ಪ್ರತಿ ತಂದೆ-ತಾಯಿ ಗಮನಿಸಲೇಬೇಕಾದ ಮಾಹಿತಿ: ನಿಮ್ಮ ಮಕ್ಕಳು ಕೆಟ್ಟ ದಾರಿ ಹಿಡಿಯುತ್ತಿರುವುದಕ್ಕೆ 5 ಲಕ್ಷಣಗಳು ಇವು

ಮಕ್ಕಳು ಸಾಮಾನ್ಯವಾಗಿ ತಮ್ಮ ಸುತ್ತಮುತ್ತಲಿನವರನ್ನು ನೋಡಿ ಬಹಳಷ್ಟು ವಿಷಯಗಳನ್ನು ಕಲಿಯುತ್ತಾರೆ. ಅದು ಮಾತ್ರವೇ ಅಲ್ಲದೇ ನೆರೆ ಹೊರೆ, ಶಾಲೆ, ಕೋಚಿಂಗ್ ಗೆ ಹೋದಂತಹ ಸಂದರ್ಭದಲ್ಲಿ ಕೆಲವೊಮ್ಮೆ ಅವರು ಕಲಿಯಬಾರದ ವಿಷಯಗಳನ್ನು ಕಲಿತು ಬಿಡುತ್ತಾರೆ. ತಂದೆ ತಾಯಿ ತಮ್ಮ ಮಕ್ಕಳ ಕಡೆ ಸೂಕ್ತವಾದ ಗಮನವನ್ನು ವಹಿಸದೇ ಹೋದರೆ, ತಮ್ಮ ತಮ್ಮ ಕೆಲಸದಲ್ಲಿ ತೊಡಗಿಕೊಂಡು ಇದ್ದು ಬಿಟ್ಟರೆ ಮಕ್ಕಳು ತಪ್ಪು ಹಾದಿ ಹಿಡಿಯುವ ಅಥವಾ ಕೆಡುವ ಅವಕಾಶಗಳು ಇರುತ್ತವೆ. ಸರಿಯಾದ ಗಮನವನ್ನು ನೀಡದೇ ಹೋದಲ್ಲಿ ಮಕ್ಕಳು ಜಗಳ, ಹೊಡೆದಾಟ, ಕೀಟಲೆ ಮಾಡುವುದು, ಬಡಿದಾಡಿಕೊಳ್ಳುವುದು ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡು ಅದನ್ನೇ ತಮ್ಮ ಅಭ್ಯಾಸಗಳನ್ನಾಗಿ ಮಾಡಿಕೊಂಡು ಬಿಡುತ್ತಾರೆ.
ಆದ್ದರಿಂದ ಪೋಷಕರು ಆರಂಭದಲ್ಲೇ ತಮ್ಮ ಮಕ್ಕಳ ಕಡೆ ಗಮನ ಹರಿಸದರೆ ಮಕ್ಕಳನ್ನು ಹೀಗೆ ಕೆಡುವುದರಿಂದ ತಪ್ಪಿಸಬಹುದಾಗಿದೆ. ಹಾಗಾದರೆ ಬನ್ನಿ ಮಕ್ಕಳು ತಪ್ಪು ಅಭ್ಯಾಸಗಳನ್ನು ಮಾಡಿಕೊಳ್ಳುತ್ತಿರುವುದರ ಕೆಲವು ಲಕ್ಷಣಗಳು ಯಾವುವು ಎಂದು ತಿಳಿಯೋಣ ಬನ್ನಿ.

