮಾತನಾಡುತ್ತಾ ಅವರು 35 ಕೆಜಿಗಳ ಉಣ್ಣೆಯ ಭಾರದ ಕೆಳಗೆ ಕುರಿಯೊಂದು ನಿಜವಾಗಿ ಜೀವಂತವಾಗಿರುತ್ತದೆ ಎಂಬುದನ್ನು ನಂಬಲು ನನಗೆ ಸಾಧ್ಯವಾಗಿರಲಿಲ್ಲ. ಆದರೆ ಅದು ಈಗ ಕಣ್ಮುಂದೆ ಬಂದಿದೆ. ಈ ಕುರಿಯ ಮೈಮೇಲೆ ಸತತವಾಗಿ ಐದು ವರ್ಷಗಳು ಉಣ್ಣೆಯನ್ನು ಕತ್ತರಿಸದ ಪರಿಣಾಮವಾಗಿ ಎಷ್ಟು ದೊಡ್ಡ ಗಾತ್ರದಲ್ಲಿ ಉಣ್ಣೆ ಬೆಳೆದುಕೊಂಡಿದೆ ಎಂದಿರುವ ಅವರು, ತನಗೆ ಅನಿಸುವ ಪ್ರಕಾರ ಚಿಕ್ಕ ಮರಿಯಾಗಿದ್ದಾಗ ಈ ಕುರಿ ಕಾಡಿನಲ್ಲಿ ತಪ್ಪಿ ಹೋಗಿರಬೇಕು. ಅಲ್ಲದೇ ಅದಕ್ಕೆ ವಾಪಸ್ಸು ಬರಲು ದಾರಿ ಕೂಡ ದೊರೆಯದ ಕಾರಣ ಅದು ಕಾಡಿನಲ್ಲೇ ಉಳಿದುಬಿಟ್ಟಿದೆ ಎಂದಿದ್ದಾರೆ.

ಕಾಡಿನಿಂದ ಕುರಿಯನ್ನು ಸುರಕ್ಷಿತವಾಗಿ ಕರೆತಂದ ನಂತರ ಅದನ್ನು ಪ್ರಾಣಿ ರಕ್ಷಣಾ ಕೇಂದ್ರ ದಲ್ಲಿ ಇರಿಸಲಾಗಿದೆ. ಅದರ ಮೈಮೇಲೆ ಇದ್ದಂತಹ ಭಾರಿ ಗಾತ್ರದ ಉಣ್ಣೆಯನ್ನು ಬಹಳ ಜಾಗರೂಕತೆಯಿಂದ ಕತ್ತರಿಸಿ ಹಾಕಲಾಗಿದೆ. ಅಲ್ಲದೆ ಕುರಿಯನ್ನು ಸುರಕ್ಷಿತವಾಗಿ ಇಡಲಾಗಿದ್ದು ಅಗತ್ಯವಿರುವ ಆಹಾರವನ್ನು ಪೂರೈಕೆ ಮಾಡುತ್ತಾ, ಕುರಿಯ ಪಾಲನೆ ಹಾಗೂ ಪೋಷಣೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಬರಾಕ್ ಎನ್ನುವ ಹೆಸರನ್ನು ಇಡಲಾಗಿರುವ ಈ ಕುರಿಯ ವಿಡಿಯೋ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ದೊಡ್ಡ ಸದ್ದನ್ನು ಮಾಡಿದ್ದು ವಿಡಿಯೋ ನೋಡಿದವರು ಒಂದು ಕ್ಷಣ ತಮ್ಮ ಕಣ್ಣನ್ನು ತಾವೇ ನಂಬದಾಗಿದ್ದಾರೆ.‌