ಒಂದು ಕಾಲದಲ್ಲಿ ಪಾಕಿಸ್ತಾನದ ಸರ್ವಾಧಿಕಾರಿ; ಇಂದು ಯಾವ ಪರಿಸ್ಥಿತಿ ಬಂದಿದೆ ಗೊತ್ತಾ?
ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥರು ಪರ್ವೆಜ್ ಮುಷರಫ್ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂಬ ಸುದ್ದಿಗಳು ಮೀಡಿಯಾದಲ್ಲಿ ಬರುತ್ತಿವೆ. ಸದ್ಯ ಅವರು ವೀಲ್ಚೇರ್ ನ ಆಧಾರ ತೆಗೆದುಕೊಳ್ಳುತ್ತಿರುವ ಬಗ್ಗೆ ತಿಳಿದುಬಂದಿದೆ.
ಇವರು ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿದ್ದಾಗ ಅಲ್ಲಿಯ ಸರಕಾರವನ್ನು ಮೂಲೆಗುಂಪು ಮಾಡಿ ಮಿಲಿಟರಿ ಆಡಳಿತವನ್ನು ಹೇರಿದ್ದರು. ಒಂದು ಸಮಯದಲ್ಲಿ ಸರ್ವಾಧಿಕಾರಿಯಾಗಿ ಮೆರೆದಿದ್ದ ಮುಷರಫ್ ಅವರ ಪ್ರಕೃತಿ ಇಂದು ಹದಗೆಟ್ಟು ತುಂಬಾ ದಯನೀಯ ಅವಸ್ಥೆಯಲ್ಲಿದ್ದಾರೆ. ಅವರ ಸೋಶಿಯಲ್ ಮೀಡಿಯಾದಲ್ಲಿಯ ಈ ಫೋಟೋವನ್ನು ನೋಡಿ ಪಾಕಿಸ್ತಾನದಲ್ಲಿ ಮಿಶ್ರ ಪ್ರತಿಕ್ರಿಯೆಗಳು ಹೊರಬರುತ್ತಿವೆ.
ಸದ್ಯ ಪರ್ವೇಜ್ ಮುಷರಫ್ ಅವರು ಗಂಭೀರವಾದ ರೋಗದಿಂದ ಬಳಲುತ್ತಿದ್ದಾರೆ. ಆಲ್ ಪಾರ್ಟಿ ಮುಸ್ಲಿಂ ಲೀಗ್ ವು ಮುಷರಫ್ ಅವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದ್ದಾರೆ. ಈ ಕೃತಿಗೆ ಪಾಕಿಸ್ತಾನದ ಯೂಜರ್ಸ್ ಗಳು ಟೀಕಿಸಿದ್ದಾರೆ. ಮುಷರಫ್ ಅವರು ಪಾಕಿಸ್ತಾನದ ನಾಯಕರಲ್ಲ. ಇವರು ಪಾಕಿಸ್ತಾನವನ್ನು ಅಮೆರಿಕಕ್ಕೆ ಮಾರಾಟ ಮಾಡಿದ್ದಾರೆ ಎಂಬ ಟೀಕೆಗಳನ್ನು ಮಾಡಿದ್ದಾರೆ. ಅವರು ಭೂತಕಾಲದಲ್ಲಿ ತಾವು ಮಾಡಿದ ಕರ್ಮದ ಫಲವನ್ನು ಈಗ ಭೋಗಿಸುತ್ತಿದ್ದಾರೆ.
Wishing you best of health Mr President good to see you smiling you have fought for Pakistan all your life prayers and best wishes…. @P_Musharraf pic.twitter.com/zUk6JiNgim
— Ch Fawad Hussain (@fawadchaudhry) March 1, 2021
ಭಾರತ ಮತ್ತು ಪಾಕಿಸ್ತಾನದ ಮಧ್ಯೆ 1999 ರಲ್ಲಿ ಶಾಂತತೆಯ ಚರ್ಚೆ ನಡೆದಿರುವಾಗ ಪಾಕಿಸ್ತಾನದ ತತ್ಕಾಲೀನ ಸೇನಾ ಮುಖ್ಯಸ್ಥರಾದ ಪರ್ವೇಜ್ ಮುಷರಫ್ ಅವರು ಕಾರ್ಗಿಲ್ ಯುದ್ಧವನ್ನು ಸಾರಿದರು. ಅದಾದನಂತರ ನವಾಜ್ ಶರೀಫರ ಸರಕಾರವನ್ನು ಉರುಳಿಸಿ ದೇಶದ ಸೂತ್ರವನ್ನು ತನ್ನ ಕೈಯಲ್ಲಿ ತೆಗೆದುಕೊಂಡರು. ಮುಂದೆ 2001 ರಿಂದ 2008 ರ ಮಧ್ಯದಲ್ಲಿ ಪಾಕಿಸ್ತಾನದ ರಾಷ್ಟ್ರಪತಿ ಕಾರ್ಯಭಾರವನ್ನು ಸಂಪೂರ್ಣ ತಮ್ಮ ಕೈಯಲ್ಲಿ ತೆಗೆದುಕೊಂಡರು. ನಂತರ ದೋಷಾರೋಪಣೆಯಿಂದ ಉಳಿದುಕೊಳ್ಳಲು 2008 ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮುಂದೆ 2019 ರಲ್ಲಿ ದೇಶದ್ರೋಹದ ಅಪರಾಧಕ್ಕಾಗಿ ಮುಷರಫ್ ಅವರಿಗೆ ಮೃತ್ಯು ದಂಡದ ಶಿಕ್ಷೆ ನೀಡಲಾಯಿತು. ಮುಷರಫ್ ಅವರು 2016 ರಿಂದ ಪ್ರಕೃತಿಯ ಕಾರಣದಿಂದಾಗಿ ದುಬೈಗೆ ಹೋದವರು ಮರಳಿ ಪಾಕಿಸ್ತಾನಕ್ಕೆ ವಾಪಸಾಗಿಲ್ಲ. ಪಾಕಿಸ್ತಾನಕ್ಕೆ ಮರಳಿದರೆ ಅರೆಸ್ಟ್ ಆಗುವ ಭೀತಿಯಿಂದ ಇಲ್ಲಿಯವರೆಗೆ ಪಾಕಿಸ್ತಾನಕ್ಕೆ ಅವರು ಕಾಲಿಟ್ಟಿಲ್ಲ.