ಅ ಸ ಭ್ಯ ಅಥವಾ ಅಸಮರ್ಪಕ ಭಾಷೆಯ ಬಳಕೆ:
ನಿಮ್ಮ ಮನೆಯಲ್ಲಿ ಮಗುವು ಕೆ ಟ್ಟ ಭಾಷೆಯನ್ನು ಬಳಸಿ ಮಾತನಾಡುತ್ತಿದೆ ಎಂದರೆ, ನಿಮ್ಮ ಮಗುವಿನ ಸಾಂಗತ್ಯ ಅಂತಹ ಭಾಷೆ ಮಾತನಾಡುವ ಮಕ್ಕಳೊಡನೆ ಆಗಿದೆ ಎಂದೇ ಅರ್ಥ. ಆದರೆ ಕೆಲವು ಸಲ ಮಕ್ಕಳು ತಮ್ಮ ಮನೆಯಲ್ಲೇ ಕೆಟ್ಟ ಮಾತುಗಳನ್ನು ಆಡುವುದನ್ನು ಕಲಿಸಿಬಿಡುತ್ತಾರೆ. ಆದ್ದರಿಂದಲೇ ಮನೆಯ ವಾತಾವರಣದಲ್ಲಿ ಕೆ ಟ್ಟ ಪದಗಳ ಬಳಕೆಯನ್ನು ಮಾಡದಂತೆ ಎಚ್ಚರವನ್ನು ವಹಿಸಿ. ಮಗು ಇಂತಹ ಕೆ ಟ್ಟ ಮಾತು ಅಥವಾ ಪದಗಳನ್ನು ಬಳಸಿದ ಕೂಡಲೇ ಮಕ್ಕಳನ್ನು ತಿದ್ದಬೇಕು, ಅಂತಹ ಮಾತನ್ನು ಆಡಬಾರದು ಎನ್ನುವುದನ್ನು ತಿಳಿಸಬೇಕು. ಅನಂತರ ಅಂತಹ ಮಾತುಗಳನ್ನು ಕಲಿಯುವ ಹೊರಗಿನ ಪರಿಸರ ಹಾಗೂ ಮಕ್ಕಳಿಂದ ಅವರನ್ನು ದೂರ ವಿಡುವ ಪ್ರಯತ್ನವನ್ನು ಮಾಡಿ.

ಹೊಡೆದಾಡುವುದು: ಮನೆಯಲ್ಲಿನ ಮಕ್ಕಳು ನೆರೆ ಹೊರೆಯವರೊಡನೆ ಹೊಡೆದಾಟ ಮಾಡುತ್ತಿದ್ದಾರೆ ಎಂದರೆ ಅದು ಕೂಡಾ ಮಕ್ಕಳು ತಪ್ಪು ಮಾಡುತ್ತಿದ್ದಾರೆ ಎನ್ನುವುದಕ್ಕೆ ಸಂಕೇತವಾಗಿರುತ್ತದೆ. ಹೊಡೆದಾಟ ಮಾಡುವ ಧೈರ್ಯ ಮಕ್ಕಳಿಗೆ ಸಾಮಾನ್ಯವಾಗಿ ಅವರ ಸ್ನೇಹಿತರಿಂದ ಅಥವಾ ಅವರ ಮನೆಯ ವಾತಾವರಣದಿಂದ, ಟಿವಿ ಕಾರ್ಯಕ್ರಮಗಳಿಂದ ಅಥವಾ ಸಿನಿಮಾಗಳನ್ನು ನೋಡುವುದರಿಂದ ಬರುತ್ತದೆ‌. ಮಕ್ಕಳು ಹೀಗೆ ಗಲಾಟೆ ಅಥವಾ ಹೊಡೆದಾಟ ಮಾಡುವುದು ಕಂಡು ಬಂದರೆ ಆಗ ಮಕ್ಕಳನ್ನು ಬೈಯ್ಯುವುದು ಮಾಡಬೇಡಿ. ಬದಲಿಗೆ ಸಾವಧಾನವಾಗಿ ಅವರಿಗೆ ತಿಳಿ ಹೇಳುವ ಮೂಲಕ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಹಾಗೆ ಮಾಡಿ.

ಇತರರಿಗೆ ರೇಗಿಸುವುದು, ಕೀಟಲೆ ಮಾಡುವುದು:
ಮಕ್ಕಳಿಗೆ ಬೇರೆಯವರನ್ನು ರೇಗಿಸುವುದು ಹಾಗೂ ಕೀಟಲೆ ಮಾಡುವುದರಲ್ಲಿ ಸಂತೋಷ ಸಿಗುತ್ತದೆ‌. ಆದರೆ ಇದು ಸರಿಯಾದ ಅಭ್ಯಾಸವಲ್ಲ. ಇಂತಹುದೊಂದು ಅಭ್ಯಾಸವನ್ನು ಅವರು ನೆರೆ ಹೊರೆಯ ಮಕ್ಕಳಿಂದ ಅಥವಾ ಶಾಲೆಯಲ್ಲಿ ಸ್ನೇಹಿತರ ಜೊತೆ ಕಲಿತು ಬಿಡುತ್ತಾರೆ. ಆಗ ಮಗುವಿಗೆ ಇದೊಂದು ಕೆ ಟ್ಟ ಅಭ್ಯಾಸವೆಂದು ಅವರಿಗೆ ತಿಳಿ ಹೇಳಬೇಕು. ಇತರರನ್ನು ಹಂಗಿಸುವುದು, ಅವರಿಗೆ ಕೀಟಲೆ ಮಾಡುವುದು ಹಾಗೂ ಬೈಯ್ಯುವುದು ಮಾಡಬಾರದು ಎಂದು ತಿಳಿ ಹೇಳಬೇಕು.

