ಸ್ಟೋಕ್ ನಿಂದಿಸಿದಾಗ ವಿರಾಟ್ ಭಾಯ್ ಗೆ ಹೇಳಿದೆ, ಅವರು ಎಲ್ಲವನ್ನು ಸರಿಯಾಗಿ ನಿಭಾಯಿಸಿದರು – ಮೊ. ಸಿರಾಜ್
ಮೊಹಮ್ಮದ್ ಸಿರಾಜ್ ಅವರು ತಮ್ಮ ಚಿಕ್ಕದಾದ ಟೆಸ್ಟ್ ಕರಿಯರ್ ನಲ್ಲಿ ಎಲ್ಲರ ಮೇಲೆ ತುಂಬಾ ಪ್ರಭಾವ ಬೀರಿದ್ದಾರೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ನ ಮೊದಲ ಇನ್ನಿಂಗ್ಸನಲ್ಲಿ ಸಿರಾಜ್ ಅವರು ಎರಡು ವಿಕೆಟ್ ಗಳನ್ನು ಪಡೆದರು. ಸಿರಾಜ್ ಅವರು ಹೇಳುವ ಪ್ರಕಾರ, ನಾನು ನಾಯಕ ವಿರಾಟ್ ಅವರ ಪ್ಲಾನ್ ನಂತೆ ಬಾಲಿಂಗ್ ಮಾಡಿದೆ ಮತ್ತು ಅದರಲ್ಲಿ ಯಶಸ್ಸು ಸಹಿತ ಲಭಿಸಿತು ಎನ್ನುತ್ತಾರೆ.
ಇದೆಲ್ಲ ನಡೆಯುವಾಗ ಇಂಗ್ಲೆಂಡ್ ತಂಡದ ಆಟಗಾರ ಬೆನ್ ಸ್ಟೋಕ್ಸ್ ತಮಗೆ ನಿಂದಿಸಿದ ಬಗ್ಗೆಯೂ ಹೇಳಿದರು. ಹಾಗೂ ಅದನ್ನು ನಾಯಕ ವಿರಾಟ್ ಕೊಹ್ಲಿ ಅವರು ಯಾವ ರೀತಿ ನಿಭಾಯಿಸಿದರು ಎಂಬುದನ್ನು ಸಹ ಹೇಳಿದ್ದಾರೆ.
ವಿಕೆಟ್ ಬ್ಯಾಟಿಂಗ್ ಸಲುವಾಗಿ ತುಂಬಾ ಚೆನ್ನಾಗಿ ಇದ್ದು ಬಾಲ್ ಬ್ಯಾಟ್ ಮೇಲೆ ಸರಿಯಾಗಿ ಬರುತ್ತಿರುವದರ ಬಗ್ಗೆ ತಿಳಿದಿದ್ದರೂ ನಾವು ಸಂಯಮದಿಂದ ಬಾಲಿಂಗ್ ಮಾಡಲು ನಿರ್ಧರಿಸಿದೆವು.
ಈ ಪಂದ್ಯದಲ್ಲಿ ವಿರಾಟ್ ಅವರು ನನ್ನ ಬಾಲಿಂಗ್ ಎಂಡ್ ಬದಲಿಸಿ ಇಶಾಂತ್ ಬಾಲಿಂಗ್ ಮಾಡುತ್ತಿದ್ದ ಎಂಡ್ ನಿಂದ ಬಾಲಿಂಗ್ ಮಾಡಲು ಹೇಳಿದರು. ನನಗೆ ಇತ್ತ ಕಡೆಯಿಂದ ಚೆನ್ನಾಗಿ ಮೂವ್ಮೆಂಟ್ ಸಿಕ್ಕಿತು. ನಾನು ಪ್ರತಿಯೊಂದು ಬಾಲ್ ಚೆನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ. ಆಸ್ಟ್ರೇಲಿಯಾ ಇರಲಿ ಅಥವಾ ಭಾರತ ಎಲ್ಲಿಯೂ ಫುಲ್ ಎಫರ್ಟ್ ನಿಂದ ಬಾಲಿಂಗ್ ಮಾಡುತ್ತೇನೆ, ಎಂದು ಸಿರಾಜ್ ಹೇಳುತ್ತಾರೆ.

ಇದೇ ಸಮಯದಲ್ಲಿ ಬೆನ್ ಸ್ಟೋಕ್ಸ್ ಅವರು ನನ್ನನ್ನು ನಿಂದಿಸಿದರು.
ಪಂದ್ಯದ ಮೊದಲ ದಿನವೇ ವಿರಾಟ್ ಮತ್ತು ಬೆನ್ ಸ್ಟೋಕ್ಸ್ ಮಧ್ಯದಲ್ಲಿ ವಾಗ್ವಾದ ನಡೆದದ್ದು ಕಂಡುಬಂತು. ಬೆನ್ ಸ್ಟೋಕ್ಸ್ ಅವರು ನನಗೆ ನಿಂದಿಸಿದರು. ಆ ಮಾತನ್ನು ನಾನು ವಿರಾಟ್ ಅವರಿಗೆ ತಿಳಿಸಿದೆ. ಆಗ ವಿರಾಟ್ ಅವರು ಎಲ್ಲವನ್ನೂ ಸರಿಯಾಗಿ ನಿಭಾಯಿಸಿದರು.
ಅಷ್ಟಕ್ಕೂ ಏನಾಗಿತ್ತು?
ಇಂಗ್ಲೆಂಡ್ ನಾಯಕ ಜೋ ರೂಟ್ ಅವರು ಔಟಾಗಿ ಪೆವಿಲಿಯನ್ ತೆರಳಿದ್ದರು. ಕ್ರಿಸ್ ಮೇಲೆ ಬಂದ ಬೆನ್ ಸ್ಟೋಕ್ಸ್ ಅವರಿಗೆ ಸಿರಾಜ್ ಅವರು ಬೌನ್ಸರ್ ಎಸೆದಿದ್ದರು. ಸ್ಟೋಕ್ಸ್ ಅವರಿಗೆ ಇದು ಸರಿ ಬರಲಿಲ್ಲ. ಅದಕ್ಕೆ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾ ಸಿರಾಜ್ ಅವರಿಗೆ ಏನೋ ಬೊಗಳಿದರು. ಸಿರಾಜ್ ಅವರು ತಕ್ಷಣ ಇದನ್ನು ನಾಯಕ ವಿರಾಟ್ ಅವರಿಗೆ ಹೇಳಿದಾಗ ವಿರಾಟ್ ಅವರು ಬೆನ್ ಸ್ಟೋಕ್ಸ್ ಜೊತೆಗೆ ಮಾತಿಗಿಳಿದರು. ಅದೇ ಸಮಯದಲ್ಲಿ ಅಂಪಾಯರ್ ಮಧ್ಯಪ್ರವೇಶಿಸಿ ಇಬ್ಬರನ್ನು ದೂರ ಮಾಡಿದರು.