ಹಣವನ್ನು ಕಳ್ಳತನ ಮಾಡುವುದು: ಸಾಮಾನ್ಯವಾಗಿ ತಂದೆ ತಾಯಿಗಳು ತಮ್ಮ ಮಗುವಿನ ಅಥವಾ ಮಕ್ಕಳ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಾರೆ. ಆದರೂ ಮಕ್ಕಳ ಮನಸ್ಸು ಬಹಳ ಚಂಚಲವಾಗಿರುತ್ತದೆ. ಹೀಗಿರುವಾಗ ಅನೇಕ ಸಲ ಮಕ್ಕಳಿಗೆ ತಮಗೆ ಬೇಕಾಗಿರುವುದನ್ನು ಕೊಳ್ಳಲು ಅವರ ಬಳಿ ಹಣ ಇರುವುದಿಲ್ಲ. ಆದ ಕಾರಣ ಅವರು ಮನೆಯಲ್ಲಿ ಹಣವನ್ನು ಕದಿಯುವುದುಂಟು.‌ ಹೀಗೆ ಹಣ ಕದಿಯುವುದನ್ನು ಕೂಡಾ ಬೇರೆಯವರಿಂದಲೇ ಕಲಿಯುತ್ತಾರೆ. ಆದ್ದರಿಂದಲೇ ನಿಮ್ಮ ಮಕ್ಕಳು ಹಣ ಅಥವಾ ವಸ್ತುಗಳನ್ನು ಕದಿಯುವುದು ಕಂಡು ಬಂದರೆ ಅವರ ಸ್ನೇಹಿತರ ಬಗ್ಗೆ ಕೂಡಾ ಎಚ್ಚರಿಕೆಯಿಂದ ಇರಿ.

ಅತಿಯಾದ ಹಠ ಮಾಡುವುದು: ಸಾಮಾನ್ಯವಾಗಿ ಎಲ್ಲಾ ಮಕ್ಕಳು ಕೂಡಾ ಹಠ ಮಾಡುವುದು ಸಹಜ. ಆದರೆ ನಿಮ್ಮ ಮಗು ಯಾವುದಕ್ಕಾದರೂ ಹಠ ಹಿಡಿದು, ಗಂಟೆಗಟ್ಟಲೆ ಅಳುತ್ತಾ, ಊಟ ಕೂಡಾ ಮಾಡದೇ, ತನಗೆ ತಾನೇ ನಷ್ಟ ಉಂಟು ಮಾಡಿಕೊಳ್ಳುವುದಕ್ಕೆ ಮುಂದಾದರೆ ಇದು ಕೂಡಾ ಮಕ್ಕಳು ಕೆಟ್ಟ ದಾರಿ ಹಿಡಿಯುತ್ತಿದ್ದಾರೆ ಎನ್ನುವುದರ ಸೂಚನೆಯಾಗಿರುತ್ತದೆ. ಇಂತಹ ಮಕ್ಕಳಿಗೆ ಕಟ್ಟು ನಿಟ್ಟಿನಿಂದ ವಿವರಿಸಿ ಹೇಳಿ. ಪ್ರತಿ ಬಾರಿ ಮಕ್ಕಳ ಹಠವನ್ನು ಪೂರ್ಣ ಮಾಡುವುದು ಕೂಡಾ ತಂದೆ ತಾಯಿ ಮಾಡುವ ತಪ್ಪಾಗಿರುತ್ತದೆ. ಇದು ಮಕ್ಕಳಲ್ಲಿ ಹಠದ ಪ್ರವೃತ್ತಿಯನ್ನು ಹೆಚ್ಚಿಸುತ್ತದೆ.